Subscribe to Gizbot

ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಭಾರೀ ಕೊಡುಗೆ!!

Written By:

2030ರ ಹೊತ್ತಿಗೆ ದೇಶದಲ್ಲಿನ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ವಿದ್ಯುತ್‌ ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಗುರಿಯನ್ನು ಹಾಕಿಕೊಂಡಿದೆ. ಹಾಗಾಗಿಯೇ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಖರೀದಿ ಮತ್ತು ಬಳಕೆ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.!!

ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿನ್ನು ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಮತ್ತು ಮಾರಾಟದ ಉದ್ಯಮ ಭಾರೀ ಹಿಂದುಳಿದಿರುವುದರಿಂದ ಕೇಂದ್ರ ಸರ್ಕಾರ 'ಫೇಮ್ ಇಂಡಿಯಾ' ಯೋಜನೆ ತಂದಿದ್ದರೆ, ಕರ್ನಾಟಕ ರಾಜ್ಯ ಸರ್ಕಾರ 'ಇ-ಮೊಬಿಲಿಟಿ' ಪ್ರಚಾರ ಅಭಿಯಾನದ ಮೂಲಕ ಭಾರೀ ಕೊಡುಗೆಗಳನ್ನು ನೀಡಿ ವಿದ್ಯುತ್ ಚಾಲಿತ ವಾಹನಗಳ ಪ್ರಚಾರಕ್ಕೆ ನಿಂತಿವೆ.!!

ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಭಾರೀ ಕೊಡುಗೆ!!

ಹಾಗಾಗಿ, ಇಂದಿನ ಲೇಖನದಲ್ಲಿ ಪೆಟ್ರೋಲ್, ಡೀಸೆಲ್ ಇಂಧನ ವಾಹನಗಳಿಗಿಂತ ವಿದ್ಯುತ್ ಚಾಲಿತ ವಾಹನಗಳನ್ನು ಏಕೆ ಖರೀದಿಸಬಹುದು? ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಿಲು ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ? ವಿದ್ಯುತ್ ಚಾಲಿತ ಕಾರುಗಳ ವಿಶೇಷತೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಇ–ಮೊಬಿಲಿಟಿ?

ಏನಿದು ಇ–ಮೊಬಿಲಿಟಿ?

ವಿದ್ಯುತ್‌ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ‘ಇ-ಮೊಬಿಲಿಟಿ' ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ. ಈ ಪ್ರಚಾರದ ಭಾಗವಾಗಿ ನಗರದ ಖಾಸಗಿ ಉದ್ಯೋಗಿಗಳಿಗೆ 1,000 ವಿದ್ಯುತ್‌ಚಾಲಿತ ಕಾರುಗಳ ಸೇವೆಯನ್ನು ನೀಡಲು ಮುಂದಾಗಿದೆ.!!

ಫೇಮ್ ಇಂಡಿಯಾ ಸ್ಕೀಮ್‌?

ಫೇಮ್ ಇಂಡಿಯಾ ಸ್ಕೀಮ್‌?

ಕೇಂದ್ರ ಸರ್ಕಾರವು 2015ರಲ್ಲಿಯೇ ರೂಪಿಸಿರುವ ವಿದ್ಯುತ್‌ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ತಯಾರಿಕಾ ನೀತಿ ಇದಾಗಿದೆ.ವಿದ್ಯುತ್‌ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆ ಮತ್ತು ಮಾರಾಟಕ್ಕೆ ಹಣಕಾಸು ಉತ್ತೇಜನಾ ಕ್ರಮಗಳನ್ನು ನೀಡಲು ಈ ನೀತಿಯನ್ನು ರೂಪಿಸಲಾಗಿದೆ.!!

ವಿದ್ಯುತ್‌ಚಾಲಿತ ವಾಹನ ಅಭಿವೃದ್ಧಿ!!

ವಿದ್ಯುತ್‌ಚಾಲಿತ ವಾಹನ ಅಭಿವೃದ್ಧಿ!!

ಪರಿಸರಸ್ನೇಹಿ ವಿದ್ಯುತ್‌ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ವಾಗ್ದಾನ ಮಾಡಿವೆ. ಮಾರುತಿ ಸುಜುಕಿ, ಮಹೀಂದ್ರಾ ಎಲೆಕ್ಟ್ರಿಕ್ ಸೇರಿ ಹಲವು ಕಾರು ತಯಾರಕಾ ಕಂಪೆನಿಗಳು ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಗೆ ಮುಂದಾಗಿವೆ.!!

ಹೊಸ ರಾಷ್ಟ್ರೀಯ ವಾಹನ ನೀತಿ

ಹೊಸ ರಾಷ್ಟ್ರೀಯ ವಾಹನ ನೀತಿ

ವಿದ್ಯುತ್‌ ಚಾಲಿತ ಮತ್ತು ಇಂಧನ ಮತ್ತು ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಾಹನ ನೀತಿಯನ್ನು ಶೀಘ್ರದಲ್ಲಿಯೇ ರೂಪಿಸುವುದಾಗಿ ತಿಳಿಸಿದೆ. ವಿದ್ಯುತ್‌ ಚಾಲಿತ ವಾಹನ ಉತ್ಪಾದಕರು ಮತ್ತು ಗ್ರಾಹಕರಿಗೆ ತೆರಿಗೆ ಪದ್ಧತಿ ಸರಳಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.!!

ಶೇ 80 ರಷ್ಟು ತೆರಿಗೆ ಇಳಿಕೆ!!

ಶೇ 80 ರಷ್ಟು ತೆರಿಗೆ ಇಳಿಕೆ!!

ವಿದ್ಯುತ್‌ಚಾಲಿತ ವಾಹನ ಮತ್ತು ಇಂತಹ ವಾಹನಗಳ ತಯಾರಿಗೆ ಬೇಕಾಗಿರುವ ವಸ್ತುಗಳ ಆಮದು ಸುಂಕ ಕಡಿತಕ್ಕೆ ಸರ್ಕಾರ ಆಲೋಚಿಸಿದೆ. ಇದೇ ವೇಳೆಯಲ್ಲಿ ವಿದ್ಯುತ್‌ಚಾಲಿತ ವಾಹನ ಖರೀದಿಸುವ ಗ್ರಾಹಕರಿಗೆ ಶೇ 80ರಷ್ಟು ತೆರಿಗೆ ಇಳಿಕೆ ಮಾಡುವ ದೂರದೃಷ್ಟಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ.!!

Bike-Car ಜಾತಕ ಹೇಳುವ ಆಪ್..!
ಮೂಲ ಸೌಕರ್ಯಗಳು ಇವೆಯೇ?

ಮೂಲ ಸೌಕರ್ಯಗಳು ಇವೆಯೇ?

ವಿದ್ಯುತ್‌ಚಾಲಿತ ವಾಹನಗಳ ಬಳಕೆ ಹೆಚ್ಚಿದಂತೆ ಚಾರ್ಜಿಂಗ್ ಕೇಂದ್ರಗಳಂತಹ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ನಗರ, ಪಟ್ಟಣಗಳಲ್ಲದೇ ಹಳ್ಳಿಗಳಲ್ಲಿಯೂ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬೇಕಿದೆ. ವಿದ್ಯುತ್‌ಚಾಲಿತ ವಾಹನಗಳಿಗೆ (electric vehicles- ಇ.ವಿ) ಚಾರ್ಜಿಂಗ್‌ ಮಾಡಿಸುವ ರಾಜ್ಯದ ಮೊದಲ ಕೇಂದ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To expedite its electric mobility mission, the Indian government is reportedly seeking investment from a number of companies, both domestic and foreign. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot