50 ಇಂಚಿನ 4K ಸಾಮರ್ಥ್ಯದ ಮೋಟೋ ಆಂಡ್ರಾಯ್ಡ್ ಟಿವಿ ಬೆಲೆ 33 ಸಾವಿರ!

|

ಶಿಯೋಮಿ, ಒನ್‌ಪ್ಲಸ್ ಕಂಪೆನಿಗಳ ನಂತರ ಇದೀಗ ಮೋಟೊರೋಲಾ ಕೂಡ ತನ್ನದೇ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳನ್ನು ಭಾರತದಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಿದೆ. ಪ್ರಸ್ತುತ ದೇಶದ ಗ್ರಾಹಕರು ಆಂಡ್ರಾಯ್ಡ್ ಟಿವಿಗಳತ್ತ ಗ್ರಾಹಕರು ಒಲವು ತೋರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಮೋಟೋ, ಸದ್ದಿಲ್ಲದಂತೆ ಕೇವಲ 33 ಸಾವಿರಕ್ಕೆ 4K ಸಾಮರ್ಥ್ಯದ ಆಂಡ್ರಾಯ್ಡ್ ಟಿವಿ ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ಗಳು ಕೈಗೆಟುಕದ ಕಾಲದಲ್ಲೇ ಜನರ ಕೈಗೆ ಸ್ಮಾರ್ಟ್‌ಫೋನ್‌ ಎಟುಕುವಂತೆ ಮಾಡಿದ್ದ ಮೋಟೋ ಇದೀಗ ಮತ್ತೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬಂದಿದೆ.

ಸ್ಮಾರ್ಟ್‌ ಟಿವಿ

ಹೌದು, ದೇಶದ ಟಿವಿ ಮಾರುಕಟ್ಟೆಗೆ ಮೋಟೋ ಮೂರು ಹೊಚ್ಚ ಹೊಸ ಅಂಡ್ರಾಯ್ಡ ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿದ್ದು, 33,999 ರೂ., 24,999 ರೂ. ಮತ್ತು 13,999 ರೂ. ಬೆಲೆಗಳಲ್ಲಿ ಕ್ರಮವಾಗಿ 50 ಇಂಚು, 32 ಇಂಚು ಹಾಗೂ 43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಗೂಗಲ್‌ ಒಡೆತನದಲ್ಲಿದ್ದ ಬಳಿಕ ಇದೀಗ ಲೆನೊವೋ ಕಂಪೆನಿಯ ಒಡೆತನದಲ್ಲಿರುವ ಮೋಟೋ ದೇಶದ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಚಿಂತಿಸಿದೆ. ಹಾಗಾಗಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಅನಿಸುವಂತಹ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳ ಮೂಲಕ ದೇಶದ ಗ್ರಾಹರನ್ನು ಸೆಳೆಯಲು ಸಂಪೂರ್ಣ ಸಜ್ಜಾಗಿ ಬಂದಿದೆ.

50 ಇಂಚಿನ ಅಂಡ್ರಾಯ್ಡ ಟಿವಿ

ಮೊದಲಿಗೆ, ಮೊಟೊರೊಲಾ 50 ಇಂಚಿನ ಅಂಡ್ರಾಯ್ಡ ಟಿವಿ ಹೆಚ್ಚು ಗಮನ ಸೆಳೆಯುತ್ತಿದ್ದು, ಕೇವಲ 33 ಸಾವಿರಕ್ಕೆ 4K ಸಾಮರ್ಥ್ಯದ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಇದಾಗಿದೆ. 3840 x 2160 ಪಿಕ್ಸೆಲ್‌ ಸಾಮರ್ಥದಲ್ಲಿರುವ ಪರದೆಯು ಬಣ್ಣಗಳು ಮತ್ತು ವ್ಯತಿರಿಕ್ತತೆಯ ಅತ್ಯುತ್ತಮ ಸಂಯೋಜನೆಗಾಗಿ ವೀಡಿಯೊ ವಿಷಯದ ಪ್ರತಿಯೊಂದು ಫ್ರೇಮ್ ಅನ್ನು ಟ್ಯೂನ್ ಮಾಡುವ ತಂತ್ರಜ್ಞಾನವನ್ನು ಹೊಂದಿದೆ.. ಎಚ್‌ಡಿಎಂಐ ಪೋರ್ಟ್ ಬಳಸಿ ನಿಮ್ಮ ಲ್ಯಾಪ್‌ಟಾಪ್‌ನಂತಹ ವಿವಿಧ ಗ್ಯಾಜೆಟ್‌ಗಳನ್ನು ನೀವು ಸಂಪರ್ಕಿಸಬಹುದಾದ ಆಯ್ಕೆ ಟಿವಿಯಲ್ಲಿದೆ. ಬ್ಲೂಟೂತ್ ಗೇಮಿಂಗ್ ಕಂಟ್ರೋಲರ್, ಡಾಲ್ಬಿ ವಿಷನ್, ಎಂಇಎಂಸಿ, ಎಚ್‌ಡಿಆರ್ 10, ಲೋಕಲ್ ಡಿಮ್ಮಿಂಗ್, 10 ಬಿಟ್ ಕಲರ್ ಡೆಪ್ತ್, 4ಕೆ ಅಪ್‌ಸ್ಕೇಲರ್ ಫೀಚರ್ಸ್ ನೀವು ನೋಡಬಹುದು.

ಮಧ್ಯಮ ಗಾತ್ರ

ಇನ್ನು ಮಧ್ಯಮ ಗಾತ್ರದ ಟಿವಿಯಾಗಿ ಮೊಟೊರೊಲಾ 43 ಇಂಚಿನ ಅಂಡ್ರಾಯ್ಡ ಟಿವಿ ಗಮನಸೆಳೆದಿದೆ. ಇದು 1920×1080 ಪಿಕ್ಸಲ್‌ಗ‌ಳ 4ಇಂಚಿನ, 16 ದಶಲಕ್ಷ ಬಣ್ಣಗಳನ್ನೊಳಗೊಂಡ ಐಪಿಎಸ್‌ ಪರದೆ ಹೊಂದಿದೆ. 178 ಡಿಗ್ರಿಕೋನದಲ್ಲಿ ನೋಡಿದರೂ ಟಿವಿ ವೀಕ್ಷಣೆ ಚೆನ್ನಾಗಿ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. 20 ವ್ಯಾಟ್ಸ್‌ (ಆರ್‌ಎಂಎಸ್‌) ಡಾಲ್ಬಿ ಆಡಿಯೋ ಉಳ್ಳ ಸ್ಪೀಕರ್ ಇರುವುದು ಇದರ ವಿಶೇಷವಾದರೆ, 1 GB RAM ಮತ್ತು 8 ಜಿ.ಬಿ ಮೆಮೊರಿ, ಎಆರ್ಎಂ ಸಿಎ 53 ನಾಲ್ಕು ಕೋರ್‌ಗಳ ಪ್ರೊಸೆಸರ್ ಅನ್ನು ಟಿವಿ ಹೊಂದಿದೆ. ಇದು ಆಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದ್ದು, ಅಂಡ್ರಾಯ್ಡ 10 ಅಪ್‌ಡೇಟ್‌ ದೊರಕಲಿದೆ.

ಆಂಡ್ರಾಯ್ಡ್ ಟಿವಿ

ಮೋಟೋ ಆಂಡ್ರಾಯ್ಡ್ ಟಿವಿಗಳಲ್ಲೇ ಅತ್ಯಂತ ಕಡಿಮೆ ಬೆಲೆಯ ಟಿವಿ ಎಂದರೆ ಮೋಟೊರೋಲಾ 32 ಇಂಚಿನಟಿವಿ. ಈ ಮಾಡೆಲ್‌ನಲ್ಲಿ ಪರದೆಯ ಅಳತೆ 32 ಇಂಚು ಮತ್ತು ಎಚ್‌ಡಿ ರೆಡಿ ಪರದೆ 1366×768 ಪಿಕ್ಸಲ್‌ ಪರದೆ (ಫುಲ್‌ ಎಚ್‌ಡಿ ಇಲ್ಲ) ಅನ್ನು ಹೊರತುಪಡಿಸಿದರೆ ಇನ್ನೆಲ್ಲಾ ಗುಣವಿಶೇಷಣಗಳು ಮೇಲೆ ಹೇಳಿದ 43 ಇಂಚಿನ ಮಾಡೆಲ್‌ನಲ್ಲಿರುವ ವಿಶೇಷಗಳೇ ಇವೆ. ಇದರಲ್ಲೂ 1 ಜಿಬಿ ರ್ಯಾಮ್‌ 8 ಜಿ.ಬಿ ಆಂತರಿಕ ಸಂಗ್ರಹ, 20 ವ್ಯಾಟ್ಸ್ ಡಾಲ್ಬಿ ಆಡಿಯೋ ಸ್ಪೀಕರ್‌ ಎಲ್ಲ ಇದೆ. ಪರದೆಯ ಅಳತೆ ಮತ್ತು ಪರದೆಯ ರೆಸಲ್ಯೂಶನ್‌ ಕಡಿಮೆ ಅಷ್ಟೇ. ಹಾಗಾಗಿ, ಇದು ಬಜೆಟ್ ಪ್ರಿಯರಿಗೂ ಒಗ್ಗುವಂತಹ ಉತ್ತಮ ಸ್ಮಾರ್ಟ್‌ಟಿವಿ ಎಂದು ಹೇಳಬಹುದು.

ಆಂಡ್ರಾಯ್ಡ್

ಮೊಟೋ ತನ್ನೆಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳ ಮೇಲೆ ಗ್ರಾಹಕ ಸ್ನೇಹಿ ರಿಮೋಟ್‌ ಅನ್ನು ನೀಡುತ್ತಿದೆ. ಗೂಗಲ್‌ ಅಸಿಸ್ಟೆಂಟ್, ಪ್ರೈಮ್‌ ವಿಡಿಯೋ, ಗೂಗಲ್‌ ಪ್ಲೇ, ನೆಟ್‌ಫ್ಲಿಕ್ಸ್‌ ಗುಂಡಿಗಳನ್ನುಳ್ಳ ರಿಮೋಟ್‌ ನೀಡಲಾಗಿದೆ. ಈ ಗುಂಡಿಗಳನ್ನು ಒತ್ತಿ ಗ್ರಾಹಕರು ನೇರವಾಗಿ ಆಯಾ ಆಪ್‌ಗಳಿಗೆ ಪ್ರವೇಶ ಪಡೆಯಬಹುದು. ಗೂಗಲ್‌ ಅಸಿಸ್ಟೆಂಟ್‌ನಿಂದ ನಿಮ್ಮ ಧ್ವನಿ ಬಳಸಿ ನಿಮಗೆ ಬೇಕಾದ ಕಾರ್ಯಕ್ರಮ ಹುಡುಕಬಹುದು. ನಿಮ್ಮ ಮೊಬೈಲ್‌ ಅನ್ನು ಕಾಸ್ಟ್‌ ಮಾಡಿ ನಿಮ್ಮ ಮೊಬೈಲ್‌ ಅನ್ನು ಟಿವಿ ಪರದೆಯಲ್ಲಿ ವೀಕ್ಷಿಸಬಹುದು. ನಿಮ್ಮ ಮೊಬೈಲ್‌ ಅನ್ನು ಹಾಟ್‌ಸ್ಪಾಟ್‌ ಮಾಡಿ, ಅದರಲ್ಲಿರುವ ಡಾಟಾ ಬಳಸಿ ಟಿವಿಯಲ್ಲಿ ಕಾರ್ಯಕ್ರಮಗಳನ್ನು, ಸಿನಿಮಾ, ವಿಡಿಯೋಗಳನ್ನು ವೀಕ್ಷಿಸಬಹುದು.

Best Mobiles in India

English summary
Motorola TV lineup has been launched in India. Following in the footsteps of other smartphone makers getting into the business of televisions, Lenovo-owned Motorola has launched its first Android TV-powered smart TV range in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X