Subscribe to Gizbot

ಲೆನೊವೊ "ಯೋಗಾ 920 ಏಶಿಯನ್‌ ವೈಡ್ಸ್" ಅದ್ಬುತ ಲ್ಯಾಪ್‌ಟಾಪ್ ಮಾರುಕಟ್ಟೆಗೆ!!..ಬೆಲೆ?

Written By:

ಚೀನಾದ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿ ಲೆನೋವೊ "ಟು ಇನ್ ಒನ್ ಗ್ಲಾಸ್ ಕನ್ವರ್ಟೆಬಲ್" ಆಯ್ಕೆ ಹೊಂದಿರುವ ಹೈ ಎಂಡ್ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಿದೆ.! 8 ನೇ ತಲೆಮಾರಿನ ಜೆನ್ ಇಂಟೆಲ್ ಕ್ವಾಡ್-ಕೋರ್ U ಸೀರೀಸ್ ಪ್ರೊಸೆಸರ್‌ಗಳ ಸಂಯೋಜಿತ ನೂತನ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಲೆನೊವೊ

'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, 2 ಇನ್‌ 1 ಗ್ಲಾಸ್ ಕನ್ವರ್ಟೆಬಲ್‌ನ ಈ ಡಿವೈಸ್ ಡಿಜಿಟಲ್‌ ಪೆನ್‌ ಜೊತೆಗೆ ಬರುತ್ತದೆ. ಹಾಗಾದರೆ, ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್ ಫೀಚರ್ಸ್ ಯಾವುವು? ಇತರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಅತ್ಯಂತ ತೆಳುವಾಗಿ ರೂಪುಗೊಂಡಿರುವ ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್ 4K ಟಚ್ಸ್ಕ್ರೀನ್ ಸ್ಕ್ರೀನ್ ಅನ್ನು ಹೊಂದಿದೆ. 1.37 ಕೆ.ಜಿ ತೂಕವನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಪ್ಲ್ಯಾಟಿನಮ್ ಬಣ್ಣದಲ್ಲಿ ಆಲ್-ಮೆಟಲ್ ಯುನಿಬಾಡಿ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!

ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್!!

ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್!!

8ನೇ ತಲೆಮಾರಿನ ಇಂಟೆಲ್‌ ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್‌ಗಳನ್ನು ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್‌ನಲ್ಲಿ ನೋಡಬಹುದಾಗಿದೆ. ಜೊತೆಗೆ ಏಕೀಕೃತ ಗ್ರಾಫಿಕ್ಸ್‌ ಮತ್ತು ದೋಹರಾ ಥಂಡರ್‌ಬೋಲ್ಟ್ ಯೂಎಸ್‌ಬಿ ಟೈಪ್‌ ಸಿ ಪೋರ್ಟ್ಸ್ ತಂತ್ರಜ್ಞಾನಗಳು ಲ್ಯಾಪ್‌ಟಾಪ್‌ ಹೆಚ್ಚುಗಾರಿಕೆಗೆ ಸಾಕ್ಷಿಯಾಗಿದೆ.!!

ಜೆಬಿಎಲ್ ಸ್ಪೀಕರ್ಸ್!!

ಜೆಬಿಎಲ್ ಸ್ಪೀಕರ್ಸ್!!

ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ತೆಳುವಾದ ಜೆಬಿಎಲ್ ಸ್ಪೀಕರ್ಸ್‌ಗಳೊಂದಿಗೆ ಹೊರಬಂದಿರುವ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಸೌಂಡ್ ಸಿಸ್ಟಮ್ ಅತ್ಯುತ್ತಮವಾಗಿದೆ. ಅತ್ಯುತ್ತಮ ಮ್ಯೂಸಿಕ್ ಆಲಿಸುವಿಕೆಯ ಜೊತೆಗೆ ವಾಯ್ಸ್‌ ಆಕ್ಟಿವೇಟೆಡ್ ಇಂಟೆಲಿಜೆಂಟ್‌ ಅಸಿಸ್ಟೆಂಟ್ ಕೊರ್ಟೊನಾ ಸಪೋರ್ಟ್ ಆಗಲಿದೆ.!!

ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ!!

ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ!!

ಅತ್ಯಂತ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಿದ್ದ ಲೆನೊವೊ ಇದೇ ಮೊದಲ ಬಾರಿ ಹೈ ಎಂಡ್ ಲ್ಯಾಪ್‌ಟಾಪ್ ವಿನ್ಯಾಸಕ್ಕೆ ಮನಸ್ಸು ಮಾಡಿದೆ. ಇದು ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ ಆಗಿದ್ದು, 2 ಇನ್‌ 1 ಗ್ಲಾಸ್ ಕನ್ವರ್ಟಿಬ್ ಈಡಿವೈಸ್‌ ಫಿಂಗರ್ಪ್ರಿಂಟ್ ರೀಡರ್ ಹಾಗೂ ಒಂದು ಡಿಜಿಟಲ್‌ ಪೆನ್‌ ಜೊತೆಗೆ ಬರುತ್ತದೆ.

ಅಸಿಸ್ಟೆಂಟ್ ಕೊರ್ಟೊನಾ!!

ಅಸಿಸ್ಟೆಂಟ್ ಕೊರ್ಟೊನಾ!!

ಫಾರ್‌ ಫೀಲ್ಡ್‌ ಟೆಕ್ನಾಲಜಿ ಹೊಂದಿರುವ ಈ ಲ್ಯಾಪ್‌ಟಾಪ್ ವಾಯ್ಸ್‌ ಆಕ್ಟಿವೇಟೆಡ್‌ ಇಂಟೆಲಿಜೆಂಟ್‌ ಅಸಿಸ್ಟೆಂಟ್‌ ಕೊರ್ಟೊನಾವನ್ನು ನಾಲ್ಕು ಮೀಟರ್‌ ದೂರದಿಂದಲೂ ಸಹ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಲ್ಯಾಪ್‌ಟಾಪ್‌ ಸ್ಟ್ಯಾಂಡ್‌ ಬೈ ಮೋಡ್‌ನಲ್ಲಿದ್ದರೂ ಸಹ ಈ ಕಾರ್ಯ ಸಾಧ್ಯವಾಗಲಿದೆ.!!

How to view all photos, pages, comments and posts you liked on Facebook (KANNADA)
ಲ್ಯಾಪ್‌ಟಾಪ್ ಬೆಲೆ ಎಷ್ಟು?

ಲ್ಯಾಪ್‌ಟಾಪ್ ಬೆಲೆ ಎಷ್ಟು?

2 ಎಕ್ಸ್‌ ಥಂಡರ್‌ವೋಲ್ಟ್ ಪೋರ್ಟ್ಸ್ ಹೊಂದಿರುವ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಹೆಚ್ಚು ಸ್ಪೀಡ್‌ ಡಾಟಾ ಟ್ರಾನ್ಸ್‌ಫರ್ ಮಾಡಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ವಿಶೇಷ ಫೀಚರ್‌ಗಳನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಬೆಲೆ 127,150 + GST ರೂಪಾಯಿಗಳಾಗಿವೆ.!!

ಓದಿರಿ:ತೆರಿಗೆ ಎಫೆಕ್ಟ್..ಆಪಲ್ ಐಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ!..ಇಲ್ಲಿದೆ ಫುಲ್ ಲೀಸ್ಟ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Lenovo has announced a limited version of their YOGA 920 2-in-1 in India. The Limited edition YOGA 920 comes with Vibes glass cover. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot