Subscribe to Gizbot

4G ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ: ವಿಶೇಷ ವಿನ್ಯಾಸದ ಪವರ್ ಬ್ಯಾಂಕ್

Written By:

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಹೆಚ್ಚಾಗಿದ್ದು, ದಿನಕ್ಕೊಂದು ಬ್ರಾಂಡ್ ಗಳು ಕಾಲಿಡುತ್ತಿದೆ. ಹೊಸ ಸ್ಮಾರ್ಟ್‌ಫೋನ್‌ಗಳ ಕಾಣಿಸಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ 4G ಸಫೋರ್ಟ್ ಮಾಡುವುದರಿಂದ ಬಹುಬೇಗನೇ ಬ್ಯಾಟರಿಯ ಚಾರ್ಜ್ ಖಾಲಿಯಾಗಲಿದ್ದು, ಇದರಿಂದಾಗಿ ಪವರ್ ಬ್ಯಾಂಕ್ ಬೇಡಿಕೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.

4G ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ: ವಿಶೇಷ ವಿನ್ಯಾಸದ ಪವರ್ ಬ್ಯಾಂಕ್

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ಇದೇ ಮಾದರಿಯಲ್ಲಿ ಅನೇಕ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಹೈ ಕೆಪಾಸಿಟಿಯ ಪವರ್ ಬ್ಯಾಂಕ್‌ಗಳನ್ನು ಪರಿಚಯ ಮಾಡಲು ತುದಿಗಾಲಿನಲ್ಲಿ ನಿಂತಿವೆ. ಸದ್ಯ ಮಾರುಕಟ್ಟೆಗೆ ಡಿಟೆಲ್ ಕಂಪನಿಯೂ ಹೊಸ ಮಾದರಿಯ ಎರಡು ಪವರ್ ಬ್ಯಾಂಕ್‌ಗಳನ್ನು ಪರಿಚಯ ಮಾಡಿದೆ. ಬೆಲೆಗಳಲ್ಲಿಯೂ ಸಹ ಉತ್ತಮವಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ತಂತ್ರಜ್ಞಾನ:

ಹೊಸ ತಂತ್ರಜ್ಞಾನ:

ಡಿಟೆಲ್ ಬಿಡುಗಡೆ ಮಾಡಿರುವ ಪವರ್ ಬ್ಯಾಂಕ್‌ಗಳಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ಕಾಣಬಹುದಾಗಿದ್ದು, ಇದರಲ್ಲಿ ಪವರ್ ಬ್ಯಾಂಕ್ ಚಾರ್ಜ್ ಆಗುತ್ತಿರುವ ಸಂದರ್ಭದಲ್ಲಿಯೇ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಡೆಲ್ಟಾ ಪವರ್ ಬ್ಯಾಂಕ್ D10000:

ಡೆಲ್ಟಾ ಪವರ್ ಬ್ಯಾಂಕ್ D10000:

ಡಿಟೆಲ್ ಕಂಪನಿಯೂ 10,000 mAh ಬ್ಯಾಟರಿ ಕೆಪಾಸಿಟಿಯ ಡಿಟೆಲ್ ಪವರ್ ಬ್ಯಾಂಕ್ D10000 ಅನ್ನು ಲಾಂಚ್ ಮಾಡಿದ್ದು, ಈ ಪವರ್ ಬ್ಯಾಂಕಿನಲ್ಲಿ ಎರಡು ಮೊಬೈಲ್‌ಗಳನ್ನು ಒಟ್ಟಿಗೆ ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ಡೆಲ್ಟಾ ಪವರ್ ಬ್ಯಾಂಕ್ D12500:

ಡೆಲ್ಟಾ ಪವರ್ ಬ್ಯಾಂಕ್ D12500:

ಡಿಟೆಲ್ ಕಂಪನಿ ಮತ್ತೊಂದು 12500 mAh ಬ್ಯಾಟರಿ ಕೆಪಾಸಿಟಿಯ ಪವರ್ ಬ್ಯಾಂಕ್ D10000 ಅನ್ನು ಬಿಡುಗಡೆ ಗೊಳಿಸಿದ್ದು, ಈ ಪವರ್ ಬ್ಯಾಂಕಿನಲ್ಲಿ ಎರಡು ಮೊಬೈಲ್‌ಗಳನ್ನು ಒಟ್ಟಿಗೆ ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಫಾಸ್ಟ್ ಚಾರ್ಜಿಂಗ್ ಆಗಲಿದ್ದು, ಇದಕ್ಕಾ ಮೈಕ್ರೋ ಪ್ರೋಸೆಸಿಂಗ್ ಕಂಟ್ರೋಲ್‌ ಅನ್ನು ನೀಡಲಾಗಿದೆ.

ಬೆಲೆ:

ಬೆಲೆ:

ಡಿಟೆಲ್ ಬಿಡುಗಡೆ ಮಾಡಿರುವ D10000 ಪವರ್ ಬ್ಯಾಂಕ್ ಬೆಲೆ ರೂ.699 ಆಗಿದ್ದು, ಇದೇ ಮಾದರಿಯಲ್ಲಿ D12500 ಪವರ್ ಬ್ಯಾಂಕ್ ಬೆಲೆ ರೂ. 899 ಆಗಿದ್ದು, ಕೊಡುವ ಬೆಲೆಗೆ ಉತ್ತಮವಾದ ಉತ್ಪನ್ನ ಇದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Detel launches two high capacity power banks. to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot