ವೈರಲ್ ಆಗಿದೆ ಬಾತ್‌ಟಬ್ ಅನ್ನೇ ಡ್ರೋಣ್ ಮಾಡಿ ಹಾರಾಟ ನಡೆಸಿದ ವಿಡಿಯೋ!..ನೋಡಿ ಶಾಕ್ ಆಗ್ಬೇಡಿ!!

|

ಹಾರುವ ಕಾರುಗಳನ್ನು ವಿಶ್ವವೇ ಎದುರು ನೋಡುತ್ತಿರುವಾಗಲೇ ಇಲ್ಲೋವ್ ಬಾತ್‌ಟಬ್ ಡ್ರೋಣ್ ಬಳಸಿ ಹಾರಾಟ ನಡೆಸಿ ವಿಶ್ವದ ಗಮನ ಸೆಳೆದಿದ್ದಾನೆ. ಒಂದು ಶತಮಾನದ ಹಿಂದೆ ವಿಶ್ವದ ಮೊದಲ ಯಶಸ್ವಿ ವಿಮಾನವನ್ನು ನಿರ್ಮಿಸಿದ ನಂತರ ವಾಯುಯಾನ ತಂತ್ರಜ್ಞಾನವು ಬಹಳ ಮುಂದುವರೆದಿದ್ದು, ಡ್ರೋಣ್ ಹಾರಾಟ ಇದೀಗ ಆಶ್ಚರ್ಯ ಮೂಡಿಸಿದೆ.

ದಿ ರಿಯಲ್ ಲೈಫ್ ಗಾಯ್ಸ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಬಾತ್‌ಟಬ್ ಡ್ರೋಣ್ ಬಳಸಿ ಹಾರಾಟ ನಡೆಸಿರುವ ವಿಡಿಯೋ ವೈರೆಲ್ ಆಗಿದೆ. ಇನ್ನು ಇದೇ ರೀತಿಯ ಡ್ರೋಣ್ ಹಾರಾಟದ ವಿಡಿಯೋವೊಂದನ್ನು 'ಟೆಕ್ ಇನ್‌ಸೈಡರ್' ಸಹ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಮಾನವ ಡ್ರೋಣ್ ಹಾರಾಟವು ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡಿದೆ.

ವೈರಲ್ ಆಗಿದೆ ಬಾತ್‌ಟಬ್ ಅನ್ನೇ ಡ್ರೋಣ್ ಮಾಡಿ ಹಾರಾಟ ನಡೆಸಿದ ವಿಡಿಯೋ!!

ಮಾನವನ ಕಲ್ಪನೆಗೂ ಮೀರಿ ತಂತ್ರಜ್ಞಾನ ಬದಲಾವಣೆಯಾಗುತ್ತಿರುವುದು ಭವಿಷ್ಯದಲ್ಲಿ ಬಳಕೆಗೆ ಬರಬಹುದಾದ ಮಾನವ ಡ್ರೋಣ್ ಹಾರಾಟಕ್ಕೆ ಸಾಕ್ಷಿಯಾಗಿದೆ. ಹಾಗಾದರೆ, ಬಾತ್‌ಟಬ್ ಡ್ರೋಣ್ ಬಳಸಿ ಮಾನವ ಹಾರಾಟ ನಡೆಸಿರುವ ವಿಡಿಯೋ ಜೊತೆಗೆ ಮಾನವ ಡ್ರೋಣ್ ಏನೆಲ್ಲಾ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.!

ಇದು ಮಾನವ ಹಾರಾಟದ ಡ್ರೋಣ್!!

ಇದು ಮಾನವ ಹಾರಾಟದ ಡ್ರೋಣ್!!

ಈ ಮೊದಲು ವಸ್ತುಗಳನ್ನು ಸಾಗಿಸುವ ಡ್ರೋಣ್‌ಗಳನ್ನು ಮಾತ್ರ ನೋಡಿದ್ದ ನಮಗೆ ಮಾನವ ಹಾರಾಟದ ಡ್ರೋಣ್ ಕುತೋಹಲವಾಗಿ ಕಾಣಿಸುತ್ತಿದೆ. ತಂತ್ರಜ್ಞಾನ ಬೆಳವಣಿಗೆ ಹೊಂದಿದಂತೆಲ್ಲಾ ಮಾನವನನ್ನು ಹೊತ್ತು ಸಾಗಿಸಬಹುದಾದ ಡ್ರೋಣ್ ಅನ್ನು ರಚಿಸಲು ಪ್ರಯತ್ನಿಸುವವರ ಸಂಖ್ಯೆ ಏನು ಕಡಿಮೆ ಇಲ್ಲ. ಹಾಗಾಗಿ, ಇದು ಮಾನವ ಹಾರಾಟದ ಡ್ರೋಣ್!

ಹೇಗಿದೆ ಮಾನವ ಹಾರಾಟದ ಡ್ರೋಣ್!

ಹೇಗಿದೆ ಮಾನವ ಹಾರಾಟದ ಡ್ರೋಣ್!

ಟೆಕ್ ಇನ್‌ಸೈಡರ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ತೋರಿಸಿರುವ ಮಾನವ ಹಾರಾಟದ ಡ್ರೋಣ್ ಸಾಮಾನ್ಯ ಡ್ರೋಣ್‌ಗಳಿಗಿಂತ ಭಿನ್ನವಾಗಿಲ್ಲ. ಆರು ರೆಕ್ಕೆಗಳನ್ನು ಹೊಂದಿರುವ ಒಂದು ಮಧ್ಯಮ ಗಾತ್ರದ ಡ್ರೋಣ್ ಅಂತೆ ಇದು ರೂಪುಗೊಂಡಿದೆ. ಬಾತ್‌ಟಬ್ ಸುತ್ತಲೂ ಆರು ಕಡೆಯಲ್ಲಿ ಡ್ರೋಣ್ ರೆಕ್ಕೆಗಳನ್ನು ಅಳವಡಿಸಲಾಗಿದೆ.

ಎಲ್ಲವೂ ರಿಮೋಟ್ ಕಂಟ್ರೋಲ್!!

ಎಲ್ಲವೂ ರಿಮೋಟ್ ಕಂಟ್ರೋಲ್!!

ಸಾಮಾನ್ಯ ಡ್ರೋಣ್‌ಗಳಿಗಿಂತ ಭಿನ್ನವಾಗಿರದ ಈ ಮಾನವನನ್ನು ಹೊತ್ತು ಸಾಗಿಸಬಹುದಾದ ಡ್ರೋಣ್ ಸಂಪೂರ್ಣವಾಗಿ ರಿಮೋಟ್ ನಿಯಂತ್ರಿತ ವಾಹನ ಆಗಿದೆ. ದೂರದಿಂದಲೇ ಅಥವಾ ಡ್ರೋಣ್ ಒಳಗೆಯೇ ಕುಳಿತು ವಿಶೇಷ ಡ್ರೋಣ್ ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದೆ. ಇದು ಡ್ರೋಣ್ ಹಾರಾಟವನ್ನು ಮತ್ತಷ್ಟು ಸುಲಭಗಿಸಿದೆ.

ಬಹುದೊಡ್ಡ ಬ್ಯಾಟರಿ!

ಬಹುದೊಡ್ಡ ಬ್ಯಾಟರಿ!

ಸಾಮಾನ್ಯ ಡ್ರೋಣ್‌ಗಳಿಗೆ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಅವಶ್ಯಕತೆ ಇರುತ್ತದೆ ಎಂದರೆ ಇನ್ನು ಮಾನವನನ್ನು ಹೊತ್ತು ಸಾಗಿಸಬಹುದಾದ ಡ್ರೋಣ್‌ಗೆ ಬಹುದೊಡ್ಡ ಬ್ಯಾಟರಿ ಅವಶ್ಯಕತೆ ಇದೆ ಎಂಬುದನ್ನು ತಿಳಿಯಬಹುದು. ಆದರೆ, ಮಾನವನನ್ನೇ ಹೊತ್ತು ಸಾಗಿಸಬಹುದಾ ಈ ಡ್ರೋಣ್‌ನಲ್ಲಿ ಇರುವ ಬ್ಯಾಟರಿ ಯಾವುದು ಮತ್ತು ಅದರ ಎಷ್ಟು ಶಕ್ತಿ ಎಷ್ಟು ಎಂಬುದು ತಿಳಿದಿಲ್ಲ.

ಹಾರಿದ್ದು ನಿಜ..ಹಾರಿಸಿದ್ದು ಡೌಟು!!

ಹಾರಿದ್ದು ನಿಜ..ಹಾರಿಸಿದ್ದು ಡೌಟು!!

ಟೆಕ್ ಇನ್‌ಸೈಡರ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಹಾರಿಸಿದ ವಿಡಿಯೋ ನಿಜವಾಗಿದೆ. ಆದರೆ, ದಿ ರಿಯಲ್ ಲೈಫ್ ಗಾಯ್ಸ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಹಾರಿಸಿದ ಡ್ರೋಣ್ ವೀಡಿಯೋ ನಿಜವಾಗಿರುವಂತೆಯೇ ಕಂಡರು ಸಹ ವಿಡಿಯೋ ಕೊನೆಯಲ್ಲಿ ಕನಸು ಕಾಣುತ್ತಿರುವಂತೆ ಚಿತ್ರಿಸಲಾಗಿದೆ. ಇದು ಪ್ರಮೋಷನ್ ಮಾಡುವ ಆಯ್ಕೆ ಎಂದು ಹೇಳಲಾಗಿದೆ.

Best Mobiles in India

English summary
FLYING SHOPPING on our HUMAN DRONE!.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X