20,000 mAh ಸಾಮರ್ಥ್ಯದ ಬೆಸ್ಟ್ ಪವರ್ ಬ್ಯಾಂಕ್ ಗಳು

By Gizbot Bureau
|

ಪವರ್ ಬ್ಯಾಂಕ್ ನ್ನು ಜನರು ಬಳಸುತ್ತಿರುವುದು ಮತ್ತು ಅದನ್ನು ಅಗತ್ಯತೆ ಜನರಿಗೆ ಅಧಿಕವಾಗುತ್ತಿರುವುದರ ಪರಿಣಾಮದಿಂದಾಗಿ ಈ ಆಕ್ಸಸರೀಸ್ ಗಳ ತಯಾರಿಕೆಗೆ ತಯಾರಕರು ಕೂಡ ಮುತುವರ್ಜಿ ವಹಿಸುತ್ತಿದ್ದಾರೆ ಮತ್ತು ಹೆಚ್ಚೆಚ್ಚು ಸಾಮರ್ಥ್ಯದ ಬ್ಯಾಟರಿಯನ್ನು ಸೃಷ್ಟಿಸುತ್ತಿದ್ದಾರೆ. ಸದ್ಯ 20,000 mAh ಸಾಮರ್ಥ್ಯವಿರುವ ಅತೀ ದೊಡ್ಡ ಬ್ಯಾಟರಿ ಕೆಪಾಸಿಟಿಯ ಪವರ್ ಬ್ಯಾಂಕ್ ಗಳು ಲಭ್ಯವಾಗುತ್ತಿದೆ.

20,000 mAh ಸಾಮರ್ಥ್ಯದ ಬೆಸ್ಟ್ ಪವರ್ ಬ್ಯಾಂಕ್ ಗಳು

ಇವುಗಳು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಗಳನ್ನು ಹಲವಾರು ಬಾರಿ ರೀಚಾರ್ಜ್ ಮಾಡಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಈ ಪೊರ್ಟೇಬಲ್ ಡಿವೈಸ್ ಗಳಿಂದ ನಿಮ್ಮ ಲ್ಯಾಪ್ ಟಾಪ್ ಗಳನ್ನು ಕೂಡ ಚಾರ್ಜ್ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಈ ಪವರ್ ಬ್ಯಾಂಕ್ ಗಳು ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯೊಂದಿಗೆ ಲಭ್ಯವಾಗುತ್ತದೆ. MP3/MP4 ಪ್ಲೇಯರ್ ಗಳೊಂದಿಗೆ ಕೂಡ ಇವು ಕಂಪ್ಯಾಟಬಲ್ ಆಗಿದೆ.ಓವರ್ ಓಲ್ಟೇಜ್ ಪ್ರೊಟೆಕ್ಷನ್ ನೊಂದಿಗೆ ಈ ಪೊರ್ಟೆಬಲ್ ಡಿವೈಸ್ ಗಳು ಲಭ್ಯವಾಗುತ್ತದೆ. ಟೆಂಪರೇಚರ್ ಸೆನ್ಸಿಟೀವ್ ಕೂಡ ಆಗಿದ್ದು ಯಾವುದೇ ರೀತಿಯ ಡ್ಯಾಮೇಜ್ ಗಳು ಆಗದಂತಹ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಇಂಟೆಲಿಜೆಂಟ್ LED ಡಿಸ್ಪ್ಲೇಯನ್ನು ಕೂಡ ಇವು ಹೊಂದಿದ್ದು ಇದು ಚಾರ್ಜಿಂಗ್ ಸ್ಟೇಟಸ್ ನ್ನು ಇಂಡಿಕೇಟ್ ಮಾಡುತ್ತವೆ. ಹಾಗಾದ್ರೆ ಇಂತಹ ಕೆಲವು ಅಧ್ಬುತ ಡಿವೈಸ್ ಗಳ ಪಟ್ಟಿ ಇಲ್ಲಿದೆ ನೋಡಿ.

ಆಂಬ್ರೇನ್ 20000mAh ಲೀಥಿಯಂ ಪಾಲಿಮರ್ ಪವರ್ ಬ್ಯಾಂಕ್ (ಸ್ಟೈಲೋ-20K, ಕಪ್ಪು)

ಆಂಬ್ರೇನ್ 20000mAh ಲೀಥಿಯಂ ಪಾಲಿಮರ್ ಪವರ್ ಬ್ಯಾಂಕ್ (ಸ್ಟೈಲೋ-20K, ಕಪ್ಪು)

MRP: Rs 1,299

ಪ್ರಮುಖ ವೈಶಿಷ್ಟ್ಯತೆಗಳು:

• 20,000 mAh ಲೀಥಿಯಂ ಪಾಲಿಮರ್ ಬ್ಯಾಟರಿ ಚಾರ್ಜಸ್ ಐಫೋನ್ 8 - 6 ಬಾರಿ , ಸ್ಯಾಮ್ ಸಂಗ್ ಜೆ7 - 4.6 ಬಾರಿ , ಎಂಐ ರೆಡ್ಮಿ 6ಎ - 4.6 ಬಾರಿ,ವಿವೋ ವಿ3 - 5.4 ಬಾರಿ

• 2ಎ ವಾಲ್ ಚಾರ್ಜರ್ ಜೊತೆಗೆ ಪವರ್ ಬ್ಯಾಂಕ್ ಸಂಪೂರ್ಣ ಚಾರ್ಜ್ ಆಗುವುದಕ್ಕೆ 12 ತಾಸುಗಳ ಸಮಯ ತೆಗೆದುಕೊಳ್ಳುತ್ತದೆ.

• ನಿಮಗೇನೇನು ಸಿಗುತ್ತದೆ?: 1 ಪವರ್ ಬ್ಯಾಂಕ್, 1ಕೇಬಲ್, 1 ಊಬರ್ ಮ್ಯಾನುವಲ್ ಮತ್ತು 180 ದಿನಗಳ ವಾರೆಂಟಿ

• ಸಾಮಗ್ರಿಯ ತೂಕ:- 370 gms (approx) , ಬ್ಯಾಟರಿ

• ವಿಧ:- ಲೀಥಿಯಂ ಪಾಲಿಮರ್ , ಡುಯಲ್ ಯುಎಸ್ ಬಿ ಪೋರ್ಟ್ ಔಟ್ ಪುಟ್ 5V/2.4A

• ಡುಯಲ್ USB ಇನ್ ಫುಟ್ 5V/2.1A ನಲ್ಲಿ ಟೈಪ್ ಸಿ/ಮೈಕ್ರೋ ಯುಎಸ್ ಬಿ ಯಿಂದ ಸಾಧ್ಯವಾಗಲಿದೆ.

• ಪೋರ್ಟೇಬಲ್ ಎರ್ಗಾನಿಕ್ ಡಿಸೈನ್ ಜೊತೆಗೆ ಹಾರ್ಡ್ ಎಬಿಎಸ್ ಪ್ಲಾಸ್ಟಿಕ್ ಎಕ್ಸ್ ಟೀರಿಯರ್, ಮೇಲ್ಮೈಯಲ್ಲಿ ಫೆದರ್ ಟಚ್ ಪವರ್ ಬಟನ್ ಇದೆ.

• ಡಿವೈಸ್ ನ ಮೇಲ್ಮೈಯನ್ನು ಸರಳವಾಗಿ ಟಚ್ ಮಾಡಿದರೆ ಆನ್ ಆಗುತ್ತದೆ.ಚಿಪ್ ಸೆಟ್ ಜೊತೆಗೆ 9 ಲೇಯರ್ ನ ನೂತನ ಪ್ರೊಟೆಕ್ಷನ್ ಇದೆ.

ಲ್ಯಾಪ್ ಗಾರ್ಡ್ ಎಲ್ ಜಿ 805 20800mAH ಲೀಥಿಯಂ-ಐಯಾನ್ ಪವರ್ ಬ್ಯಾಂಕ್ (ಬಿಳಿ)

ಲ್ಯಾಪ್ ಗಾರ್ಡ್ ಎಲ್ ಜಿ 805 20800mAH ಲೀಥಿಯಂ-ಐಯಾನ್ ಪವರ್ ಬ್ಯಾಂಕ್ (ಬಿಳಿ)

ಆಕರ್ಷಕ ಬೆಲೆ: Rs 999

ಪ್ರಮುಖ ವೈಶಿಷ್ಟ್ಯತೆಗಳು:

• 20800mAH ಲೀಥಿಯಂ-ion ಬ್ಯಾಟರಿ

• ಭಾರತದಲ್ಲಿ ತಯಾರಾಗುವ ಪವರ್ ಬ್ಯಾಂಕ್ - ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾಗುವ ಈ ಪವರ್ ಬ್ಯಾಂಕ್ ಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು 12 ತಿಂಗಳ ವಾರೆಂಟಿ ಲಭ್ಯವಾಗುತ್ತದೆ.

• ಎಲ್ಲಾ ಆಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್ ಗಳ ಜೊತೆಗೆ ಕಂಪ್ಯಾಟೆಬಲ್ ಆಗಿದೆ. 5ವಿ ಚಾರ್ಜ್ ಇನ್ ಪುಟ್ ಇದೆ,

• ಚಾರ್ಜಿಂಗ್ ಗೆ ಸುರಕ್ಷತೆ:ಇಂಟೆಲಿಜೆಂಟ್ ಪವರ್ ಮ್ಯಾನೇಜ್ ಐಸಿ ಇದೆ,ಇದು ಅತಿಯಾಗಿ ಚಾರ್ಜ್ ಆಗುವಿಕೆ, ಅತಿಯಾದ ವೋಲ್ಟೇಜ್, ಅತಿಯಾದ ಕರೆಂಟ್, ಮತ್ತು ಶಾರ್ಟ್ ಸರ್ಕ್ಯೂಟ್ ಪ್ರೊಟೆಕ್ಷನ್ ಹೊಂದಿದೆ. ಎಲ್ಲಾ ಸಂದರ್ಬದಲ್ಲೂ ಕೂಡ ನಿಮ್ಮ ಡಿಜಿಟಲ್ ಡಿವೈಸ್ ಗೆ ಹಾನಿಯಾಗದಂತೆ ಇದು ನೋಡಿಕೊಳ್ಳುತ್ತದೆ.

• ಬಿಲ್ಟ್ ಇನ್ 4 LED ಇಂಡಿಗೇಟರ್ ಇದ್ದು ಶೇಕಡಾ ಬ್ಯಾಟರಿ ಮತ್ತು ಚಾರ್ಜಿಂಗ್ ಸ್ಟೇಟಸ್ ನ್ನು ತೋರಿಸುತ್ತದೆ.

• ಕನೆಕ್ಟರ್ ಟೈಪ್ - ಮೈಕ್ರೋ USB ಇನ್ ಪುಟ್: 5V-2.1A (max), ಔಟ್ ಪುಟ್ : 5V-2.1A (max), ರೇಟೆಡ್ ಕೆಪಾಸಿಟಿ: 20800mAH (74.88 wh), ಔಟ್ ಪುಟ್ ಕೆಪಾಸಿಟಿ: 12800mAH/5V ಪವರ್ ಬ್ಯಾಕ್ ಅಪ್, ಕಾಂಪ್ಯಾಕ್ಟ್ ಸೈಜ್ - 6.29 x 3.14 x 0.79 ಇಂಚುಗಳು

• 12 ತಿಂಗಳ ವಾರೆಂಟಿ ಇದೆ.

ಓವಿಸ್ಟಾ 20000mAH ಯುನಿವರ್ಸಲ್ ಫಾಸ್ಟ್ ಬ್ಯಾಟರಿ ಪವರ್ ಬ್ಯಾಂಕ್ 5V/2A ಇನ್ ಪುಟ್ & 5V/2A ಔಟ್ ಪುಟ್ (ಬೆಳ್ಳಿ)

ಓವಿಸ್ಟಾ 20000mAH ಯುನಿವರ್ಸಲ್ ಫಾಸ್ಟ್ ಬ್ಯಾಟರಿ ಪವರ್ ಬ್ಯಾಂಕ್ 5V/2A ಇನ್ ಪುಟ್ & 5V/2A ಔಟ್ ಪುಟ್ (ಬೆಳ್ಳಿ)

MRP: Rs 979

ಪ್ರಮುಖ ವೈಶಿಷ್ಟ್ಯತೆಗಳು:

• 20000 mAh ಪವರ್ ಬ್ಯಾಂಕ್ ಜೊತೆಗೆ 1 USB ಪೋರ್ಟ್ ಎಲ್ಲಿ ಬೇಕಿದ್ದರೂ ನಿಮ್ಮ ಮೊಬೈಲ್ ಫೋನ್ ನ್ನು ಯಾವಾಗ ಬೇಕಿದ್ದರೂ ಚಾರ್ಜ್ ಮಾಡಿಕೊಳ್ಳಬಹುದು.

• ಹಲವು ರೀತಿಯ ಸರ್ಕ್ಯೂಟ್ ಪ್ರೊಟೆಕ್ಷನ್ ಸಿಸ್ಟಮ್ ಇದರಲ್ಲಿದ್ದು ಅತಿಯಾದ ಚಾರ್ಜ್ ಆಗುವಿಕೆಯನ್ನು ತಪ್ಪಿಸುತ್ತದೆ.

• ಬಿಲ್ಟ್ ಇನ್ 4 LED ಇಂಡಿಕೇಟರ್ ಡಿಸ್ಪ್ಲೇ ಇದ್ದು ಶೇಕಡಾವಾರು ಬ್ಯಾಟರಿ ಮತ್ತು ಚಾರ್ಜಿಂಗ್ ಸ್ಟೇಟಸ್ ನ್ನು ತೋರಿಸುತ್ತದೆ.

• ಮೇಕ್ ಇನ್ ಇಂಡಿಯಾ ಪವರ್ ಬ್ಯಾಂಕ್: 12 ತಿಂಗಳ ತಯಾರಿಕಾ ಗ್ಯಾರೆಂಟಿ

ಪ್ರೋಬೀಟ್ಸ್ 20 LED ಪವರ್ ಬ್ಯಾಂಕ್-20000Mah ಜೊತೆಗೆ ಸೋಲಾರ್ Led ಚಾರ್ಜಿಂಗ್ (ಬೆಳ್ಳಿ)

ಪ್ರೋಬೀಟ್ಸ್ 20 LED ಪವರ್ ಬ್ಯಾಂಕ್-20000Mah ಜೊತೆಗೆ ಸೋಲಾರ್ Led ಚಾರ್ಜಿಂಗ್ (ಬೆಳ್ಳಿ)

MRP: Rs 1,400

ಪ್ರಮುಖ ವೈಶಿಷ್ಟ್ಯತೆಗಳು:

• ತಯಾರಿಕಾ ಸಮಸ್ಯೆಗಳಿಗಾಗಿ 12 ತಿಂಗಳ ಗ್ಯಾರೆಂಟಿ.

• ಮಲ್ಟಿ ಪ್ರೊಟೆಕ್ಟೀವ್ ಸರ್ಕ್ಯೂಟ್ ಡಿಸೈನ್ ಇದೆ. ಇದು ನಿಮ್ಮ ಮೊಬೈಲ್ ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ. ಆ ಮೂಲಕ ಉತ್ತಮ ಚಾರ್ಜಿಂಗ್ ಅನುಭವವನ್ನು ನಿಮಗೆ ನೀಡುತ್ತದೆ.

• ಎಸಿ ಅಡಾಪ್ಟರ್ ನಿಂದ ವೇಗವಾದ ಚಾರ್ಜಿಂಗ್ ಮತ್ತು ಸನ್ ಲೈಟ್ ನಿಂದ ನಿಧಾನಗತಿಯ ಚಾರ್ಜಿಂಗ್, ಯಾವುದೇ ಇತರೆ ಲೈಟ್ ಅಥವಾ ಸನ್ ಲೈಟ್ ನ ನೆರಳು.

• ತಯಾರಿಕಾ ಸಮಸ್ಯೆಗಳಿಗೆ 1 ವರ್ಷದ ವಾರೆಂಟಿ.

ಐಪ್ರೋ ಐಪಿ200ಎಲ್ 20000mAh ಲೀಥಿಯಂ ಪಾಲಿಮರ್ ಪವರ್ ಬ್ಯಾಂಕ್

ಐಪ್ರೋ ಐಪಿ200ಎಲ್ 20000mAh ಲೀಥಿಯಂ ಪಾಲಿಮರ್ ಪವರ್ ಬ್ಯಾಂಕ್

MRP: Rs 1,349

ಪ್ರಮುಖ ವೈಶಿಷ್ಟ್ಯತೆಗಳು:

• 20000mAH ಲೀಥಿಯಂ-ಪಾಲಿಮರ್ ಬ್ಯಾಟರಿ

• ಎರಡು ಡಿವೈಸ್ ಗಳನ್ನು ಒಟ್ಟಿಗೆ ಚಾರ್ಜ್ ಮಾಡುವುದಕ್ಕೆ 2 ಪೋರ್ಟ್ ಗಳು ಲಭ್ಯ

• ಮಲ್ಟಿ ಔಟ್ ಪುಟ್ ಆಯ್ಕೆ 1ಎ ಸ್ಮಾರ್ಟ್ ಫೋನಿಗೆ ಮತ್ತೊಂದು 2A ಟ್ಯಾಬ್ಲೆಟ್ ಗೆ

• ಅಂತರಾಷ್ಟ್ರೀಯ ಸುರಕ್ಷತಾ ವ್ಯವಸ್ಥೆಯಲ್ಲಿ ಇದನ್ನು ತಯಾರಿಸಲಾಗಿದೆ.

• ನೀವು ಖರೀದಿ ಮಾಡಿದ ದಿನದಿಂದ ಒಂದು ವರ್ಷದ ವಾರೆಂಟಿಯನ್ನು ನೀಡಲಾಗುತ್ತದೆ.

ಲ್ಯಾಪ್ ಗಾರ್ಡ್ ಎಲ್ ಜಿ807 20800mAH ಲೀಥಿಯಂ-ಐಯಾನ್ ಪವರ್ ಬ್ಯಾಂಕ್ (ಕಪ್ಪು)

ಲ್ಯಾಪ್ ಗಾರ್ಡ್ ಎಲ್ ಜಿ807 20800mAH ಲೀಥಿಯಂ-ಐಯಾನ್ ಪವರ್ ಬ್ಯಾಂಕ್ (ಕಪ್ಪು)

MRP: Rs 999

ಪ್ರಮುಖ ವೈಶಿಷ್ಟ್ಯತೆಗಳು:

• 20800mAH ಲೀಥಿಯಂ-ಐಯಾನ್ ಬ್ಯಾಟರಿ

• ಮೇಕ್ ಇನ್ ಇಂಡಿಯಾ ಪವರ್ ಬ್ಯಾಂಕ್ - ಮೇಕ್ ಇಂಡಿಯಾ ಅಡಿಯಲ್ಲಿ ತಯಾರಿಸಲಾಗಿರುವ ಈ ಪವರ್ ಬ್ಯಾಂಕ್ ನ್ನು 12 ತಿಂಗಳ ತಯಾರಿಕಾ ಗ್ಯಾರೆಂಟಿಯಲ್ಲಿ ನೀವು ಖರೀದಿ ಮಾಡಬಹುದು.

• ಎಲ್ಲಾ ಆಪಲ್, ಆಂಡ್ರಾಯ್ಡ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೆ ಇದು ಕಂಪ್ಯಾಟಿಬಲ್ ಆಗಿದೆ. 5ನಿ ಚಾರ್ಜ್ ಇನ್ ಪುಟ್ ಹೊಂದಿದೆ.

• ಚಾರ್ಜ್ ಮಾಡುವುದಕ್ಕೆ ಸೇಫ್ ಆಗಿದೆ.: ಇಂಟೆಲಿಜೆಂಟ್ ಪವರ್ ಮ್ಯಾನೇಜ್ ಐಸಿ ಇದ್ದು ಇದು ಅತಿಯಾಗಿ ಚಾರ್ಜ್ ಆಗುವುದನ್ನು ತಪ್ಪಿಸುತ್ತದೆ. ಓವರ್ ವೋಲ್ಟೇಜ್, ಅತಿಯಾದ ಕರೆಂಟ್ ಸಪ್ಲೈ ಮತ್ತು ಶಾರ್ಟ್ ಸರ್ಕ್ಯೂಟ್ ನಂತಹ ಸಮಸ್ಯೆಗಳಿಂದ ಡಿವೈಸ್ ಹಾಳಾಗುವುದನ್ನು ತಪ್ಪಿಸುತ್ತದೆ.

• ಬಿಲ್ಟ್ ಇನ್ 4 LED ಇಂಡಿಕೇಟರ್ ಇದ್ದು ಶೇಕಡಾ ಬ್ಯಾಟರಿ ಮತ್ತು ಚಾರ್ಜಿಂಗ್ ಸ್ಟೇಟಸ್ ನ್ನು ಇವು ತೋರಿಸುತ್ತದೆ.

• ಕನೆಕ್ಟರ್ ಟೈಪ್ - ಮೈಕ್ರೋ USB ಇನ್ ಪುಟ್: 5V-2.1A (max), ಔಟ್ ಪುಟ್: 5V-2.1A (max),

• 20800mAH (74.88 wh), ಔಟ್ ಪುಟ್ ಕೆಪಾಸಿಟಿ: 12800mAH/5V ಪವರ್ ಬ್ಯಾಕ್ ಅಪ್, ಕಂಪ್ಯಾಕ್ಟ್ ಸೈಜ್ - 6.38 x 3.31 x 0.87 ಇಂಚುಗಳು

• 12 ತಿಂಗಳ ತಯಾರಿಕಾ ಗ್ಯಾರೆಂಟಿ

ಆಸಿಡ್ ಐ ಎಐ-20 20000mAh ಪವರ್ ಬ್ಯಾಂಕ್ (ಕಪ್ಪು)

ಆಸಿಡ್ ಐ ಎಐ-20 20000mAh ಪವರ್ ಬ್ಯಾಂಕ್ (ಕಪ್ಪು)

MRP: Rs 1,199

ಪ್ರಮುಖ ವೈಶಿಷ್ಟ್ಯತೆಗಳು:

• ಇದು 100% ಭಾರತದಲ್ಲಿ ನಿರ್ಮಾಣವಾಗಿರುವುದು: ಆಸಿಡ್ ಐ ಪವರ್ ಬ್ಯಾಂಕ್ ನ್ನು ಲೀಥಿಯಂ ಸೆಲ್ ಗಳಿಂದ ತಯಾರಿಸಲಾಗಿದೆ . ಇದರ ಬ್ಯಾಟರಿ ಕೆಪಾಸಿಟಿ 20,000 mAh ಆಗಿದ್ದು ನಿಮ್ಮ ಹಲವಾರು ಡಿವೈಸ್ ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.

• ಟ್ರಿಪಲ್ USB ಔಟ್ ಪುಟ್ ಪೋರ್ಟ್ಸ್: ನೀವು ಯಾವುದೇ ಸಮಯದಲ್ಲಿ ಬೇಕಿದ್ದರೂ ಕೂಡ ಪವರ್ ಔಟ್ ಪುಟ್ ಬಳಸಿ ಚಾರ್ಜ್ ಮಾಡಬಹುದು. 1) 5.0V/2.1A , 2) 5.0V/2.1A , ಮತ್ತು 3) 5.0V/1.0 A. ಮೂರು ಡಿವೈಸ್ ಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡುವುದಕ್ಕೆ ಅವಕಾಶವಿದ್ದು ಮಲ್ಟಿಪಲ್ ಯುಎಸ್ ಬಿ ಪೋರ್ಟ್ ಗಳಿವೆ.

ನೋಟದಲ್ಲಿ ಮತ್ತು ಫೀಚರ್ ನಲ್ಲಿ ಎರಡೂ ವಿಷಯದಲ್ಲೂ ಕೂಡ ಡಿವೈಸ್ ಅತ್ಯುತ್ತಮವಾಗಿದೆ.

• ಆಯತಾಕಾರದಲ್ಲಿರುವ ಈ ಡಿವೈಸ್ ನ್ನು 75% ಚಾರ್ಜ್ ಆದ ನಂತರ ಬಳಕೆ ಮಾಡುವುದು ಸೂಕ್ತ. ಕೈಗೆಟುಕುವ ಬೆಲೆಯ ಮತ್ತು ಕಂಪ್ಯಾಟಿಬಲ್ ಆಗಿರುವ ಡಿವೈಸ್ ಇದಾಗಿದ್ದು ಎಲೆಕ್ಟ್ರಿಸಿಟಿ ಉಳಿತಾಯಕ್ಕೂ ಕೂಡ ನೆರವು ನೀಡುತ್ತದೆ. ಕರೆಂಟ್, ಹೀಟ್ ಮತ್ತು ವೋಲ್ಟೇಜ್ ನಲ್ಲಿ ರಕ್ಷಣೆ ನೀಡುತ್ತದೆ. 7 ರಿಂದ 8 ಬಾರಿ ನಿಮ್ಮ ಸ್ಮಾರ್ಟ್ ಫೋನ್ ನ್ನು ಚಾರ್ಜ್ ಮಾಡುವುದಕ್ಕೆ ಇದು ನೆರವಾಗುತ್ತದೆ.

• ಬಾಕ್ಸ್ ನ ಒಳಗೆ ನಿಮಗೆ ಒಂದು ಪವರ್ ಬ್ಯಾಂಕ್,1 ಮೈಕ್ರೋ ಯುಎಸ್ ಬಿ ಕೇಬಲ್ , ಒಂದು ವರ್ಷದ ವಾರೆಂಟಿ ಕಾರ್ಡ್ ಇರುತ್ತದೆ.

Best Mobiles in India

English summary
The mentioned list comes with some best power banks to buy in India. These portable devices come with 20,000 mAh battery capacity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X