ಭಾರತದಲ್ಲಿ ಖರೀದಿಸಬಹುದಾದ 50-ಇಂಚಿನ ಸ್ಕ್ರೀನ್ ಇರುವ 26,000 ರುಪಾಯಿ ಒಳಗಿನ ಸ್ಮಾರ್ಟ್ ಟಿವಿಗಳು

By Gizbot Bureau
|

ಸ್ಮಾರ್ಟ್ ಟಿವಿ ಪ್ರತಿಯೊಬ್ಬರ ಮನೆಯಲ್ಲಿಯೂ ಇರುವ ಸಾಮಾನ್ಯ ಡಿವೈಸ್ ಆಗಿಬಿಟ್ಟಿದೆ.ಇಂದಿನ ಮಾರುಕಟ್ಟೆಯು ಅನೇಕ ಕಂಪೆನಿಗಳ ಸ್ಮಾರ್ಟ್ ಟಿವಿಗಳಿಂದ ತುಂಬಿ ಹೋಗಿದೆ. ಅದರಲ್ಲಿ ವಿವಿಧ ಸೈಜ್ ನಲ್ಲಿಯೂ ಇರುತ್ತದೆ.50 ಇಂಚಿನ ಸ್ಕ್ರೀನ್ ಇರುವ ಹಲವು ಸ್ಮಾರ್ಟ್ ಟಿವಿಗಳು 26,000 ರುಪಾಯಿಯೊಳಗೆ ಖರೀದಿಸುವುದಕ್ಕೆ ಭಾರತದಲ್ಲಿ ಲಭ್ಯವಿದೆ.

ಸ್ಮಾರ್ಟ್ ಟಿವಿ

ಕೊಡಾಕ್,ಕೋಆ,ಅಡ್ಸನ್, ಥಾಮ್ಸನ್‌ ಸೇರಿದಂತೆಹಲವು ಬ್ರ್ಯಾಂಡ್ ಗಳು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ 30,000 ಬೆಲೆಯಲ್ಲಿ ತಮ್ಮ ಸ್ಮಾರ್ಟ್ ಟಿವಿಗಳನ್ನು ಮಾರಾಟ ಮಾಡುತ್ತಿವೆ.

ಕೊಡಾಕ್ 50UHDXSMART 50-ಇಂಚಿನ ಎಲ್ಇಡಿ 4ಕೆ ಟಿವಿ

ಕೊಡಾಕ್ 50UHDXSMART 50-ಇಂಚಿನ ಎಲ್ಇಡಿ 4ಕೆ ಟಿವಿ

ಕೊಡಾಕ್ 50UHDXSMART 50-ಇಂಚಿನ ಎಲ್ಇಡಿ 4ಕೆ ಟಿವಿಯು ಅಲ್ಟ್ರಾ HD ವೈಡ್ ಸ್ಕ್ರೀನ್ ಇರುವ 3840 Xx 2160p ಇರುವ ಟಿವಿ ಆಗಿದೆ. ಈ ಟಿವಿಯಲ್ಲಿ ಬಿಲ್ಟ್ ಇನ್ ವೈಫೈ ವ್ಯವಸ್ಥೆ ಇದ್ದು ಆನ್ ಲೈನ್ ಮತ್ತು ಬಳಕೆದಾರರಿಗೆ ಬ್ರೌಸಿಂಗ್ ಗೆ ಅವಕಾಶ ನೀಡುತ್ತದೆ.ಆಪ್ಸ್ ಗಳನ್ನು ಡೌನ್ ಲೋಡ್ ಮಾಡಲು ಮತ್ತು ಬೇರೆ ಬೇರೆ ಆನ್ ಲೈನ್ ಚಾನಲ್ ಗಳನ್ನು ಆಕ್ಸಿಸ್ ಮಾಡಲು ಅನುಕೂಲಕರವಾಗಿರುತ್ತದೆ.

ಕೋಆ 50S3N 50 ಇಂಚಿನ ಎಲ್ಇಡಿ 4ಕೆ ಟಿವಿ

ಕೋಆ 50S3N 50 ಇಂಚಿನ ಎಲ್ಇಡಿ 4ಕೆ ಟಿವಿ

ಕೋಆ 50S3N 50 ಇಂಚಿನ ಎಲ್ಇಡಿ 4ಕೆ ಟಿವಿ ಭಾರತದಲ್ಲಿ 26,000 ರುಪಾಯಿಯೊಳಗೆ ಇರುವ ಸ್ಮಾರ್ಟ್ ಟಿವಿಗಳ ಖರೀದಿಗೆ ಇರುವ ಮತ್ತೊಂದು ಬೆಸ್ಟ್ ಆಯ್ಕೆ ಆಗಿದೆ.ಈ ಸ್ಮಾರ್ಟ್ ಟಿವಿ ಲಿನಕ್ಸ್ ಓವರ್ ಲೈಯ್ಡ್ ಜೊತೆಗೆ ಬ್ರ್ಯಾಂಡ್ ಕಸ್ಟಮ್ ಇಂಟರ್ ಫೇಸ್ ಮತ್ತು ಆಪ್ಸ್ ನ್ನು‌ ಹೊಂದಿದೆ.ಇದರಲ್ಲಿ 20W ಸ್ಪೀಕರ್ ಗಳು ಅನೇಬಲ್ಡ್ ಆಗಿದ್ದು ಡಾಲ್ಬೈ ಆಡಿಯೋ ಸ್ಪೀಕರ್ ಗಳಿದ್ದು ನೂತನ ಆಡಿಯೋ ಫಾರ್ಮೇಟಿಂಗ್ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಗೆ ಅನುಕೂಲ ಮಾಡಿಕೊಡುತ್ತದೆ.

ಅಡ್ಸನ್ 50AESL1 50 ಇಂಚಿನ ಎಲ್ಇಡಿ 4ಕೆ ಟಿವಿ

ಅಡ್ಸನ್ 50AESL1 50 ಇಂಚಿನ ಎಲ್ಇಡಿ 4ಕೆ ಟಿವಿ

ಅಡ್ಸನ್ 50AESL1 50 ಇಂಚಿನ ಎಲ್ಇಡಿ 4ಕೆ ಟಿವಿ ಯಲ್ಲಿ ಎರಡು HDMI ಪೋರ್ಟ್ ಗಳಿದ್ದು ಒಂದು ಸೆಟ್ ಅಪ್ ಬಾಕ್ಸ್, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೋಲ್, ಎರಡು ಯುಎಸ್ಬಿ ಪೋರ್ಟ್ ಗಳಿದ್ದು ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡಯವುದಕ್ಕೆ ನೆರವಾಗುತ್ತದೆ. ಮತ್ತು VGA ಪೋರ್ಟ್ ಲ್ಯಾಪ್ ಟಾಪ್ ಕನೆಕ್ಷನ್ ಗೆ ಸಹಕಾರಿಯಾಗಿದ್ದು 26,000ರುಪಾಯಿಯೊಳಗೆ ಖರೀದಿಸಬಹುದಾದ ಸ್ಮಾರ್ಟ್ ಟಿವಿಗಳ ಆಯ್ಕೆಗೆ ಅಧ್ಬುತವಾಗಿದೆ.

ಥಾಮ್ಸನ್ 50TH1000 50-ಇಂಚಿನ ಎಲ್ಇಡಿ 4ಕೆ ಟಿವಿ

ಥಾಮ್ಸನ್ 50TH1000 50-ಇಂಚಿನ ಎಲ್ಇಡಿ 4ಕೆ ಟಿವಿ

ಥಾಮ್ಸನ್ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಸ್ಮಾರ್ಟ್ ಟಿವಿ ಬ್ರ್ಯಾಂಡ್ ಆಗಿದ್ದು ಬೆಸ್ಟ್ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ. 50-ಇಂಚಿನ ಡಿಸ್ಪ್ಲೇಯಲ್ಲಿ 26,000 ರುಪಾಯಿಯೊಳಗೆ ಖರೀದಿಸಬಹುದಾದ ಡಿವೈಸ್ ಇದಾಗಿದೆ. ಥಾಮ್ಸನ್ 50TH1000 50-ಇಂಚಿನ ಎಲ್ಇಡಿ 4ಕೆ ಟಿವಿ 4ಕೆ ಡಿಸ್ಪ್ಲೇ ಹೊಂದಿದೆ. ಬಳಕೆದಾರರಿಗೆ ತಮ್ಮ ನೆಚ್ಚಿನ ಕಾರ್ಯಕ್ರಮವನ್ನು ಬಹಳ ತೀಕ್ಷ್ಣವಾಗಿ ನೋಡಲು ಮತ್ತು ಶ್ರೀಮಂತ ಚಿತ್ರದಲ್ಲಿ ಕಾಣಲು ಇದು ನೆರವು ನೀಡುತ್ತದೆ.

ತ್ರಿಗುರ್ A50TGS470 50 ಇಂಚಿನ ಎಲ್ಇಡಿ ಫುಲ್‌ ಹೆಚ್ಡಿ ಟಿವಿ

ತ್ರಿಗುರ್ A50TGS470 50 ಇಂಚಿನ ಎಲ್ಇಡಿ ಫುಲ್‌ ಹೆಚ್ಡಿ ಟಿವಿ

ಲಿಸ್ಟ್ ನಲ್ಲಿರುವ ಬೆಸ್ಟ್ 50-ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ ಭಾರತದಲ್ಲಿ 26,000 ರುಪಾಯಿಗೆ ಖರೀದಿಸಬಹುದಾದ ತ್ರಿಗುರ್ A50TGS470 50 ಇಂಚಿಬ ಎಲ್ಇಡಿ ಫುಲ್ ಹೆಚ್ ಡಿ ಟಿವಿ ಕೂಡ ಸೇರಿದೆ. ಇದರಲ್ಲಿ 1920 x 1080 ಪಿಕ್ಸಲ್ ಜೊತೆಗೆ ವೈಫೈ ಮತ್ತು ಈತರ್ ನೆಟ್ ಬೆಂಬಲವಿದೆ.ಆಡಿಯೋಗಾಗಿ ಎರಡು ಸ್ಪೀಕರ್ ಜೊತೆಗೆ 16W ಔಟ್ ಪುಟ್ ವ್ಯವಸ್ಥೆ ಇದೆ.

ಕೊಡಾಕ್ 50FHDXSMART 50-ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ

ಕೊಡಾಕ್ 50FHDXSMART 50-ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ

ಕೊಡಾಕ್ 50FHDXSMART 50-ಇಂಚಿನ ಎಲ್ಇಡಿ ಫುಲ್ ಹೆಚ್ ಡಿ ಟಿವಿ ಈ ಲಿಸ್ಟ್ ನಲ್ಲಿರುವ ಮತ್ತೊಂದು ಟಿವಿ ಆಗಿದ್ದು 26,000 ರುಪಾಯಿಯೊಳಗೆ ಸಿಗುತ್ತದೆ. ಕೆಲವು ಸ್ಮಾರ್ಟ್ ಫೀಚರ್ ಗಳು ಇದರಲ್ಲಿದ್ದು ಫೋನ್, ಬಿಲ್ಟ್ ಇನ್ ವೈಫೈ ಮತ್ತು ಇತ್ಯಾದಿಗಳಿಂದ ವಯರ್ ಲೆಸ್ ಮೀಡಿಯಾ ಪ್ಲೇಬ್ಯಾಕ್ ಸಾಧ್ಯವಾಗುತ್ತದೆ.

Most Read Articles
Best Mobiles in India

English summary
There are many best 50-inch screen smart TVs to buy in India under Rs. 26,000. Brands like Kodak, Cooaa, Adsun, Thomson, Trigur, and others are available in the Indian market today with under Rs. 30,000 price tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X