''ಸಂಪೂರ್ಣ ಪಾರದರ್ಶಕ ಟಿವಿ'' ಖರೀದಿಸಲು ನೀವು ರೆಡಿನಾ?!..ಹೇಗಿದೆ ಗೊತ್ತಾ ಟಿವಿ ತಂತ್ರಜ್ಞಾನ!?

ಕಪ್ಪುಬಿಳುಪಿನ ಪುಟ್ಟ ಪೆಟ್ಟಿಗೆಯಿಂದ ಒಂದು ಗೋಡೆ ಅಗಲದ ಬಣ್ಣದ ಟಿವಿಯ ತನಕ ಟಿವಿಗಳು ಬೆಳೆದುಬಂದಿವೆ. ನಾಳೆ ಇನ್ಯಾವ ಬಗೆಯ ಟಿವಿಗಳು ಬರಬಹುದು ಎಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ “ಗಾಜಿನ ಟಿವಿಗಳು” ಎನ್ನಬಹುದು.

|

ಕಪ್ಪುಬಿಳುಪಿನ ಪುಟ್ಟ ಪೆಟ್ಟಿಗೆಯಿಂದ ಒಂದು ಗೋಡೆ ಅಗಲದ ಬಣ್ಣದ ಟಿವಿಯ ತನಕ ಟಿವಿಗಳು ಬೆಳೆದುಬಂದಿವೆ. ನಾಳೆ ಇನ್ಯಾವ ಬಗೆಯ ಟಿವಿಗಳು ಬರಬಹುದು ಎಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ "ಗಾಜಿನ ಟಿವಿಗಳು" ಎನ್ನಬಹುದು. ಹೌದು, ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮಾತನ್ನು ಕೇಳಿ ಅದರಂತೆ ಕೆಲಸಮಾಡುವ ಪಾರದರ್ಶಕ ಟಿವಿ ಮಾರುಕಟ್ಟೆಗೆ ಬರಲಿದೆ.!!

ನೋಡಲು ತಿಳಿಯಾದ ಗಾಜಿನ ಪರದೆ. ಅಲ್ಲಿ ಗಾಜಿನ ಪರದೆ ಇದೆಯೋ ಇಲ್ಲವೋ ಎಂದು ನಮ್ಮ ಕಣ್ಣು ಕೂಡ ಕೆಲವೊಮ್ಮೆ ಮೋಸಹೋಗಬಹುದಾದ ಗಾಜಿನ ಟಿವಿ ಇಲ್ಲವೇ ಕಣ್ಣಿಗೆ ಕಾಣದ(invisible) ಟಿವಿಯ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಈ ಟಿವಿಗಳ ತಂತ್ರಜ್ಞಾನಕ್ಕೆ ಗ್ಯಾಜೆಟ್ ಪ್ರಪಂಚವೇ ಬೆಕ್ಕಸಬೆರಗಾಗಿದೆ.!!

''ಸಂಪೂರ್ಣ ಪಾರದರ್ಶಕ ಟಿವಿ'' ಖರೀದಿಸಲು ನೀವು ರೆಡಿನಾ?!

ಈಗಿನ ಕಾಲದ ಚೂಟಿಯಾದ ಎಲ್ಲಾ ಟಿವಿಗಳಿಗೆ ಸಡ್ಡು ಹೊಡೆಯಲು ಬರುತ್ತಿರುವ ಸಂಪೂರ್ಣ ಪಾರದರ್ಶಕವಾಗಿರುವ ಈ ಟಿವಿಗೆ ಇನ್ನೂ ಸರಿಯಾಗಿ ಹೆಸರಿಟ್ಟಿಲ್ಲ.! ಆದರೆ, ಕಣ್ಣಿಗೆ ಕಾಣದ (invisible) ಟಿವಿ ಎಂದು ಕರೆಯುತ್ತಿದ್ದಾರೆ. ಹಾಗಾದರೆ, ಸಂಪೂರ್ಣ ಪಾರದರ್ಶಕ ಟಿವಿ ಹೇಗಿದೆ? ಟಿವಿಯಲ್ಲಿರುವ ತಂತ್ರಜ್ಞಾನಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಸಂಪೂರ್ಣ ಪಾರದರ್ಶಕ ಟಿವಿ!!

ಸಂಪೂರ್ಣ ಪಾರದರ್ಶಕ ಟಿವಿ!!

ಇನ್ಮುಂದೆ ಸಂಪೂರ್ಣ ಪಾರದರ್ಶಕ ಟಿವಿಯನ್ನು ನೋಡುವ ಭಾಗ್ಯ ನಿಮ್ಮದಾಗಿರಲಿದೆ. ವಿದ್ಯುತ್ ಹರಿಯುವ ಮುನ್ನ ಮಾಮೂಲಿ ಗಾಜಿನಂತೆ ಕಾಣುವ ಹಾಗೂ ವಿದ್ಯುತ್ ಹರಿದ ನಂತರ ಟಿವಿಯ ಪರದೆಯಾಗಿ ಮೂಡುವ ಟಿವಿಗಳ ಅಭಿವೃದ್ದಿ ಕಾರ್ಯ ಕೊನೆಹಂತದಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬಿಡಗಡೆಯಾಗಲಿದೆ ಎಂದು ಹೇಳಲಾಗಿದೆ.!!

ಸಂಪೂರ್ಣ ಪಾರದರ್ಶಕತೆ ಸಾಧ್ಯವೇ?

ಸಂಪೂರ್ಣ ಪಾರದರ್ಶಕತೆ ಸಾಧ್ಯವೇ?

ಚಿಕ್ಕ ಚಿಕ್ಕ ಒಎಲ್‍ಇಡಿ (Organic Light Emitting Diode) ಹರಳುಗಳನ್ನು ಜೋಡಿಸಿ ಮಾಡಿರುವ ಬಲೆಯೊಂದನ್ನು ತೆಳುವಾದ ಎರಡು ಗಾಜಿನ ಪದರಗಳ ನಡುವೆ ಅಂಟಿಸಲಾಗುತ್ತದೆ. ಒಂದು ಗಾಜಿನ ಪದರ ಕ್ಯಾತೋಡ್ ಆದರೆ ಮತ್ತೊಂದು ಆನೋಡ್ ಆಗಿ ಕೆಲಸ ಮಾಡುತ್ತದೆ. ಒಎಲ್ ಇಡಿ ಹಾಗೂ ಗಾಜಿನ ಪದರಗಳನ್ನು ಅಂಟಿಸಲು ಬಳಸುವ ಅಂಟನ್ನು ಬಣ್ಣವಿರದ ಪ್ಲಾಸ್ಟಿಕ್ ನಿಂದ ಮಾಡಲಾಗುವುದು. ಹಾಗಾಗಿ ಇವು ಕೂಡ ಗಾಜಿನಂತೆ ಆಚೆಕಾಣುವಂತಿರುತ್ತವೆ.

ಗಾಜಿನ ಟಿವಿಗಳು ಹೇಗೆ ಕೆಲಸಮಾಡುತ್ತವೆ?

ಗಾಜಿನ ಟಿವಿಗಳು ಹೇಗೆ ಕೆಲಸಮಾಡುತ್ತವೆ?

ಗಾಜಿನ ಪದರಗಳಿಗೆ ವಿದ್ಯುತ್ ಅನ್ನು ಹರಿಸಿದಾಗ, ಕ್ಯಾತೋಡ್ ಹಾಗೂ ಆನೋಡ್ ಪದರಗಳ ನಡುವಿರುವ ಒಎಲ್‍ಇಡಿ ಬಲೆಯ ಮೂಲಕ ಮಿಂಚು ಹರಿಯುತ್ತದೆ. ಇದನ್ನು ಬಳಸಿಕೊಂಡು ಒಎಲ್‍ಇಡಿಯು ಬೆಳಕನ್ನು ಹೊರಸೂಸುತ್ತದೆ. ಈ ಬೆಳಕಿನ ನೆರವಿನಿಂದ ಗಾಜಿನ ಪರದೆಯು ಚಿತ್ರಗಳನ್ನು ತೋರಿಸಿ ಟಿವಿಯ ತೆರೆಯಾಗಿ ಕೆಲಸಮಾಡುತ್ತದೆ.!!

How to Check Your Voter ID Card Status (KANNADA)
ಟಿವಿಯ ಒಳಗೆ ನೀವೂ ಹೋಗಬಹುದು!

ಟಿವಿಯ ಒಳಗೆ ನೀವೂ ಹೋಗಬಹುದು!

ಗಾಜಿನ ಪರದೆಯ ಒಂದು ಮೂಲೆಯಲ್ಲಿ ಟಿವಿಯ ಕಾರ‍ರ್ಯಕ್ರಮಗಳನ್ನು ನೋಡುತ್ತದ್ದರೂ ಚಿತ್ರಗಳಲ್ಲಿ ಹಾಗೂ ವೀಡಿಯೋಗಳಲ್ಲಿ ಹಿನ್ನಲೆಯು ಆಚೆಕಾಣುವಂತಿರುವ ತಂತ್ರಜ್ಞಾನವನ್ನು ಈ ಗಾಜಿನ ಟಿವಿಗಳು ಹೊಂದಿವೆ. ಹಾಗಾಗಿ, ಹಿಂಬದಿಯಿಂದನೀವೆ ಹೋಗಿ ನಿಂತರೆ ಪರದೆಯ ಹಿಂದೆ ನೀವು ಕಾಣುವಿರಿ. ಇದು ಒಂತರಾ ಟಿವಿಯ ಒಳಗೆ ನೀವೇ ಹೋದಂತೆ.!!

ಗಾಜಿನ ಟಿವಿ ತಯಾರಿಕೆಯಲ್ಲಿ ಪೈಪೋಟಿ!!

ಗಾಜಿನ ಟಿವಿ ತಯಾರಿಕೆಯಲ್ಲಿ ಪೈಪೋಟಿ!!

ಜಪಾನಿನ ಪ್ಯಾನಸಾನಿಕ್ ಹಾಗೂ ಕೊರಿಯಾದ ಸ್ಯಾಮ್ ಸಂಗ್ ಕಂಪನಿಗಳು ನಾ ಮುಂದು ತಾ ಮುಂದು ಎಂದು ಗಾಜಿನ ಟಿವಿಯನ್ನು ಮಾಡುವುದರಲ್ಲಿ ತೊಡಗಿಕೊಂಡಿವೆ. 2018 ನೇ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ(CES) ನಲ್ಲಿ ಹಲವು ಕಂಪೆನಿಗಳು ಗಾಜಿನ ಮಾದರಿಯ ಟಿವಿಗಳನ್ನು ತೋರಿಸಿದ್ದಾರೆ.!

Best Mobiles in India

English summary
Futuristic 'invisible TV' turns TRANSPARENT when you're not watching it - leaving just a pane of glass.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X