ಐಫೋನ್ ಬೇಕಾಗಿಲ್ಲ..? ಆಪಲ್ ವಾಚ್‌ಗೆ ಸಿಮ್ ಹಾಕಿ, ಫೋನ್ ಮಾಡಿ..!
ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡುತ್ತಿರುವ ಟೆಕ್ ದೈತ್ಯ ಆಪಲ್, ಇದೇ ಮೊದಲ ಬಾರಿಗೆ ತನ್ನ ಸ್ಮಾರ್ಟ್ ಆಪಲ್ ವಾಚ್‌ನಲ್ಲಿ LET ಸೇವೆಯನ್ನು ನೀಡಲಿದ್ದು, ಅಂದರೆ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದ್ದು, ಈ ಮೂಲಕ ಸ್ಮಾರ್ಟ್ ವಾಚಿನಲ್ಲಿಯೇ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ವಾಚ್ ಅನ್ನು ಈಗಾಗಲೇ ಅಮೆರಿಕಾದಲ್ಲಿ ಮಾರಾಟ ಮಾಡುತ್ತಿದ್ದು, ಸದ್ಯ ಭಾರತಕ್ಕೂ ಪರಿಚಯಿಸಿದೆ.

ಆಪಲ್ ವಾಚ್ ಸರಣಿ 3ರಲ್ಲಿ ಈ ಅವಕಾಶವನ್ನು ಮಾಡಿಕೊಟ್ಟಿದ್ದು, ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಆಪಲ್ ವಾಚ್ ಸರಣಿ 3ರಲ್ಲಿ ಸಿಮ್ ಹಾಕಿಕೊಳ್ಳಬಹುದಾಗಿದ್ದು, ಜಿಯೋ ಮತ್ತು ಏರ್‌ಟೆಲ್ ನೊಂದಿಗೆ ದೊರೆಯುತ್ತಿದೆ. ಈ ಎರಡು ಕಂಪನಿಗಳು ಇದಕ್ಕಾಗಿಯೇ ಅಲ್ಲದೇ ಇದಕ್ಕಾಗಿಯೂ ಪೈಪೋಟಿಯನ್ನು ನಡೆಸುತ್ತಿವೆ.

ಮೇ.4ಕ್ಕೆ ಲಾಂಚ್:
ಆಪಲ್ ವಾಚ್ ಸರಣಿ 3 ಅನ್ನು ಭಾರತೀಯ ಮಾರುಕಟ್ಟೆಗೆ ಮೇ.4ರಂದು ಲಾಂಚ್ ಮಾಡಲಿದೆ. ಇದು ಮೇ.11ರಿಂದ ಮಾರಾಟವಾಗಲಿದೆ ಎನ್ನಲಾಗಿದೆ. ಇದನ್ನು ಕೊಳ್ಳುವವರಿಗೆ ಜಿಯೋ ಮತ್ತು ಏರ್‌ಟೆಲ್ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ.

ಕರೆ ಮಾಡಲು ಐಫೋನ್ ಬೇಡ:
ಆಪಲ್ ವಾಚ್ ಸರಣಿ 3 ಬಳಕೆ ಮಾಡಿಕೊಳ್ಳುವುವರು ಇನ್ನು ಕರೆ ಮಾಡಲು ಐಫೋನ್ ಅನ್ನು ಹುಡುಕುವ ಅಗತ್ಯವಿಲ್ಲ ಎನ್ನಲಾಗಿದೆ. ಆಪಲ್ ವಾಚ್ ನಲ್ಲಿ LTE ಕನೆಕ್ಟಿಟಿಯನ್ನು ನೀಡಲಾಗಿದ್ದು, ಅದರಲ್ಲೇ ಕರೆ ಮಾಡಬಹುದಾಗಿದೆ.

ಎರಡರಲ್ಲೂ ಒಂದೇ ನಂಬರ್:
ಆಪಲ್ ವಾಚ್ ಸರಣಿ 3 ಮತ್ತು ಐಫೋನ್ ಎರಡರಲ್ಲೂ ಒಂದೇ ನಂಬರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಐಫೋನ್ ಎಲ್ಲೂ ಇಟ್ಟಿದ್ದರೂ ವಾಚ್ ನಿಂದಲೇ ಕರೆ ಮಾಡುವ ಅವಕಾಶವು ದೊರೆಯಲಿದೆ ಎನ್ನಲಾಗಿದೆ.

ಏರ್‌ಟೆಲ್ ಆಫರ್:
ಏರ್‌ಟೆಲ್ ವೆಬ್ ಸೈಟಿನಲ್ಲಿಯೇ ಆಪಲ್ ವಾಚ್ ಸರಣಿ 3 ರಿಜಿಸ್ಟರ್ ಆಗಬಹುದಾಗಿದ್ದು, ಇದಕ್ಕಾಗಿ ಯಾವುದೇ ಆಫರ್ ಅನ್ನು ಸದ್ಯಕ್ಕೆ ನೀಡಿಲ್ಲ. ಆದರೆ ಬಿಡುಗಡೆಯ ನಂತರದಲ್ಲಿ ದೊರೆಯಲಿದೆ ಎನ್ನಲಾಗಿದೆ.

ಜಿಯೋ ಆಫರ್:
ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರು ಜಿಯೋ ಫೋನ್ ನಂಬರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಜಿಯೋ ಎವರಿವೇರ್ ಕನೆಕ್ಟ್ ಸೇವೆಯನ್ನು ನೀಡಲಿದೆ. ಇದಕ್ಕಾಗಿ ಯಾವುದೇ ಎಕ್ಸಟ್ರಾ ದರವನ್ನು ವಿಧಿಸುತ್ತಿಲ್ಲ. ಜಿಯೋ ವೆಬ್ ಸೈಟ್ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ.


ಬೆಲೆ:
ಸೆಲ್ಯೂಲರ್ ಕನೆಷನ್ ಇಲ್ಲದ 38mm ಆಪಲ್ ವಾಚ್ ಸರಣಿ 3 ರೂ.32,380ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ GPS ಹೊಂದಿರುವ 42mm ಆಪಲ್ ವಾಚ್ ಸರಣಿ 3 ರೂ.32,380ಕ್ಕೆ ದೊರೆಯಲಿದೆ ಎನ್ನಲಾಗಿದೆ. ಆದರೆ ಸೆಲ್ಯೂಲರ್ ಕನೆಷನ್ ಹೊಂದಿರುವ ಆಪಲ್ ವಾಚ್ ಸರಣಿ 3 ಬೆಲೆಯ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ.


Click it and Unblock the Notifications








