ಭಾರತದಲ್ಲಿ ಖರೀದಿಸಬಹುದಾದ ಪ್ರೀಮಿಯಂ ಹೋಮ್ ಥಿಯೇಟರ್ ಗಳು

By Gizbot Bureau
|

ಇಂದಿನ ಜಮಾನದಲ್ಲಿ ಹಲವು ವೀಡಿಯೋ ಸೇವೆಗಳು ಲಭ್ಯವಿದ್ದು ನೀವು ಆ ವೀಡಿಯೋಗಳನ್ನು ಮನೆಯಿಂದಲೇ ನೋಡಿ ಎಂಜಾಯ್ ಮಾಡಬಹುದು. ಆದರೆ ಅತ್ಯುತ್ತಮ ನೋಟದ ಅನುಭವ ಪಡೆಯುವುದಕ್ಕಾಗಿ ಉತ್ತಮ ಹೋಮ್ ಥಿಯೇಟರ್ ನ ಅಗತ್ಯವಿರುತ್ತದೆ ಮತ್ತು ಮನೆಯಲ್ಲೇ ಕಮರ್ಶಿಯಲ್ ಹೋಮ್ ಥಿಯೇಟರ್ ನಂತಹ ಅನುಭವವನ್ನು ಅದು ನೀಡಬೇಕು.ಈ ಮೊದಲು ಹೋಮ್ ಥಿಯೇಟರ್ ಗಳು ದೊಡ್ಡದಾಗಿರುತ್ತಿತ್ತು ಮತ್ತು ಸಾಕಷ್ಟು ಜಾಗವನ್ನು ತಿನ್ನುತ್ತಿತ್ತು. ಆದರೆ ಈಗ ಕಾಂಪ್ಯಾಕ್ಟ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹೋಮ್ ಥಿಯೇಟರ್

ಸದ್ಯ ನೀವು ಕೂಡ ಹೋಮ್ ಥಿಯೇಟರ್ ಖರೀದಿಸುವುದಕ್ಕೆ ಆಸಕ್ತಿ ಹೊಂದಿದ್ದರೆ ನಮ್ಮಲ್ಲಿ ಸಾಕಷ್ಟು ವೆರೈಟಿ ಡಿವೈಸ್ ಗಳು ಲಭ್ಯವಿದೆ. ಸೌಂಡ್ ಬಾರ್ ಗಳು, ಟವ್ ಸ್ಪೀಕರ್ ಗಳು ಮತ್ತು ಹಲವು ವ್ಯವಸ್ಥೆಯನ್ನು ಇವು ಒಳಗೊಂಡಿರುತ್ತದೆ.

ಪ್ರತಿಯೊಂದು ಪ್ರೊಡಕ್ಟ್ ಗಳು ಕೂಡ ವಿಭಿನ್ನ ಕೆಪಾಸಿಟಿಯನ್ನು ಹೊಂದಿದೆ ಮತ್ತು ವಿಶೇಷ ಸೌಂಡ್ ಔಟ್ ಪುಟ್ ಹೊಂದಿದೆ. ನಿಮ್ಮ ಅಗತ್ಯತೆಗೆ ಹೊಂದಿಕೊಳ್ಳುವಂತಹ ಹೋಮ್ ಥಿಯೇಟರ್ ನ್ನು ನೀವು ಖರೀದಿಸುವುದು ಬಹಳ ಒಳ್ಳೆಯದು. ಅಂದರೆ ನಿಮ್ಮ ಲಿವಿಂಗ್ ರೋಮ್ ಗೆ ಹೊಂದಿಕೆಯಾಗುವಂತಹ ಹೋಮ್ ಥಿಯೇಟರ್ ಖರೀದಿಸಿದರೆ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಸರಿಯಾದ ಹೋಮ್ ಥಿಯೇಟರ್ ಖರೀದಿಸುವಿಕೆಯಲ್ಲಿ ಆಗುವ ಪ್ರಮುಖ ಚಾಲೆಂಜ್ ಎಂದರೆ ಬಹಳ ಪ್ರೊಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದು. ಹಾಗಾಗಿ ಯಾವುದು ಸರಿಯಾದ ಆಯ್ಕೆ ಎಂಬುದನ್ನು ಗುರುತಿಸುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಅದೇ ಕಾರಣಕ್ಕಾಗಿ ನಾವಿಲ್ಲಿ ನಿಮಗೆ ಸಹಕರಿಸುತ್ತಿದ್ದೇವೆ. ಕೆಲವು ಬೆಸ್ಟ್ ಹೋಮ್ ಥಿಯೇಟರ್ ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದು ಇವುಗಳು ಸದ್ಯ ಭಾರತದಲ್ಲಿ ಖರೀದಿಸುವುದಕ್ಕೆ ಲಭ್ಯವಿದೆ.

ಬೋಸ್ ಲೈಫ್ ಸ್ಟೈಲ್ 650 5.1 ಹೋಮ್ ಥಿಯೇಟರ್

ಬೋಸ್ ಲೈಫ್ ಸ್ಟೈಲ್ 650 5.1 ಹೋಮ್ ಥಿಯೇಟರ್

ಬೋಸ್ ಲೈಫ್ ಸ್ಟೈಲ್ 650 5.1 ನಲ್ಲಿ 5-ಸ್ಪೀಕರ್ ಹೋಮ್ ಸಿನಿಮಾ ಸಿಸ್ಟಮ್, ಪ್ರೀಮಿಯಂ ಗ್ಲಾಸ್ ಟಾಪ್ ಫಿನಿಶ್, ಸಿಕ್ಸ್ 4K/60 ವೀಡಿಯೋ ಸೋರ್ಸ್ ಗೆ ಬೆಂಬಲ,ಅಕೋಸ್ಟಿಮಾಸ್ ಫೀಚರ್,ಮತ್ತು ಶ್ರೀಮಂತ 5.1ಸರೌಂಡ್ ಸಿಸ್ಟಮ್ ನ್ನು ಇದು ಒಳಗೊಂಡಿದೆ.

ಒನ್ಕ್ಯೂ HT-S7800 5.1 ಹೋಮ್ ಥಿಯೇಟರ್

ಒನ್ಕ್ಯೂ HT-S7800 5.1 ಹೋಮ್ ಥಿಯೇಟರ್

ಒನ್ಕ್ಯೂ HT-S7800 5.1 ಹೋಮ್ ಥಿಯೇಟರ್ ಸಿಸ್ಟಮ್ ನಲ್ಲಿ 5.1 2-ಚಾನಲ್ ಔಟ್ ಪುಟ್, ಪವರ್ ಫುಲ್ A/V ರಿಸೀವರ್, 1190W ನಷ್ಟು ಒಟ್ಟು ಪವರ್ ಔಟ್ ಪುಟ್, ಬ್ಲೂಟೂತ್ ಮತ್ತು ಏರ್ ಪ್ಲೇ ಮ್ಯೂಸಿಕ್ ವ್ಯವಸ್ಥೆಯನ್ನು ಹೊಂದಿದೆ.

ಬೋಸ್ ಲೈಫ್ ಸ್ಟೈಲ್ 600 5.1 ಹೋಮ್ ಥಿಯೇಟರ್

ಬೋಸ್ ಲೈಫ್ ಸ್ಟೈಲ್ 600 5.1 ಹೋಮ್ ಥಿಯೇಟರ್

ಬೋಸ್ ಲೈಫ್ ಸ್ಟೈಲ್ 600 5.1 ಹೋಮ್ ಎಂಟರ್ಟೈನ್ಮೆಂಟ್ ಸಿಸ್ಟಮ್ ನಲ್ಲಿ ವಯರ್ ಲೆಸ್, ಅಕೋಸ್ಟಿಮಾಸ್ ಮಾಡ್ಯೂಲ್, ಪ್ರೀಮಿಯಂ ಗ್ಲಾಸ್ ಟಾಪ್ ಫಿನಿಶ್, ಜುವೆಲ್ ಕ್ಯೂಬ್ ಸ್ಪೀಕರ್ ಮತ್ತು ರೀಸೌಂಡಿಂಗ್ ಬಾಸ್ ಪ್ರದರ್ಶನವನ್ನು ಹೊಂದಿದೆ.

ಕ್ವಾಡ್ರಲ್ ಕ್ವಿಂಟಾಸ್ 5000 5.1 ಹೋಮ್ ಥಿಯೇಟರ್

ಕ್ವಾಡ್ರಲ್ ಕ್ವಿಂಟಾಸ್ 5000 5.1 ಹೋಮ್ ಥಿಯೇಟರ್

ಕ್ವಾಡ್ರಲ್ ಕ್ವಿಂಟಾಸ್ 5000 5.1 ಹೋಮ್ ಥಿಯೇಟರ್ ಸಿಸ್ಟಮ್ ನಲ್ಲಿ 5 ಸ್ಪೀಕರ್ಸ್, ಆಕರ್ಷಕ ಡಿಸೈನ್ ಮತ್ತು ಬಳಕೆದಾರರಿಗೆ ಅತ್ಯುತ್ತಮವಾಗಿರುವ ಪ್ರದರ್ಶನವನ್ನು ಇದು ನೀಡುತ್ತದೆ.

ಡೆನಾನ್ AVR-X2400H 5.1 ಹೋಮ್ ಥಿಯೇಟರ್

ಡೆನಾನ್ AVR-X2400H 5.1 ಹೋಮ್ ಥಿಯೇಟರ್

ಡೆನಾನ್ AVR-X2400H 5.1 ಸಿನೇಮಾ ಗ್ರೇಡ್ ಜೊತೆಗೆ 5.1-ಚಾನಲ್ ನ್ನು ಹೊಂದಿದೆ. 5.1.2 ಅರೇಂಜ್ ಮೆಂಟ್ ನ್ನು ಹೊಂದಿದ್ದು ಎರಡು ಅಟ್ಮೋಸ್ ಸ್ಪೀಕರ್ ಗಳನ್ನು ಒಳಗೊಂಡಿರುತ್ತದೆ.

ಸೋನಿ BDV-N9200W 5.1 ಹೋಮ್ ಥಿಯೇಟರ್

ಸೋನಿ BDV-N9200W 5.1 ಹೋಮ್ ಥಿಯೇಟರ್

ಸೋನಿ BDV-N9200W 5.1 ,5.1-ಚಾನಲ್ ಹೋಮ್ ಥಿಯೇಟರ್ ಸಿಸ್ಟಮ್ ಜೊತೆಗೆ ಅತ್ಯಧಿಕ ರೆಸಲ್ಯೂಷನ್ ಆಡಿಯೋ ಔಟ್ ಪುಟ್ ನ್ನು ಹೊಂದಿದೆ. ಇದರಲ್ಲಿ ಬ್ಲೂಟೂತ್, HDMI-CEC ಮತ್ತು 4K ಅಪ್ ಸ್ಕೇಲರ್ ಜೊತೆಗೆ ಇತರೆ ಹಲವು ಫೀಚರ್ ಗಳನ್ನು ಹೊಂದಿದೆ.

Best Mobiles in India

English summary
If you are looking for a home theater system right now, you will have a variety of devices such including the ones with a soundbar, tower speakers and much more. The main challenge in buying the right home theater system is the availability of a wide range of devices. Here we list some of the best home theater systems.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X