ಹಳೆಯ 'ಟಿಂಗ್ ಟಾಂಗ್' ಬೆಲ್‌ಗೆ ಹೇಳಿ ಬೈ ಬೈ!..ಕೇಳಿ ''ಸ್ಮಾರ್ಟ್‌ ಡೋರ್‌ಬೆಲ್‌'' ರಿಂಗಣ.!!

|

ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಆವಿಸ್ಕಾರಗಳು ಮನುಷ್ಯನನ್ನು ತಂತ್ರಜ್ಞಾನದ ಮೇಲೆ ಅವಲಂಭಿತ ಆಗುವಂತೆ ಮಾಡಿವೆ. ಹೀಗಾಗಿ ಮನುಷ್ಯ ಮನೆಯಲ್ಲಿ ಬಹುತೇಕ ಎಲ್ಲ ಕೆಲಸಕ್ಕೂ ಸ್ಮಾರ್ಟ್‌ ಡಿವೈಸ್‌ಗಳನ್ನು ಬಳೆಸುವಂತಾಗಿದೆ. ಅವುಗಳಲ್ಲಿಗ ಹೊಸ ಸೇರ್ಪಡೆ 'ಸ್ಮಾರ್ಟ್‌ ಡೋರ್‌ ಬೆಲ್‌'. ಹೌದು, ಇನ್ನು ಮನೆಯ ಹಳೆಯ ಡೋರ್‌ಬೆಲ್‌ಗಳು ಸ್ಮಾರ್ಟ್‌ ಡೋರ್‌ ಬೆಲ್‌ ಆಗಲಿವೆ.

'ಟಿಂಗ್ ಟಾಂಗ್' ಬೆಲ್‌ಗೆ ಹೇಳಿ ಬೈ ಬೈ!.ಕೇಳಿ ''ಸ್ಮಾರ್ಟ್‌ ಡೋರ್‌ಬೆಲ್‌'' ರಿಂಗಣ!

ಸ್ಟುಡಿಯೊ ಲಾಕ್‌ ತಯಾರಿಕಾ ಕಂಪನಿ 'ಅಗಸ್ಟ್' ಇದೀಗ 'ಅಗಸ್ಟ್ ವ್ಯೂವ್' ಹೆಸರಿನ 'ಸ್ಮಾರ್ಟ್‌ ಡೋರ್‌ಬೆಲ್' ಡಿವೈಸ್‌ ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಸ್ಮಾರ್ಟ್‌ ಡೋರ್ ಬೆಲ್, ವೈಯರ್‌ಲೆಸ್‌ ಆಗಿದೆ. ತೆಳುವಾದ ರಚನೆಯನ್ನು ಹೊಂದಿರುವ ಇದರಲ್ಲಿ ಬೆಲ್‌ನೊಂದಿಗೆ ಹೈ ಪಿಕ್ಸಲ್ ಕ್ಯಾಮೆರಾ ಸಹ ಇದ್ದು, ಯಾರಾದರೂ ಬೆಲ್ ಮಾಡಿದರೇ ಅವರನ್ನು ನೀವು ಒಳಗಡೆಯಿಂದಲೇ ನೋಡಬಹುದಾಗಿದೆ.

'ಟಿಂಗ್ ಟಾಂಗ್' ಬೆಲ್‌ಗೆ ಹೇಳಿ ಬೈ ಬೈ!.ಕೇಳಿ ''ಸ್ಮಾರ್ಟ್‌ ಡೋರ್‌ಬೆಲ್‌'' ರಿಂಗಣ!

ಮನೆ ಹೊರಗೆ ಬಾಗಿಲ ಪಕ್ಕದಲ್ಲಿ ಸುಲಭವಾಗಿ ಅಳವಡಿಸಬಹುದಾಗಿರುವ ಅಗಸ್ಟ್ ವೈಯರ್‌ಲೆಸ್‌ ಸ್ಮಾರ್ಟ್‌ ಡೋರ್‌ ಬೆಲ್ 1440 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದ್ದು, ಜೊತೆಗೆ ಮೋಷನ್ ಅಲರ್ಟ್‌ ಫೀಚರ್ಸ್‌ ಅನ್ನು ಹೊಂದಿದೆ. ಹಾಗಾದರೇ ಈ ಸ್ಮಾರ್ಟ್‌ ಡಿವೈಸ್‌ ಏನೆಲ್ಲಾ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಸ್ಮಾರ್ಟ್‌ ಫೀಚರ್ಸ್‌

ಸ್ಮಾರ್ಟ್‌ ಫೀಚರ್ಸ್‌

ಸ್ಮಾರ್ಟ್‌ ಡೋರ್‌ ಬೆಲ್ ಅತ್ಯುತ್ತಮ ಸ್ಮಾರ್ಟ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. 1440 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದ ಕ್ಯಾಮೆರಾ ನೀಡಿರುವುದರಿಂದ ದೃಶ್ಯವು ಉತ್ತಮ ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಎರಡು ಕಡೆಯಿಂದ ಕಮ್ಯುನಿಕೇಶನ್ ನಡೆಸುವ ಆಯ್ಕೆ ಇದ್ದು, ಗೂಗಲ್‌ ಅಸಿಸ್ಟಂಟ್ ಮತ್ತು ಅಲೆಕ್ಸಾ ಇದರಲ್ಲಿ ಕಾರ್ಯನಿರ್ವಹಿಸಲಿವೆ.

ಬ್ಯಾಟರಿ

ಬ್ಯಾಟರಿ

ಅಗಸ್ಟ್‌ ಸ್ಮಾರ್ಟ್‌ ಡೋರ್‌ ಬೆಲ್‌ ಅನ್ನು ಪ್ರತಿ ದಿನ ಚಾರ್ಜ್‌ ಮಾಡುವ ಅಗತ್ಯವಿರುವುದಿಲ್ಲ ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು ಮೂರರಿಂದ ಆರು ತಿಂಗಳವರೆಗೆ ಬಾಳಿಕೆ ಬರುವ ಶಕ್ತಿಯುತ ಬ್ಯಾಟರಿಯನ್ನು ಅಳವಡಿಸಲಾಗಿದೆ. ಒಂದು ವೇಳೆ ಬ್ಯಾಟರಿ ಬಾಳಕೆ ಮುಗಿಯಲು ಬಂದರೇ numerous alerts ಮಾಡಲಿದೆ.

ಬಣ್ಣ ಬಣ್ಣದ ಪ್ಯಾನೆಲ್

ಬಣ್ಣ ಬಣ್ಣದ ಪ್ಯಾನೆಲ್

ಈ ಸ್ಮಾರ್ಟ್‌ ಡೋರ್‌ ಬೆಲ್ ಬ್ಲ್ಯಾಕ್‌ ಮತ್ತು ಸಿಲ್ವರ್ ಕಾಂಬಿನೇಶನ್‌ನಲ್ಲಿ ದೊರೆಯಲಿದ್ದು, ನಂತರದಲ್ಲಿ ಫೇಸ್‌ಪ್ಲೆಟ್‌ ಪ್ಯಾನೆಲ್ ಬದಲಾಯಿಸುವ ಆಯ್ಕೆಯಿದೆ. ಕೆಂಪು, ನೀಲಿ, ಬಿಳಿ, ಮತ್ತು ಮೆಲಟ್ ಕಲರ್‌ ಸೇರಿದಂತೆ ಹಲವು ಬಣ್ಣಗಳಲ್ಲಿ ಆಯ್ಕೆಯಲ್ಲಿ ಫೇಸ್‌ಪ್ಲೇಟ್‌ ಪ್ಯಾನೆಲ್ ಗಳು ದೊರೆಯಲಿವೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಅಗಸ್ಟ್‌ ಸ್ಮಾರ್ಟ್‌ಡೋರ್‌ ಬೆಲ್ ಇದೇ ಮಾರ್ಚ್ 28 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಇದರ ಬೆಲೆಯು $230 ಆಗಿರಲಿದೆ. ಈ ಸ್ಮಾರ್ಟ್‌ ಡೋರ್‌ ಬೆಲ್ ಭಾರತಕ್ಕೆ ಯಾವಾಗ ಎಂಟ್ರಿ ಆಗಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

Best Mobiles in India

English summary
After a year hiatus, smart lock maker August is back with arguably its most consumer-friendly product yet: the August View.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X