ರಿಯಲ್‌ ಟೈಮ್‌ ಗ್ರಹಗಳ ಚಲನೆಯನ್ನು ತೋರಿಸುವ ಟೆಕ್‌ "ವಾಚ್‌"

By Suneel
|

ಇದುವರೆಗೂ ಸಹ ಕೇವಲ ಟೈಮ್‌ ಹೇಳುವ ವಾಚ್‌ ನೋಡಿದ್ದೀರ. ಆದ್ರೆ ಕೆಲವು ವಾಚ್‌ಗಳು ಗ್ರಹಗಳ ಕಕ್ಷೆಯನ್ನು ಟ್ರ್ಯಾಕ್‌ ಮಾಡುತ್ತವೆ. ಐಷಾರಾಮಿ ವಾಚ್‌ ತಯಾರಿಸುವ "ವ್ಯಾನ್‌ ಲ್ಕೋಫ್‌ ಮತ್ತು ಆರ್ಪೆಲ್ಸ್‌( Van Cleef and Arpels) ಕಂಪನಿಯು "ಮಿಡ್‌ನೈಟ್‌ ಪ್ಲಾನಿಟೇರಿಯಂ ಟೈಮ್‌ಪೀಸ್" ವಾಚ್‌ ಅನ್ನು ತಯಾರಿಸಿದೆ. ಅಂದಹಾಗೆ ಸಂಪೂರ್ಣ ಟೆಕ್ನಾಲಜಿ ಆಧಾರಿತವಾದ "ಮಿಡ್‌ನೈಟ್‌ ಪ್ಲಾನಿಟೇರಿಯಂ ಟೈಮ್‌ಪೀಸ್" ವಾಚ್ ಯಾವ ರೀತಿ ಗ್ರಹಗಳ ಕಕ್ಷೆಯನ್ನು ತೋರಿಸುತ್ತದೆ, ಅದರ ಫೀಚರ್‌ ಏನು ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

"ವ್ಯಾನ್‌ ಲ್ಕೋಫ್‌ ಮತ್ತು ಆರ್ಪೆಲ್ಸ್‌( Van Cleef and Arpels) ಕಂಪನಿ ತಯಾರಿಸಿರುವ ವಾಚ್‌ ಗ್ರಹಗಳ ಕಕ್ಷೆಯನ್ನು ಟ್ರ್ಯಾಕ್‌ ಮಾಡುತ್ತದೆ. 18 ಕ್ಯಾರಟ್‌ ಗೋಲ್ಡ್‌ನಿಂದ ಅಭಿವೃದ್ದಿಪಡಿಸಿದ್ದು, ವಿವಿಧ ಅಮೂಲ್ಯ ರತ್ನಗಳನ್ನು ಒಳಗೊಂಡಿದೆ. ಫ್ಯಾನ್ಸಿಯಾಗಿರುವ ರಿಸ್ಟ್‌ವಾಚ್‌ ಅಭಿವೃದ್ದಿಪಡಿಸುವುದು ಒಂದು ಕನಸಾಗಿತ್ತು ಎಂದು ಕಂಪನಿ ಹೇಳಿದೆ.

2

2

ಸೌರವ್ಯೂಹದ ಕಕ್ಷೆಯಲ್ಲಿರುವ ಪ್ರತಿಯೊಂದು ಗ್ರಹವು ಸಹ ಬೇರೆ ಬೇರೆ ಬಣ್ಣದಿಂದ ಪ್ರದರ್ಶಿತವಾಗುತ್ತದೆ.

3

3

ಕಕ್ಷೆಯ ವಾಸ್ತವ ಚಲನೆಯ ಸಾಮರ್ಥ್ಯದಿಂದ ಪ್ರತಿಯೊಂದು ಗ್ರಹವು ಸಹ ರಿಯಲ್‌ ಟೈಮ್‌ನೊಂದಿಗೆ ಚಲಿಸುತ್ತವೆ. ಪ್ರತಿಯೊಂದು ಗ್ರಹವು 396 ಪತ್ಯೇಕ ಭಾಗಗಳನ್ನು ಸ್ವಯಂ ಚಾಲನೆಗೆ ಹೊಂದಿವೆ. ಇದರ ಅರ್ಥ ಶನಿ ಗ್ರಹವು ವಾಚ್‌ನಲ್ಲಿ ಸಂಪೂರ್ಣ ಡಯಲ್‌ ಆಗಲು 29 ವರ್ಷ ತೆಗೆದುಕೊಳ್ಳುತ್ತದೆ.

4

4

ಗುರು ಗ್ರಹವು 12 ವರ್ಷ, ಮಂಗಳ ಗ್ರಹ 687 ದಿನಗಳು, ಭೂಮಿ 365 ದಿನಗಳು, ಬುಧ ಗ್ರಹವು 88 ದಿನಗಳನ್ನು ವಾಚ್‌ನಲ್ಲಿ ಸಂಪೂರ್ಣ ಸುತ್ತಲು ಕಾಲಾವಕಾಶ ತೆಗೆದುಕೊಳ್ಳುತ್ತದೆ.

5

5

ಪೂರ್ಣ ಸೌರವ್ಯೂಹವು ಒಂದೇ ವಾಚ್‌ನಲ್ಲಿ ಇದ್ದು ಇದನ್ನು ನೋಡುವ ಅನುಭವ ಅದ್ಭುತವಾಗಿರುತ್ತದೆ. ಇದರ ಬೆಲೆ $225,000 ಎನ್ನಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ

ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ

6 ಲಕ್ಷ ಬೆಲೆಯ 'ಸೊಲರಿನ್' ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿ ಲಾಂಚ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Astronomical Watch Gorgeously Depicts the Real Time Orbits of Planets. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X