ಹುವಾಯಿ ಕಂಪನಿಯಿಂದ 'ಸ್ಮಾರ್ಟ್‌ವಾಚ್'‌ ಮತ್ತು 'ಸ್ಮಾರ್ಟ್‌ ಬ್ಯಾಂಡ್‌' ಲಾಂಚ್‌.!!

|

ಸ್ಮಾರ್ಟ್‌ಫೋನ್‌ಗಳಲ್ಲಿ ಸದಾ ಹೊಸತನದ ಫೀಚರ್ಸ್‌ಗಳನ್ನು ಅಳವಡಿಸಿಕೊಂಡು ಬಂದಿರುವ 'ಹುವಾಯಿ' ಸ್ಮಾರ್ಟ್‌ಫೋನ್‌ ಕಂಪನಿಯು ಇದೀಗ 'ಸ್ಮಾರ್ಟ್‌ವಾಚ್' ಉತ್ಪನ್ನದತ್ತ ಗಮನ ನೀಡಿದೆ. ಈಗಾಗಲೇ ಕಂಪನಿಯು ಸದ್ದಿಲ್ಲದೆ ಸ್ಮಾರ್ಟ್‌ವಾಚ್‌ ಮತ್ತು ಸ್ಪೋರ್ಟ್ಸ್ ಬ್ಯಾಂಡ್‌ ಉತ್ಪನ್ನಗಳನ್ನು ತಯಾರಿಸಿದ್ದು, ಮಾರುಕಟ್ಟೆಗೆ ಲಾಂಚ್‌ ಕೂಡಾ ಮಾಡಿದೆ. ಆದರೆ ಇನ್ನೇನು ಗ್ರಾಹಕರಿಗೆ ಕೈ ಸೇರುವುದಷ್ಟೇ ಬಾಕಿ ಇದೆ.

ಹುವಾಯಿ ಕಂಪನಿಯಿಂದ 'ಸ್ಮಾರ್ಟ್‌ವಾಚ್'‌ ಮತ್ತು 'ಸ್ಮಾರ್ಟ್‌ ಬ್ಯಾಂಡ್‌' ಲಾಂಚ್‌.!!

ಹೌದು, ಹುವಾಯಿ ತನ್ನ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದೇ ಮಾರ್ಚ್ 19 ರಿಂದ ಪ್ರಮುಖ ಇ ಕಾಮರ್ಸ್‌ ಜಾಲತಾಣ ಅಮೆಜಾನ್‌ನಲ್ಲಿ ಸೇಲ್ ಆರಂಭಿಸಲಿದೆ. GT ಕ್ಲಾಸಿಕ್‌, ಬ್ಯಾಂಡ್‌ 3e ಮತ್ತು ಬ್ಯಾಂಡ್‌ 3 ಪ್ರೋ ಎಂಬ ಮೂರು ಮಾದರಿಯಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಲಿದ್ದು, ಭರ್ಜರಿ ಸೇಲ್‌ ಆಗುವ ಸೂಚನೆಗಳನ್ನು ನೀಡಿವೆ.

ಹುವಾಯಿ ಕಂಪನಿಯಿಂದ 'ಸ್ಮಾರ್ಟ್‌ವಾಚ್'‌ ಮತ್ತು 'ಸ್ಮಾರ್ಟ್‌ ಬ್ಯಾಂಡ್‌' ಲಾಂಚ್‌.!!

ಕೈಕೆಟಕುವ ಬೆಲೆಯಲ್ಲಿ ದೊರೆಯಲಿರುವ ಈ ಸ್ಮಾರ್ಟ್‌ವಾಚ್‌ಗಳು ಅತ್ಯುತ್ತಮ RAM ಸಾಮರ್ಥ್ಯವನ್ನು ಹೊಂದಿರಲಿವೆ. ಇದರೊಂದಿಗೆ ಫಿಟ್‌ನೆಸ್‌ ಕುರಿತಾಗಿಯು ಇವು ಕೆಲಸಮಾಡಲಿದೆ. ಹೃದಯದ ಬಡಿತ, ಸೈಕ್ಲಿಂಗ್, ಏರೋಬಿಕ್‌ ಮತ್ತು ವಾಕಿಂಗ್‌ ಹೆಜ್ಜೆಗಳ ಮೋಡ್‌ ಆಯ್ಕೆಗಳನ್ನು ಹೊಂದಿವೆ. ಹಾಗಾದರೇ ಹುವಾಯಿ ಸ್ಮಾರ್ಟ್‌ವಾಚ್‌ ಉತ್ಪನ್ನಗಳು ಹೊಂದಿರುವ ಇತರೆ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹುವಾಯಿ ಸ್ಮಾರ್ಟ್‌ವಾಚ್‌ GT

ಹುವಾಯಿ ಸ್ಮಾರ್ಟ್‌ವಾಚ್‌ GT

ಹುವಾಯಿ ವಾಚ್‌ 454x454 ಪಿಕ್ಸಲ್ ಸಾಮರ್ಥ್ಯದೊಂದಿಗೆ 1.39 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಪ್ರತಿ ಇಂಚಿನ ಪಿಕ್ಸಲ್ ಅನುಪಾತವು 326ppi ಆಗಿದೆ. 16GB RAM ಮತ್ತು 128MB ROM ಸಾಮರ್ಥವನ್ನು ಹೊಂದಿದ್ದು, ಲೈಟ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಸುಮಾರು 14 ದಿನಗಳ ಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ನೀಡಲಾಗಿದೆ. ರನ್ನಿಂಗ್, ಔಟ್‌ಡೋರ್‌ ವಾಕಿಂಗ್, ಸ್ಟೆಪ್‌ ಕೌಂಟ್‌, ಸೈಕಲಿಂಗ್ ಮೋಡ್‌ಗಳನ್ನು ಹೊಂದಿದೆ. ಇದರೊಂದಿಗೆ ಟೈಮ್‌, ಡಿಸ್ಟ್‌ನ್ಸ್, ಹಾರ್ಟ್‌ರೇಟ್‌ ಚಟುವಟಿಕೆಗಳನ್ನು ಟ್ರಾಕ್‌ ಮಾಡುತ್ತದೆ. ಇದರ ಆರಂಭಿಕ ಬೆಲೆಯು 15,990ರೂ.ಗಳು ಆಗಿರಲಿದೆ.

ಹುವಾಯಿ ಬ್ಯಾಂಡ್‌ 3 ಪ್ರೋ

ಹುವಾಯಿ ಬ್ಯಾಂಡ್‌ 3 ಪ್ರೋ

ಹುವಾಯಿ ಕಂಪನಿಯ ಬ್ಯಾಂಡ್‌ 3 ಪ್ರೋ ಉತ್ಪನ್ನವು ಸ್ಮಾರ್ಟ್‌ ಫಿಟ್‌ನೆಸ್‌ ಬ್ಯಾಂಡ್‌ ಆಗಿದ್ದು, 120x240 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 0.95 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. AMOLED ಡಿಸ್‌ಪ್ಲೇ ಆಗಿದ್ದು, 2.5D ಕರ್ವ್‌ ಗ್ಲಾಸ್‌ ರಕ್ಷಣೆಯನ್ನು ಪಡೆದಿದೆ. ಮೆಟಲ್‌ ಫ್ರೇಮ್‌ ಒದಗಿಸಲಾಗಿದ್ದು, ಸಿಲಿಕಾನ್ ಸ್ಟ್ರಿಪ್‌ ಇದೆ. TruSleep 2.0 ಇದು ಸ್ಲೀಪ್‌ ಟ್ರಾಕಿಂಗ್ ಮಾಡುತ್ತದೆ ಮತ್ತು ಸೆನ್ಸಾರ್‌ ಸಹಾಯದಿಂದ ಹೃದಯ ಬಡಿತದ ಟ್ರಾಕಿಂಗ್ ಅನ್ನು ಸಹ ಮಾಡಲಿದೆ. ಬ್ಲೂಟೂತ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಬೆಲೆಯು 4,699ರೂ.ಗಳು ಆಗಿರಲಿದೆ.

ಹುವಾಯಿ ಬ್ಯಾಂಡ್‌  3e

ಹುವಾಯಿ ಬ್ಯಾಂಡ್‌ 3e

ಇದೊಂದು ಸ್ಪೋರ್ಟ್ಸ್ ಬ್ರಾಸ್‌ಲೈಟ್‌ ಮಾದರಿಯ ರನ್ನಿಂಗ್ ಟ್ರಾಕರ್‌ ಆಗಿದ್ದು, ಈ ಮೂಲಕ ಕ್ರೀಡಾಪಟುಗಳನ್ನು ಸೆಳೆಯಲು ಸಿದ್ಧವಾಗಿದೆ. ಫುಟ್‌ವೇರ್‌ ಮೋಡ್‌ ಆಯ್ಕೆ ಇದ್ದು, ಇದು ರನ್ನಿಂಗ್‌ನ ನಿಖರ ಮಾಹಿತಿಯನ್ನು ಒದಗಿಸುತ್ತದೆ. 50ಮೀ. ನಷ್ಟು ವಾಟರ್‌ ರೆಸಿಸ್ಟನ್ಸ್‌ ಅನ್ನು ಹೊಂದಿದ್ದು, ಈ ಸಾಧನದಲ್ಲಿ ಆರು ಆಕ್ಸಿಸ್ ಗೈರೋಸ್ಕೋಪ್‌ ಸೆನ್ಸಾರ್‌ ಅಳವಡಿಸಿದ್ದು, ಇದರ ನೆರವಿನಿಂದ ರನ್ನಿಂಗ್ ಮಾಹಿತಿಯನ್ನು ನೀಡುತ್ತದೆ. ಪಿಂಕ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯಲಿದ್ದು, ಇದರ ಬೆಲೆಯು 1699ರೂ.ಗಳು ಆಗಿರಲಿದೆ.

Best Mobiles in India

English summary
will go on sale in the country through Amazon.in. starting March 19.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X