TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸಖತ್ ಸ್ಮಾರ್ಟ್ ಆಗಿದೆ 'ಬೊಟ್ ಸ್ಟೋನ್' ಸ್ಮಾರ್ಟ್ ಸ್ಪೀಕರ್!
ಮ್ಯೂಸಿಕ್ ಕೇಳಲು ಯಾವುದೋ ಒಂದು ಸ್ಪೀಕರ್ ಇದ್ದರೇ ಸಾಕು ಎನ್ನುವ ಕಾಲ ಇದಲ್ಲ. ಏಕೆಂದರೇ ಸ್ಪೀಕರ್‌ನ ಔಟ್‌ಪುಟ್ ಸೌಂಡ್ ಅತ್ಯುತ್ತಮವಾಗಿದ್ದಾಗ ಮಾತ್ರವೇ ಮ್ಯೂಸಿಕ್ ಅಸಲಿ ಬೀಟ್ಸ್‌ಗಳನ್ನು ಎನ್‌ಜಾಯ್ ಮಾಡಲು ಸಾಧ್ಯವಾಗುವುದು. ಅದಕ್ಕಾಗಿ ಮ್ಯೂಸಿಕ್ ಪ್ರಿಯರು ಅತ್ಯುತ್ತಮವಾದ ಗುಣಮಟ್ಟದ ಸ್ಪೀಕರ್‌ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ. ಈ ಸಾಲಿಗಿಗ ಬೊಟ್‌ನ ಹೊಸ ಸ್ಪೀಕರ್‌ವೊಂದು ಸೇರ್ಪಡೆಯಾಗಿದೆ.
ಬೊಟ್ ಕಂಪನಿ ಇತ್ತೀಚಿಗೆ 'ಸ್ಪ್ರಿಂಗ್ ಎಕ್ಸ್' ಹೆಸರಿನ ವೈಯರ್ ಲೆಸ್ ಕನೆಕ್ಟಿವೀಟಿ ಇರುವ ಸ್ಪೀಕರ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ ಮ್ಯೂಸಿಕ್ ಪ್ರಿಯರನ್ನೆಲ್ಲಾ ತನ್ನತ್ತ ತಿರುಗಿ ನೋಡುವ ಹಾಗೇ ಮಾಡಿತ್ತು. ಇದೀಗ ಅದರ ಮುಂದುವರಿದ ಸರಣಿಯಾಗಿ ಬೊಟ್ ಕಂಪನಿ ಸ್ಟೋನ್ A700 ಸ್ಮಾರ್ಟ್ ಸ್ಪೀಕರ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಆದರೇ ಈ ಸ್ಪೀಕರ್ ತುಂಬಾ ಸ್ಮಾರ್ಟ್.!
ಭಾರತದ ಮಾರುಕಟ್ಟೆಗೆ ಲಭ್ಯವಿರುವ ಜನಪ್ರಿಯ ಬೊಟ್ ಕಂಪನಿಯ ಸ್ಟೋನ್ A700 ಸ್ಮಾರ್ಟ್ ಸ್ಪೀಕರ್ ಅತ್ಯುತ್ತಮ ಸೌಂಡ್ ಕ್ಲಿಯರಿಟಿಯ ಅನುಭವವನ್ನು ಕೇಳಗರಿಗೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಅಮೆಜಾನ್ ಅಭಿವೃದ್ಧಿ ಪಡಿಸಿದ ಅಲೆಕ್ಸಾ ವಾಯಿಸ್ ಅಸಿಸ್ಟೆನ್ಸ್ ತಂತ್ರಜ್ಞಾನವನ್ನು ಬೊಟ್ ಸ್ಪೀಕರ್ ಇನ್‌ಬಿಲ್ಟ್ ಅಳವಡಿಸಲಾಗಿದ್ದು, ಧ್ವನಿ ಮೂಲಕ ಈ ಸ್ಮಾರ್ಟ್ ಸ್ಪೀಕರ್ ಅನ್ನು ನಿಯಂತ್ರಿಸಬಹುದಾಗಿದೆ.
ಅಲೆಕ್ಸಾ ವಾಯಿಸ್ ಅಸಿಸ್ಟಂಟ್ ಹೊಂದಿರುವ ಜೊತೆಗೆ ಗೂಗಲ್ ಅಸಿಸ್ಟಂಟ್‌ನ ಸಪೋರ್ಟ್ ಸಹ ಈ ಸ್ಮಾರ್ಟ್ ಸ್ಪೀಕರ್ ನಲ್ಲಿ ಕಾಣಬಹುದಾಗಿದೆ. ಅಲೆಕ್ಸಾದ ಅಸಿಸ್ಟಂಟ್ ಸೌಲಭ್ಯಗಳನ್ನು ಪಡೆಯಲು ಗ್ರಾಹಕರು ಅಮೆಜಾನ್ ಅಲೆಕ್ಸಾದಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ಇದರೊಂದಿಗೆ ಈ ಬೊಟ್ ಸ್ಟೋನ್ ಸ್ಮಾರ್ಟ್ ಸ್ಪೀಕರ್ ವಾಟರ್‌ಪ್ರೋಫ್ ಕೂಡಾ ಆಗಿರುವುದು ಮ್ಯೂಸಿಕ್ ಪ್ರೇಮಿಗಳ ಖುಷಿಯನ್ನು ದ್ವಿಗುಣಗೊಳಿಸಿದೆ ಎಂದು ಹೇಳಬಹುದಾಗಿದೆ.
ಈ ಸ್ಪೀಕರ್ 2,000mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಹೊಂದಿದ್ದು, 95-18,000Hz ತಂರಂಗಾತರದೊಂದಿಗೆ 5wನ ಎರಡು ಡ್ರೈವ್‌ಗಳನ್ನು ಸ್ಪೀಕರ್ ಹೊಂದಿದೆ. ಬ್ಲೂಟೂತ್ ಮೂಲಕವೂ ಕನೆಕ್ಟಿವಿಟಿಯನ್ನು ಮಾಡಬಹುದಾಗಿದ್ದು, ಮೈಕ್ರೋ ಯುಎಸ್‌ಬಿ ಮೂಲಕ ಈ ಸ್ಪೀಕರ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಅಮೆಜಾನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಬೊಟ್‌ನ ಸ್ಟೋನ್ A700 ಸ್ಮಾರ್ಟ್ ಸ್ಪೀಕರ್ ಲಭ್ಯವಿದ್ದು, ಇದರ ಬೆಲೆ 3,199 ರೂ.ಗಳು.