ಫ್ಲಿಪ್ ಕಾರ್ಟ್ ನಲ್ಲಿ 70% ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ ಏರ್ ಫ್ಯೂರಿಫೈಯರ್

By Gizbot Bureau
|

ನೀವು ಕಲುಶಿತ ನಗರದಲ್ಲಿ ವಾಸಿಸುತ್ತಿದ್ದೀರಾ? ಗಾಳಿ ಶುದ್ಧೀಕರಿಸುವ ಯಂತ್ರದ ಅವಶ್ಯಕತೆ ನಿಮ್ಮ ಮನೆಗಿದಿಯಾ? ಹಾಗಾದ್ರೆ ಫ್ಲಿಪ್ ಕಾರ್ಟ್ ನಲ್ಲಿ 70% ರಿಯಾಯಿತಿಯಲ್ಲಿ ನೀವು ಈ ಪ್ರೊಡಕ್ಟ್ ನ್ನು ಖರೀದಿಸುವ ಸದವಕಾಶವಿದೆ. ಹೌದು ಏರ್ ಪ್ಯೂರಿಫೈಯರ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ಆಫರ್ ನ್ನು ನೀಡಲಾಗುತ್ತಿದೆ. ಆಫರ್ ನಲ್ಲಿರುವ ಕೆಲವು ಬೆಸ್ಟ್ ಏರ್ ಪ್ಯೂರಿಫೈಯರ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಫ್ಲಿಪ್ ಕಾರ್ಟ್ ನಲ್ಲಿ 5% ಕ್ಯಾಷ್ ಬ್ಯಾಕ್

ಫ್ಲಿಪ್ ಕಾರ್ಟ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್ ಸೌಲಭ್ಯವು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿದೆ, 10% ರಿಯಾಯಿತಿ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ, 1,000 ಫ್ಲ್ಯಾಟ್ ರಿಯಾಯಿತಿ ಪ್ರಿಪೇಯ್ಡ್ ಟ್ರಾನ್ಸ್ಯಾಕ್ಷನ್ ಗೆ,ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು ಹೆಚ್ಚುವರಿ ರಿಯಾಯಿತಿಗಳು ಕೂಡ ಲಭ್ಯವಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುವ ಮೂಲಕ 1,000 ರುಪಾಯಿಗೂ ಅಧಿಕ ಉಳಿತಾಯವನ್ನು ಮಾಡುವುದಕ್ಕೆ ಅವಕಾಶವಿದೆ.

ಎಂಐ ಎಸಿ-ಎಂ8-ಎಸ್ ಸಿ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಎಂಐ ಎಸಿ-ಎಂ8-ಎಸ್ ಸಿ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಈ ಪ್ರೊಡಕ್ಟ್ ನಿಮಗೆ 18% ರಿಯಾಯಿತಿಯಲ್ಲಿ ಅಂದರೆ 6,499 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ತಿಂಗಳಿಗೆ 542 ರುಪಾಯಿ ಪಾವತಿಸಿ ಕೊಳ್ಳಬಹುದು.ಇದು ಡುಯಲ್ ಫಿಲ್ಟ್ರೇಷನ್ ತಂತ್ರಗಾರಿಕೆಯನ್ನು ಹೊಂದಿದ್ದು ಗಾಳಿಯ ಅಶುದ್ಧತೆಯನ್ನು ನಿವಾರಿಸಿ ನಿಮ್ಮ ಮನೆಯಲ್ಲಿ ಶುದ್ಧ ಗಾಳಿಯನ್ನು ಒದಗಿಸುವುದಕ್ಕೆ ಇದು ನೆರವಾಗುತ್ತದೆ.

ಫಿಲಿಪ್ಸ್ ಎಸಿ 1211/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಫಿಲಿಪ್ಸ್ ಎಸಿ 1211/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಈ ಪ್ರೊಡಕ್ಟ್ ನ್ನು ನೀವು 50% ರಿಯಾಯಿತಿಯಲ್ಲಿ ಅಂದರೆ 7,449 ರುಪಾಯಿ ಬೆಲೆಗೆ ಖರೀದಿಸಬಹುದು. ಇಎಂಐ ಆಯ್ಕೆಯಲ್ಲಿಯೂ ಕೂಡ ಲಭ್ಯವಿದ್ದು ತಿಂಗಳಿಗೆ 621 ರುಪಾಯಿ ಪಾವತಿಸಿ ಖರೀದಿಸಬಹುದು. ದೊಡ್ಡ ದೊಡ್ಡ ಕೋಣೆ ಇರುವವರಿಗೆ ಇದು ಹೇಳಿ ಮಾಡಿಸಿದ ಪ್ಯೂರಿಫೈಯರ್ ಆಗಿದೆ. ಇದರಲ್ಲಿ ಮೈಕ್ರೋಬ್ ಸ್ಟೆರಿಲೈಝ್ ತಂತ್ರಜ್ಞಾನವಿದ್ದು ಸೂಕ್ಷ್ಮ ಜೀವಿಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ನೆರವಾಗುತ್ತದೆ. ಇದರಲ್ಲಿರುವ 7-ಹಂತದ ಮಲ್ಟಿ ಪ್ಯೂರಿಫಿಕೇಷನ್ ಸಿಸ್ಟಮ್ ಕಲುಷಿತ ಕಣಗಳನ್ನು ಶುದ್ಧೀಕರಿಸುತ್ತದೆ. ಇದರೊಳಗೆ ಸೆನ್ಸ್ಏರ್ ಟಿಎಂ ತಂತ್ರಜ್ಞಾನವೂ ಇದ್ದು ಆಟೋ ಸೆನ್ಸ್ ಆಗಿ ವಾಸನೆ ಮತ್ತು ಗಾಳಿಯ ಗುಣಮಟ್ಟವನ್ನು ಸ್ವಯಂಚಾಲಿತವಾಗಿ ಗುರುತಿಸಿ ಶುದ್ಧಗೊಳಿಸುತ್ತದೆ.

ಫಿಲಿಪ್ಸ್ ಎಸಿ2887/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಫಿಲಿಪ್ಸ್ ಎಸಿ2887/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಈ ಏರ್ ಪ್ಯೂರಿಫೈಯರ್ 26% ರಿಯಾಯಿತಿಯಲ್ಲಿ ಅಂದರೆ 16,948 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಈ ಪ್ಯೂರಿಫೈಯರ್ ನಲ್ಲಿರುವ ಸೈಲೆಂಟ್ ಮೋಡ್ ತನ್ನ ಫ್ಯಾನ್ ವೇಗವನ್ನು ಕಡಿಮೆ ಮಾಡುತ್ತದೆ ಮತ್ತು ಶಬ್ದದ ಲೆವೆಲ್ ರಾತ್ರಿಯ ಆರಾಯದಾಯಕ ನಿದ್ದೆಗೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿರುವ PM2.5 ಇಂಡಿಕೇಟರ್ ಮತ್ತು 4-ಹಂತದ ಕಲರ್ ರಿಂಗ್ ನೈಜ ಸಮಯದ ನಿಮ್ಮ ಮನೆಯೊಳಗಿನ ಗಾಳಿಯ ಗುಣಮಟ್ಟದ ವಿವರಣೆಯನ್ನು ನೀಡುತ್ತದೆ.

ಫಿಲಿಪ್ಸ್ 3000 ಸಿರೀಸ್ ಏರಾಸೆನ್ಸ್ ಏರ್ ಪ್ಯೂರಿಫೈಯರ್ ಎಸಿ3256

ಫಿಲಿಪ್ಸ್ 3000 ಸಿರೀಸ್ ಏರಾಸೆನ್ಸ್ ಏರ್ ಪ್ಯೂರಿಫೈಯರ್ ಎಸಿ3256

ಅಲರ್ಜಿಗಳನ್ನು ಸೃಷ್ಟಿ ಮಾಡುವ ಗಾಳಿಯಲ್ಲಿರುವ ಇಂಗಾಲದ ಕಣಗಳನ್ನು ನಿವಾರಿಸಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದರ ಬೆಲೆ 24,949 ರುಪಾಯಿಗಳಾಗಿದ್ದು 24% ರಿಯಾಯಿತಿಯಲ್ಲಿ ಲಭ್ಯವಿದೆ. ಇದು ಹೆಚ್ಚುವರಿ ದಪ್ಪನೆಯ ನ್ಯಾನೋ ಪ್ರೊಟೆಕ್ಟ್ HEPA ಮತ್ತು AC ಫಿಲ್ಟರ್ ನ್ನು ಹೊಂದಿದೆ. ಇವೆರಡೂ ಒಟ್ಟಿಗೆ ಗಾಳಿಯಲ್ಲಿರುವ ಕೆಟ್ಟ ಕಣಗಳನ್ನು ತೊಡೆದು ಹಾಕಿ ಜೀವನಪರ್ಯಂತ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ.

ಸ್ಯಾಮ್ ಸಂಗ್ ಎಎಕ್ಸ್3000 ಇನ್ಟೆನ್ಸೀವ್ ಟ್ರಿಪಲ್ ಪ್ಯೂರಿಫಿಕೇಷನ್ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಸ್ಯಾಮ್ ಸಂಗ್ ಎಎಕ್ಸ್3000 ಇನ್ಟೆನ್ಸೀವ್ ಟ್ರಿಪಲ್ ಪ್ಯೂರಿಫಿಕೇಷನ್ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

401 ರುಪಾಯಿ ಇಎಂಐ ಪಾವತಿಸಿ ನೀವು ಈ ಪ್ರೊಡಕ್ಟ್ ನ್ನು ಖರೀದಿಸಬಹುದಾಗಿದೆ.ಇದರಲ್ಲಿ ಡಿಯೋಡೋರಿಜಾನ್ ಫಿಲ್ಟರ್ ವ್ಯವಸ್ಥೆ ಇದೆ, HEPA, ಐಯೋನೈಸರ್, ಪ್ರೀ-ಫಿಲ್ಟರ್ ಮತ್ತು ಆಕ್ಟಿವೇಟೆಡ್ ಕಾರ್ಬನ್ ಒಟ್ಟಿಗೆ ಸೇರಿ ಗಾಳಿಯಲ್ಲಿರುವ ಕೆಟ್ಟ ವಾಸನೆಯನ್ನು ನಿವಾರಿಸುವುದಕ್ಕೆ ನೆರವು ನೀಡುತ್ತದೆ.

ಹನಿವೆಲ್ HAC30M1401G ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಹನಿವೆಲ್ HAC30M1401G ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಇದರಲ್ಲಿರುವ ಸ್ಮಾರ್ಟ್ ತಂತ್ರಜ್ಞಾನವು ಒಂದು ಕೋಣೆಗೆ ಅಗತ್ಯವಿರುವ ಶುದ್ಧೀಕರಣದ ಮಟ್ಟವನ್ನು ಗಮನಿಸುವುದಕ್ಕೆ ನೆರವಾಗುತ್ತದೆ. ಇದರಲ್ಲಿ ಮೂರು ಹಂತದ ಆಧುನಿಕ ಶೋಧಿಸುವ ವ್ಯವಸ್ಥೆ ಹೊಂದಿದ್ದು 99% ಮಾಲಿನ್ಯಕಾರಕಗಳನ್ನು ತೊಡೆದುಹಾಕುವ ದಕ್ಷತೆಯನ್ನು ಹೊಂದಿದೆ. ಈ ಪ್ರೊಡಕ್ಟಿನ ಬೆಲೆ 18,900 ರುಪಾಯಿಗಳು.

ಏಲ್ ಜಿ AS60GDWT0.AIDA ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಏಲ್ ಜಿ AS60GDWT0.AIDA ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಇದರಲ್ಲಿ ಶಕ್ತಿಶಾಲಿಯಾಗಿರುವ ಕ್ಲೀನ್ ಬೂಸ್ಟರ್ ಇದ್ದು ಶುದ್ಧ ಗಾಳಿಯನ್ನು ಸಂಪೂರ್ಣ ಕೋಣೆಗೆ ಆವರಿಸುವಂತೆ ಮಾಡಿ ಆರೋಗ್ಯಯುತವಾಗಿರುವ ವಾತಾವರಣದ ನಿರ್ಮಾಣಕ್ಕೆ ಕಾರಣವಾಗುತ್ತದೆ.ಇದರಲ್ಲಿರುವ ಸ್ಮಾರ್ಟ್ ThinQ ವೈಶಿಷ್ಟ್ಯತೆಯು ಮಾಲಿನ್ಯದ ಮಟ್ಟದ ವಿವರಣೆಯನ್ನು ನೀಡುತ್ತದೆ ಮತ್ತು ಯಾವುದೇ ಪ್ರದೇಶಧಿಂದ ಕೂಡ ನೀವಿದನ್ನು ಆಪರೇಟ್ ಮಾಡಬಹುದಾಗಿದೆ.

ಫಿಲಿಪ್ಸ್ ಎಸಿ3259/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಫಿಲಿಪ್ಸ್ ಎಸಿ3259/20 ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಇದು ಅಲರ್ಜೆನ್ ಮೋಡ್ ಮತ್ತು ಏರಾಸೆನ್ಸ್ ತಂತ್ರಜ್ಞಾನವನ್ನು ಹೊಂದಿದ್ದು ಪಿಎಂ2.5 ಗಿಂತ ಚಿಕ್ಕದಿರುವ ಗಾಳಿಯಲ್ಲಿನ ಕೆಟ್ಟ ಕಣಗಳನ್ನು ತೆಗೆಯುವುದಕ್ಕೆ ನೆರವು ನೀಡುತ್ತದೆ. ಇದರ ಆರಂಭಿಕ ಬೆಲೆ 29,945 ರುಪಾಯಿಗಳು.

ಕ್ರೋಮ್ ಟನ್ ಏರ್ ಡಾಕ್ಟರ್ ಪೊರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಕ್ರೋಮ್ ಟನ್ ಏರ್ ಡಾಕ್ಟರ್ ಪೊರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಇದರ ಬೆಲೆ 23,300 ರುಪಾಯಿಗಳಾಗಿದ್ದು 22% ರಿಯಾಯಿತಿ ಲಭ್ಯವಿದೆ. ಇದು ಗ್ಯಾಸ್ ಟ್ರ್ಯಾಪ್ ಹೀರಿಕೊಳ್ಳುವ ಫಿಲ್ಟರ್ ನೊಂದಿಗೆ ಬರುತ್ತದೆ ಮತ್ತು ಅಪಾಯಕಾರಿಯಾಗಿರುವ ಓಝೋನ್ , ಅನಿಲ ಮತ್ತು ಭಾಷ್ಪಶೀಲ ಸಾವಯಕ ಸಂಯುಕ್ತಗಳನ್ನು ತೆಗೆಯುವುದಕ್ಕೆ ನೆರವಾಗುತ್ತದೆ. ಇಎಂಐ ಆಯ್ಕೆಯಲ್ಲಿ ಇದು ಲಭ್ಯವಿದ್ದು ತಿಂಗಳಿಗೆ 1,097 ರುಪಾಯಿ ಪಾವತಿಸಿ ಖರೀದಿಸಬಹುದು.

ಡೈಸನ್ ಪ್ಯೂರ್ ಕೂಲ್ ಟವರ್ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಡೈಸನ್ ಪ್ಯೂರ್ ಕೂಲ್ ಟವರ್ ಪೋರ್ಟೇಬಲ್ ರೂಮ್ ಏರ್ ಪ್ಯೂರಿಫೈಯರ್

ಇದು ರಿಯಲ್ ಟೈಮ್ ಸೆನ್ಸರ್ ವ್ಯವಸ್ಥೆ ಹೊಂದಿದ್ದು ಏರ್ ಕ್ವಾಲಿಟಿ ಇಂಡೆಕ್ಸ್ ನ್ನು ನಿಮಗೆ ತಿಳಿಸುತ್ತಲೇ ಇರುತ್ತದೆ. ಅಶುದ್ಧ ಕಣಗಳು ಮತ್ತು ಅಲರ್ಜಿ ಉಂಟುಮಾಡುವ ಕಣಗಳನ್ನು ಇದು ಶುದ್ಧೀಕರಿಸುತ್ತದೆ.

Most Read Articles
Best Mobiles in India

English summary
You can get several air purifiers across Flipkart with up to 70% off. The giant E-commerce is providing more exciting offers on these air purifiers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more