ಶಿಯೋಮಿ ಲಾಂಚ್ ಮಾಡಿದೆ ಯೀಲೈಟ್ ವಾಯ್ಸ್ ಅಸಿಸ್ಟೆಂಟ್ ಸ್ಮಾರ್ಟ್ ಸ್ಪೀಕರ್
ಶಿಯೋಮಿಯ ಅಂಗಸಂಸ್ಥೆಯಾದ ಯೀಲೈಟ್, ಸ್ಮಾರ್ಟ್ ಹೋಮ್ ಉತ್ಪನ್ನಗಳ ತಯಾರಕರಾಗಿದ್ದು , ನೂತನ ವಾಯ್ಸ್ ಅಸಿಸ್ಟೆಂಟ್ ಆಧಾರಿತ ಸ್ಮಾರ್ಟ್ ಸ್ಪೀಕರ್ ಒಂದನ್ನು ಲಾಂಚ್ ಮಾಡಿದ್ದಾರೆ. ಯೀಲೈಟ್ ವಾಯ್ಸ್ ಅಸಿಸ್ಟೆಂಟ್ ಎಂದು ಕರೆಯಲಾಗುವ ಈ ಸ್ಪೀಕರ್ , ಯೀಲೈಟ್ ತಯಾರಿಸಿರುವ ಈ ಮಾದರಿಯ ಮೊದಲ ಉತ್ಪನ್ನ ಇದಾಗಿದೆ.

ಯೀಲೈಟ್ ವಾಯ್ಸ್ ಅಸಿಸ್ಟೆಂಟ್ ನ ವಿನ್ಯಾಸ ಅಮೇಜಾನ್ ನ ಇಖೋ ಡಾಟ್ ನ ವಿನ್ಯಾಸವನ್ನೇ ಬಹುತೇಕ ಹೋಲುತ್ತಿದ್ದು, ಅದನ್ನು ನೋಡಿದ ತಕ್ಷಣ ನಿಮಗೆ ಗೋಚರಿಸುವ ಮೊದಲ ವಿಷಯ ಇದೇ ಆಗಿರುತ್ತದೆ. ಯೀಲೈಟ್ ವಾಯ್ಸ್ ಅಸಿಸ್ಟೆಂಟ್ ಇಖೋ ಡಾಟ್ ನಂತೆಯೇ ಮೇಲ್ಭಾಗದಲ್ಲಿ 4 ಬಟನ್ ಗಳನ್ನು ಹೊಂದಿದೆ. ಅದೇ ಆಕ್ಷನ್ ಬಟನ್, ಮೈಕ್ರೋಫೋನ್ ಆನ್/ಆಫ್ ಬಟನ್, ವಾಲ್ಯೂಮ್ ಅಪ್ ಬಟನ್ ಮತ್ತು ವಾಲ್ಯೂಮ್ ಡೌನ್ ಬಟನ್.ಯೀಲೈಟ್ ಸ್ಪೀಕರ್ ನ ಮೇಲ್ಭಾಗದಲ್ಲಿ ಮಧ್ಯದಲ್ಲಿ ಮತ್ತೊಂದು ಬಟನ್ ಇದ್ದು ಸ್ಪೀಕರ್ ಅನ್ನು ಮ್ಯೂಟ್ ಮಾಡಲು ಇದನ್ನು ಬಳಸಬಹುದಾಗಿದೆ.
ಈ ಫೀಚರ್ ಇಖೋ ಡಾಟ್ ನಲ್ಲಿ ಇಲ್ಲದಿದ್ದರೂ ಅಮೇಜಾನ್ ಇಖೋ ನ ದೊಡ್ಡ ಆವೃತ್ತಿಗಳಲ್ಲಿ ಲಭ್ಯವಿದೆ. ಯೀಲೈಟ್ ಸ್ಮಾರ್ಟ್ ಸ್ಪೀಕರ್ ಮೈಕ್ರೋಸಾಫ್ಟ್ ನ ಕೊರ್ಟಾನಾ ವಾಯ್ಸ್ ಅಸಿಸ್ಟೆಂಟ್ ಹೊಂದಿದೆ. ಅಲ್ಲದೆ 6 ಮೈಕ್ರೋಫೋನ್ಗಳು ಮತ್ತು ಒಂದು 2-ವ್ಯಾಟ್ ಸ್ಪೀಕರ್ ಹೊಂದಿದೆ ಯೀಲೈಟ್ ಸ್ಮಾರ್ಟ್ ಸ್ಪೀಕರ್.
ಯೀಲೈಟ್ ಸಂಸ್ಥೆಯ ಅನುಸಾರ ಯೀಲೈಟ್ ಸ್ಮಾರ್ಟ್ ಸ್ಪೀಕರ್ ಆಧುನಿಕ ವಾಯ್ಸ್ ವೇಕ್-ಅಪ್ ಅಲ್ಗೋರಿದಮ್ ಹೊಂದಿದ್ದು 5 ಮೀಟರ್ ಗಳ ವ್ಯಾಪ್ತಿಯಲ್ಲಿ ಈ ಸಾಧನವನ್ನು ಆನ್ ಮಾಡಬಹುದಾಗಿದೆ. ಪ್ರತಿಧ್ವನಿಯನ್ನು ಕಡಿಮೆಗೊಳಿಸುವ ಸಲುವಾಗಿ ಆಧುನಿಕ ಅಕೌಸ್ಟಿಕ್ ಇಖೋ ಕ್ಯಾನ್ಸಲೇಶನ್(AEC) ಮತ್ತು ಬೀಮ್ಫಾರ್ಮಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ.
ಯೀಲೈಟ್ ಸ್ಮಾರ್ಟ್ ಸ್ಪೀಕರ್ 1.2GHz ಪ್ರಾಸೆಸರ್ ಸ್ಪೀಡ್ ಹೊಂದಿರುವ 64-ಬಿಟ್ ಕಾರ್ಟೆಕ್ಸ್ A53 ಕ್ವಾಡ್-ಕೋರ್ ಪ್ರಾಸೆಸರ್ ಹೊಂದಿದ್ದು, 256MB RAM ಮತ್ತು 256MB ಫ್ಲ್ಯಾಶ್ ಸ್ಟೋರೇಜ್ ಕೂಡ ಹೊಂದಿದೆ. ಇನ್ನು ಇದರ ಕನೆಕ್ಟಿವಿಟಿ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 2.4 GHz ಮತ್ತು 5 GHz ಡ್ಯುಯಲ್ ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ ಲೋ ಎನರ್ಜಿ(LE)
ಯೀಲೈಟ್ ವಾಯ್ಸ್ ಅಸಿಸ್ಟೆಂಟ್ ಡ್ಯುಯಲ್ AI ಸಿಸ್ಟಮ್ ಹೊಂದಿದ್ದು, ಶಿಯೋಮಿ ಯ ಸ್ಮಾರ್ಟ್ LED ಬಲ್ಬ್, ಟೇಬಲ್ ಲ್ಯಾಂಪ್, ಬೆಡ್ ಸೈಡ್ ಲ್ಯಾಂಪ್, ಸೀಲಿಂಗ್ ಲೈಟ್ ಮೊದಲಾದ ಸ್ಮಾರ್ಟ್ ಉತ್ಪನ್ನಗಳನ್ನು ನಿಯಂತ್ರಿಸವ ಸಾಮರ್ಥ್ಯ ಹೊಂದಿದೆ.
ಶಿಯೋಮಿಯ ಕ್ರೌಡ್ ಸೋರ್ಸಿಂಗ್ ಪ್ಲ್ಯಾಟ್ಫಾರ್ಮ್ ನಲ್ಲಿ 199 ಯುವಾನ್(ಅಂದಾಜು ರೂ 1,950) ಬೆಲೆಗೆ ಈ ಸ್ಪೀಕರ್ ಅನ್ನು ಪ್ರಕಟಿಸಲಾಗಿದೆ. ಈ ಸ್ಪೀಕರ್ಗಳ ಜಾಗತಿಕ ಲಭ್ಯತೆ ಮತ್ತು ಬೆಲೆಯ ಕರಿತು ಸಧ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.ಈ ಉತ್ಪನ್ನದ ಕುರಿತು ನಿಮ್ಮ ಅನಿಸಿಕೆಯೇನು... ಕಮೆಂಟ್ಸ್ ವಿಭಾಗದಲ್ಲಿ ತಿಳಿಸಲು ಮರೆಯದಿರಿ!


Click it and Unblock the Notifications








