ವಾಟ್ಸಾಪ್‌ನಲ್ಲಿ ಬ್ಯಾಕಪ್ ಮಾಡುವುದು ಹೇಗೆ?

By Shwetha
|

ನೀವು ವಾಟ್ಸಾಪ್ ಬಳಸುವ ಕಟ್ಟಾ ಭಕ್ತರು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಿಮಗೊಂದು ಹೊಸದನ್ನು ಅರಿಯಬಹುದಾಗಿದೆ. ಹೆಚ್ಚಿನವರು ವಾಟ್ಸಾಪ್ ಅನ್ನು ಬಳಸುತ್ತಿದ್ದರೂ ಕೆಲವೊಂದು ಮುಖ್ಯ ಅಂಶಗಳನ್ನು ತಿಳಿದುಕೊಳ್ಳುವಲ್ಲಿ ಅವರಿಗೆ ಆಸಕ್ತಿಯೂ ಇರುವುದಿಲ್ಲ ಮತ್ತು ಅದನ್ನು ಕಲಿಸುವವರು ಯಾರೂ ಇರುವುದಿಲ್ಲ. ವಾಟ್ಸಾಪ್‌ನ ಈ ಸಲಹೆಗಳು ನಿಮ್ಮನ್ನು ಹೆಚ್ಚಿನ ಕಿರಿಕಿರಿಗಳಿಂದ ತಪ್ಪಿಸಲಿದ್ದು ಅಚಾನಕ್ಕಾಗಿ ಇಂತಹ ಘಟನೆಗಳು ನಡೆದಾಗ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನೇ ಈ ಸಲಹೆಗಳು ನಿಮಗೆ ತಿಳಿಸಲಿವೆ.

ಓದಿರಿ:ಟಾಪ್ 10 ನಿಯಮಗಳನ್ನು ಅನುಸರಿಸಿ ವಾಟ್ಸಾಪ್ ಬಳಸಿ

ವಾಟ್ಸಾಪ್‌ನಲ್ಲಿ ಬ್ಯಾಕಪ್ ಮಾಡುವುದು ಹೇಗೆ ಎಂಬುದೇ ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿರುವ ಸಲಹೆಯಾಗಿದೆ. ಸಂಪರ್ಕಗಳು, ವೀಡಿಯೊಗಳು, ಫೋಟೋಗಳು ಮತ್ತು ಟಿಪ್ಪಣಿಗಳನ್ನು ನೀವು ನಷ್ಟ ಮಾಡಿಕೊಳ್ಳದೇ ಅದನ್ನು ಬ್ಯಾಕಪ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚು ಸರಳವಾಗಿರುವ ಪ್ರಕ್ರಿಯೆ ಇದಾಗಿದ್ದು ನಿಮಗೆ ಇದರಿಂದ ನಷ್ಟ ಖಂಡಿತ ಸಂಭವಿಸುವುದಿಲ್ಲ.

#1

#1

ವಾಟ್ಸಾಪ್‌ನೊಳಗೆ ನಿಮ್ಮ ಆಂಡ್ರಾಯ್ಡ್ ಫೋನ್‌ನ ಮೆನು ಕೀಯನ್ನು ಪ್ರೆಸ್ ಮಾಡಿರಿ.

#2

#2

ಇಲ್ಲಿ ನಿಮಗೆ ಸೆಟ್ಟಿಂಗ್ ಆಪ್ಶನ್ ಅನ್ನು ಕಾಣಬಹುದು.

#3

#3

ಚಾಟ್ ಸೆಟ್ಟಿಂಗ್ ಆಪ್ಶನ್ ಅನ್ನು ನಿಮಗೆ ಕಾಣಬಹುದು. ಅದನ್ನು ಸ್ಪರ್ಶಿಸಿ

#4

#4

ಬ್ಯಾಕಪ್ ಕಾನ್‌ವರ್ಸೇಶನ್ ಆಪ್ಶನ್‌ಗಾಗಿ ಹುಡುಕಿ. ಇದನ್ನು ತಟ್ಟಿರಿ, ನಂತರ ವಾಟ್ಸಾಪ್‌ಗಾಗಿ ಚಾಟ್ ಮೆಸೇಜ್ ಬ್ಯಾಕಪ್‌ಗೊಳ್ಳಲು ಆರಂಭಗೊಳ್ಳುತ್ತದೆ.

#5

#5

ಐಕ್ಲೌಡ್ ಬಳಸಿ

#6

#6

ಐಫೋನ್‌ನಲ್ಲಿ ಬ್ಯಾಕಪ್ ಮಾಡುವುದು ಹೆಚ್ಚು ಸರಳವಾಗಿದೆ. ಐಓಎಸ್‌ನಲ್ಲಿ ಐಕ್ಲೌಡ್ ಬ್ಯಾಕಪ್ ಆಪ್ಶನ್ ಅನ್ನು ಹೊಂದಿದೆ. ಇದು ನಿಮ್ಮ ವಾಟ್ಸಾಪ್ ಡೇಟಾವನ್ನು ನಿತ್ಯವೂ ಬ್ಯಾಕಪ್ ಮಾಡುತ್ತದೆ. ಆದರೆ ಇದು ಯಾವುದೇ ಫೋಟೋ ಅಥವಾ ವೀಡಿಯೊವನ್ನು ಸ್ಟೋರ್ ಮಾಡುವುದಿಲ್ಲ. ವಾಟ್ಸಾಪ್ ಚಾಟ್ ಸಂದೇಶಗಳಿಗೆ ಮ್ಯಾನ್ಯುವಲ್ ಬ್ಯಾಕಪ್ ಅನ್ನು ನೀವು ಸೇರಿಸಬಹುದಾಗಿದೆ.

#7

#7

ವಾಟ್ಸಾಪ್‌ನಲ್ಲಿ ಸೆಟ್ಟಿಂಗ್ ಮೆನುವಿಗೆ ಹೋಗಿ. ಅಲ್ಲಿಂದ ಚಾಟ್ ಸೆಟ್ಟಿಂಗ್ ಆಪ್ಶನ್ ಅನ್ನು ಹುಡುಕಿಕೊಳ್ಳಿ

#8

#8

ನೀವು ಇಲ್ಲಿ ಎರಡು ಆಯ್ಕೆಗಳನ್ನು ಕಂಡುಕೊಳ್ಳಬಹುದಾಗಿದೆ. ಆಟೊ ಬ್ಯಾಕಪ್ ಅನ್ನು ಆಫ್ ಮಾಡಬಹುದಾಗಿದೆ ಇದು ಆಗ ನಿಮಗೆ ಬ್ಯಾಕಪ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಇನ್ನೊಂದು ಆಯ್ಕೆ ಬ್ಯಾಕಪ್ ನೌ ಆಗಿದೆ ಇದನ್ನು ಬಳಸಿ ಯಾವುದೇ ಸಮಯದಲ್ಲಿ ಹಸ್ತಚಾಲಿತವಾಗಿ ಬ್ಯಾಕಪ್ ಮಾಡಬಹುದಾಗಿದೆ.

Most Read Articles
Best Mobiles in India

English summary
In this article we are giving you simple tips on how to backup whatsapp messages on android iphone following simple methods.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X