ಭಾರತಕ್ಕೆ ಬಂತು ಮತ್ತೆರಡು ಧರಿಸಬಹುದಾದ ಸ್ಮಾರ್ಟ್ ವಾಚ್ – ಬೆಲೆ ಎಷ್ಟು ಗೊತ್ತಾ?

By Gizbot Bureau
|

ಭಾರತದಲ್ಲಿ ತನ್ನ ಪ್ರೊಡಕ್ಟ್ ಗಳ ಮಾರಾಟವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸ್ಮಾರ್ಟ್ ವಿಯರೇಬಲ್ ಬ್ರ್ಯಾಂಡ್ ಅನ್ನಿಸಿಕೊಂಡಿರುವ ಗಾರ್ಮಿನ್ ಸಂಸ್ಥೆ ಹೊಸದಾಗಿ ಎರಡು ಸ್ಮಾರ್ಟ್ ವಾಚ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಫೋರ್ ರನ್ನರ್ 245 ಮತ್ತು ಫೋರ್ ರನ್ನರ್ 245 ಮ್ಯೂಸಿಕ್ ಎಂಬುದು ಈ ಸ್ಮಾರ್ಟ್ ಧರಿಸಬಹುದಾದ ವಾಚ್ ಗಳ ಹೆಸರಾಗಿದೆ.

ಬೆಲೆ ಮತ್ತು ಆಯ್ಕೆಗಳು:

ಬೆಲೆ ಮತ್ತು ಆಯ್ಕೆಗಳು:

ಗಾರ್ಮಿನ್ ಫೋರ್ ರನ್ನರ್ 245 ನ ಬೆಲೆ 29,990 ಮತ್ತು ಇದು ಎರಡು ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ- ಸ್ಲೇಟ್ ಮತ್ತು ಆಂಪ್ ಹಳದಿ.

ಫೋರ್ ರನ್ನರ್ 245 ಮ್ಯೂಸಿಕ್ ನ ಬೆಲೆ 34,990 ರುಪಾಯಿಗಳು ಮತ್ತು ಇದು ಕಪ್ಪು, ಲಾವಾ ಕೆಂಪು ಮತ್ತು ಆಕ್ವಾ ಬಣ್ಣಗಳಲ್ಲಿ ಲಭ್ಯವಾಗುತ್ತದೆ.

ಎಲ್ಲಿ ಖರೀದಿಸಬಹುದು?

ಎಲ್ಲಿ ಖರೀದಿಸಬಹುದು?

ಆನ್ ಲೈನ್ ನ ಪೇಟಿಎಂ ಮಾಲ್ ಮತ್ತು ಮಿಂತ್ರಾ ಗಳಲ್ಲಿ ಎರಡೂ ಸ್ಮಾರ್ಟ್ ವಾಚ್ ಗಳು ಖರೀದಿಗೆ ಲಭ್ಯವಿದೆ. ಆಫ್ ಲೈನ್ ನಲ್ಲಿ ಖರೀದಿಸುವುದಕ್ಕೂ ಕೂಡ ನಿಮಗೆ ಅವಕಾಶವಿದೆ. ಜಿಓ ಸ್ಪೋರ್ಟ್ಸ್ ಮುಂಬೈ ಮತ್ತು ಬೆಂಗಳೂರು, ಪೆಲಟಾನ್ ಕ್ಯಾಲಿಕಟ್, ಪ್ಲೇ ವೆಲ್ ಕ್ಯಾಲಿಕಟ್ ಮತ್ತು ಕೊಚ್ಚಿ ಮತ್ತು ಹೆಲಿಯೋಸ್ ವಾಚ್ ಸ್ಟೋರ್ಸ್ ಪಾನ್ ಇಂಡಿಯಾ ಆಫ್ ಲೈನ್ ಸ್ಟೋರ್ ಗಳಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಫೀಚರ್ ಗಳು:

ಫೀಚರ್ ಗಳು:

ಗಾರ್ಮಿನ್ ಫೋರ್ ರನ್ನರ್ 245 ಮತ್ತು ಫೋರ್ ರನ್ನರ್ 245 ಮ್ಯೂಸಿಕ್ ಎರಡೂ ಕೂಡ ಜಿಪಿಎಸ್ ಅನೇಬಲ್ ಆಗಿರುವ ಸ್ಮಾರ್ಟ್ ವಾಚ್ ಗಳಾಗಿವೆ. ಇವೆರಡೂ ಕೂಡ ಬಿಲ್ಟ್ ಇನ್ ಇನ್ಸಿಡೆಂಟ್ ಡಿಟೆಕ್ಷನ್ ಫೀಚರ್ ನಿಂದ ನಿರ್ಮಿಸಲ್ಪಟ್ಟಿದ್ದು ಲೊಕೇಷನ್ ಹಂಚಿಕೆಗೆ ನೆರವು ನೀಡುತ್ತದೆ.

ಫೋರ್ ರನ್ನರ್ 245 ಸರಣಿಯು "ಬಾಡಿ ಬ್ಯಾಟರಿ" ಫೀಚರ್ ನಿಂದ ಒಳಗೊಂಡಿದ್ದು ಇದು ದೇಹದ ಶಕ್ತಿಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ.ಸ್ಮಾರ್ಟ್ ವಾಚ್ ಮೋಡ್ ನಲ್ಲಿ 7 ದಿನಗಳ ಕಾಲದ ಬ್ಯಾಟರಿ ಲೈಫ್ ನ್ನು ಇದು ನೀಡುತ್ತದೆ. ಜಿಪಿಎಸ್ ಮೋಡ್ ಜೊತೆಗೆ ಮ್ಯೂಸಿಕ್ ನಲ್ಲಿ 6 ತಾಸುಗಳ ಬ್ಯಾಟರಿ ಲೈಫ್, ಮ್ಯೂಸಿಕ್ ಇಲ್ಲದೆ ಜಿಪಿಎಸ್ ಮೋಡ್ ನಲ್ಲಾದರೆ 24 ತಾಸುಗಳ ಬ್ಯಾಟರಿ ಲೈಫ್ ನ್ನು ಇದು ನೀಡುತ್ತದೆ.

ಇತರೆ ವೈಶಿಷ್ಟ್ಯತೆಗಳು:

ಇತರೆ ವೈಶಿಷ್ಟ್ಯತೆಗಳು:

ಇತರೆ ಫೀಚರ್ ಗಳೆಂದರೆ ರೇಸ್ ಪ್ರಿಡಿಕ್ಟರ್ ಫೀಚರ್ ಇದರಲ್ಲಿ ಅಳವಡಿಸಲಾಗಿದ್ದು ರೇಸ್ ಟೈಮ್ ನ್ನು ಇದು ಅಂದಾಜಿಸುವ ಸಾಮರ್ಥ್ಯ ಹೊಂದಿದೆ ಮತ್ತು ಪ್ಲಾನ್ ಟ್ರೈನಿಂಗ್ ಸೆಶ್ಶನ್ ಮತ್ತು ಗಾರ್ಮಿನ್ ಕೋಚ್ ಫೀಚರ್ ಇದ್ದು ಇವುಗಳು ಉಚಿತ ಟ್ರೈನಿಂಗ್ ಪ್ಲಾನ್ ಗಳನ್ನು ಆಫರ್ ಮಾಡುತ್ತದೆ.

ಯಾರು ಬುದ್ಧಿವಂತಿಕೆ, ಸ್ಟೈಲ್ ಮತ್ತು ಭವಿಷ್ಯದ ಫೀಚರ್ ಗಳನ್ನು ಒಂದೇ ಡಿವೈಸ್ ನಲ್ಲಿ ನೋಡುವುದಕ್ಕೆ ಇಷ್ಟಪಡುತ್ತೀರೋ ಅವರಿಗೆ ಇದು ಹೇಳಿ ಮಾಡಿಸಿದ್ದಾಗಿದೆ. ಬಾಡಿ ಬ್ಯಾಟರಿ, ವಿಓ2 ಮ್ಯಾಕ್ಸ್, ಇನ್ಸಿಡೆಂಟ್ ಡಿಟೆಕ್ಷನ್, ರೇಸ್ ಪ್ರಿಡಿಕ್ಟರ್ ಇತ್ಯಾದಿ ಫೀಚರ್ ಗಳು ಇದರಲ್ಲಿರುವುದರಿಂದಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಓಟಗಾರರಿಗೆ ಖಂಡಿತ ಇದು ಅಧ್ಬುತ ಅನುಭವವನ್ನು ನೀಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ಗಾರ್ಮಿನ್ ಇಂಡಿಯಾದ ನ್ಯಾಷನಲ್ ಸೇಲ್ಸ್ ಮ್ಯಾನೇಜರ್ ಆಗಿರುವ ಅಲಿ ರಿಝ್ವಿ.

ಒಟ್ಟಿನಲ್ಲಿ ಎರಡು ಹೊಸ ಧರಿಸಬಹುದಾದ ಸ್ಮಾರ್ಟ್ ವಾಚ್ ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಯಾವ ರೀತಿ ಮೆಚ್ಚುಗೆಯನ್ನು ಪಡೆಯುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

Best Mobiles in India

Read more about:
English summary
Garmin Forerunner 245 And Forerunner 245 Music Smartwatches Launched In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X