ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಸ್ಮಾರ್ಟ್‌ವಾಚ್‌ಗಳು ಇಲ್ಲಿವೆ ನೋಡಿ!

|

ಸ್ಮಾರ್ಟ್‌ಫೋನ್‌ ಎಷ್ಟು ಪ್ರಮುಖ ಸ್ಥಾನ ಪಡೆದಿದೆಯೋ ಅದೇ ಹಾದಿಯಲ್ಲಿಗ ಸ್ಮಾರ್ಟ್‌ವಾಚ್‌ಗಳು ಸಹ ಜನಪ್ರಿಯಗೊಳ್ಳುತ್ತಿವೆ. ಹೀಗಾಗಿ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಹಲವು ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ್ದು, ಅಗ್ಗದ ಬೆಲೆಯಿಂದ ಹೈ ಎಂಡ್‌ ಬೆಲೆಯವರೆಗೂ ಸ್ಮಾರ್ಟ್‌ವಾಚ್‌ಗಳಲ್ಲಿ ಹಲವು ಆಯ್ಕೆಗಳು ಲಭ್ಯ ಇವೆ. ಬ್ರ್ಯಾಂಡೆಂಡ್‌ ಕಂಪನಿಗಳ ಸ್ಮಾರ್ಟ್‌ವಾಚ್‌ಗಳಿಗೆನೇ ಹೆಚ್ಚು ಡಿಮ್ಯಾಂಡ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಸ್ಮಾರ್ಟ್‌ವಾಚ್‌ಗಳು ಇಲ್ಲಿವೆ ನೋಡಿ

ಹೌದು, ಗ್ರಾಹಕರು ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ವಾಚ್‌ ಅನ್ನು ಖರೀದಿಸಲು ಮುಂದಾಗುವುದು ಸಹಜ. ಮತ್ತು ಅವುಗಳಲ್ಲಿ ನಡಿಗೆ ಸಮಯ, ನಿದ್ರೆಯ ಸಮಯ, ಹೃದಯ ಬಡಿತದ ಅಂಕಿ ಸಂಖ್ಯೆ ತಿಳಿಸುವ ಜೊತೆಗೆ ಫಿಟ್‌ನೆಸ್ಸ್ ಕುರಿತ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ವಾಚ್‌ಗಳಿಗೆ ಬೇಡಿಕೆ ಹೆಚ್ಚು. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ವಾಚ್‌ಗಳ ಯಾವುವು ಮತ್ತು ಏನೆಲ್ಲ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್‌ ವಾಚ್‌ ಸಿರೀಸ್‌ 4

ಆಪಲ್‌ ವಾಚ್‌ ಸಿರೀಸ್‌ 4

ಈ ಸ್ಮಾರ್ಟ್‌ವಾಚ್‌ 1.78 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. iOS ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, OS 5 ಓಎಸ್‌ ಇದರಲ್ಲಿದೆ. 16GB ಆನ್‌ಬೋರ್ಡ್‌ ಸಂಗ್ರಹ ಸಾಮರ್ಥ್ಯವು ಒದಗಿಸಲಾಗಿದ್ದು, 50m ವಾಟರ್‌ ರೆಸಿಸ್ಟಂಟ್ ಸೌಲಭ್ಯವನ್ನು ಹೊಂದಿದೆ. ವೈಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವು ಸಹ ಇದ್ದು, ವೈಫೈ, ಬ್ಲೂಟೂತ್, ಎನ್‌ಎಫ್‌ಸಿ ಆಯ್ಕೆಗಳನ್ನು ಒಳಗೊಂಡಿದೆ. ಹಾರ್ಟ್‌ಬೀಟ್‌ ತಿಳಿಸುವ ಆಯ್ಕೆಯೊಂದಿಗೆ ಹಲವು ಫಿಟ್‌ನೆಸ್ಸ್ ಆಯ್ಕೆಗಳನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ವಾಚ್‌

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ವಾಚ್‌

ಈ ಸ್ಮಾರ್ಟ್‌ವಾಚ್‌ 1.3 ಇಂಚಿನ ಡಿಸ್‌ಪ್ಲೇಯೊಂದಿಗೆ 360 x 360 ಪಿಕ್ಸಲ್‌ ರೆಸಲ್ಯೂಶನ್‌ನೊಂದಿ ಹೊಂದಿರಲಿದೆ. ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಕ್ಟಾಕೋರ್‌ 1.15GHz ಇದರಲ್ಲಿದೆ. 4GB ಆನ್‌ಬೋರ್ಡ್‌ ಸಂಗ್ರಹ ಸಾಮರ್ಥ್ಯವು ಒದಗಿಸಲಾಗಿದ್ದು, ವೈಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವು ಸಹ ಪಡೆದಿದೆ. ನಾಲ್ಕು ದಿನ ಬಾಳಿಕೆ ಬರುವ ಶಕ್ತಿಯುತ ಬ್ಯಾಟರಿ ಇರುವ ಜೊತೆಗೆ ವೈಫೈ, ಬ್ಲೂಟೂತ್ ಆಯ್ಕೆಗಳನ್ನು ಒಳಗೊಂಡಿದೆ. ಸ್ಪೋರ್ಟ್ಸ್‌ ಮಾದರಿಯ ಈ ವಾಚ್‌ ಹಲವು ಫಿಟ್‌ನೆಸ್ಸ್ ಆಯ್ಕೆಗಳನ್ನು ಹೊಂದಿದೆ.

ಆಪಲ್‌ ವಾಚ್‌ ಸಿರೀಸ್‌ 3

ಆಪಲ್‌ ವಾಚ್‌ ಸಿರೀಸ್‌ 3

ಈ ಸ್ಮಾರ್ಟ್‌ವಾಚ್‌ 1.53 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. iOS ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, S2 ಡ್ಯುಯಲ್‌ ಕೋರ್‌ ಪ್ರೊಸೆಸರ್‌ ಹೊಂದಿದೆ. 8GB / 16GB ಆನ್‌ಬೋರ್ಡ್‌ ಸಂಗ್ರಹ ಆಯ್ಕೆಯನ್ನು ಹೊಂದಿದ್ದು, 18 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ವೈಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವು ಸಹ ಇದ್ದು, ವೈಫೈ, ಬ್ಲೂಟೂತ್, ಎನ್‌ಎಫ್‌ಸಿ ಆಯ್ಕೆಗಳನ್ನು ಒಳಗೊಂಡಿದೆ. ಫಿಟ್‌ನೆಸ್‌ ಆಯ್ಕೆಗಳಿದ್ದು, ವಾಟರ್‌ ರೆಸಿಸ್ಟಂಟ್ ಸೌಲಭ್ಯ ಪಡೆದಿದೆ ಈ ವಾಚ್‌ ಧರಿಸಿ ನೀರಲ್ಲಿ ಈಜಬಹುದಾಗಿದೆ.

ಫಿಟ್‌ಬಿಟ್‌ ವರ್ಸಾ

ಫಿಟ್‌ಬಿಟ್‌ ವರ್ಸಾ

ಡ್ಯುಯಲ್‌ ಕೋರ್‌ 1.0GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ವಾಚ್‌ TBC ಡಿಸ್‌ಪ್ಲೇ ಮಾದರಿಯಲಿದೆ. ಆನ್‌ಬೋರ್ಡ್‌ ಸಂಗ್ರಹಕ್ಕಾಗಿ 2.5GB ಸ್ಥಳಾವಕಾಶ ಒದಗಿಸಲಾಗಿದೆ. ಪ್ರೊಪ್ರಿಯೆಟರ್ ಮಾದರಿಯ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದ್ದು, ಬ್ಯಾಟರಿಯು ಸುಮಾರು 3ರಿಂದ4 ದಿನಗಳ ಕಾಲ ಬಾಳಿಕೆ ಒದಗಿಸಲಿದೆ. ಇದರೊಂದಿಗೆ 50m ವಾಟರ್‌ ರೆಸಿಸ್ಟಂಟ್ ಸೌಲಭ್ಯವನ್ನು ಹೊಂದಿದೆ. ವೈಫೈ, ಬ್ಲೂಟೂತ್ ಆಯ್ಕೆಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗೇರ್‌ ಎಸ್‌3

ಸ್ಯಾಮ್‌ಸಂಗ್‌ ಗೇರ್‌ ಎಸ್‌3

360 x 360 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 1.3 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡ್ಯುಯಲ್‌ ಕೋರ್‌ 1.0GHz ಪ್ರೊಸೆಸರ್‌ ಕೆಲಸ ನಿರ್ವಹಿಸಲಿದೆ. 4GB ಆನ್‌ಬೋರ್ಡ್‌ ಸಂಗ್ರಹ ಸಾಮರ್ಥ್ಯವನ್ನು ಪಡೆದಿರುವ ಈ ಸ್ಮಾರ್ಟ್‌ವಾಚ್, ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಬ್ಯಾಟರಿಯು ಸುಮಾರು 3 ದಿನ ಬಾಳಿಕೆ ಒದಗಿಸಲಿದೆ. ವೈಫೈ, ಬ್ಲೂಟೂತ್ ಆಯ್ಕೆಗಳನ್ನು ಸಹ ಒಳಗೊಂಡಿದೆ.

Best Mobiles in India

English summary
Best smartwatch 2019: The top smartwatches available in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X