1 ಲಕ್ಷದ ಐಫೋನ್ ಎಕ್ಸ್ ತಯಾರಿಸಲು ಆಗಿರುವ ಖರ್ಚು ಎಷ್ಟು?..ವೈರಲ್ ಸುದ್ದಿ!!

Written By:

ಆಪಲ್ ಕಂಪೆನಿ ಯಾವುದೇ ಹೊಸ ಐಫೋನ್ ಬಿಡುಗಡೆ ಮಾಡಿದರೂ ಆ ಮೊಬೈಲ್ ಬೆಲೆ ಗಗನದಲ್ಲಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಇತ್ತೀಚಿಗೆ ಬಿಡುಗಡೆಯಾದ ಐಫೋನ್ ಎಕ್ಸ್ ಬೆಲೆಯಂತೂ ಒಂದು ಲಕ್ಷ ರೂಪಾಯಿಗಳು.! ಆದರೂ ಸಹ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಪಲ್ ಫೋನ್‌ ಬೆಲೆ ಎಷ್ಟೇ ದುಬಾರಿಯಾದರೂ ಕೂಡ ಅವುಗಳನ್ನು ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.!!

ಆದರೆ, ಇಂದು ನಾವು ನಿಮಗೆ ಹೇಳುವ ಈ ಸುದ್ದಿ ಆಪಲ್ ಕಂಪೆನಿಯ ಐಫೋನ್‌ಗೆ ಅಷ್ಟೊಂದು ದುಡ್ಡು ಕೊಡಬೇಕೆ ಎಂದು ಅನಿಸಬಹುದು.! ಹೌದು, ಟೆಕ್‌ ವೆಬ್‌ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಬೆಲೆ ಎಷ್ಟಿರಬಹುದು ಎಂದು ಅಂದಾಜು ಮಾಡಿ ಹೇಳಿದ್ದು, ಆ ಸಂಸ್ಥೆ ಅಂದಾಜು ಮಾಡಿರುವ ಬೆಲೆ ಇದೀಗ ವೈರಲ್ ಆಗಿದೆ.! ಹಾಗಾದರೆ, ಐಫೋನ್ ಎಕ್ಸ್ ನಿಜವಾದ ಬೆಲೆ ಎಷ್ಟಿರಬಹುದು ಎಂಬ ಕುತೋಹಲ ನಿಮಗಿದೆಯೇ? ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ನಿಜವಾದ ಬೆಲೆ ಎಷ್ಟು?

ಐಫೋನ್ ನಿಜವಾದ ಬೆಲೆ ಎಷ್ಟು?

ಟೆಕ್‌ ವೆಬ್‌ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್‌‌ಗೆ ಬಳಕೆ ಮಾಡಿದ ಹಾರ್ಡ್‌ವೇರ್ ಭಾಗಗಳಿಗೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ಈ ಮಾಹಿತಿಯನ್ನು ಪ್ರಕಟಿಸಿದೆ. ವೆಬ್‌ಸೈಟ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಐಫೋನ್ ಎಕ್ಸ್‌ ತಯಾರಿಕೆಗೆ ಆಗಿರುವ ವೆಚ್ಚ ಕೇವಲ 23,200 ರೂ.ಗಳಂತೆ!! ಹಾಗಾದರೆ, ಈ ಫೋನ್ ಬೆಲೆ ಲೆಕ್ಕಹಾಕಿರುವುದು ಹೇಗೆ?

ಡಿಸ್‌ಪ್ಲೇಗೆ 65.50 ಡಾಲರ್!!

ಡಿಸ್‌ಪ್ಲೇಗೆ 65.50 ಡಾಲರ್!!

ಟೆಕ್‌ ವೆಬ್‌ಸೈಟ್ ನಮೂದಿಸಿರುವಂತೆ ಐಫೋನ್ ಎಕ್ಸ್ ನಲ್ಲಿ ಬಳಸಲಾದ 5.8 ಇಂಚಿನ ಎಡ್ಜ್- ಟು- ಎಡ್ಜ್ ಡಿಸ್‌ಪ್ಲೇಗೆ ಕೇವಲ 65.50 ಡಾಲರ್‌ಗಳಂತೆ.! ಅಂದರೆ ಭಾರತದ ರೂಪಾಯಿಗಳಲ್ಲಿ ಲೆಕ್ಕಹಾಕಿದರೆ ಕೇವಲ 4,300 ರೂಪಾಯಿಗಳು.!ಇನ್ನು ಐಫೋನ್ 8 ರಲ್ಲಿ ಬಳಕೆಯಾಗಿರುವ ಡಿಸ್‌ಪ್ಲೇಗೆ ಕೇವಲ 36 ಡಾಲರ್(2,300 ರೂ.) ಮಾತ್ರ ಎಂದು ವೆಬ್‌ಸೈಟ್ ತಿಳಿಸಿದೆ.!!

ಸ್ಟೈನ್‌ಲೆಸ್ ಸ್ಟೀಲ್ ದೇಹ!!

ಸ್ಟೈನ್‌ಲೆಸ್ ಸ್ಟೀಲ್ ದೇಹ!!

ಸುತ್ತಿಗೆಯಲ್ಲಿ ಹೊಡೆದರೂ ತಡೆದುಕೊಳ್ಳುವ ಶಕ್ತಿ ಹೊಂದಿರುವ ಐಫೋನ್ ಎಕ್ಸ್‌ನಲ್ಲಿ ಬಳಕೆಯಾಗಿರುವ ಸ್ಟೈನ್‌ಲೆಸ್ ಸ್ಟೀಲ್ ಚಾಸಿಗೆ ಕೇವಲ 36 ಡಾಲರ್( 2,300 ರೂ.)ಅಂತೆ!! ಹೌದು, ಆಲ್ಯೂಮಿನಿಯಂ ದೇಹ ನಿರ್ಮಾಣಕ್ಕೆ ಖರ್ಚು ಮಾಡುತ್ತಿದ್ದ ಎರಡಷ್ಟು ಹಣವನ್ನು ಆಪಲ್ ಎಕ್ಸ್ ಚಾಸಿಗೆ ಬಳಸಲಾಗಿದೆ.!!

ಅಮೊಲೆಡ್ ಟೆಕ್ನಾಲಜಿ

ಅಮೊಲೆಡ್ ಟೆಕ್ನಾಲಜಿ

ಐಫೋನ್ 8ರಲ್ಲಿ ಹಳೆಯ ಎಲ್‌ಸಿಡಿ ಟೆಕ್ನಾಲಜಿ ಬಳಕೆ ಆಗಿದ್ದರೆ ಐಫೋನ್ ಎಕ್ಸ್‌ನಲ್ಲಿ ಸೂಪರ್ ಅಮೊಲೆಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಆದರೆ, ಈ ಬೆಲೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳಾಗಿರಬಹುದು ಎಂದು ಟೆಕ್‌ ವೆಬ್‌ಸೈಟ್ ಲೆಕ್ಕಹಾಕಿದೆ.!!

ಪ್ರತಿಕ್ರಿಯೆ ನೀಡಿಲ್ಲ.!!

ಪ್ರತಿಕ್ರಿಯೆ ನೀಡಿಲ್ಲ.!!

ಇನ್ನು ಟೆಕ್‌ಸೈಟ್ ಲೆಕ್ಕಹಾಕಿದಂತೆ ಈ ಐಫೋನ್ ಎಕ್ಸ್ ವರದಿಗೆ ಸಂಬಂಧಿಸಿದಂತೆ ಆಪಲ್ ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.! ಆದರೆ, ಆಪಲ್ ಐಫೋನ್ ಎಕ್ಸ್‌ನಲ್ಲಿ ಬಳಸಿರುವ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಎಲ್ಲವೂ ಸೇರಿ ಈ ಪ್ರಸ್ತುತ ಬೆಲೆ ನಿಗದಿಯಾಗಿದೆ ಎಂಬುದು ಮಾತ್ರ ಸತ್ಯ.!!

ಓದಿರಿ:ಆಪಲ್ X ವಿನ್ಯಾಸದಲ್ಲಿ ಬರುತ್ತಿದೆ ಶಿಯೋಮಿಯ "ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Iphone X smartphone expenditures $357.50 (roughly Rs. 23,200) to make and sells for $999. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot