ಇಂಟೆಲ್ ಪರಿಚಯಿಸಿರುವ ಹಾರುವ ಕಾರು ಈ ವೊಲೊಕಾಪ್ಟರ್!!..ವಿಶೇಷತೆಗಳು ಏನೇನು?!

|

ವಿಮಾನಗಳು, ಹೆಲಿಕಾಪ್ಟರ್‌ಗಳೆಲ್ಲವೂ ಆಕಾಶದಲ್ಲಿ ಹಾರಾಡುತ್ತಿದ್ದರೂ ಸಹ ಹಾರುವ ಕಾರಿನ ಬಗೆಗಿನ ಕುತೋಹಲ ತಂತ್ರಜ್ಞಾನಿಗಳಿಗಿನ್ನು ಕಡಿಮೆಯಾಗಿಲ್ಲ.! ತಂತ್ರಜ್ಞಾನ ಪ್ರಪಂಚದಲ್ಲಿ ಏನೇ ಅವಿಷ್ಕಾರ ನಡೆದರೂ ಅದಕ್ಕೆ ಕೊನೆ ಎಂಬುದಿಲ್ಲ ಎನ್ನುವಹಾಗೆ ಇದೀಗ ಇಂಟೆಲ್ ಕಂಪೆನಿ ವೊಲೊಕಾಪ್ಟರ್ ಜೊತೆ ಸೇರಿ ಹಾರುವ ಕಾರನ್ನು ತಯಾರಿಸಿದೆ.!!

ಹೌದು, ಹಾರುವ ಟ್ಯಾಕ್ಸಿಗಳು ಭವಿಷ್ಯದಲ್ಲಿ ಸಾಂಪ್ರದಾಯಿಕ ಸಾರಿಗೆ ವಿಧಾನವಾಗಲಿವೆ ಎಂದು ಮಹತ್ವಾಕಾಂಕ್ಷಿ ತಂತ್ರಜ್ಞಾನದ ದೈತ್ಯರು ನಡೆಸುತ್ತಿರುವ ಸಂಶೋಧನೆಗಳಿಗೆ ಇಂಟೆಲ್ ವೊಲೊಕಾಪ್ಟರ್ ಜೊತೆ ಸೇರಿತನ್ನ ಮೊದಲ ಹಾರುವ ಕಾರನ್ನು ಪರಿಚಯಿಸಿದೆ.! 'ವೊಲೊಕಾಪ್ಟರ್' ಎಂಬ ಹಾರುವ ಕಾರನ್ನು ಇಂಟೆಲ್ ವಿಶ್ವಕ್ಕೆ ಪರಿಚಯಿಸಿದೆ.!!

ಇಂಟೆಲ್ ಪರಿಚಯಿಸಿರುವ ಹಾರುವ ಕಾರು ಈ ವೊಲೊಕಾಪ್ಟರ್!!..ವಿಶೇಷತೆಗಳು ಏನೇನು?!

ಇಂಟೆಲ್ ಸಿಇಒ ಬ್ರಿಯಾನ್ ಕ್ರಾಝಿನಿಚ್ ಅವರು ಕನ್ಸೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಹಾರುವ ಕಾರು ವೊಲೊಕಾಪ್ಟರ್ ಅನ್ನು ಪ್ರದರ್ಶಿಸಿದ್ದಾರೆ. ಹಾಗಾದರೆ, ಹಾರುವ ಕಾರು ವೊಲೊಕಾಪ್ಟರ್ ವಿಶೇಷತೆಗಳೆನು? ವೊಲೊಕಾಪ್ಟರ್ ಸಾಮರ್ಥ್ಯವೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹೇಗಿದೆ ವೊಲೊಕಾಪ್ಟರ್?

ಹೇಗಿದೆ ವೊಲೊಕಾಪ್ಟರ್?

ಇಂಟೆಲ್ ತಯಾರಿಸಿರುವ ಮೊದಲ ಹಾರುವ ಕಾರು ಒಂದು ಬೃಹತ್ ಡ್ರೋಣ್‌ನಂತೆ ಕಾಣುತ್ತಿದೆ ಸಣ್ಣ ರಿಮೋಟ್-ನಿಯಂತ್ರಿತ ಈ ಕಾರು ಎರಡು ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಸ್ವತಂತ್ರವಾಗಿ ಅಥವಾ ದೂರದಿಂದ ನಿಯಂತ್ರಿಸಬಹುದಾದ ಆಯ್ಕೆ ಕೂಡ ಇದೆ.!!

450 ಕೆಜಿ ತೂಗುತ್ತದೆ ಕಾರು!!

450 ಕೆಜಿ ತೂಗುತ್ತದೆ ಕಾರು!!

ವೊಲೊಕಾಪ್ಟರ್ ಕಂಪೆನಿಯಿಂದ ಬಂದ ಇತ್ತೀಚಿನ ವೋಲೊಕಾಪ್ಟರ್ 2 ಎಕ್ಸ್ ಹಾರುವ ಕಾರು 450 ಕೆಜಿ ತೂಗುತ್ತದೆ ಮತ್ತು ಈ ಹಾರುವ ಕಾರು 18 ರೋಟರ್‌ಗಳ ಸಹಾಯದಿಂದ ಹಾರಾಡಲಿದೆ ಎಂದು ಇಂಟೆಲ್ ತಿಳಿಸಿದೆ. ಹಾಗಾಗಿ, ಇದನ್ನು ದೊಡ್ಡ ಡ್ರೋಣ್ ಎಂದು ಹೇಳಬಹುದು.!!

ಸಾಕಷ್ಟು ಸುರಕ್ಷತೆ

ಸಾಕಷ್ಟು ಸುರಕ್ಷತೆ

ವೊಲೊಕಾಪ್ಟರ್ ಜೊತೆಗೆ ಪಾಲುದಾರನಾಗಿ ಇಂಟೆಲ್ ಹಾರುವ ವೊಲೊಕಾಪ್ಟರ್‌ನಲ್ಲಿ ಸಾಕಷ್ಟು ಸುರಕ್ಷತೆಯನ್ನು ಒದಗಿಸಿದೆ.! ಯಾವುದೇ ಕಾರಣಕ್ಕೂ ಸಣ್ಣ ತಂತ್ರಜ್ಞಾನ ಲೋಪದೋಷಗಳು ಕಾಣದಂತೆ ವೊಲೊಕಾಪ್ಟರ್ ರಚಿಸಲಾಗಿದ್ದು, ಅಪಾಯದ ಸಾಧ್ಯತೆ ಇಲ್ಲ ಎಂದು ಇಂಟೆಲ್ ಹೇಳಿದೆ.!!

ಇದು ಸೂಪರ್ ಕಂಪ್ಯೂಟರ್!!

ಇದು ಸೂಪರ್ ಕಂಪ್ಯೂಟರ್!!

ಒಂದು ಆಹ್ಲಾದಕರ ಮತ್ತು ಸುರಕ್ಷಿತ ಸವಾರಿ ನೀಡುವ ವೋಲೊಕಾಪ್ಟರ್ ಒಂದು ಸೂಪರ್ ಕಂಪ್ಯೂಟರ್ ಎಂದು ವೋಲೊಕಾಪ್ಟರ್ ಕಂಪೆನಿಯ ಸಿಇಒ ಫ್ಲೋರಿಯನ್ ರಿಟರ್ ಹೇಳಿದ್ದಾರೆ. ವಾತಾವರಣಕ್ಕೆ ಅನುಗುಣವಾಗುವಂತೆ ನೋಡಿಕೊಳ್ಳುವ ಮೈಕ್ರೊಪ್ರೊಸೆಸರ್‌ಗಳನ್ನು ಈ ಹಾರುವ ಕಾರು ಹೊಂದಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ವೊಲೊಕಾಪ್ಟರ್ ಸಾಮರ್ಥ್ಯವೇನು?

ವೊಲೊಕಾಪ್ಟರ್ ಸಾಮರ್ಥ್ಯವೇನು?

ಎರಡು ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿರುವ ವೋಲೊಕಾಪ್ಟರ್ ಒಮ್ಮೆ ಚಾರ್ಜ್‌ ಮಾಡಿದರೆ 17 ಮೈಲುಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. 43mph ವೇಗದಲ್ಲಿ ಹಾರಬಲ್ಲ ಈ ವೋಲೋಕಾಪ್ಟರ್ ಇದೀಗ ಟೆಕ್ ಪ್ರಪಂಚದ ಕುತೋಹಲಗಳಲ್ಲಿ ಒಂದಾಗಿದೆ.!!

</a></strong><a class=4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!" title="4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!" loading="lazy" width="100" height="56" />4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!

Best Mobiles in India

English summary
Whether flying taxis ever become a conventional mode of transportation in coming future or not, ambitious tech giants will continue to showcase their prototypes to the world.to know more visit to kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X