ಜಗತ್ತಿನ ಅತ್ಯಂತ ಹಗುರವಾದ ಕಾಂಪ್ಯಾಕ್ಟ್ ಹೆಚ್‌ಪಿ 'ಎಲೈಟ್ ಡ್ರ್ಯಾಗನ್ ಫ್ಲೈ' ಬಿಡುಗಡೆ!

|

ಆಧುನಿಕ ಕಾರ್ಯಪಡೆಗಾಗಿ ಜಗತ್ತಿನ ಅತ್ಯಂತ ಹಗುರವಾದ ಕಾಂಪ್ಯಾಕ್ಟ್ ಬ್ಯುಸಿನೆಸ್ ಕನ್ವರ್ಟಿಬಿಲ್ ನೋಟ್‍ಬುಕ್ -ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಅನ್ನು ಭಾರತದಲ್ಲಿನ ಬಿಡುಗಡೆ ಮಾಡಲಾಗಿದೆ. ಹೆಚ್‍ಪಿಯ ವಿಸ್ತಾರವಾದ ಭದ್ರತಾ ಪರಿಹಾರಗಳನ್ನು ಇದು ಒಳಗೊಂಡಿದ್ದು, ಶಕ್ತಿಶಾಲಿ ಮತ್ತು ದೃಢವಾದ ಸುಭದ್ರತೆಗಾಗಿ ವಿನ್ಯಾಸಗೊಳಿಸಲಾದ ಪ್ರೀಮಿಯಮ್ ಬ್ಯುಸಿನೆಸ್ ಕನ್ವರ್ಟಿಬಲ್ ಇದಾಗಿದ್ದು, ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಕೇವಲ ಒಂದು ಕೆಜಿಗೂ ಕಡಿಮೆ ತೂಕ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ದೀರ್ಘಕಾಲದ ಬ್ಯಾಟರಿ

24.5 ಗಂಟೆಗಳಷ್ಟು ಜಗತ್ತಿನ ಅತ್ಯಂತ ದೀರ್ಘಕಾಲದ ಬ್ಯಾಟರಿ ಜೀವಿತಾವಧಿಯನ್ನು ಈ 13 ಇಂಚಿತ ಬ್ಯುಸಿನೆಸ್ ಕನ್ವರ್ಟಿಬಲ್ ಹೊಂದಿದ್ದು, ಇತ್ತೀಚಿನ ವೈಫೈ 6 ಕನೆಕ್ಟಿವಿಟಿ ಒಳಗೊಂಡಿದೆ. ಜಗತ್ತಿನ ಎಲ್ಲೆಡೆ ಇಂಟರ್‍ನೆಟ್ ಸಂಪರ್ಕ ಹೊಂದಲು ಗಿಗಾಬಿಟ್-ಕ್ಲಾಸ್ 4ಜಿ ಎಲ್‍ಟಿಇ ಆಂಟೆನಾ ಅಳವಡಿಸಲಾಗಿದೆ. 4x4 ಎಲ್‍ಟಿಇ ಆಂಟೆನಾ ಹೊಂದಿರುವ ಜಗತ್ತಿನ ಮೊದಲ ಬ್ಯುಸಿನೆಸ್ ಕನ್ವರ್ಟಿಬಲ್ ಇದಾಗಿದೆ. ಜೊತೆಗೆ ಪರ್ಸನಲ್ ವೆಲ್‍ಬಿಯಿಂಗ್ ವರ್ಕ್‍ವೆಲ್ ಅನ್ನು ಪ್ರೀ ಇನ್‍ಸ್ಟಾಲ್ ಮಾಡಲಾದ ಜಗತ್ತಿನ ಮೊದಲ ಬ್ಯುಸಿನೆಸ್ ಕನ್ವರ್ಟಿಬಲ್ ಇದಾಗಿದೆ.

8ನೇ ಪೀಳಿಗೆ

ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ 8ನೇ ಪೀಳಿಗೆಯ ಇಂಟೆಲ್ ಕೋರ್ ವಿ ಪ್ರೊ ಪ್ರೊಸೆಸರ್ ಒಳಗೊಂಡಿದೆ. ವೈ-ಫೈ5ಗಿಂತಲೂ ಮೂರು ಪಟ್ಟು ಹೆಚ್ಚಿನ ವೇಗದ ಫೈಲ್ ಟ್ರ್ಯಾನ್ಸ್‍ಫರ್ ಸ್ಪೀಡ್ ಅನ್ನು ವೈ-ಫೈ6 ನೀಡುತ್ತದೆ. ಮಾಲ್‍ವೇರ್ ಅಟ್ಯಾಕ್‍ಗಳನ್ನು ಹೆಚ್‍ಪಿ ಶೂರ್‍ಸೆನ್ಸ್ ಕೃತಕ ಬುದ್ಧಿವಂತಿಕೆಯೊಂದಿಗೆ ತಡೆಯುತ್ತದೆ. ಜೊತೆಗೆ ಹೆಚ್‍ಪಿ ಪ್ರಶಸ್ತಿ ವಿಜೇತ ಇಂಟಿಗ್ರೇಟೆಡ್ ಪ್ರಿವೇಸಿ ಸ್ಕ್ರೀನ್ ಮತ್ತು ಹೆಚ್‍ಪಿ ಪ್ರಿವೇಸಿ ಕ್ಯಾಮರಾಗಳು, ಹೆಚ್‍ಪಿ ಶ್ಯೂರ್ ವ್ಯೂ ಜೆನ್3ರ ಭಾಗವಾಗಿದ್ದು, ಜಗತ್ತಿನೊಂದಿಗೆ ಹಂಚಿಕೊಳ್ಳುವುದನ್ನು ನಿಯಂತ್ರಿಸಲು ಬಳಕೆದಾರರಿಗೆ ನೆರವಾಗುತ್ತವೆ.

ಹೆಚ್‌ಪಿ ವರ್ಕ್‍ವೆಲ್

`ಇಂಟೆಲ್‍ನ ಪ್ರಾಜೆಕ್ಟ್ ಅಥೆನಾ'ವನ್ನು ಇದು ಅಳವಡಿಸಿಕೊಂಡಿರುವುದಲ್ಲದೆ, ಹೆಚ್‌ಪಿ ವರ್ಕ್‍ವೆಲ್ ಸಾಫ್ಟ್‍ವೇರ್‍ನೊಂದಿಗೆ ಈ ಉತ್ಪನ್ನ ಚತುರ ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಉತ್ತಮವಾಗಿ ಕೆಲಸ ಮಾಡುತ್ತದೆ. ಜೊತೆಗೆ ಹೆಚ್‌ಪಿ ಉತ್ಪಾದಕತೆಯ ಸಲಹೆಗಳನ್ನು ಪೂರೈಸುವುದಲ್ಲದೆ, ಬಳಕೆದಾರರು ಕೆಲಸದ ನಡುವೆ ಎದ್ದು ಹೋಗಿ ಅಲ್ಪಸ್ವಲ್ಪ ವ್ಯಾಯಾಮ ಮಾಡುವಂತೆ ಸೂಚಿಸುತ್ತದೆ. ಆರೋಗ್ಕಕರ ಕೆಲಸ ಮತ್ತು ಜೀವನದ ಸಮತೋಲನವನ್ನು ಕಂಡುಕೊಳ್ಳಲು ಹೆಚ್‍ಪಿ ನೆರವಾಗುವುದಲ್ಲದೆ, ವೈಯಕ್ತೀಕರಿಸಿದ ಸೌಖ್ಯತೆಯ ಶಿಫಾರಸ್ಸುಗಳನ್ನು ನೀಡುತ್ತದೆ.

ವಿನಯ್ ಅವಸ್ಥಿ

ಭಾರತದ ಹೆಚ್‌ಪಿ ಇಂಕ್‍ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಅವಸ್ಥಿ ಅವರು ಈ ಬಗ್ಗೆ ಮಾತನಾಡಿ, ಒಳನೋಟಗಳನ್ನು ಒಳಗೊಂಡ ನವೀನತೆ ನಮ್ಮ ಮಾರ್ಗದರ್ಶಿ ನೀತಿಯಾಗಿದ್ದು, ಇದು ಪ್ರಸ್ತುತ ಮಾತ್ರವಲ್ಲದೆ, ಭವಿಷ್ಯದಲ್ಲಿಯೂ ಪ್ರಸ್ತುತವಾಗುವಂತಹ ಉಪಕರಣಗಳನ್ನು ನಾವು ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣ ಕೈಗೊಳ್ಳುವ ಖಾತ್ರಿ ಮಾಡಿಕೊಟ್ಟಿದೆ. ನೂತನ ಡಿಜಿಟಲ್ ಆರ್ಥಿಕ ಸ್ಥಿತಿಯಲ್ಲಿ ಯಶಸ್ವಿಯಾಗಲು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುವಂತೆ ನೂತನ ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಅನ್ನು ವಿನ್ಯಾಸಗೊಳಿಸಲಾಗಿದೆ'' ಎಂದಿದ್ದಾರೆ.

1,49,999 ರೂ.

ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಮತ್ತು ಪ್ರೀಮಿಯಮ್ ಆಕ್ಸಸರಿಗಳು ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಬೆಂಬಲ ನೀಡುವಂತಹವುಗಳಾಗಿವೆ. ಸತತವಾಗಿ ಚಲನೆಯಲ್ಲಿರುವವರಿಗಾಗಿ ಹೆಚ್‌ಪಿ ಎಲೈಟ್ 13.3ಇಂಚು ಲೆದರ್ ಸ್ಲೀವ್ ಮತ್ತು ಹೆಚ್‍ಪಿ ಬ್ಲೂಟೂತ್ ಟ್ರ್ಯಾವಲ್ ಮೌಸ್ ಸಾದರಪಡಿಸಲಾಗುತ್ತಿದೆ. ಇನ್ನು ಈ ಹೆಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಡಿಸೆಂಬರ್ 01 ರಿಂದ ಲಭ್ಯವಾಗುವ ನಿರೀಕ್ಷೆ ಇದ್ದು, ಇದರ ಬೆಲೆ 1,49,999 ರೂ. ಆಗಿರುತ್ತದೆ. ಹೆಚ್‍ಪಿ ಇ344ಸಿ ಕವ್ರ್ಡ್ ಮಾನಿಟರ್ 67,000/- ರೂ.ಗಳಿಂದ ಆರಂಭವಾಗುವ ಬೆಲೆ ಹೊಂದಿರುತ್ತದೆ

Best Mobiles in India

English summary
HP Elite Dragonfly laptop launched with 24 hours battery life

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X