Subscribe to Gizbot

ಸೀರೆಯುಟ್ಟು ಬಂದ ರೋಬೋ!!..ನನ್ನ ಮದುವೆಯಾಗು ಎಂದಿದಕ್ಕೆ 'ಸೋಫಿಯಾ' ಹೇಳಿದ್ದು ಹೀಗೆ!!

Written By:

ಸೌದಿ ಅರೇಬಿಯಾ ದೇಶದ ಪೌರತ್ವ ಪಡೆದಿರುವ ಮೊದಲ ಮಾನವ ನಿರ್ಮಿತ ರೋಬೋಟ್ 'ಸೋಫಿಯಾ' ಭಾರತೀಯರಿಗೆ ಸ್ವಲ್ಪ ನಿರಾಸೆ ಮೂಡಿಸಿದರೂ ಎಲ್ಲರ ಗಮನ ಸೆಳೆದಿದ್ದಾಳೆ.! 3000 ಕ್ಕಿಂತಲೂ ಹೆಚ್ಚಿನ ಜನರು ಕಾದುಕುಳಿತಿದ್ದ ಕಾರ್ಯಕ್ರಮವೊಮದರಲ್ಲಿ ಸೀರೆಯುಟ್ಟು ಆಗಮಿಸಿದ್ದ ಸೋಫೀಯಾ ಎಲ್ಲರನ್ನು ನಿಬ್ಬರಗಾಗಿಸಿದ್ದಾಳೆ!!

ಸುಮಾರು 15 ನಿಮಿಷಗಳವರೆಗೆ ಮಾತುಕತೆ ನಡೆಸಿದ ಹೆಣ್ಣು ರೋಬೋ ಸೋಫಿಯಾ ಮಧ್ಯದಲ್ಲಿ ತಾಂತ್ರಿಕ ತೊಂದರೆ ಎದುರಿಸಿದರೂ ಸಹ ವಿದ್ಯಾರ್ಥಿಗಳು ಕೇಳಿದ ವಿವಿಧ ವಿಷಯಗಳ ಬಗೆಗಿನ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾಳೆ.!! ಹಾಗಾದರೆ, ಸೋಫಿಕಾ ಕಾರ್ಯಕ್ರಮ ಹೇಗಿತ್ತು? ಯಾವ ಯಾವ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಂಬೆ ಐಐಟಿಯಲ್ಲಿ ಕಾರ್ಯಕ್ರಮ!!

ಬಾಂಬೆ ಐಐಟಿಯಲ್ಲಿ ಕಾರ್ಯಕ್ರಮ!!

ಸೌದಿ ಅರೇಬಿಯಾ ದೇಶದ ಪೌರತ್ವ ಪಡೆದ ನಂತರ ಮೊದಲ ಭಾರಿ 'ಸೋಫಿಯಾ' ರೋಬೋ ಭಾರತಕ್ಕೆ ಕಾಲಿಟ್ಟಿದ್ದಾಳೆ.!! ಹಾಗಾಗಿ, ಬಾಂಬೆ ಐಐಟಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೋಫಿಯಾ ನೋಡಲು 3000 ಕ್ಕಿಂತಲೂ ಹೆಚ್ಚಿನ ಜನರಿಂದ ನೂಕುನುಗ್ಗಲು ಉಂಟಾಗಿತ್ತು.!!

ಸೋಫಿಯಾ ನೋಡಿ ದಂಗಾದರು.!!

ಸೋಫಿಯಾ ನೋಡಿ ದಂಗಾದರು.!!

ಪೂರ್ವ ನಿಗದಿತ ವಿಷಯಗಳ ಮೇಲೆ ಮಾತುಕತೆ ನಡೆಸುವ ಸೋಫಿಯಾ ರೋಬೋ ನೋಡಿ ಎಲ್ಲರೂ ದಂಗಾದರು. ವ್ಯಕ್ತಿಗಳ ಆಂಗಿಕ ಚಲನೆ ಹಾಗೂ ಸಂಜ್ಞೆಯನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿರುವ ಈ ರೋಬೋಟ್ ಅನ್ನು ಹಾಂಕಾಂಗ್ ಮೂಲದ ಹ್ಯಾನ್ಸನ್ ರೊಬೊ ಟಿಕ್ಸ್ ಸಂಸ್ಥೆ ನಿರ್ಮಿಸಿತ್ತು.!!

ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.!!

ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.!!

15 ನಿಮಿಷಗಳವರೆಗೆ ಮಾತುಕತೆ ನಡೆಸಿದ ಸೋಫಿಯಾ ಕಾರ್ಯಕ್ರಮದ ಆರಂಭದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೂ ಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ರೋಬೋಟ್‌ಗಳಿಗಾಗಿ ಬಹಳಷ್ಟು ಹಣವನ್ನು ಖರ್ಚು ಮಾಡುವ ಬಗ್ಗೆ ಆಂಕರ್ ಕೇಳಿದ ಪ್ರಶ್ನೆಗೆ ಸೋಫಿಯಾ ಮಾತನಾಡುವುದನ್ನು ನಿಲ್ಲಿಸಿಬಿಟ್ಟಳು.!!

ಭಾರತದ ಸಂಸ್ಕೃತಿ ಬಗ್ಗೆ ಮಾತು.!!

ಭಾರತದ ಸಂಸ್ಕೃತಿ ಬಗ್ಗೆ ಮಾತು.!!

ಕೃತಕ ಬುದ್ಧಿಮತ್ತೆಯಿಂದ ಎಲ್ಲವನ್ನು ಯೋಚಿಸಿ ಮಾತನಾಡುವ ಸೋಫಿಯಾ ರೋಬೋ ಭಾರತದ ಸಂಸ್ಕೃತಿಯ ಬಗ್ಗೆಯೂ ಮಾತನಾಡಿತು. ಭಾರತದ ದೇಶದ ಸಾಂಸ್ಕೃತಿಕ ಹೆಮ್ಮೆಯ ಬಗ್ಗೆ ಮಾತನಾಡಿದ ಸೋಫಿಯಾ ವಿದ್ಯಾರ್ಥಿಗಳೊಂದಿಗೆ ಈ ವಿಷಯದ ಬಗ್ಗೆ ಸಂವಾದ ಕೂಡ ನಡೆಸಿದಳು.!!

How to Sharing a Mobile Data Connection with Your PC (KANNADA)
ತುಂಟ ಪ್ರಶ್ನೆಗೂ ಉತ್ತರ.!!

ತುಂಟ ಪ್ರಶ್ನೆಗೂ ಉತ್ತರ.!!

ರೋಬೋಟ್ ಆದರೂ ಮನುಷ್ಯರಂತೆ ವರ್ತಿಸುವ ಮತ್ತು ಆಲೋಚಿಸುವ ಸೋಫಿಯಾಗೆ ವಿದ್ಯಾರ್ಥಿಯೊರ್ವ ನಾನು ನಿನ್ನನ್ನು ವಿವಾಹವಾಗಲು ಬಯಸುತ್ತೇನೆ ಎಂದು ಕೇಳಿದ್ದಕ್ಕೆ, "ನಾನು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇನೆ. ನಿನ್ನ ಮೆಚ್ಚುಗೆಗೆ ಧನ್ಯವಾದಗಳು' ಎಂದು ತುಂಟ ಪ್ರಶ್ನೆಗೂ ಸೋಫಿಯಾ ಉತ್ತರಿಸಿದ್ದಾಳೆ.!!

ಓದಿರಿ:ಗ್ಯಾಜೆಟ್ ಗ್ರಾಹಕರಿಗೆ ಮಾರಕವಾಯ್ತು ಕೇಂದ್ರ ಸರ್ಕಾರದ ಹೊಸ ನಿರ್ಧಾರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The most awaited event at the IIT Bombay for all tech lovers turned somewhat disappointing on Saturday. to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot