ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!
ಮೊಬೈಲ್ ನಂಬರ್ ಫೋರ್ಟಬಲಿಟಿ ಇಂದಿನ ದಿನದಲ್ಲಿ ಹೆಚ್ಚಾಗುತ್ತಿದ್ದು, ಟೆಲಿಕಾಂ ಕಂಪನಿಗಳು ಒಂದಕ್ಕಿಂದ ಒಂದು ಉತ್ತಮ ಆಫರ್ ಗಳನ್ನು ಲಾಂಚ್ ಮಾಡುತ್ತಿರುವ ಹಿನ್ನಲೆಯಲ್ಲ ಗ್ರಾಹಕರು ಸಹ ಒಂದರಿಂದ ಮತ್ತೊಂದು ಕಂಪನಿಗೆ ವಲಸೆ ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಪೋರ್ಟ್ ಆಗುವ ಸಂದರ್ಭದಲ್ಲಿ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ದರಗಳನ್ನು ವಿಧಿಸುತ್ತಿದೆ.

ಓದಿರಿ: ಜಿಯೋ ಕ್ರಿಸ್‌ಮಸ್ ಗಿಫ್ಟ್: ಮಿಲಿಯನ್ ಬಳಕೆದಾರರಿಗೆ ಹೊಸ ಸೇವೆ.!
ಆದರೆ ಇದಕ್ಕೆ ಕಡಿವಾಣ ಹಾಕಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದ್ದು, ಟೆಲಿಕಾಂ ಬಳಕೆದಾರರಿಗೆ ಸಹಾಯವಾಗುವಂತೆ ಪೋರ್ಟಬಲಿಟಿ ದರವನ್ನು ಶೇ.80% ರಷ್ಟು ಕಡಿಮೆ ಮಾಡಲು ಮುಂದಾಗಿದೆ ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ ಮತ್ತು ಆಯ್ಕೆಯ ಸ್ವಾತಂತ್ರವನ್ನು ಹೆಚ್ಚು ಮಾಡಲಿದೆ.

ಪ್ರಸ್ತುತ ದರಗಳು:
ಸದ್ಯ ಟೆಲಿಕಾಂ ಕಂಪನಿಗಳು ಮೊಬೈಲ್ ನಂಬರ್ ಪೋರ್ಟಬಲಿಟಿ ಸಂದರ್ಭದಲ್ಲಿ ರೂ.19 ದರವನ್ನು ವಿಧಿಸುತ್ತಿದ್ದು, ಇದನ್ನು ರೂ.4ಕ್ಕೆ ಇಳಿಸಲು ಟ್ರಾಯ್ ಮುಂದಾಗಿದೆ. ಈ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತಿದೆ ಎನ್ನಲಾಗಿದೆ. ಇದಕ್ಕಿಂತ ಹೆಚ್ಚಿನ ದರವನ್ನು ವಿಧಿಸುವಂತಿಲ್ಲ ಎನ್ನಲಾಗಿದೆ.

ಹೆಚ್ಚಾಗುತ್ತಿದೆ MNP:
ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ MNP ಹೆಚ್ಚಾಗುತ್ತಿದ್ದು, 2014-15ರಲ್ಲಿ 3.68 ಕೋಟಿ MNP ರಿಕ್ವೇಸ್ಟ್ ಬಂದಿದ್ದು, ಇದೇ 2016-17ರಲ್ಲಿ ದ್ವಿಗುಣವಾಗಿದ್ದು, 6.36 ಕೋಟಿ MNP ರಿಕ್ಚೇಸ್ಟ್ ಅನ್ನು ಸ್ವೀಕರಿಸಲಾಗಿದೆ ಎಂದು ಟ್ರಾಯ್ ತಿಳಿಸಿದೆ.

ಜಿಯೋ ಸಹಾಯಕ್ಕಾಗಿ:
ಈಗಾಗಲೇ ಹೆಚ್ಚು ಮಂದಿ ಜಿಯೋ ಕಡೆಗೆ ತಮ್ಮ ಒಲವು ತೋರಿಸಿದ್ದು, ಈ ಹಿನ್ನಲೆಯಲ್ಲಿ ಜಿಯೋ ಸಹಾಯಕ್ಕಾಗಿ ಟ್ರಾಯ್ ಈ ಕಾರ್ಯಕ್ಕೆ ಮುಂದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರಿಂದಾಗಿ ಬೇರೆ ಕಂಪನಿಗಳು ಗ್ರಾಹಕರನ್ನು ಕಳೆದುಕೊಳ್ಳಲಿದ್ದಾರೆ.


Click it and Unblock the Notifications








