ಐಫೋನ್‌ ಜತೆ ಮುಂದಿನ ತಿಂಗಳು ಮ್ಯಾಕ್ ಬುಕ್ ಏರ್ ಬಿಡುಗಡೆ ನಿರೀಕ್ಷೆ

By GizBot Bureau
|

ಆಪಲ್ ನ ಮ್ಯಾಕ್ ಬುಕ್ ಏರ್ ಲೈನ್-ಅಪ್ ಅಪ್ ಡೇಟ್ ಆಗಿ ಹೆಚ್ಚು ಕಡಿಮೆ ಒಂದು ವರುಷವೇ ಕಳೆದಿದೆ.ಕಳೆದ ವರ್ಷದ ಜೂನ್ ನಲ್ಲಿ,ಕ್ಯೂಪರ್ಟಿನೋ ಮೂಲದ ಟೆಕ್ ಕಂಪೆನಿ ಆಪಲ್ ತನ್ನ ಏರ್ ಲ್ಯಾಪ್ ಟಾಪ್ ನ ಪ್ರೊಸೆಸರ್ ನ ಕ್ಲಾಕ್ ಸ್ಪೀಡ್ ನ್ನು 1.6GHz ನಿಂದ 1.8GHz ಹೆಚ್ಚಿಸಿ ಒಂದು ಸಣ್ಣ ಮಟ್ಟದ ಬದಲಾವಣೆಯನ್ನು ತಂದಿತ್ತು.

ಉಳಿದಂತೆ ಎಲ್ಲಾ ವೈಶಿಷ್ಟ್ಯತೆಗಳು 2015 ರ ಮಾಡೆಲ್ ನಲ್ಲಿ ಇದ್ದುದ್ದೇ ಆಗಿತ್ತು. ಅಷ್ಟೇ ಯಾಕೆ ಡಿಸೈನ್ ಕೂಡ ಯಾವುದೇ ವ್ಯತ್ಯಾಸವಿಲ್ಲದೇ ಒಂದೇ ತೆರನಾಗಿತ್ತು. ಆದರೆ ಸದ್ಯ ಮತ್ತೊಂದು ಅಪ್ ಡೇಟ್ ನ್ನು ನಿರೀಕ್ಷೆ ಮಾಡಲಾಗುತ್ತಿದ್ದು ಮ್ಯಾಕ್ ಬುಕ್ ಏರ್ ಲೈನ್ ನಲ್ಲಿ ಮತ್ತಷ್ಟು ವೈಶಿಷ್ಟ್ಯತೆಗಳು ಸೇರಿಕೊಳ್ಳುವ ಸಾಧ್ಯತೆ ಇದೆ.

ಐಫೋನ್‌ ಜತೆ ಮುಂದಿನ ತಿಂಗಳು ಮ್ಯಾಕ್ ಬುಕ್ ಏರ್ ಬಿಡುಗಡೆ ನಿರೀಕ್ಷೆ

ಟ್ರೆಂಡ್ ಫೋರ್ಸ್ ಎನಾಲಿಟಿಕ್ಸ್ ವೆಬ್ ಸೈಟ್ ಒಂದರ ಮಾಹಿತಿಯ ಅನುಸಾರ, ಆಪಲ್ 2018 ರ ಮೂರನೇ ತ್ರೈಮಾಸಿಕದಲ್ಲಿ ಮ್ಯಾಕ್ ಬುಕ್ ಏರ್ ನ ಹೊಸ ವರ್ಷನ್ ನ್ನು ಬಿಡುಗಡೆಗೊಳಿಸುವ ಸಾಧ್ಯತೆ ನಿಚ್ಛಳವಾಗಿದೆ. ಅಂದರೆ ಅದು ಜುಲೈ, ಅಗಸ್ಟ್ ಅಥವಾ ಸೆಪ್ಟೆಂಬರ್ ಎಂದು ಹೇಳಲಾಗಿತ್ತು. ಆದರೆ ನಾವು ಈಗಾಗಲೇ ಜುಲೈ ಮತ್ತು ಅರ್ಧ ಅಗಸ್ಟ್ ತಿಂಗಳು ಕಳೆದು ಆಗಿದೆ. ಹಾಗಾಗಿ ಇನ್ನು ಉಳಿದಿರುವುದು ಕೇವಲ ಒಂದುವರೆ ತಿಂಗಳ ಸಮಯ ಮಾತ್ರ. ಟ್ರೆಂಡ್ ಫೋರ್ಸ್ ನ ವರದಿ ನಿಜವೇ ಆಗಿದ್ದರೆ ಇನ್ನು ಒಂದುವರೆ ತಿಂಗಳಲ್ಲಿ ಈ ಅಪ್ ಡೇಟ್ ನ್ನು ನಿರೀಕ್ಷೆ ಮಾಡಬಹುದಾಗಿದೆ.

ಆದರೆ ನಿಜಕ್ಕೂ ಆಪಲ್ ಹೊಸ ಮ್ಯಾಕ್ ಬುಕ್ ಏರ್ ನ್ನು ಬಿಡುಗಡೆಗೊಳಿಸುತ್ತದೆಯಾ ಅಥವಾ ಇಲ್ಲವಾ ಅನ್ನೋದನ್ನು ಕಾದುನೋಡಬೇಕು. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರದ ಸಮಯ ಹತ್ತಿರವಾಗುತ್ತಿದೆ ಮತ್ತು ಹೆಚ್ಚೆಚ್ಚು ಸುದ್ದಿಗಳು ಕೂಡ ಅಂತರ್ಜಾಲದಲ್ಲಿ ಹರಿದಾಡಲು ಶುರುವಾಗಿದೆ. ಆದರೆ ಆಪಲ್ ನಿಂದ ಯಾವುದೇ ಅಧಿಕೃತ ಮಾಹಿತಿಯೂ ಇದುವರೆಗೆ ಲಭ್ಯವಾಗಿಲ್ಲ.

ಜುಲೈ ನಲ್ಲಿ, ಆಪಲ್ ಎರಡು ಹೊಸ ಮ್ಯಾಕ್ ಬುಕ್ ಪ್ರೋ ಮಾಡಲ್ ನ್ನು ಪರಿಚಯಿಸಿತ್ತು ಮತ್ತು ಅದು 13 ಇಂಚು, 15 ಇಂಚಿನ ಸ್ಕ್ರೀನ್ ಸೈಜ್ ನ್ನು ಹೊಂದಿತ್ತು.ಅದರ ಬೆಲೆ ಕ್ರಮವಾಗಿ 1,49,900 ರುಪಾಯಿ ಮತ್ತು 1,99,900 ರುಪಾಯಿ ಆಗಿದೆ. 13 ಇಂಚಿನ ಮ್ಯಾಕ್ ಬುಕ್ ಪ್ರೋ ಮಾಡೆಲ್ ನಲ್ಲಿ ಟಚ್ ಬಾರ್ ಇದೆ ಮತ್ತು 15 ಇಂಚಿನ ಮ್ಯಾಕ್ ಬುಕ್ ಪ್ರೋ ಮಾಡೆಲ್ ನಲ್ಲಿ 8ನೇ ಜನರೇಷನ್ ನ ಇಂಟೆಲ್ ಕೋರ್ ಪ್ರೊಸೆಸರ್ ನ ಟಚ್ ಬಾರ್ ಇದೆ ಮತ್ತು ಅಪ್ ಗ್ರೇಡ್ ಆಗಿರುವ ಕೀಬೋರ್ಡ್ ತಂತ್ರಜ್ಞಾನವಿದ್ದು ಇದ್ದು ಧೂಳು ಮತ್ತು ಇತರೆ ಕಸಗಳು ಕೀಬೋರ್ಡ್ ನಲ್ಲಿ ಕುಳಿತುಕೊಳ್ಳದಂತೆ ಡಿಸೈನ್ ಮಾಡಲಾಗಿದೆ.

Best Mobiles in India

English summary
Apple MacBook Air 2018 may launch with 2018 iPhones next month. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X