ಕಂಪ್ಯೂಟರ್ ಗೇಮಿಂಗ್ ಪ್ರಿಯರಿಗೆ ಅಲ್ಟ್ರಾವೈಡ್ ಮಾನಿಟರ್!..ಈಗಲೇ ಖರೀದಿಸಲು 5 ಕಾರಣಗಳಿವೆ!!

  ಅತ್ಯುತ್ತಮ ಕಂಪ್ಯೂಟರ್ ಗೇಮಿಂಗ್ ಅನುಭವ ಪಡೆಯುವ ಆಸೆ ನಿಮಗಿದೆಯೇ? ಹಾಗಾದರೆ ಕೂಡಲೇ ಎಲ್‌ಜಿ ಕಂಪೆನಿಯ ನೂತನ ಅಲ್ಟ್ರಾವೈಡ್ ಮಾನಿಟರ್ ಅನ್ನು ಖರೀದಿಸಿ.!! ಹೌದು, ಅತ್ಯುತ್ತಮ ಕಂಪ್ಯೂಟರ್ ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆ ಅನುಭವಕ್ಕಾಗಿಯೇ ಎಲ್‌ಜಿ ನೂತನ ಅಲ್ಟ್ರಾವೈಡ್ ಮಾನಿಟರ್ ಅನ್ನು ಪರಿಚಯಿಸಿದ್ದು, 21:9 ಆಸ್ಪೆಕ್ಟ್ ರೇಶ್ಯೂ ಹೊಂದಿರುವ ಈ ಮಾನಿಟರ್ ವಿಶ್ವದ ಕಣ್ಣುಕುಕ್ಕುತ್ತಿದೆ.!!

  ಸಾಮಾನ್ಯ 16:9 ಆಸ್ಪೆಕ್ಟ್ ರೇಶ್ಯೂ ಹೊಂದಿರುವ ಮಾನಿಟರ್‌ಗಳಿಗಿಂತ ಅಗಾದಪಟ್ಟು ತಂತ್ರಜ್ಞಾನ ಮತ್ತು ಸ್ಪೇಸ್ ಹೊತ್ತು ಹೊರಬಂದಿರುವ ಎಲ್‌ಜಿ ನೂತನ ಅಲ್ಟ್ರಾವೈಡ್ ಮಾನಿಟರ್ ಮೂಲಕ ಥಿಯೇಟರ್‌ನಲ್ಲಿ ಸ್ಕ್ರೀನ್‌ನಲ್ಲಿ ಗೇಮಿಂಗ್ ಅನುಭವ ಪಡೆಯಬಹುದಾಗಿದ್ದು, ಫ್ಯಾಂಟಸಿ ಇಷ್ಟಪಡುವ ಕಂಪ್ಯೂಟರ್ ಬಳಕೆದಾರರಿಗೆ ಇದು ಹೇಳಿ ಮಾಡಿಸಿದಂತಿದೆ.!! ಹಾಗಾದರೆ, ಎಲ್‌ಜಿ ಅಲ್ಟ್ರಾವೈಡ್ ಮಾನಿಟರ್‌ಗಳನ್ನು ಏಕೆ ಖರೀದಿಸಲೇಬೇಕು? ಮತ್ತು ಮಾನಿಟರ್ ಹೊಂದಿರುವ ಇನ್ನಿತರ ಫೀಚರ್ಸ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅಲ್ಟ್ರಾವೈಡ್ ಮಾನಿಟರ್ ಒಂದು ಥಿಯೇಟರ್‌ ಸ್ಕ್ರೀನ್!?

  ವರ್ಷದಿಂದ ವರ್ಷಕ್ಕೆ ಕಂಪ್ಯೂಟರ್‌ಗಳು ಬದಲಾಗುತ್ತಿದ್ದರು ಸಹ 16:9 ಆಸ್ಪೆಕ್ಟ್ ರೇಶ್ಯೂ ಮಾನಿಟರ್‌ಗಳು ಬದಲಾಗಲಿಲ್ಲ. ಆದರೆ, ಎಲ್‌ಜಿ ಕಂಪೆನಿ 16:9 ಆಸ್ಪೆಕ್ಟ್ ರೇಶ್ಯೂ ಮಾನಿಟರ್‌ ಬದಲಾಗಿ ಥಿಯೇಟರ್‌ ಸ್ಕ್ರೀನ್‌ನಂತೆ ಇರುವ 21:9 ಆಸ್ಪೆಕ್ಟ್ ರೇಶ್ಯೂ ಹೊಂದಿರುವ ಅಲ್ಟ್ರಾವೈಡ್ ಮಾನಿಟರ್ ಪರಿಚಯಿಸಿದ್ದು, ಕಂಪ್ಯೂಟರ್‌ ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.!! ವಿಶಾಲವಾದ ಪರದೆಯಲ್ಲಿ ಗ್ರಾಫಿಕ್ಸ್‌ನ ನೋಡುವ ಚೆಂದದ ಅನುಭವಕ್ಕೆ ಈ ಮಾನಿಟರ್ ಸಾಕ್ಷಿಯಾಗಲಿದೆ.!!

  ಅಲ್ಟ್ರಾವೈಡ್ ಮಾನಿಟರ್‌ನಲ್ಲಿ ಅಡಾಪ್ಟಿವ್ ಸಿಂಕ್ ಟೆಕ್ನಾಲಜಿ!!

  ಎಲ್‌ಜಿ ಕಂಪೆನಿಯ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್‌ಗಳು ಅಡಾಪ್ಟಿವ್ ಸಿಂಕ್ ಟೆಕ್ನಾಲಜಿಯನ್ನು ಹೊಂದಿದ್ದು ಗ್ರಾಫಿಕ್ಸ್ ಕಾರ್ಡ್ ಫ್ರೇಮ್ ರೇಟ್ ಮತ್ತು ಫ್ರೇಮ್ಗಳ ಸಂಖ್ಯೆಯನ್ನು ಸಿಂಕ್ರೊನೈಸ್ ಮಾಡುವ ಮೂಲಕ ಮಾನಿಟರ್ ರಿಫ್ರೆಶ್ ನಡುವೆ ಫ್ರೇಮ್ ವರ್ಗಾವಣೆ ದರವನ್ನು ಸಮತೋಲನಗೊಳಿಸುತ್ತದೆವೆ.!! ಗೇಮಿಂಗ್ ಅನುಭವವನ್ನು ಅಡ್ಡಿಪಡಿಸುವ ಅನಗತ್ಯ ಹೆಚ್ಚಿನ ಇನ್ಪುಟ್ ಲ್ಯಾಗ್ ಅನ್ನು ಈ ಫೀಚರ್ ತಡೆಯುತ್ತದೆ.!! ಸಿಂಕ್ ಟೆಕ್ನಾಲಜಿ ಹೊಂದಿಲ್ಲದ ಮಾನಿಟರ್‌ಗಳು ಸಾಮಾನ್ಯವಾಗಿ ಗೇಮಿಂಗ್‌ಗೆ ಹೆಚ್ಚು ಸಪೋರ್ಟ್ ನೀಡುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.!!

  ಎಲ್‌ಜಿ ಅಲ್ಟ್ರಾವೈಡ್ ಮಾನಿಟರ್ 34UC79G

  ಎಲ್‌ಜಿ ಕಂಪೆನಿ ಬಿಡುಗಡೆ ಮಾಡಿರುವ ನೂತನ "ಅಲ್ಟ್ರಾವೈಡ್ ಮಾನಿಟರ್ 34UC79G" AH-IPS ಅಲ್ಟ್ರಾಯಿಡ್ ಪ್ರದರ್ಶನ ಮತ್ತು 144Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದ್ದು, 2560 x 1080 ಪಿಕ್ಸೆಲ್‌ಳ ಪಿಕ್ಸೆಲ್ ಪಾಪಿಂಗ್ ರೆಸಲ್ಯೂಶನ್ ಹೊಂದಿದೆ.!! 34-ಇಂಚಿನ ಸ್ಕ್ರೀನ್, 21:9ರ ವಿಶಾಲ ಅನುಪಾತ, 16.7 ಮಿಲಿಯನ್ ಬಣ್ಣಗಳ ಸಪೋರ್ಟ್ ಮಾಡುವ ಐಪಿಎಸ್ ಫಲಕವನ್ನು ಹೊಂದಿದೆ.!! ಇನ್ನು ವೆರಿಯಬಲ್ ರಿಫ್ರೆಷ್‌ಮೆಂಟ್ 50 ರಿಂದ 144HZ ವರೆಗೆ ಇದ್ದು, ಮಾನಿಟರ್ ಗುಣಮಟ್ಟ ಹೇಗಿರಬಹುದು ಎಂದು ನೀವು ಊಹೆ ಮಾಡಬಹುದು.!!

  ಎಲ್‌ಜಿ ಅಲ್ಟ್ರಾವೈಡ್ ಮಾನಿಟರ್ 29UM6!!

  ಎಲ್‌ಜಿ ಕಂಪೆನಿಯ ಮತ್ತೊಂದು ಮಾನಿಟರ್ ಎಲ್‌ಲ್ಜಿ 29UM69 ಕೂಡ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್ ಆಗಿದೆ. 29 ಇಂಚಿನ ಫುಲ್ ಐಪಿಎಸ್ ಡಿಸ್‌ಪ್ಲೇ, 16.7 ಮಿಲಿಯನ್ ಬಣ್ಣಗಳ ಸಪೋರ್ಟ್, 1000:1 ರ ವ್ಯತಿರಿಕ್ತ ಅನುಪಾತ ಹೊಂದಿರುವ ಡಿಸ್‌ಪ್ಲೇ, ಕಸ್ಟಮ್, ರೀಡರ್, ಫೋಟೋ, ಕ್ಯಾಮೆರಾ ಮೂಡ್‌ಗಳಲ್ಲಿ ಈ ಮಾನಿಟರ್ ಹೊರಬಂದಿದೆ.!! ಮೋಷನ್ ಬ್ಲರ್ ರಿಡಕ್ಷನ್, ಅಡಾಪ್ಟಿವ್ ಸಿಂಕ್ ಟೆಕ್ನಾಲಜಿ ಮತ್ತು ಸುಧಾರಿತ ಗೇಮಿಂಗ್ ವೈಶಿಷ್ಟ್ಯಗಳು ಈ ಮಾನಿಟರ್ ಕಳೆಯನ್ನು ಹೆಚ್ಚಿಸಿವೆ.!!

  ಮೋಷನ್ ಬ್ಲರ್ ರಿಡಕ್ಷನ್ ತಂತ್ರಜ್ಞಾನ!!

  ಕಂಪ್ಯೂಟರ್‌ ಗೇಮ್ ಆಡುವಾಗ ಗೇಮ್‌ಗೆ ತಕ್ಕಂತೆ ಇಂದಿನ ಇಂದಿನ ಮಾನಿಟರ್ ಸಪೋರ್ಟ್ ಮಾಡುವುದು ಅಷ್ಟಕಷ್ಟೆ.! ಆದರೆ, ಎಲ್‌ಜಿ ಮಾನಿಟರ್ಸ್ ಉನ್ನತ ಮಟ್ಟದ ಗೇಮಿಂಗ್ ಸೆಷನ್ನಲ್ಲಿ ಆಡಲು ಅಗತ್ಯವಿರುವ ನಿಖರತೆ ಮತ್ತು ಕೌಶಲ್ಯವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.!! 1ms ಮೋಷನ್ ಬ್ಲರ್ ರಿಡಕ್ಷನ್‌ನಲ್ಲಿ ನಿಮ್ಮನ್ನು ಅತ್ಯುತ್ತಮ ಗೇಮಿಂಗ್ ಪ್ರಪಂಚಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.!!

  ಬ್ಲಾಕ್ ಸ್ಟೆಬಲೈಸರ್ ಫೀಚರ್!!

  ಈ ಎರಡೂ ಎಲ್‌ಜಿ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್‌ಗಳು ಬ್ಲಾಕ್ ಸ್ಟೆಬಲೈಸರ್ ಫೀಚರ್ ಹೊಂದಿದ್ದು, ಈ ಫೀಚರ್ ಮೂಲಕ ಕಪ್ಪು ದೃಶ್ಯಗಳಲ್ಲಿ ಉನ್ನತ ವಿವರಗಳನ್ನು ಬಹಿರಂಗಪಡಿಸಲು ಮಾನಿಟರ್ ಸೆಟ್ಟಿಂಗ್ಗಳನ್ನು ತ್ವರಿತವಾಗಿ ಉತ್ತಮಗೊಳಿಸುತ್ತವೆ.!ಅಂದರೆ ಕತ್ತಲೆಯಂತಹ ದೃಷ್ಯಗಳು ನಮ್ಮ ಇಂದ್ರೀಯಗಳಿಗೆ ಸ್ಪಷ್ಟವಾಗಿ ಗೋಚರಿಸಲಿದೆ.!! ಇನ್ನು ಇನ್‌ಪುಟ್ ಸಂಪರ್ಕಕ್ಕೆ ಸಂಬಂಧಿಸಿದಂತೆ, HDMI ಪೋರ್ಟ್, ಪ್ರದರ್ಶನ ಪೋರ್ಟ್ ಮತ್ತು ಯುಎಸ್ಬಿ 3.0 ಪೋರ್ಟ್ ಅನ್ನು ನೀವು ಪಡೆಯುತ್ತೀರಾ.!!

  ಓದಿರಿ:ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  A lG monitor's response time is very critical for a smooth game play which is enhanced while 1ms Motion Blur Reduction is ON. to know more vist to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more