ಸ್ಯಾಮ್‌ಸಂಗ್‌ನಿಂದ ಅತ್ಯಾಧುನಿಕ ''ಫ್ಲೆಕ್ಸ್ ವಾಷ್" ವಾಷಿಂಗ್ ಮಷೀನ್ ಬಿಡುಗಡೆ!!.ಹೇಗಿದೆ ಗೊತ್ತಾ?

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜ ಸ್ಯಾಮ್‌ಸಂಗ್ ಇಂದು ತನ್ನ ಅತ್ಯಾಧುನಿಕ ತಂತ್ರಜ್ಞಾನವುಳ್ಳ 'ಫ್ಲೆಕ್ಸ್ ವಾಷ್" ಎಂಬ ವಾಷಿಂಗ್ ಮಷೀನ್ ಬಿಡುಗಡೆ ಮಾಡಿದೆ.! ಇದೇ ಮೊದಲ ಬಾರಿಗೆ ಹಲವು ಅತ್ಯುತ್ತಮ ತಂತ್ರಜ್ಞಾನಗಳಿಂದ ಹೊಸ ಸೌಲಭ್ಯಗಳನ್ನು ಹೊದ್ದುಬಂದಿರುವ ''ಫ್ಲೆಕ್ಸ್ ವಾಷ್" ವಾಷಿಂಗ್ ಮಷೀನ್ ಜನರನ್ನು ತನ್ನತ್ತ ಸೆಳೆಯುತ್ತಿದೆ.!!

ಒಂದೇ ವಾಷಿಂಗ್ ಮಷೀನ್‌ನಲ್ಲಿ ಎರಡು ಕಡೆ ವಾಷಿಂಗ್ ಮಾಡುವ ಸೌಲಭ್ಯವಿರುವ ಮತ್ತು ಬಟ್ಟೆ ವಾಷ್‌ ರನ್ ಆಗುವಾಗಲೇ ಮತ್ತೆ ಬಟ್ಟೆಯನ್ನು ಸೇರಿಸಬಹುದಾದ ಹಲವು ಸೌಲಭ್ಯಗಳು ಸ್ಯಾಮ್‌ಸಂಗ್‌ನ ನೂತನ 'ಫ್ಲೆಕ್ಸ್ ವಾಷ್' ವಾಷಿಂಗ್ ಮಷೀನ್‌ನಲ್ಲಿ ಲಭ್ಯವಿದೆ.!! ಹಾಗಾದರೆ, 'ಫ್ಲೆಕ್ಸ್ ವಾಷ್" ವಾಷಿಂಗ್ ಏನೆಲ್ಲಾ ತಂರ್ಜ್ಞಾನ ಹೊಂದಿದೆ? ಇದರ ವಿಶೇಷತೆಗಳೇನು ? ಮತ್ತು ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನವನ್ನೇ ಹೊದ್ದುನಿಂತಿದೆ 'ಫ್ಲೆಕ್ಸ್ ವಾಷ್'!!

ತಂತ್ರಜ್ಞಾನವನ್ನೇ ಹೊದ್ದುನಿಂತಿದೆ 'ಫ್ಲೆಕ್ಸ್ ವಾಷ್'!!

ಹೊಸ ಹೊಸ ಪ್ರಾಡೆಕ್ಟ್‌ಗಳನ್ನು ಜನರ ಅವಶ್ಯಕತೆಗನುಗುಣವಾಗಿ ತಯಾರಿಸುವ ಸ್ಯಾಮ್‌ಸಂಗ್ ತನ್ನ ನೂತನ ವಾಷಿಂಗ್ ಮಷೀನ್‌ನಲ್ಲಿ 3ಕೋರ್ ಸ್ಯಾಮ್‌ಸಂಗ್ ಲ್ಯಾಂಡ್ರಿ ಟೆಕ್ನಾಲಜಿಯನ್ನು ಹೊಂದಿದೆ. ಎಕೊ ಬಬಲ್, ಬಬಲ್ ಸೋಕ್ ಮತ್ತು ವೈಬ್ರೇಷನ್ ರಿಡಕ್ಷನ್ ತಂತ್ರಜ್ಞಾನವನ್ನು ಒಳಗೊಂಡಿದೆ.!!

ಡ್ಯುಯಲ್ ವಾಷಿಂಗ್!!

ಡ್ಯುಯಲ್ ವಾಷಿಂಗ್!!

ಇದೇ ಮೊದಲ ಬಾರಿಗೆ ಎರಡು ಒಂದೇ ವಾಷಿಂಗ್ ಮಷೀನ್‌ನಲ್ಲಿ ಎರಡು ಕಡೆ ಬಟ್ಟೆ ವಾಷಿಂಗ್ ಮಾಡುವ ಸೌಲಭ್ಯಗಳನ್ನು ನೀಡಲಾಗಿದೆ.!! 23 KG ಮತ್ತು 16 KG ತೂಕದ ಬಟ್ಟೆಯನ್ನು ಒಮ್ಮೆಲೆ ಒಗೆಯಬಹುದಾಗಿದೆ.! ಇದಕ್ಕಾಗಿ ಬೇರೆ ಬೇರೆ ಡ್ಯಯಲ್ ವಾಷ್‌ಬಾಕ್ಸ್‌ಗಳನ್ನು ನೀಡಲಾಗಿದೆ.!!

ರನ್ ಆಗುವಾಗಲೇ ಮತ್ತೆ ಬಟ್ಟೆಯನ್ನು ಸೇರಿಸಿ!!

ರನ್ ಆಗುವಾಗಲೇ ಮತ್ತೆ ಬಟ್ಟೆಯನ್ನು ಸೇರಿಸಿ!!

ವಾಷಿಂಗ್ ಮಷೀನ್‌ನಲ್ಲಿ ಬಟ್ಟೆ ವಾಷ್ ಮಾಡುವಾಗ ಬೇರೆ ಬಟ್ಟೆಗಳನ್ನು ಸೇರಿಸಲು ಸಾಧ್ಯವಾಗುತ್ತಿರಲಿಲ್ಲ.!! ಆದರೆ, ಇದೇ ಮೊದಲ ಬಾರಿಗೆ 'ಫ್ಲೆಕ್ಸ್ ವಾಷ್" ವಾಷಿಂಗ್ ಮಷೀನ್ ಅಂತಹ ಸೌಲಭ್ಯವನ್ನು ಹೊಂದಿದ್ದು, ಬಟ್ಟೆ ವಾಷ್ ಮಾಡುವಾಗ ಬೇರೆ ಬಟ್ಟೆಗಳನ್ನು ಸಹ ಸೇರಿಸಬಹುದಾಗಿದೆ.!!

ಅತ್ಯಾಧುನಿಕವಾಗಿದೆ ಡ್ರೈಯರ್!!

ಅತ್ಯಾಧುನಿಕವಾಗಿದೆ ಡ್ರೈಯರ್!!

ಫ್ಲೆಕ್ಸ್ ವಾಷ್ ವಾಷಿಂಗ್ ಮಷೀನ್ ಮೂಲಕ ಬಟ್ಟೆಗಳು ಕೆಲವೇ ನಿಮಿಷಗಳಲ್ಲಿ ಡ್ರೈ ಆಗುವ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಅಭಿವೃಧ್ದಿಪಡಿಸಿದೆ.!! ಪ್ರಸ್ತುತ ಇರುವ ವಾಷಿಂಗ್ ಮಷೀನ್‌ಗಳಿಗಿಂತಲೂ ಈ ಫ್ಲೆಕ್ಸ್ ವಾಷ್ ವಾಷಿಂಗ್ ಮಷಿನ್ 10 ಪಟ್ಟು ವೇಗದಲ್ಲಿ ಬಟ್ಟೆ ಡ್ರೈ ಮಾಡುತ್ತದೆ.!!

ಬೆಲೆ ಮಾತ್ರ ಕೇಳೊಹಾಗಿಲ್ಲ.!!

ಬೆಲೆ ಮಾತ್ರ ಕೇಳೊಹಾಗಿಲ್ಲ.!!

ಇಷ್ಟೆಲ್ಲಾ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ನೂತನ 'ಫ್ಲೆಕ್ಸ್ ವಾಷ್" ವಾಷಿಂಗ್ ಮಷೀನ್ ಪ್ರಸ್ತುತ ವಾಷಿಂಗ್ ಮಷೀನ್‌ನಲ್ಲಿಯೇ ಅತ್ಯುತ್ತಮವಾದುದ್ದು ಎಂದು ಹೇಳಬಹುದು. ಅದಕ್ಕಾಗಿಯೇ ಬೆಲೆ ಕೂಡ ಬಹಳಷ್ಟು ಹೆಚ್ಚಿದ್ದು, ಈ ವಾಷಿಂಗ್ ಮಷೀನ್ ಬೆಲೆ 1.45 ಲಕ್ಷ ರೂಪಾಯಿಗಳಾಗಿವೆ.!!

ಓದಿರಿ:ಜಿಯೋ ಎಫೆಕ್ಟ್..299 ರೂ.ಗೆ ಕರೆ ಮಾತ್ರವಲ್ಲಾ ಡೇಟಾ ಕೂಡ ಅನ್‌ಲಿಮಿಟೆಡ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung launches versatile all-in-one laundry system.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot