ಬೋಟ್ 'ಸ್ಟೋನ್‌ 650' ಸ್ಪೀಕರ್‌ ಲಾಂಚ್‌.! ಬೆಲೆ ಎಷ್ಟು ಗೊತ್ತಾ?

|

ಆಡಿಯೋ ಪರಿಕರಗಳ ತಯಾರಿಕಾ ಕಂಪನಿ 'ಬೋಟ್‌', ತನ್ನ ವಿವಿಧ ಮಾದರಿಯ ಗುಣಮಟ್ಟದ ಆಡಿಯೋ ಉತ್ಪನ್ನಗನ್ನು ಹೊಂದಿದ್ದು, ಆನ್‌ಲೈನ್ ಮಾರುಕಟ್ಟೆಯ ಮೂಲಕ ಮ್ಯೂಸಿಕ್ ಪ್ರಿಯರ ಮನಸೆಳೆದಿದೆ. ಕಂಪನಿ ಇದೀಗ 'ಸ್ಟೋನ್ 650' ಹೆಸರಿನ ಹೊಸ ವೈಯರ್‌ ಲೆಸ್‌ ಸ್ಪೀಕರ್‌ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಈ ಸ್ಪೀಕರ್‌ ಮಾರುಕಟ್ಟೆಯಲ್ಲಿ ಅಬ್ಬರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬೋಟ್ 'ಸ್ಟೋನ್‌ 650' ಸ್ಪೀಕರ್‌ ಲಾಂಚ್‌.! ಬೆಲೆ ಎಷ್ಟು ಗೊತ್ತಾ?

ಹೌದು, ಬೋಟ್‌ ಕಂಪನಿಯು ಬಿಡುಗಡೆ ಮಾಡಿರುವ 'ಸ್ಟೋನ್‌ 650 ಸ್ಪೀಕರ್‌' ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಅಮೆಜಾನ್‌ನಲ್ಲಿ ದೊರೆಯಲಿದ್ದು, ಈ ಸಾಧನದ ಬೆಲೆಯು 1,899ರೂ.ಗಳು ಆಗಿವೆ. ಸ್ಟೋನ್‌ 650 ಸ್ಪೀಕರ್ IPX5 ವಾಟರ್ ಪ್ರೂಫ್‌, ದೂಳು ಮುಕ್ತ ರಚನೆಯನ್ನು ಹೊಂದಿದ್ದು, ಬಾಹ್ಯದಲ್ಲಿ ಜಾಲರಿ ಮಾದರಿಯ ಆಕಾರವಿದೆ. ಈ ಹಿಂದೆ ಕಂಪನಿ ಪರಿಚಯಿಸಿದ್ದ 'ಸ್ಟೋನ್‌ 600' ಸ್ಪೀಕರ್‌ ಅನ್ನು ಹೋಲುವಂತಿದೆ.

ಬೋಟ್ 'ಸ್ಟೋನ್‌ 650' ಸ್ಪೀಕರ್‌ ಲಾಂಚ್‌.! ಬೆಲೆ ಎಷ್ಟು ಗೊತ್ತಾ?

ಸ್ಪೀಕರ್‌ಗಳು ಡ್ಯುಯಲ್ ಡ್ರೈವರ್‌ ಸೆಟ್ಟ್ಅಪ್‌ಗಳನ್ನು ಒಳಗೊಂಡಿರುವ ಜತೆಗೆ 5W ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. 1,800mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ದೀರ್ಘಕಾಲದ ಬ್ಯಾಟರಿ ಬಾಳಿಕೆಗೆ ಸಹಕರಿಸಲಿರುವ ಈ ಸ್ಪೀಕರ್‌ ಸುಮಾರು 7 ಗಂಟೆ ಕಾಲ ಬಾಳಿಕೆ ಬರಲಿದೆ. ಈ ಸಾಧನ ಬ್ಲೂಟೂತ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಸಹ ಹೊಂದಿದೆ.

ಬೋಟ್ 'ಸ್ಟೋನ್‌ 650' ಸ್ಪೀಕರ್‌ ಲಾಂಚ್‌.! ಬೆಲೆ ಎಷ್ಟು ಗೊತ್ತಾ?

'ಸ್ಟೋನ್ 650 ಸ್ಪೀಕರ್‌' 4.2 ಬ್ಲೂಟೂತ್ ಹೊಂದಿದ್ದು ಇದರೊಂದಿಗೆ A2DP, AVRCP ಮತ್ತು HFP ಆಯ್ಕೆಗಳನ್ನು ಸಹಕರಿಸುತ್ತದೆ. ಬ್ಲೂಟೂತ್‌ ಅಷ್ಟೇ ಅಲ್ಲದೇ ಆಕ್ಸಲರಿ ಕೇಬಲ ಅಥವಾ ಟಿಎಫ ಸ್ಟೋರೆಜ್ ನಿಂದಲೂ ಕನೆಕ್ಟ್‌ ಮಾಡಬಹುದಾಗಿದೆ. 'ಮೈಕ್ರೊ ಯುಎಸ್‌ಬಿ' ಪೋರ್ಟ್‌ನ ನೆರವಿನಿಂದ ಚಾರ್ಜಿಂಗ ಮಾಡಲು ವ್ಯೆವಸ್ಥೆ ಮಾಡಲಾಗಿದೆ. ಹ್ಯಾಂಡ್ಸ್‌ ಫ್ರೀ ವೈಯಸ್‌ ಕಾಲ್ ಸೌಲಭ್ಯ ಸಹ ಒದಗಿಸಲಾಗಿದೆ.

ಈ ಸ್ಪೀಕರ್ ಪಕ್ಕದಲ್ಲಿ ಆಡಿಯೋ ಮತ್ತು ಪ್ಲೇಬ್ಯಾಕ್‌ ಕಂಟ್ರೋಲ್ ಬಟನ್‌ಗಳನ್ನು ನೀಡಲಾಗಿದ್ದು, ಹೀಗಾಗಿ ಬ್ಲೂಟೂತ್ ಕನೆಕ್ಟ್‌ ಒದಗಿಸಿದ ಸ್ಮಾರ್ಟ್‌ಫೋನ್‌ ಡಿವೈಸ್‌ನಲ್ಲಿ ಆಡಿಯೋ ಮತ್ತು ಪ್ಲೇಬ್ಯಾಕ್‌ ನಿಯಂತ್ರಣ ಮಾಡುವ ಅಗತ್ಯವಿಲ್ಲ.

Best Mobiles in India

English summary
The latest product from Boat is the Stone 650, which is priced at Rs. 1,899 on Amazon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X