14,990 ರೂ.ಗೆ 10.1 ಇಂಚಿನ ಹುವಾವೇ ಟ್ಯಾಬ್ಲೆಟ್!..ಇಂದಿನಿಂದಲೇ ಸೇಲ್!

|

ಈ ವರ್ಷದ ಆರಂಭದಲ್ಲಿ ಎಂಡಬ್ಲ್ಯೂಸಿಯಲ್ಲಿ ಬಿಡುಗಡೆಯಾಗಿದ್ದ ಹುವಾವೇ ಕಂಪೆನಿ ಬಜೆಟ್ ಟ್ಯಾಬ್ಲೆಟ್ 'ಮೀಡಿಯಾಪ್ಯಾಡ್ ಟಿ 5' ಭಾರತಕ್ಕೆ ಕಾಲಿಟ್ಟಿದೆ. ಚೀನಾದ ಕಂಪನಿ ಹುವಾವೇ ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಟ್ಯಾಬ್ಲೆಟ್ ಇದಾಗಿದ್ದು, ದೇಶದಲ್ಲಿ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ದಿಗ್ಗಜನಾಗಿ ಮೆರೆಯುತ್ತಿರುವ ಸ್ಯಾಮ್‌ಸಂಗ್‌ಗೆ ಸೆಡ್ಡುಹೊಡೆಯಲು ಸಜ್ಜಾಗಿದೆ.

14,990 ರೂ.ಗೆ 10.1 ಇಂಚಿನ ಹುವಾವೇ ಟ್ಯಾಬ್ಲೆಟ್!..ಇಂದಿನಿಂದಲೇ ಸೇಲ್!

ಹೌದು, ದೇಶದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಟ್ಯಾಬ್ಲೆಟ್ ಅನ್ನು ಪರಿಚಯಿಸುವಲ್ಲಿ ಹುವಾವೇ ಯಶಸ್ವಿಯಾಗಿದೆ. ಅದರ ಫಲವಾಗಿ ಹುವಾವೇ ಕಂಪೆನಿಯ 'ಮೀಡಿಯಾಪ್ಯಾಡ್ ಟಿ 5' ಟ್ಯಾಬ್ಲೆಟ್ ಭಾರತದಲ್ಲಿ ಕೇವಲ 14,990 ರೂ. ಗಳಿಂದ ಪ್ರಾರಂಭವಾಗಿರುವುದು ಆಶ್ಚರ್ಯವಾಗಿದೆ. ಮತ್ತು ಇಂದಿನಿಂದಲೇ ಅಮೆಜಾನಿನಲ್ಲಿ ಮಾರಾಟಕ್ಕೆ ಬಂದಿದೆ.

ಇನ್ನು ಟ್ಯಾಬ್ಲೆಟ್ ಪರಿಚಯಾತ್ಮಕ ಪ್ರಸ್ತಾಪದ ಭಾಗವಾಗಿ, ಹುವಾವೇ ತನ್ನ 'ಮೀಡಿಯಾಪ್ಯಾಡ್ ಟಿ 5' ಟ್ಯಾಬ್ಲೆಟ್ ಜೊತೆಗೆ 2,998 ರೂ. ಬೆಲೆಬಾಳುವ ಉಚಿತ ಫ್ಲಿಪ್ ಕವರ್ ಮತ್ತು ಇಯರ್ ಫೋನ್‌ಗಳನ್ನು ಸಹ ನೀಡುತ್ತದೆ. ಹಾಗಾದರೆ, ಭಾರತದಲ್ಲಿ ಹುವಾವೇ ಬಿಡುಗಡೆ ಮಾಡಿರುವ ಮೊಟ್ಟ ಮೊದಲ ಬಜೆಟ್ ಬೆಲೆಯ ಟ್ಯಾಬ್ಲೆಟ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ಮೀಡಿಯಾಪ್ಯಾಡ್ ಟಿ 5?

ಹೇಗಿದೆ ಮೀಡಿಯಾಪ್ಯಾಡ್ ಟಿ 5?

ಬಜೆಟ್ ಬೆಲೆಯಲ್ಲಿ ಬಿಡುಗಡೆಯಾದರೂ ಸಹ ಮೀಡಿಯಾಪ್ಯಾಡ್ ಟಿ 5 ಟ್ಯಾಬ್ಲೆಟ್‌ನಲ್ಲಿ ಎಫ್‌ಹೆಚ್‌ಡಿ ಪ್ರದರ್ಶನವನ್ನು ತರಲಾಗಿದೆ. ತೆಳುವಾದ ಮತ್ತು ಹಗುರವಾದ ದೇಹವನ್ನು ಹೊಂದಿರುವ ಈ ಟ್ಯಾಬ್ಲೆಟ್, 16:10 ಆಕಾರ ಅನುಪಾತದೊಂದಿಗೆ 10.1-ಇಂಚಿನ ಎಫ್‌ಹೆಚ್‌ಡಿ (1920 x 1200 ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದೆ. ಮತ್ತು ಪ್ರೀಮಿಯಂ ಲುಕ್ ಪಡೆದಿರುವುದನ್ನು ಸಹ ನೋಡಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೀಡಿಯಾಪ್ಯಾಡ್ ಟಿ 5 ಟ್ಯಾಬ್ಲೆಟ್‌ನಲ್ಲಿ ಆಕ್ಟಾ ಕೋರ್ ಹೈಸಿಲಿಕಾನ್ ಕಿರಿನ್ 659 SoC ಪ್ರೊಸೆಸರ್ ಅನ್ನು ತರಲಾಗಿದೆ. ಕಂಪನಿಯ ಇಎಂಯುಐ 8.0 ಜೊತೆಗೆ ಆಂಡ್ರಾಯ್ಡ್ ಓರಿಯೊ 8.0 ನಲ್ಲಿ ಕಾರ್ಯನಿರ್ವಹಣೆ ನೀಡುವ ಈ ಟ್ಯಾಬ್ಲೆಟ್, 2ಜಿಬಿ RAM ಮತ್ತು 16 ಜಿಬಿ ಸ್ಟೋರೇಜ್ ಮತ್ತು 3 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್‌ನ ಎರಡು ಕಾನ್ಫಿಗರೇಶನಿನಲ್ಲಿ ಬಿಡುಗಡೆಯಾಗಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಮೀಡಿಯಾಪ್ಯಾಡ್ ಟಿ 5 ಟ್ಯಾಬ್ಲೆಟ್‌ ಎಫ್ / 2.4 ಲೆನ್ಸ್ ಹೊಂದಿರುವ 5 ಎಂಪಿ ಆಟೋ-ಫೋಕಸ್ ರಿಯರ್ ಕ್ಯಾಮೆರಾ ಮತ್ತು ಎಫ್ / 2.4 ಲೆನ್ಸ್ ಹೊಂದಿರುವ 2 ಎಂಪಿ ಫಿಕ್ಸ್ಡ್-ಫೋಕಸ್ ಸೆಲ್ಫಿ ಶೂಟರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವಿಷಯದಲ್ಲಿ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳೀಗಿಂತಲೂ ಈ ಟ್ಯಾಬ್ಲೆಟ್ ಹಿಂದುಳಿದಿದೆ ಎಂದು ಹೇಳಬಹುದು.

ಇತರೆ ಫೀಚರ್ಸ್?

ಇತರೆ ಫೀಚರ್ಸ್?

ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು 5,100 mAh ಬ್ಯಾಟರಿ ಹೊಂದಿರುವುದು ಮೀಡಿಯಾಪ್ಯಾಡ್ ಟಿ 5 ಟ್ಯಾಬ್ಲೆಟ್‌ನ ಹೆಗ್ಗಳಿಕೆ ಎಂದು ಹೇಳಬಹುದು. 1920 x 1200 ಪಿಕ್ಸೆಲ್‌ಗಳ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಆಕರ್ಷಕ, ಇನ್ನು ನೀವು ವೈ-ಫೈ 802.11 ಎಸಿ, 4 ಜಿ ಎಲ್ ಟಿಇ ಬೆಂಬಲ, ಜಿಪಿಎಸ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ಅನ್ನು ಟ್ಯಾಬ್ಲೆಟ್‌ನಲ್ಲಿ ಪಡೆಯುತ್ತೀರಿ.

ಬೆಲೆಗಳು ಎಷ್ಟು?

ಬೆಲೆಗಳು ಎಷ್ಟು?

ಹುವಾವೇ ಮೀಡಿಯಾಪ್ಯಾಡ್ ಟಿ 5 ರೂ 14,990 ಬೆಲೆಯಲ್ಲಿ ಪ್ರಾರಂಭವಾಗುತ್ತದೆ, ಇದು ಬೇಸ್ ರೂಪಾಂತಕ್ಕಾಗಿದ್ದು, 2 ಜಿಬಿ ರ್ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಹೊಂದಿದೆ. ಇನ್ನು 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಕಾನ್ಫಿಗರೇಶನ್ ಟ್ಯಾಬ್ಲೆಟ್ 16,990 ರೂ.ಗಳಿಗೆ ಖರೀದಿಗೆ ಲಭ್ಯವಿದೆ. ಪ್ರಸ್ತುತ ಕಪ್ಪು ಬಣ್ಣದಲ್ಲಿ ಮಾತ್ರ ಟ್ಯಾಬ್ಲೆಟ್ ಅನ್ನು ಖರೀದಿಗೆ ಪಟ್ಟಿಮಾಡಲಾಗಿದೆ.

Best Mobiles in India

English summary
Huawei's not going to let Samsung have all the fun. The Chinese company just launched its first tablet in India — the MediaPad T5. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X