ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್: ಹಲವು ವಸ್ತುಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಫ್ಲಿಪ್ ಕಾರ್ಟಿನ ಬಿಗ್ ಶಾಪಿಂಗ್ ಡೇ ಸೇಲ್ ಆರಂಭವಾಗಿದೆ. ಪ್ರತಿದಿನ ಸಾಕಷ್ಟು ಆಫರ್ ಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ಗ್ರಾಹಕರಿಗೆ ಮತ್ತೊಮ್ಮೆ ಫ್ಲಿಪ್ ಕಾರ್ಟ್ ನೀಡುತ್ತಿದೆ.

ಹೆಡ್ ಫೋನ್

ಹೆಡ್ ಫೋನ್ ಗಳು, ಟ್ರೂ ವಯರ್ ಲೆಸ್ ಇಯರ್ ಬಡ್ಸ್ ಗಳು, ಬ್ಲೂಟೂತ್ ಸ್ಪೀಕರ್ ಗಳು ಮತ್ತು ಇತ್ಯಾದಿ ಹಲವು ಪ್ರೊಡಕ್ಟ್ ಗಳನ್ನು ಖರೀದಿಸುವ ಇರಾದೆಯಲ್ಲಿದ್ದರೆ ಖಂಡಿತ ಈಗ ಒಳ್ಳೆಯ ಸಮಯ. ಯಾಕೆಂದರೆ ಅತೀ ಕಡಿಮೆ ಬೆಲೆಯಲ್ಲಿ ಈ ಪ್ರೊಡಕ್ಟ್ ಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ಸ್, ಫ್ಲಿಪ್ ಕಾರ್ಟ್ ಆಕ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಅನಿಯಮಿತ ಕ್ಯಾಷ್ ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ ರಿಯಾಯಿತಿಗಳು ಮತ್ತು ಅತ್ಯುತ್ತಮ ಎಕ್ಸ್ ಚೇಂಜ್ ಆಫರ್ ಗಳು ಈ ಬಾರಿಯ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಲಭ್ಯವಿದೆ.ಹೆಚ್ ಡಿಎಫ್ ಸಿ ಮತ್ತು ಫ್ಲಿಪ್ ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ಸ್ ನಲ್ಲಿ ಇಎಂಐ ಆಯ್ಕೆಗಳು ಕೂಡ ಲಭ್ಯವಿದೆ. ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಗಳಲ್ಲಿ 4,499 ರುಪಾಯಿ ಮೇಲ್ಪಟ್ಟ ಮೊತ್ತದ ಯಾವುದೇ ವಸ್ತುವಿನ ಖರೀದಿಗೆ ಇಎಂಐ ಆಯ್ಕೆ ಲಭ್ಯವಿದೆ.

ಬ್ಲೂಟೂತ್ ಹೆಡ್ ಫೋನ್ ಗಳು 1,499 ರುಪಾಯಿಯಿಂದ ಆರಂಭ

ಬ್ಲೂಟೂತ್ ಹೆಡ್ ಫೋನ್ ಗಳು 1,499 ರುಪಾಯಿಯಿಂದ ಆರಂಭ

ಈ ಸೇಲ್ ನಲ್ಲಿ ನಿಮ್ಮ ನೆಚ್ಚಿನ ಬ್ಲೂಟೂತ್ ಹೆಡ್ ಫೋನ್ ಗಳನ್ನು 1,499 ರುಪಾಯಿಯ ಆರಂಭಿಕ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.ಈ ಹೆಡ್ ಫೋನ್ ಗಳು ಹಲವು ಬ್ರ್ಯಾಂಡ್ ಗಳದ್ದಾಗಿದೆ. ಸ್ಕಲ್ ಕ್ಯಾಂಡಿ ಇಂಕ್ಡ್ ಬ್ಲೂಟೂತ್ ಹೆಡ್ ಸೆಟ್ ಜೊತೆಗೆ ಮೈಕ್ ನ ಬೆಲೆ 2,999 ರುಪಾಯಿ ಅಂದೆರೆ 25% ರಿಯಾಯಿತಿಯನ್ನು ನೀವು ಈ ಹೆಡ್ ಫೋನ್ ಗಳಿಗೆ ಪಡೆದುಕೊಳ್ಳಬಹುದು.

ಬ್ಲೂಟೂತ್ ಸ್ಪೀಕರ್ ಗಳಿಗೆ 30% ರಿಂದ 40% ರಿಯಾಯಿತಿ

ಬ್ಲೂಟೂತ್ ಸ್ಪೀಕರ್ ಗಳಿಗೆ 30% ರಿಂದ 40% ರಿಯಾಯಿತಿ

ಬ್ಲೂಟೂತ್ ಸ್ಪೀಕರ್ ಗಳನ್ನು 30% ರಿಂದ 40% ರಿಯಾಯಿತಿಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಮಿವಿ ರೋಮ್ 5ಡಬ್ಲ್ಯೂ ಬ್ಲೂಟೂತ್ ಸ್ಪೀಕರ್ ನ್ನು 1,199 ರುಪಾಯಿಗೆ ಅಂದರೆ 60% ರಿಯಾಯಿತಿ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಹೆಚ್ಚುವರಿ 5% ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಟ್ರೂ ವಯರ್ ಲೆಸ್ ಇಯರ್ ಬಡ್ಸ್ ಗಳ ಬೆಲೆ 1,499 ರುಪಾಯಿಯಿಂದ ಆರಂಭ

ಟ್ರೂ ವಯರ್ ಲೆಸ್ ಇಯರ್ ಬಡ್ಸ್ ಗಳ ಬೆಲೆ 1,499 ರುಪಾಯಿಯಿಂದ ಆರಂಭ

ಟ್ರೂ ವಯರ್ ಲೆಸ್ ಇಯರ್ ಬಡ್ಸ್ ಗಳನ್ನು 1,499 ರುಪಾಯಿಯ ಆರಂಭಿಕ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ನಾಯ್ಸ್ ಶೂಟ್ಸ್ ಎಕ್ಸ್3 ಬಾಸ್ ಟ್ರೂ ವಯರ್ ಲೆಸ್ ಬ್ಲೂಟೂತ್ ಹೆಡ್ ಸೆಟ್ ಜೊತೆಗೆ ಮೈಕ್ ನ್ನು 3,999 ರುಪಾಯಿ ಬೆಲೆಗೆ ಖರೀದಿಸುವುದಕ್ಕೆ ಅವಕಾಶವಿದೆ. ಇದು ಎರಡು ಘಂಟೆ ಚಾರ್ಜ್ ಮಾಡಿದರೆ 3 ಘಂಟೆಗಳ ಬ್ಯಾಟರಿ ಲೈಫ್ ನ್ನು ನೀಡುತ್ತದೆ.

ಸೌಂಡ್ ಬಾರ್ ಗಳಿಗೆ 70% ದವರೆಗೆ ರಿಯಾಯಿತಿ

ಸೌಂಡ್ ಬಾರ್ ಗಳಿಗೆ 70% ದವರೆಗೆ ರಿಯಾಯಿತಿ

ಹಲವಾರು ಸೌಂಡ್ ಬಾರ್ ಗಳನ್ನು 70% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ.ಸೋನಿ RT3 ಹೋಮ್ ಥಿಯೇಟರ್ ಸಿಸ್ಟಮ್ ಜೊತೆಗೆ ಡಾಬ್ಲೈ 600W ಬ್ಲೂಟೂತ್ ಸೌಂಡ್ ಬಾರ್ ನ್ನು ಈ ಸೇಲ್ ನಲ್ಲಿ 17,990 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ತಿಂಗಳಿಗೆ 847 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಹೋಮ್ ಥಿಯೇಟರ್ ಗಳಿಗೆ 50% ದ ವರೆಗೆ ರಿಯಾಯಿತಿ

ಹೋಮ್ ಥಿಯೇಟರ್ ಗಳಿಗೆ 50% ದ ವರೆಗೆ ರಿಯಾಯಿತಿ

ಎಲ್ಲಾ ಹೋಮ್ ಥಿಯೇಟರ್ ಗಳಿಗೆ 50% ದ ವರೆಗೆ ರಿಯಾಯಿತಿ ಇದೆ. ಇಂಟೆಕ್ಸ್ IT 301N 60 W ಹೋಮ್ ಥಿಯೇಟರ್ ನ್ನು ಅತೀ ಕಡಿಮೆ ಬೆಲೆ ಅಂದರೆ 2,499 ರುಪಾಯಿಗೆ ಖರೀದಿಸಬಹುದು. ಇದು ಅತ್ಯಂತ ಉತ್ತಮ ಕ್ಯಾಷ್ ಬ್ಯಾಕ್ ಆಫರ್ ನಲ್ಲಿ ಕೂಡ ಲಭ್ಯವಿದೆ.

ಲ್ಯಾಪ್ ಟಾಪ್ ಸ್ಪೀಕರ್ ಗಳಿಗೆ 55% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಸ್ಪೀಕರ್ ಗಳಿಗೆ 55% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಸ್ಪೀಕರ್ ಗಳಿಗೆ 55% ದ ವರೆಗೆ ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ. ಐಬಾಲ್ ರಾಗಾ ಕ್ಲಾಸಿಕ್ 14 W ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಸ್ಪೀಕರ್ ಗಳ ಬೆಲೆ Rs. 2,199 ಆರಂಭವಾಗುತ್ತಿದ್ದು ಹೆಚ್ ಡಿಎಫ್ ಸಿ ಮತ್ತು ಫ್ಲಿಪ್ ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಇಎಂಐ ಆಯ್ಕೆ ಕೂಡ ಲಭ್ಯವಿದೆ.

ಪಾರ್ಟಿ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಪಾರ್ಟಿ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಎಲ್ಲಾ ಪ್ರಮುಖ ಬ್ರ್ಯಾಂಡೆಡ್ ಪಾರ್ಟಿ ಸ್ಪೀಕರ್ ಗಳು 60% ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್ ಕಾರ್ಟಿನ ಮಾರ್ಕ್ಯೂ MA80WTM 80 W ಬ್ಲೂಟೂತ್ ಟವರ್ ಸ್ಪೀಕರ್ 7,499 ರುಪಾಯಿ ಬೆಲೆಗೆ ಲಭ್ಯವಿದೆ ಅಂದರೆ 31% ರಿಯಾಯಿತಿಯನ್ನು ನೀವಿದಕ್ಕೆ ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದು. ಇದನ್ನು ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ಮಾಸಿಕ 625 ರುಪಾಯಿ ಪಾವತಿಸಿ ಕೊಂಡುಕೊಳ್ಳಬಹುದು.

ವಯರ್ಡ್ ಹೆಡ್ ಫೋನ್ ಗಳಿಗೆ 70% ದ ವರೆಗೆ ರಿಯಾಯಿತಿ

ವಯರ್ಡ್ ಹೆಡ್ ಫೋನ್ ಗಳಿಗೆ 70% ದ ವರೆಗೆ ರಿಯಾಯಿತಿ

ವಯರ್ಡ್ ಹೆಡ್ ಫೋನ್ ಗಳು 70% ದ ವರೆಗಿನ ರಿಯಾಯಿತಿಯಲ್ಲಿ ಕೊಂಡುಕೊಳ್ಳಬಹುದು.ರಿಯಲ್ ಮಿ ಬಡ್ಸ್ 2 ವಯರ್ಡ್ ಹೆಡ್ ಸೆಟ್ ಜೊತೆಗೆ ಮೈಕ್ ನ ಬೆಲೆ 599 ರುಪಾಯಿಗಳು ಅಂದರೆ 25% ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ 10% ಕ್ಯಾಷ್ ಬ್ಯಾಕ್ ನ್ನು ಕೂಡ ಪಡೆದುಕೊಳ್ಳಬಹುದು.

ಬ್ಲೂಟೂತ್ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಬ್ಲೂಟೂತ್ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಬ್ಲೂಟೂತ್ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ ಇದೆ. ಮಿನಿ ರೋಮ್ 5 ಡಬ್ಲ್ಯೂ ಬ್ಲೂಟೂತ್ ಸ್ಪೀಕರ್ ನ್ನು ನೀವು ಕೇವಲ 1,199 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಬ್ಲೂಟೂತ್ ಮೂಲಕ ನೀವಿದನ್ನು ವಯರ್ ಲೆಸ್ ಆಗಿ ಬಳಕೆ ಮಾಡಬಹುದು.

Most Read Articles
Best Mobiles in India

English summary
Flipkart Big Shopping Days Sale: Offers On Headphones, True Wireless Earbuds, Bluetooth Speaker And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X