ಸೈನಿಕರ ಬದಲು ದೇಶದ ಗಡಿಗೆ ರಿಮೋಟ್‌ ಕಂಟ್ರೋಲ್‌ ಮಷಿನ್‌ ಗನ್‌

By Suneel
|

ತಂತ್ರಜ್ಞಾನ ಇಂದು ತನ್ನ ಕೆಲಸವನ್ನು ಎಲ್ಲೆ ಮೀರಿ ನಿರ್ವಹಿಸುತ್ತಿದೆ. ಹಾಗೆಯೇ ಮನುಷ್ಯನ ಉದ್ಯೋಗವನ್ನು ಕಿತ್ತುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೇ ಬಹಳ ಉಪಯೋಗಿ ಟೆಕ್ ಅನಿವಾರ್ಯವು ಹೌದು ಎಂಬುದಂತು ಇಂದಿನ ಜನತೆ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂದು ಟೆಕ್‌ ಮಿಲಿಟರಿಯಲ್ಲಿನ ಸೈನಿಕರ ಬೇಸರವನ್ನು ಹೋಗಲಾಡಿಸುವ ಹೊಸ ಪ್ರಯತ್ನ ಒಂದು ನೆಡೆದಿದೆ.

ಮಿಲಿಟರಿ ಸೈನಿಕರು ದೇಶದ ಗಡಿಯಲ್ಲಿ ತನ್ನ ದೇಶ ಕಾಯಲು ಕಾವಲಿಗೆ ನಿಂತು ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವನ್ನು ಅನುಭವಿಸುತ್ತಿದ್ದಾರೆ. ಹಾಗೆ ಅಲ್ಲಿ ಸಮಯವು ಕೂಡ ಹೆಚ್ಚು ವ್ಯಯಿಸುವ ಕೆಲಸವಾಗಿದೆ. 24*7 ರೀತಿಯಲ್ಲಿ ಗಡಿಯಲ್ಲಿ ಮಷಿನ್‌ ಗನ್‌ ಹಿಡಿದು ಗಡಿಯಲ್ಲಿನ ಟವರ್‌ಗಳ ಮೇಲೆ ಸೈನಿಕರು ನಿಂತು ಕಾವಲು ಕಾಯ ಬೇಕಾಗಿತ್ತು. ಆದರೆ ಇಂದು ಸೈನಿಕನ ಈ ಬೇಸರ ಮತ್ತು ಸಮಯದ ಉಳಿತಾಯಕ್ಕೆ ಮಷಿನ್‌ ಗನ್‌ಅನ್ನು ರಿಮೋಟ್‌ನಲ್ಲಿ ಕಂಟ್ರೋಲ್‌ ಮಾಡುವ ಟೆಕ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಅಮೇರಿಕ ಈ ತಂತ್ರಜ್ಞಾನವನ್ನು ಪರೀಕ್ಷೆ ಮಾಡಿದ್ದು, ಅಳವಡಿಸಲು ಸುಲಭವಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿ ನಿಮಗಾಗಿ.

ಟೆಕ್ಸಾಸ್‌

ಟೆಕ್ಸಾಸ್‌

ಈ ಯೋಜನೆಯ ಹೆಸರು ನೆಟ್‌ವರ್ಕ್‌ ಇಂಟಿಗ್ರೇಶನ್‌ ಇವಾಲುಯೇಶನ್‌16.1 ಆಗಿದ್ದು, ಫೋರ್ಟ್‌ ಬ್ಲಿಸ್‌ನ ಟೆಕ್ಸಾಸ್‌ನಲ್ಲಿ ಪರೀಕ್ಷೆ ನೆಡೆಸಲಾಗುತ್ತಿದೆ.

ನ್ಯಾಟೊ ಪಡೆ

ನ್ಯಾಟೊ ಪಡೆ

ರಿಮೋಟ್‌ ಕಂಟ್ರೋಲ್‌ನ ಈ ಇಂಡಿಗ್ರೇಶನ್‌ ಪರೀಕ್ಷಿಸಲು ನ್ಯಾಟೊ ಪಡೆಯ ಕಮಾಂಡರ್‌ಗಳು ಮತ್ತು ಇತರ ಮಿಲಿಟರಿ ಪಡೆಗಳು ಸಜ್ಜಾಗಿವೆ.

ಹಳೆ ಟವರ್‌ಗಳಲ್ಲಿ ನಿಯೋಜನೆ

ಹಳೆ ಟವರ್‌ಗಳಲ್ಲಿ ನಿಯೋಜನೆ

ಈ ಹೊಸ ರಿಮೋಟ್‌ ಕಂಟ್ರೋಲ್‌ ಗನ್‌ಗಳ ಟವರ್‌ಗಳನ್ನು ಮಿಲಿಟರಿ ಸೈನಿಕರು ಗಡಿಯಲ್ಲಿ ನಿಲ್ಲುತ್ತಿದ್ದ ಹಳೆ ಟವರ್‌ಗಳ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ.

ಬ್ರೌನಿಂಗ್ ಎಂ 2 50 ಕ್ಯಾಲಿಬರ್ ಮಶಿನ್ಗನ್ ಮತ್ತು .338 ಲಾಪುವಾ ಸ್ನೈಪರ್ ರೈಫಲ್

ಬ್ರೌನಿಂಗ್ ಎಂ 2 50 ಕ್ಯಾಲಿಬರ್ ಮಶಿನ್ಗನ್ ಮತ್ತು .338 ಲಾಪುವಾ ಸ್ನೈಪರ್ ರೈಫಲ್

ಬ್ರೌನಿಂಗ್ ಎಂ 2 50 ಕ್ಯಾಲಿಬರ್ ಮಶಿನ್ಗನ್ ಮತ್ತು .338 ಲಾಪುವಾ ಸ್ನೈಪರ್ ರೈಫಲ್‌ನಿಂದ ಈ ಯೋಜನೆ ಸಿದ್ದ ಪಡಿಸಲಾಗಿದೆ. ಇವುಗಳನ್ನು ರಿಮೋಟ್‌ನಿಂದ ಕಂಟ್ರೋಲ್‌ ಮಾಡಬಹುದಾಗಿದ್ದು, ಸುಲಭವಾಗಿ ಪುನಃ ಬೇರೆ ರೈಫಲ್‌ ಮತ್ತು ಮಷಿನ್‌ಗಳನ್ನು ಅಳವಡಿಸಬಹುದಾಗಿದೆ.

ಒಂದೇ ಸ್ಥಳದಲ್ಲಿ ಕುಳಿತು ಕಾರ್ಯಾಚರಣೆ

ಒಂದೇ ಸ್ಥಳದಲ್ಲಿ ಕುಳಿತು ಕಾರ್ಯಾಚರಣೆ

ಸೈನಿಕರು ಮತ್ತು ಸ್ಕ್ವಾಡ್‌ಗಳು ದೃಶ್ಯ, ಉಷ್ಣ ಮತ್ತು ಅತಿಗೆಂಪಿನ ಕ್ಯಾಮರಾಗಳನ್ನು ಟವರ್‌ ಮೇಲೆ ಅಳವಡಿಸಿ ಒಂದೇ ಸ್ಥಳದಲ್ಲಿ ಕುಳಿತು ಆ ಪ್ರದೇಶದ ವೀಕ್ಷಣೆ ಮಾಡಬಹುದಾಗಿದೆ.

ರಿಮೋಟ್‌ನಿಂದ ಶೂಟ್‌

ರಿಮೋಟ್‌ನಿಂದ ಶೂಟ್‌

ನಿಯಂತ್ರಣವು ಎಕ್ಸ್ಬಾಕ್ಸ್ ಒನ್‌ ಅಂತೆ ಕಾಣಲಿದ್ದು, ಇದನ್ನು 360 ಡಿಗ್ರಿಯಲ್ಲಿ ತಿರುಗಿಸಬಹುದು ಮತ್ತು ರಿಮೋಟ್‌ನಿಂದಲೇ ಶೂಟ್‌ ಮಾಡಬಹುದಾಗಿದೆ.

ಮೂಮೆಂಟ್‌ಗಳ ವೀಕ್ಷಣೆ

ಮೂಮೆಂಟ್‌ಗಳ ವೀಕ್ಷಣೆ

ಈ ಗನ್‌ ಜನರ ಮೂಮೆಂಟ್ಸ್‌ಗಳನ್ನು ವೀಕ್ಷಿಸಲಿದ್ದು, ಅವಶ್ಯವಿದ್ದಲ್ಲಿ ಅವರನ್ನು ಲಾಕ್‌ ಮಾಡಿ ನಿಲ್ಲಿಸಬಲ್ಲದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಏಲಿಯನ್‌ಗಳು ನಮ್ಮ ಕಣ್ಣಿಗೆ ಏಕೆ ಕಾಣಿಸಿಕೊಳ್ಳುತ್ತಿಲ್ಲ?ಏಲಿಯನ್‌ಗಳು ನಮ್ಮ ಕಣ್ಣಿಗೆ ಏಕೆ ಕಾಣಿಸಿಕೊಳ್ಳುತ್ತಿಲ್ಲ?

</a></strong><a href=ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು" title="ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು" />ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು

</a></strong><a href=ನ್ಯೂ ಜನರೇಷನ್ ಟೆಕ್ನಾಲಜಿಯೊಂದಿಗೆ : ಕ್ರೇಜಿ ವಿಸ್ಮಯಗಳು" title="ನ್ಯೂ ಜನರೇಷನ್ ಟೆಕ್ನಾಲಜಿಯೊಂದಿಗೆ : ಕ್ರೇಜಿ ವಿಸ್ಮಯಗಳು" />ನ್ಯೂ ಜನರೇಷನ್ ಟೆಕ್ನಾಲಜಿಯೊಂದಿಗೆ : ಕ್ರೇಜಿ ವಿಸ್ಮಯಗಳು

ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳುಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Army tests remote controlled weapon towers. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X