14,990 ರೂ.ಬೆಲೆಯ ಈ 'ಕ್ಲೌಡ್ ಟಿವಿ ಎಕ್ಸ್ 2' ಖರೀದಿಸಲು ಕ್ಯೂ ನಿಲ್ತೀರಾ!!

|

ಕ್ಲೌಡ್‌ ವಾಕರ್ ಕಂಪೆನಿ ಇದೀಗ ಭಾರತದ ಮೊಟ್ಟ ಮೊದಲ 4ಕೆ ರೆಡಿ ಸಂಪೂರ್ಣ ಹೆಚ್‌ಡಿ ಸ್ಮಾರ್ಟ್ ಟಿವಿ 'ಕ್ಲೌಡ್ ಟಿವಿ ಎಕ್ಸ್ 2' ಅನ್ನು ಬಿಡುಗಡೆ ಮಾಡುವ ಮೂಲಕ ಟಿವಿ ಮಾರುಕಟ್ಟೆಗೆ ಮತ್ತೊಂದು ಆಯಾಮವನ್ನು ನೀಡಿದೆ. ಕೇವಲ 14,990 ರೂ.ಗಳಿಂದ ಆರಂಭವಾಗಿರುವ 4ಕೆ ರೆಡಿ ಫುಲ್ ಹೆಚ್‌ಡಿ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 7.0 ನೌಗಟ್‌ನೊಂದಿಗೆ ಬಿಡುಗಡೆಯಾಗಿದೆ.

ಹೌದು, ಆಧುನಿಕ ತಂತ್ರಜ್ಞಾನದಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸವನ್ನು ನಿರ್ವಹಿಸುವ 'ಕ್ಲೌಡ್ ಟಿವಿ ಎಕ್ಸ್ 2' ಸ್ಮಾರ್ಟ್‌ಟಿವಿ ಈಗ ಬಳಕೆದಾರರಿಗೆ ಅತಿ ವೇಗದ ಸೇವೆ ನೀಡುವುದಲ್ಲದೇ, ಮನರಂಜನೆಯ ವೀಕ್ಷಣೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಇದು ಕಣ್ಣುಗಳಿಗೆ ಹಬ್ಬ ಉಂಟುಮಾಡುವುದಲ್ಲದೆ ಥಿಯೇಟರ್ ಅನುಭವದ ಧ್ವನಿ ಎಫೆಕ್ಟ್ಸ್ ಸಹ ಹೊಂದಿದೆ.

14,990 ರೂ.ಬೆಲೆಯ ಈ 'ಕ್ಲೌಡ್ ಟಿವಿ ಎಕ್ಸ್ 2' ಖರೀದಿಸಲು ಕ್ಯೂ ನಿಲ್ತೀರಾ!!

ಟಿವಿ ವೀಕ್ಷಿಸುತ್ತಲೇ ಅಂತರ್ಜಾಲ ಜಗತ್ತಿನ ಎಲ್ಲಾ ಅಪ್‌ಗಳನ್ನು ಕುಳಿತಲ್ಲಿಂದಲೇ ಸುಧಾರಿತ ರಿಮೋಟ್‌ನಿಂದ ಡೌನ್‌ಲೋಡ್ ಮಾಡಬಹುದಾದ ಈ ಟಿವಿಯು ಮನೋರಂಜನೆಯೆಂಬ ಅಂತ್ಯವಿಲ್ಲದ ಲೋಕವನ್ನು ಅನಿಯಮಿತವಾಗಿ ಅನುಭವಿಸಲು ಅತ್ಯುತ್ತಮ ಅವಕಾಶ ನೀಡುತ್ತದೆ. ಹಾಗಾದರೆ, ಈ 'ಕ್ಲೌಡ್ ಟಿವಿ ಎಕ್ಸ್ 2' ಪೂರ್ಣ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

'ಕ್ಲೌಡ್ ಟಿವಿ ಎಕ್ಸ್ 2'

'ಕ್ಲೌಡ್ ಟಿವಿ ಎಕ್ಸ್ 2'

32ರಿಂದ 55 ಇಂಚು ವ್ಯಾಪ್ತಿಯ ಈ ಸ್ಮಾರ್ಟ್ ಟಿವಿಗಳಲ್ಲಿ 4ಕೆ ರೆಡಿ-ಪೂರ್ಣ ಹೆಚ್ಡಿಯಲ್ಲಿ ದೃಶ್ಯಗಳು ಪ್ರಸಾರವಾಗುತ್ತವೆ. ಆಂಡ್ರಾಯ್ಡ್ 7.0 ನೌಗಟ್ ಒಎಸ್ ಮೂಲಕವೂ ಕಾರ್ಯನಿರ್ವಹಣೆಯನ್ನು ನೀಡುವ ಈ ಸ್ಮಾರ್ಟ್‌ಟಿವಿಯು ಕ್ವಾಡ್-ಕೋರ್ ಎಆರ್‌ಎಂ ಕಾರ್ಟೆಕ್ಸ್ ಪ್ರೊಸೆಸರ್ ಅನ್ನು ಹೊಂದಿರುವುದು ವಿಶೇಷತೆಯಾಗಿದೆ.

ವೀಡಿಯೋ ಹಾಗೂ ಅಪ್ಲಿಕೇಶನ್‌ಗಳು.

ವೀಡಿಯೋ ಹಾಗೂ ಅಪ್ಲಿಕೇಶನ್‌ಗಳು.

'ಕ್ಲೌಡ್ ಟಿವಿ ಎಕ್ಸ್ 2' ಸ್ಮಾರ್ಟ್‌ಟಿವಿಯಲ್ಲಿ ಕಂಟೆಂಟ್ ಡಿಸ್ಕವರಿ ಎಂಜಿನ್‌ನಲ್ಲಿ ಸಂಗ್ರಹಿಸಲಾದ ವೀಡಿಯೋ ಹಾಗೂ ಅಪ್ಲಿಕೇಶನ್‌ಗಳನ್ನು ಪಡೆಯಬಹುದಾಗಿದೆ. ಪ್ರಸಿದ್ಧ ಆಂಡ್ರಾಯ್ಡ್ ಆಪ್‌ಗಳನ್ನು ಡೌನ್ಲೋಡ್ ಮಾಡಡಬಹುದಾದ ಈ ಟಿವಿಯಲ್ಲಿ ಬಳಕೆದಾರರು ತಮ್ಮದೇ ಒಂದು ಖಾತೆ ತೆಗೆದು ತಮಗಿಷ್ಟದ ವೀಡಿಯೋ ಹಾಡುಗಳನ್ನು 'ಕ್ಲೌಡ್ ಟಿವಿ ಎಕ್ಸ್ 2' ವಿನಲ್ಲಿ ಸೇವ್ ಮಾಡಬಹುದು.

ಸ್ವಯಂ ಅಪ್‌ಡೇಟ್ ಹೊಂದುತ್ತದೆ!

ಸ್ವಯಂ ಅಪ್‌ಡೇಟ್ ಹೊಂದುತ್ತದೆ!

ಆಂಡ್ರಾಯ್ಡ್ 7.0 ನೌಗಟ್ ಒಎಸ್ ಮೂಲಕ ಕಾರ್ಯನಿರ್ವಹಿಸುವ ಈ 'ಕ್ಲೌಡ್ ಟಿವಿ ಎಕ್ಸ್ 2' ಸ್ಮಾರ್ಟ್‌ಟಿವಿ ಒಟಿಎ ನೆರವಿನಿಂದ ಅಂತರ್ಜಾಲದೊಂದಿಗೆ ಸಂಪರ್ಕ ಪಡೆದು ಕೊಂಡು ಸ್ವಯಂ ಅಪ್‌ಡೇಟ್ ಹೊಂದಿ ಉತ್ತಮ ಕ್ಷಮತೆ ಹಾಗೂ ಮನರಂಜನೆ ನೀಡುತ್ತದೆ. ಇದರಿಂದ ಬಳಕೆದಾರರಿಗೆ ಟಿವಿ ಅಪ್‌ಡೇಟ್ ಮಾಡುವುದು ಬಹಳ ಸುಲಭವಾಗಿದೆ.

ಧ್ವನಿ ಎಫೆಕ್ಟ್ಸ್?

ಧ್ವನಿ ಎಫೆಕ್ಟ್ಸ್?

ಈ ಮೊದಲೆ ಹೇಳಿದಂತೆ 'ಕ್ಲೌಡ್ ಟಿವಿ ಎಕ್ಸ್ 2' ಸ್ಮಾರ್ಟ್‌ಟಿವಿ ಥಿಯೇಟರ್ ಅನುಭವದ ಧ್ವನಿ ಎಫೆಕ್ಟ್ಸ್ ನೀಡಲಿದೆ. ಇನ್‌ಬಿಲ್ಟ್ ಬಾಕ್ಸ್ 20ಡಬ್ಲ್ಯೂ ಪ್ರಬಲ ಧ್ವನಿ ಸ್ಪೀಕರ್‌ಗಳನ್ನು 'ಕ್ಲೌಡ್ ಟಿವಿ ಎಕ್ಸ್ 2' ಸ್ಮಾರ್ಟ್‌ಟಿವಿ ಹೊಮದಿರುವುದು ಹಿತಕರವಾದ ಸಂಗೀತ ಆಲಿಕೆಗೆ ಹೇಳಿ ಮಾಡಿಸಿದ ಸ್ಪೀಕರ್‌ಗಳು ಎಂದು ಹೇಳಬಹುದು.

ಇನ್‌ಬಿಲ್ಟ್ ಏರ್‌ಮೌಸ್!

ಇನ್‌ಬಿಲ್ಟ್ ಏರ್‌ಮೌಸ್!

ಟಿವಿ-ಮೊಬೈಲ್ ಗೆ ವಯರ್‌ಲೆಸ್ ಮೀಡಿಯಾ ಶೇರಿಂಗ್ ಆಯ್ಕೆಯನ್ನೂ ನೀಡುತ್ತದೆ. ಟಿವಿಗೆ ಪರದೆ ಕನ್ನಡಿಯಾಗಿ ಕೆಲಸ ಮಾಡುತ್ತದೆ, ರಿಮೋಟ್ ವಯರ್‌ಲೆಸ್ ಕೀಬೋರ್ಡ್ ಅಥವಾ ಏರ್ ಮೌಸ್ ನಂತೆ ಬಳಕೆಯಾಗುತ್ತದೆ. ಜತೆಗೆ ಆಂಡ್ರಾಯ್ಡ್ ಟಿವಿ ಸ್ಟೈಲ್ ಯೂಸರ್-ಇಂಟರ್‌ಫೇಸ್ ಸೌಲಭ್ಯ ಕೂಡ ಈ ಸ್ಮಾರ್ಟ್‌ಟಿವಿಯಲ್ಲಿದೆ.

ಇತರೆ ವೈಶಿಷ್ಟ್ಯಗಳು

ಇತರೆ ವೈಶಿಷ್ಟ್ಯಗಳು

ಕ್ಲೌಡ್ ಟಿವಿ ಎಕ್ಸ್ 2ನಲ್ಲಿ ಟಿವಿ ಪ್ರದರ್ಶರನ, ಸಾಕ್ಷ್ಯಚಿತ್ರ, ಸಂಗೀತ, ವೀಡಿಯೋ, ಅಪ್ಲಿ ಕೇಶನ್ ಹಾಗೂ ಇನ್ನೂ ಹೆಚ್ಚಿನದನ್ನು ವೀಕ್ಷಿಸಬಹುದು. ಹಾಗೂ ನ್ಯಾವಿಗೇಶನ್‌ಗಳನ್ನು ತಿಳಿಯಬಹುದು ಎಂಬುದು ಇದರ ಇನ್ನೊಂದು ವಿಶೇಷ. ಮೂವಿಬಾಕ್ಸ್ ಗೆ ಉಚಿತ ಜೀವಮಾನ ಚಂದಾದಾರಿಕೆಯನ್ನು ಸಹ ಈ ಕ್ಲೌಡ್ ಟಿವಿ ಎಕ್ಸ್ 2 ಟಿವಿ ಹೊಂದಿದೆ.

ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.? ಅದರಲ್ಲಿಯೂ ಟೆಲಿಕಾಂ ಕಂಪೆನಿ ಜಿಯೋ ವನ್ನು ಶುರುಮಾಡಿದ ನಂತರವಂತೂ, ಪ್ರತಿಯೋರ್ವ ಭಾರತೀಯನಿಗೂ ಅಂಬಾನಿ ಈಗ ದೇವರಾಗಿದ್ದಾರೆ. ಟೆಲಿಕಾಂ ಲೋಕದ ಆಧುನಿಕ ಡೇಟಾ ದೇವರು ಎಂದೆ ಹೆಸರಾಗಿರುವ ಅಂಬಾನಿಗೆ ಈಗ 61 ವರ್ಷ ತುಂಬಿದೆ.!
ಹೌದು, ಮಾರ್ಚ್ 2018 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಇಂದು ವಿಶ್ವದ ಬೃಹತ್ ಉದ್ಯಮಿಗಳಲ್ಲಿ ಓರ್ವರಾಗಿ ಬೆಳೆದುನಿಂತಿದ್ದಾರೆ. ತಮ್ಮ 61 ವರ್ಷ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ.

1957 ರ ಎಪ್ರಿಲ್ 19 ರಂದು ಜನಿಸಿದ ಮುಖೇಶ್ ಅಂಬಾನಿ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸಂಸ್ಥೆ ಸಿಇಒ ಮತ್ತು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾಗಿ, ವಿಶ್ವದಲ್ಲಿಯೇ ಹೆಸರುಗಳಿಸುವಂತೆ ಸಂಸ್ಥೆಯನ್ನು ಮುನ್ನಡೆಸಿದ ಮುಖೇಶ್ ಅಂಬಾನಿ ಅವರ ವಯಕ್ತಿಕ ಜೀವನದ ಬಗ್ಗೆ ಇರುವ 10 ಆಸಕ್ತಿದಾಯಕ ಸಂಗತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಜಿಯೊ ಚಂಡಮಾರುತ!!

ಜಿಯೊ ಚಂಡಮಾರುತ!!

ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!!

ವಿಶ್ವದ ಅತ್ಯಂತ ದುಬಾರಿ ಮನೆ!!

ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

ಮದ್ಯಪಾನ ಮಾಡಲೇ ಇಲ್ಲ!!

ಮದ್ಯಪಾನ ಮಾಡಲೇ ಇಲ್ಲ!!

ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

15 ಕೋಟಿ ವಾರ್ಷಿಕ ವೇತನ!!

15 ಕೋಟಿ ವಾರ್ಷಿಕ ವೇತನ!!

ಇಷ್ಟೆಲ್ಲಾ ಸಂಪತ್ತಿಗೆ ಒಡೆಯನಾಗಿರುವ ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಕೇವಲ 15 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಇದು ಕಳೆದ ಒಂಬತ್ತು ವರ್ಷಗಳಿಂದ ಬದಲಾಗದೆ ಉಳಿದಿರುವುದು ವಿಶೇಷವಾಗಿದೆ. ಅಂಬಾನಿಯ ಇನ್ನೆಲ್ಲಾ ಆದಾಯವು ಅವರ ಶೇರುಗಳಿಂದಲೇ ಅವರಿಗೆ ಬಂದು ಸೇರಲಿದೆ.

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

ಪ್ರಸ್ತುತ 40.1 ಬಿಲಿಯನ್ ಆಸ್ತಿಯನ್ನು ಹೊಂದಿರುವ ಮುಖೇಶ್ ಅಂಬಾನಿಯ ಅವರ ಕಂಪೆನಿಯು ಭಾರತದ ಒಟ್ಟು ತೆರಿಗೆ ಆದಾಯದ ಸುಮಾರು 5% ರಷ್ಟು ಕೊಡುಗೆಯನ್ನು ನಿಡುತ್ತಿದೆ.

Best Mobiles in India

Read more about:
English summary
CloudWalker, an Indian television brand, has launched the Cloud TV X2 smart TV, which will be made available in three variants 32-inches. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X