ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

|

ಪ್ರಸ್ತುತ ಅಗತ್ಯ ಡಿವೈಸ್‌ಗಳ ಲಿಸ್ಟ್‌ನಲ್ಲಿ ಪ್ರೊಜೆಕ್ಟರ್‌ಗಳು ಸೇರ್ಪಡೆಯಾಗುತ್ತವೆ. ಏಕೆಂದರೇ ಸರ್ಕಾರಿ-ಖಾಸಗಿ ಆಫೀಸ್‌ಗಳಲ್ಲಿ ಮತ್ತು ಸ್ಕೂಲ್‌-ಕಾಲೇಜ್‌ಗಳಲ್ಲಿ ಯಾವುದೇ ಕಾನ್ಫರೆನ್ಸ್‍, ಮೀಟಿಂಗ್‌ ಮತ್ತು ಸೆಮಿನಾರ್‌ ಹೀಗೆ ಹಲವು ಸಂದರ್ಭದಲ್ಲಿ ಇಂದು ಪ್ರೊಜೆಕ್ಟರ್‌ಗಳು ಅಗತ್ಯ ಸ್ಥಾನ ಪಡೆದುಕೊಂಡಿವೆ. ದೃಶ್ಯಗಳನ್ನು ವಿಸ್ತಾರವಾದ ಪರದೆ ಮೇಲೆ ಎಲ್ಲರೂ ವೀಕ್ಷಿಸಲು ಇವು ನೆರವಾಗಿದ್ದು, ಬಹುತೇಕರಿಗೆ ಮಿನಿ ಥೇಟರ್‌ ಎಂದೆನಿಸಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

ಹೌದು, ಪ್ರೊಜೆಕ್ಟರ್‌ಗಳಲ್ಲಿ ಹೊಸತನದ ಫೀಚರ್ಸ್‌ಗಳು ಸೇರಿಕೊಂಡಿದ್ದು, ಕೇಲವರು ಮನರಂಜನೆಗಾಗಿ ಖರೀದಿಸಿದರೇ, ಇನ್ನು ಕೇಲವರು ಬ್ಯುಸಿನೆಸ್‌ ಅಥವಾ ಆಫೀಸಿಯಲ್‌ ಕೆಲಸಗಳಿಗಾಗಿ ಖರೀದಿಸುತ್ತಾರೆ. ಒಟ್ಟಾರೇ ಅಗತ್ಯಕ್ಕೆ ಅನುಗುಣವಾಗಿ ಪ್ರೊಜೆಕ್ಟರ್‌ಗಳು ಲಭ್ಯ ಇವೆ. ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು ಹೆಚ್ಚು ಜನಪ್ರಿಯ ಪಡೆದಿವೆ. ಈ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು ಗುಣಮಟ್ಟದಲ್ಲಿಯೂ ಉತ್ತಮವಾಗಿದ್ದು, ಹೈ ಎಂಡ್‌ ಇಮೇಜ್‌ ಕ್ವಾಲಿಟಿಯನ್ನು ಹೊಂದಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

ಹಾಗೆಯೇ ಹಗುರವಾದ ರಚನೆಯನ್ನು ಪಡೆದಿದ್ದು, ಸುಲಭವಾಗಿ ಜೊತೆಗೆ ಕೊಂಡೊಯ್ಯಬಹುದಾಗಿದೆ. ಫಿಲಿಪ್ಸ್‌, ಎಪಿಸನ್‌, ವ್ಯೂವ್‌ಸಾನಿಕ್‌, ಆಪ್ಟಿಮಾ ಸೇರಿದಂತೆ ಪ್ರಮುಖ ಕಂಪನಿಗಳ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್‌ ಬ್ಯಸಿನೆಸ್‌ ಪ್ರೊಜೆಕ್ಟರ್‌ಗಳು ಯಾವುವು ಮತ್ತು ಅವುಗಳ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

ಫಿಲಿಪ್ಸ್‌ (Philips Pico PPX4010)

ಫಿಲಿಪ್ಸ್‌ (Philips Pico PPX4010)

ಫಿಲಿಪ್ಸ್‌ ಕಂಪನಿಯ ಈ ಪ್ರೊಜೆಕ್ಟರ್‌ 70 x 70 x 20mm ಸುತ್ತಳತೆಯನ್ನು ಹೊಂದಿದ್ದು, 0.5 m - 3.7 m ಪ್ರೊಜೆಕ್ಟರ್‌ ಅಂತರವನ್ನು ಪಡೆದಿದೆ. ಸುಮಾರು 100 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಕಾಂಟ್ರಾಸ್ಟ್‌ ರೇಶಿಯೋವು 1500:1 ಆಗಿದೆ. HDMI, VGA ವಿಡಿಯೊ ಇನ್‌ಪುಟ್ಸ್‌ ಆಯ್ಕೆ ಜೊತೆಗೆ ಅಲ್ಟ್ರಾ ಲೈಟ್‌ ರಚನೆಯನ್ನು ಪಡೆದಿದ್ದು, ಪಾಕೆಟ್‌ ಮಾದರಿಯಲ್ಲಿದೆ.

ಎಪ್ಸನ್‌ (Epson EB-S04)

ಎಪ್ಸನ್‌ (Epson EB-S04)

ಎಪ್ಸನ್‌ EB-S04 ಪ್ರೊಜೆಕ್ಟರ್‌ 297‎ x 234 x 77mm ಸುತ್ತಳತೆಯನ್ನು ಹೊಂದಿದ್ದು, ಕಾಂಪೊನೆಟ್‌, ಕಾಂಪೊಸೈಟ್‌ HDMI S-Video USB ಇನ್‌ಪುಟ್‌ ಆಯ್ಕೆಯನ್ನು ಹೊಂದಿದೆ. LCD ಮಾದರಿ ಪ್ರೊಜೆಕ್ಟರ‌ ಸಿಸ್ಟಮ್‌ ಜೊತೆ 800 x 600 ಪಿಕ್ಸಲ್‌ ಪಿಚ್ಚರ್‌ ರೆಸಲ್ಯೂಶನ್‌ ಇದ್ದು, ಸುಮಾರು 3000 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಕಾಂಟ್ರಾಸ್ಟ್‌ ರೇಶಿಯೋವು 1500:1 ಆಗಿದೆ.

ವ್ಯೂವ್‌ಸಾನಿಕ್ (ViewSonic PA503S)

ವ್ಯೂವ್‌ಸಾನಿಕ್ (ViewSonic PA503S)

DLP ಮಾದರಿ ವ್ಯೂವ್‌ಸಾನಿಕ್ ಈ ಪ್ರೊಜೆಕ್ಟರ್‌ 800 x 600 ಪಿಕ್ಸಲ್‌ ಪಿಚ್ಚರ್‌ ರೆಸಲ್ಯೂಶನ್‌ ಹೊಂದಿದ್ದು, 3000 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ HDMI, VGA, S-Video ಇನ್‌ಪುಟ್‌ ಆಯ್ಕೆಯನ್ನು ಹೊಂದಿದ್ದು, ಕಾಂಟ್ರಾಸ್ಟ್‌ ರೇಶಿಯೋವು 22000:1 ಆಗಿದೆ. ಬಳಕೆದಾರರ ಸ್ನೇಹಿಯಾಗಿದ್ದು, ಬ್ರೈಟ್ನೆಸ್‌ ಅತ್ಯುತ್ತಮವಾಗಿದೆ.

ಓದಿರಿ : 'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!ಓದಿರಿ : 'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!

ಆಪ್ಟೊಮಾ (Optoma ML750e)

ಆಪ್ಟೊಮಾ (Optoma ML750e)

DLP ಮಾದರಿ ಆಪ್ಟೊಮಾದ ಈ ಪ್ರೊಜೆಕ್ಟರ್‌ 1280 x 800 ಪಿಕ್ಸಲ್‌ ಪಿಚ್ಚರ್‌ ರೆಸಲ್ಯೂಶನ್‌ ಹೊಂದಿದ್ದು, ಸುಮಾರು 700 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ HDMI, VGA, microSD, USB ಇನ್‌ಪುಟ್‌ ಆಯ್ಕೆಯನ್ನು ಹೊಂದಿದ್ದು, ಕಾಂಟ್ರಾಸ್ಟ್‌ ರೇಶಿಯೋವು 10000:1 ಆಗಿದೆ. 106 x 105 x 39mm ಸುತ್ತಳತೆಯ ರಚನೆಯನ್ನು ಪಡೆದಿದೆ.

ಆಸೂಸ್‌ಝೆನ್‌ಬಿಮ್ (Asus ZenBeam E1)

ಆಸೂಸ್‌ಝೆನ್‌ಬಿಮ್ (Asus ZenBeam E1)

ಆಸೂಸ್‌ಝೆನ್‌ಬಿಮ್ ಈ ಪ್ರೊಜೆಕ್ಟರ್‌ ಸಹ DLP ಮಾದರಿಯಲ್ಲಿದ್ದು, 854 x 480 ಪಿಕ್ಸಲ್‌ ಪಿಚ್ಚರ್‌ ರೆಸಲ್ಯೂಶನ್‌ ಹೊಂದಿದೆ. 150 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ದೊಂದಿಗೆ, HDMI, MHL ಇನ್‌ಪುಟ್‌ ಆಯ್ಕೆಯನ್ನು ಹೊಂದಿದೆ. ಕಾಂಟ್ರಾಸ್ಟ್‌ ರೇಶಿಯೋವು 3500:1 ಆಗಿದ್ದು, 110 x 29 x 83mm ಸುತ್ತಳತೆಯ ರಚನೆಯನ್ನು ಪಡೆದಿದೆ. ಡಿಸೈನ್‌ ಆಕರ್ಷಕವಾಗಿದೆ.

ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!

Best Mobiles in India

English summary
If you regularly make presentations, or you need to show your PC or laptop screen with an audience, then this list will help. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X