ಎಚ್‌ಪಿಯಿಂದ ಅತ್ಯಂತ ತೆಳುವಾದ 'ಪ್ರೋ ಬುಕ್ 445 ಜಿ 6' ಬಿಡುಗಡೆ!

|

ಜನಪ್ರಿಯ ಲ್ಯಾಪ್‌ಟಾಪ್ ತಯಾರಕ ಕಂಪೆನಿ ಎಚ್‌ಪಿ ಭಾರತದಲ್ಲಿ ತನ್ನ ವಾಣಿಜ್ಯ ಲ್ಯಾಪ್‌ಟಾಪ್ ಶ್ರೇಣಿಗೆ ಹೊಸ ಮಾದರಿಯನ್ನು ಸೇರಿಸಿದೆ. ತನ್ನ ವಾಣಿಜ್ಯ ಕಂಪ್ಯೂಟರ್, ಲ್ಯಾಪ್ ಟಾಪ್ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಿರುವ ಕಂಪೆನಿ, ಅತ್ಯಂತ ತೆಳುವಾದ ಹಾಗೂ ಸ್ಟೈಲಿಶ್ ಆಗಿರುವ 'ಪ್ರೋಬುಕ್ 445 ಜಿ 6' ಎಂಬ ಹೊಸನೋಟ್ ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಎಚ್‌ಪಿಯಿಂದ ಅತ್ಯಂತ ತೆಳುವಾದ 'ಪ್ರೋ ಬುಕ್ 445 ಜಿ 6' ಬಿಡುಗಡೆ!

ಹೌದು, ಎಎಮ್‌ಡಿ ರೈಜೆನ್ ಕ್ವಾಡ್-ಕೋರ್ ಸಿಪಿಯುಗಳ ಆಯ್ಕೆ, ದೀರ್ಘ ಬ್ಯಾಟರಿ ಅವಧಿಯ ಭರವಸೆಯೊಂದಿಗೆ ಎಚ್‌ಪಿ 'ಪ್ರೋಬುಕ್ 445 ಜಿ 6' ನೋಟ್ ಬುಕ್ ಬಿಡುಗಡೆಯಾಗಿದೆ. ಅಲ್ಟ್ರಾ ಸ್ಲಿಮ್ ಹಾಗೂ ಸ್ಟೈಲಿಶ್ ಆಗಿರುವ ಈ ನೋಟ್ ಬುಕ್ ತುಂಬಾ ಹಗುರವಾಗಿದ್ದು, 18 ಎಂಎಂ ದಪ್ಪದ ಡಿವೈಸ್ ಆರಂಭಿಕ ತೂಕ ಕೇವಲ 1.6 ಕಿ.ಗ್ರಾಂ.ಗಳು ಎಂದು ಕಂಪೆನಿ ತಿಳಿಸಿದೆ.

ಈ ಪ್ರೋಬುಕ್ 445 ಜಿ 6' 400 ಸರಣಿಯ ಮೊದಲ ಪ್ರೋ ಬುಕ್ ಉತ್ಪನ್ನವಾಗಿದ್ದು, ಎಎಂಡಿ ರೈಜನ್ ಪ್ರೊಸೆಸರ್ ಹೊಂದಿರುವ ಈ ನೋಟ್ ಬುಕ್ ಅನ್ನು ಆಧುನಿಕ ವ್ಯವಹಾರದ ಉತ್ಪಾದನೆ ಹೆಚ್ಚಿಸುವ ಸಲುವಾಗಿ ತಯಾರಿಸಲಾಗಿದೆ. ಎಎಂಡಿ ರೈಜನ್ ಪ್ರೊಸೆಸರ್ ಹೊಂದಿರುವ ಈ ನೋಟ್ ಬುಕ್ ಉದ್ಯಮಗಳಿಗೆ ಹೆಚ್ಚು ನೆರವಾಗಲಿದೆ ಎಂದು ಎಚ್‌ಪಿ ಕಂಪೆನಿಯು ಹೇಳಿಕೊಂಡಿದೆ.

ಎಚ್‌ಪಿಯಿಂದ ಅತ್ಯಂತ ತೆಳುವಾದ 'ಪ್ರೋ ಬುಕ್ 445 ಜಿ 6' ಬಿಡುಗಡೆ!

14 ಇಂಚಿನ ಪ್ರದರ್ಶನ, 30 ನಿಮಿಷಗಳಲ್ಲಿ 50 ಪ್ರತಿಶತ ಫಾಸ್ಟ್ ಚಾರ್ಜ್, 16GB ವರೆಗೆ ಡಿಡಿಆರ್ 4 RAM , M.2 SSD 512GB ಮತ್ತು 1TB ಯಾಂತ್ರಿಕ ಹಾರ್ಡ್ ಡ್ರೈವ್ ಸೇರಿದಂತೆ, ಯುಎಸ್‌ಬಿ ಟೈಪ್-ಸಿ ಪೋರ್ಟ್, ಎಚ್‌ಡಿಎಂಐ 1.4 ಬಿ, ಲ್ಯಾನ್, ಹೆಡ್‌ಫೋನ್ ಮತ್ತು ಮೈಕ್ರೊಫೋನ್ ಕಾಂಬೊ ಮತ್ತು ಎಸ್‌ಡಿ ಕಾರ್ಡ್ ರೀಡರ್ ಅನ್ನು ಈ ಪ್ರೋ ಬುಕ್ ಒಳಗೊಂಡಿದೆ.

ಕಂಪ್ಯೂಟರ್ ಮತ್ತು ಮೊಬೈಲ್‌ ಬಗ್ಗೆ ನೀವು ತಿಳಿಯದ 5 ರಹಸ್ಯ ಮಾಹಿತಿಗಳು!!ಕಂಪ್ಯೂಟರ್ ಮತ್ತು ಮೊಬೈಲ್‌ ಬಗ್ಗೆ ನೀವು ತಿಳಿಯದ 5 ರಹಸ್ಯ ಮಾಹಿತಿಗಳು!!

ಈ ಲ್ಯಾಪ್‌ಟಾಪ್ ಅನ್ನು ವ್ಯಾಪಾರಕ್ಕಾಗಿ ವಿನ್ಯಾಸಗೊಳಿಸಲಾಗಿರುವುದರಿಂದ, ಇದು ಹೆಚ್ಚುವರಿ ಡೇಟಾ ಮತ್ತು ಗುರುತಿನ ಕಳ್ಳತನ ತಡೆಗಟ್ಟುವ ವ್ಯವಸ್ಥೆಯನ್ನು ಹೊಂದಿದೆ. ಇದು BIOSphere Gen4 ಅನ್ನು ಹೊಂದಿದ್ದು, ಮಾಲ್‌ವೇರ್‌ನಿಂದ ಸ್ವಯಂಚಾಲಿತ ರಕ್ಷಣೆ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.. ಇನ್ನು ಈ 'ಎಚ್‌ಪಿ ಪ್ರೋ ಬುಕ್ 445 ಜಿ' 67, 260 ರೂ.ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!

Best Mobiles in India

English summary
HP ProBook 445 G6 Business Laptop With AMD Ryzen CPUs, 180-degree Hinge Launched in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X