Subscribe to Gizbot

ಪ್ರಪಂಚದ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಡ್ರೋಣ್ ಬಿಡುಗಡೆ!! ಯಾವುದು ಗೊತ್ತಾ?

Written By:

ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಯ ಡ್ರೋಣ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.!! ಕೇವಲ ಒಂದು ಕೊಕೊ-ಕೋಲಾದ ಕ್ಯಾನ್ ದಪ್ಪದ ಹಾಗೂ ಒಂದು ಪೌಂಡ್ ತೂಕಕ್ಕಿಂತ ಕಡಿಮೆ ತೂಕದ ಈ ಡ್ರೋಣ್ ಅನ್ನು ವಿಶ್ವದ ಅತಿದೊಡ್ಡ ಡ್ರೋನ್ ಉತ್ಪಾದಕ ಕಂಪೆನಿ ಚೀನಾ ಮೂಲದ ಡಿಜೆಐ ನಿರ್ಮಿಸಿದೆ.!!

ಮೇ 24 ರಂದು ಈ ಹೊಸ ಸ್ಪಾರ್ಕ್ ಡ್ರೋನ್ ಬಿಡುಗಡೆಯಾಗಿದ್ದು, ಕೇವಲ ಕೈ ಸನ್ನೆಗಳ ಮೂಲಕವೇ ಈ ಡ್ರೋಣ್ ಅನ್ನು ನಿಯಂತ್ರಿಸಬಹುದಾಗಿದೆ. ಇನ್ನು ಡಿಜೆಐ ಕಂಪೆನಿಯ ನಿರ್ದೇಶಕ ಮೈಕಲ್ ಪೆರ್ರಿ ಡ್ರೋಣ್ ಬಗ್ಗೆ ಮಾಹಿತಿ ನೀಡಿದ್ದು, ಡ್ರೋಣ್ ಹೇಗೆ ಕಾರ್ಯನಿರ್ವಹಿಸುತ್ತದೆ. ಡ್ರೋಣ್ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಸ್ಪಾರ್ಕ್ ಡ್ರೋನ್ ಕೆಲಸ ಹೇಗೆ ಮಾಡುತ್ತದೆ?

ಹೊಸ ಸ್ಪಾರ್ಕ್ ಡ್ರೋನ್ ಕೆಲಸ ಹೇಗೆ ಮಾಡುತ್ತದೆ?

ಬಳಕೆದಾರನು ತನ್ನ ಕೈಗಳನ್ನು ಎಡಕ್ಕೆ ಅಥವಾ ಬಲಕ್ಕೆ ಚಲಿಸಿದರೆ ಒಂದು ಡ್ರೋನ್ ಆ ದಿಕ್ಕಿನಲ್ಲಿ ಚಲಿಸುತ್ತದೆ.! ಮುಂದಕ್ಕೆ ಅಥವಾ ಚಲಿಸಿದರೆ ಡ್ರೋಣ್ ಸಹ ಅದೇ ರೀತಿಯ ಚಲನೆ ನೀಡುತ್ತದೆ. ಇನ್ನು ಡ್ರೋಣ್‌ನಲ್ಲಿನ ಕ್ಯಾಮೆರಾ ಲೆನ್ಸ್ ನಿಮ್ಮನ್ನೆ ಕೇಂದ್ರಗೊಳಿಸುವ ತಂತ್ರಜ್ಞಾನವಿದೆ.!

ಕುಟುಂಬ-ಸ್ನೇಹಿ ಡ್ರೋಣ್!!

ಕುಟುಂಬ-ಸ್ನೇಹಿ ಡ್ರೋಣ್!!

ಡಿಜೆಐ ಕಂಪೆನಿ ಸಂಪೂರ್ಣ ಕುಟುಂಬ-ಸ್ನೇಹಿ ಮಾದರಿಡ್ರೋಣ್ ರೂಪಿಸುವಲ್ಲಿ ಯಶಸ್ವಿಯಾಗಿದ್ದು, , ಇಫೋಟೋಗಳನ್ನು ತ್ವರಿತವಾಗಿ ಸೆರೆಹಿಡಿಯಲು ನೆರವಾಗುತ್ತದೆ. ವೃತ್ತಿಪರ ಅಥವಾ ಹವ್ಯಾಸಿ ಚಲನಚಿತ್ರ ನಿರ್ಮಾಪಕರು ವೀಡಿಯೊಗಳನ್ನು ಸೆರೆಹಿಡಿಯಲು ಇದು ಅತ್ಯುತ್ತಮ ಡ್ರೋಣ್ ಆಗಿದೆ.!!

30 ನಿಮಿಷಗಳವರೆಗೆ ಹಾರಬಲ್ಲದು!!

30 ನಿಮಿಷಗಳವರೆಗೆ ಹಾರಬಲ್ಲದು!!

ಈ ಡ್ರೋಣ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 30 ನಿಮಿಷಗಳವರೆಗೆ ಹಾರಬಲ್ಲದು.! ಅಲ್ಲದೇ ಬಳಕೆದಾರನಿಂದ ನಾಲ್ಕು ಮೈಲುಗಳಷ್ಟು ದೂರದಲ್ಲಿ ಡ್ರೋಣ್ ಪ್ರಯಾಣಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ.!!

ಸ್ಪಾರ್ಕ್ ಡ್ರೋನ್ ಬೆಲೆ ಎಷ್ಟು?

ಸ್ಪಾರ್ಕ್ ಡ್ರೋನ್ ಬೆಲೆ ಎಷ್ಟು?

ಹೊಸ ಸ್ಪಾರ್ಕ್ ಡ್ರೋನ್ ಬೆಲೆ $ 500 ಡಾಲರ್‌ಗಳಾಗಿದ್ದು, ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಡ್ರೋಣ್ ಇದಾಗಿದೆ. ದುಬಾರಿ ಬೆಲೆಯ ಹೆಚ್ಚು ಶಕ್ತಿಶಾಲಿ ವೈಶಿಷ್ಟ್ಯ ಹೊಂದಿರುವ ಡ್ರೋಣ್ ಇಷ್ಟಪಡದ ಬಳಕೆದಾರರನ್ನು ಈ ಸ್ಪಾರ್ಕ್ ಡ್ರೋನ್ ಕಡಿಮೆ ಬೆಲೆ ಆಕರ್ಷಿಸುತ್ತದೆ.

ಓದಿರಿ:ವಿಶ್ವದಲ್ಲಿಯೇ ನಂ 1 ಟೆಕ್‌ ಸಿಟಿಯಾಗಿ ನಮ್ಮ ಬೆಂಗಳೂರು ಆಯ್ಕೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
A new drone entered the market. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot