ಕಾರು ಮತ್ತು ಬೈಕ್ ಸುರಕ್ಷತೆ ಬಳಕೆಗಾಗಿ ಖರೀದಿಸಬೇಕಾದ ವಿಶೇಷ ಗ್ಯಾಜೆಟ್ಸ್ ಇವು!!

|

ಕೃತಕ ಬುದ್ದಿ ಮತ್ತೆ ಕಾರುಗಳು ಮಾರುಕಟ್ಟೆಗೆ ಕಾಲಿಡಲಿವೆ ಎಂಬ ಸುದ್ದಿಯ ನಡುವೆ ಕಾರು ಮತ್ತು ಬೈಕುಗಳಿಗಾಗಿ ಅಭಿವೃದ್ದಿಯಾಗಿರುವ ತಂತ್ರಜ್ಞಾನಗಳು ಮರೆಮಾಚಿವೆ. ವಾಹನದ ಸ್ಥಿತಿಗತಿ, ಚಾಲಕನ ಮನಸ್ಥಿತಿ, ಪಾರ್ಕಿಂಗ್ ಸಮಸ್ಯೆ ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆ ಅಫಘಾತಗಳ ಬಗ್ಗೆ ಎಚ್ಚರಿಕೆಯಿಂದ ಇರಿಸಲು ಊಹಿಸಲು ಸಾಧ್ಯವಾಗದಂತಹ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ.

ಕಾರು ಮತ್ತು ಬೈಕ್ ಸುರಕ್ಷತೆ ಬಳಕೆಗಾಗಿ ಖರೀದಿಸಬೇಕಾದ ವಿಶೇಷ ಗ್ಯಾಜೆಟ್ಸ್ ಇವು!!

ಕಾರು ಮತ್ತು ಬೈಕ್‌ಗಳ ಸುರಕ್ಷತೆ ಮತ್ತು ಇನ್ನಿತರ ಸೌಲಭ್ಯಗಳಿಗಾಗಿಯೇ ನೂರಾರು ಸ್ಮಾರ್ಟ್‌ ಸಾಧನಗಳು ಅಭಿವೃದ್ದಿಯಾಗಿವೆ. ಎಷ್ಟು ಜಾಗರೂಕರಾಗಿದ್ದರೂ ಪ್ರಯಾಣದ ಸಂದರ್ಭಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ, ನಾವಿಂದು ಪ್ರಯಾಣಕ್ಕೆ ನೆರವಾಗುವ ಸ್ಮಾರ್ಟ್‌ ಸಾಧನಗಳನ್ನು ಪರಿಚಯಿಸುತ್ತಿರುವುದು ನಿಮಗೆ ಖಂಡಿತ ನೆರವಾಗಬಹುದು.!

ಫೆನ್ಸೆನ್ಸ್ ಪಾರ್ಕಿಂಗ್ ಸೆನ್ಸರ್!

ಫೆನ್ಸೆನ್ಸ್ ಪಾರ್ಕಿಂಗ್ ಸೆನ್ಸರ್!

ಈ ಸ್ಮಾರ್ಟ್‌ ಫೆನ್ಸೆನ್ಸ್ ಪಾರ್ಕಿಂಗ್ ಸೆನ್ಸರ್ ಸಾಧನವನ್ನು ವಾಹನದ ಹಿಂಬದಿಯಲ್ಲಿ ಅಳವಡಿಸಿ, ತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನ್‌ಗೆ ಜೋಡಿಸಿದರೆ, ಹಿಂದೆ ಮತ್ತು ಮುಂದೆ ಇರುವ ವಾಹನಗಳು ಎಷ್ಟು ಅಂತರದಲ್ಲಿವೆ ಎಂಬುದನ್ನು ತೋರಿಸುತ್ತದೆ. ಮುಂದೆ ಇರುವಂತಹ ವಾಹನಗಳಿಗೆ ಡಿಕ್ಕಿಯಾಗುವ ಸಾಧ್ಯತೆಗಳಿದ್ದರೆ, ಕೂಡಲೇ ಅಲರಾಂ ಸದ್ದು ಮಾಡಿ ಎಚ್ಚರಿಸುತ್ತದೆ.

ಮ್ಯಾಕ್ಸ್ ಎಸ್ಕಾರ್ಟ್!

ಮ್ಯಾಕ್ಸ್ ಎಸ್ಕಾರ್ಟ್!

ಜೋರಾಗಿ ಮಳೆ ಸುರಿದರೆ, ಮಂಜು ಆವರಿಸಿದ್ದರೆ ಹಿಂದೆ ಬರುತ್ತಿರುವ ಮತ್ತು ಮುಂದೆ ಹೋಗುತ್ತಿರುವ ವಾಹನಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ವಾಹನದ ಹಿಂದೆ-ಮುಂದಿನ ದೃಶ್ಯಗಳನ್ನು ಸ್ಪಷ್ಟವಾಗಿ ನೋಡಲು ಈ ಸಾಧನ ನೆರವಾಗುತ್ತದೆ. ನಿರ್ದಿಷ್ಟ ರಸ್ತೆ ರಾಷ್ಟ್ರೀಯ ಹೆದ್ದಾರಿಯೇ, ರಾಜ್ಯ ಹೆದ್ದಾರಿಯೇ, ಎಂಬುದನ್ನೂ ಈ ಸ್ಮಾರ್ಟ್ ಸಾಧನ ಸೂಚಿಸುತ್ತದೆ.

‘ಆಂಟಿ ಸ್ಲೀಪ್ ಪೈಲಟ್‌’!

‘ಆಂಟಿ ಸ್ಲೀಪ್ ಪೈಲಟ್‌’!

ಈ ‘ಆಂಟಿ ಸ್ಲೀಪ್ ಪೈಲಟ್‌' ಸಾಧನವನ್ನು ವಾಹನದಲ್ಲಿ ಅಳವಡಿಸಿದರೆ, ಚಾಲಕ ನಿದ್ರಿಸದಂತೆ ಎಚ್ಚರಿಸುತ್ತದೆ. ಶೇ 40ರಷ್ಟು ಅಪಘಾತಗಳು, ಚಾಲಕರು ನಿದ್ರೆಯ ಮತ್ತಿನಲ್ಲಿಯೇ ಸಂಭವಿಸುತ್ತಿವೆ ಎಂದಿರುವುದರಿಂದ ಚಾಲಕನ ಶಾರೀರಿಕ ಪರಿಸ್ಥಿತಿ ಅರಿತು ಆತ ನಿದ್ರಿಸುವ ಸ್ಥಿತಿಯಲ್ಲಿದ್ದರೆ ಅಲರಾಂ ಸದ್ದು ಮಾಡಿ ಜಾಗೃತ ಮಾಡುವ ಸಾಧನ ಇದಾಗಿದೆ.

ಬ್ಲೂ ಜೇ ಸ್ಮಾರ್ಟ್ ಮೌಂಟ್!

ಬ್ಲೂ ಜೇ ಸ್ಮಾರ್ಟ್ ಮೌಂಟ್!

ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ನಾವು ನಿಲ್ಲಿಸಿದ್ದ ವಾಹನ ಎಲ್ಲಿದೆ ಎಂಬುದನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಈ ಸಮಸ್ಯೆಗೆ ‘ಬ್ಲೂ ಜೇ ಸ್ಮಾರ್ಟ್ ಮೌಂಟ್' ಪರಿಹಾರ ಸೂಚಿಸುತ್ತದೆ. ವಾಹನ ಇರುವಂತಹ ಸ್ಥಳವನ್ನು ಅಲರಾಂ ಮೂಲಕ ತೋರಿಸುತ್ತದೆ. ಮೊಬೈಲ್ ಸ್ಟ್ಯಾಂಡ್‌ನಂತೆ ಇರುವ ಇದು ಕಳ್ಳರಿಗೂ ಕಿಕ್ ನೀಡುವ ಸಾಧನವಾಗಿದೆ.

ಫೋಬೊ ಟೈರ್!

ಫೋಬೊ ಟೈರ್!

ಯಾವುದೇ ವಾಹನದ ಟೈರ್ ಪಂಚರ್ ಆಗುವ ಸಮಸ್ಯೆಗಳ ಮುನ್ಸೂಚನೆ ಸಿಕ್ಕರೆ ಎಚ್ಚರಿಕೆ ವಹಿಸಬಹುದು. ಹಾಗಾಗಿ, ಫೊಬೊ ಟೈರ್ ಸಾಧನವನ್ನು ಚಕ್ರಗಳಿಗೆ ಅಳವಡಿಸಿದರೆ, ಎಷ್ಟು ಪ್ರಮಾಣದಲ್ಲಿ ಗಾಳಿ ಇದೆ, ಉಷ್ಣಾಂಶ ಎಷ್ಟಿದೆ? ಮೊಬೈಲ್‌ಗೆ ಜೋಡಣೆಯಾಗಿರುವ ಆಪ್‌ನಲ್ಲಿ ಕಾಣಿಸುತ್ತದೆ.

Best Mobiles in India

English summary
Recent technological innovations, however, have sparked a surge in smart gadgets that boost Car and BICYCLE safety.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X