ನಿಮ್ಮ ಕಲ್ಪನೆಗೂ ಮೀರಿದ ಈ ಸ್ಮಾರ್ಟ್‌ ಪರಿಕರಗಳು ಹೇಗಿವೆ ಗೊತ್ತಾ!!

|

ಟೆಕ್ ಕಂಪನಿಗಳಿಗೆ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವಾಣಿಜ್ಯ ಮೇಳ'ವು ವರದಾನವಾಗಿದ್ದು, ಈ ಮೇಳದಲ್ಲಿ ಸ್ಟಾರ್ಟ್‌ಅಪ್ ಟೆಕ್ ಕಂಪನಿಗಳು ಸೇರಿದಂತೆ ವಿಶ್ವದ ಪ್ರಮುಖ ಟೆಕ್ ಕಂಪನಿಗಳು ಸಹ ಭಾಗವಹಿಸಿ ತಮ್ಮ ನೂತನ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ. ಈ ವರ್ಷದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವಾಣಿಜ್ಯ ಮೇಳವು ಬಾರ್ಸಿಲೊನಾದಲ್ಲಿ ನಡೆಯುತ್ತಿದ್ದು, ಹಲವು ಟೆಕ್ ಕಂಪನಿಗಳು ಅದ್ಭುತ ಆವಿಷ್ಕಾರಗಳನ್ನು ಪ್ರದರ್ಶಿಸಿವೆ.

ನಿಮ್ಮ ಕಲ್ಪನೆಗೂ ಮೀರಿದ ಈ ಸ್ಮಾರ್ಟ್‌ ಪರಿಕರಗಳು ಹೇಗಿವೆ ಗೊತ್ತಾ!!

ಹೌದು, ಪ್ರಸಕ್ತ ವರ್ಷದ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವಾಣಿಜ್ಯ ಮೇಳ'ದಲ್ಲಿ ಕೇಲವು ಸ್ಟಾರ್ಟ್‌ಅಪ್ ಟೆಕ್ ಕಂಪನಿಗಳು ನಿಮ್ಮ ಊಹೆಗೂ ನಿಲುಕದ ಅಚ್ಚರಿಯ ಉತ್ಪನ್ನಗಳನ್ನು ಅನಾವರಣಗೊಳಿಸಿ ಮುಂಬರುವ ತಂತ್ರಾಜ್ಞಾನದ ಬಗ್ಗೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಹಾಗಾದರೇ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವಾಣಿಜ್ಯ ಮೇಳದಲ್ಲಿ ಗಮನ ಸೆಳೆದಿರುವ ಹೊಸ ಆವಿಷ್ಕಾರಗಳು ಯಾವವು ಎಂಬುದನ್ನು ನೋಡೋಣ ಬನ್ನಿರಿ.

ಶಿಯೋಮಿ MI LED ಲೈಟ್!

ಶಿಯೋಮಿ MI LED ಲೈಟ್!

ವಿಶ್ವದ ನಾಲ್ಕನೇ ಪ್ರಮುಖ ತಂತ್ರಜ್ಞಾನ ಸಂಸ್ಥೆ ಎಂದೆನಿಸಿಕೊಂಡಿರುವ ಶಿಯೋಮಿಯು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ವಾಣಿಜ್ಯ ಮೇಳ'ದಲ್ಲಿ ನೂತನ 'LED ಸ್ಮಾರ್ಟ್ ಲೈಟ್ಸ್ ಬಲ್ಬ್' ಪರಿಚಯಿಸಿದೆ. ಈ ಸ್ಮಾರ್ಟ್‌ಲೈಟ್‌ ಬಲ್ಬ್‌ ಬೆಳಕಿನ ಪ್ರಖರತೆ ಮತ್ತು ಲೈಟ್‌ ಬಣ್ಣವನ್ನು ಸ್ಮಾರ್ಟ್‌ಫೋನಿನಲ್ಲಿಯೇ ನಿಯಂತ್ರಿಸಬಹುದಾಗಿದ್ದು, ಜೊತೆಗೆ ಅಮೆಜಾನ್ ಅಲೆಕ್ಸಾ ಸಾಧನದಲ್ಲಿ ಧ್ವನಿಯ ಮೂಲಕವು ನಿಯಂತ್ರಿಸಬಹುದು.

ಲಿಕು-ರೋಬೋಟ್ (Liku-the robot)!

ಲಿಕು-ರೋಬೋಟ್ (Liku-the robot)!

ದಕ್ಷಿಣ ಕೊರಿಯಾದ ರೊಬೊಟಿಕ್ಸ್ ಕಂಪನಿ ಟಾರೊಕ್ ಕಂಪನಿಯು ರೊಬೊಟ್‌ ಒಂದನ್ನು ತಯಾರಿಸಿದ್ದು, ಅದಕ್ಕೆ 'ಲಿಕು' ಎಂದು ಹೆಸರಿಡಲಾಗಿದೆ. ಸಂತಸ, ದುಃಖ ಮತ್ತು ಆಶ್ಚರ್ಯದ ಸಂದರ್ಭದಲ್ಲಿ ಮನುಷ್ಯನಂತೆ ದೊಡ್ಡ ಕಣ್ಣು ಮಾಡಿ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. 1.5 ಫೂಟ್ ಎತ್ತರವನ್ನು ಹೊಂದಿರುವ ಈ ರೊಬೊಟ್ ನಿಮಗೆ ಉತ್ತಮ ಗೆಳೆಯನಂತೆ ಎಂದು ಕಂಪನಿಯ ಮಾರುಕಟ್ಟೆ ಅಧಿಕಾರಿ ಜೇಹೇ ಚಾಂಗ್ ಅವರು ಹೇಳಿದ್ದಾರೆ.

ಪ್ರಾಣಿಗಳಿಗೆ ಸೆನ್ಸಾರ್ ಹೆಲ್ತ್‌ಬೆಲ್ಟ್!!

ಪ್ರಾಣಿಗಳಿಗೆ ಸೆನ್ಸಾರ್ ಹೆಲ್ತ್‌ಬೆಲ್ಟ್!!

ಡಿನ್ಬೀಟ್ ಕಂಪನಿಯು ಸಾಕುನಾಯಿಯ ದೇಹದ ಉಷ್ಣಾಂಶ, ಉಸಿರಾಟ, ಚಟುವಟಿಕೆಯ ಮಟ್ಟವನ್ನು ತಿಳಿಯಲು ಸೆನ್ಸಾರ್ ಸಹಿತ ಹೆಲ್ತ್‌ಬೆಲ್ಟ್ ಒಂದನ್ನು ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಇದೀಗ ಪ್ರಾಣಿಪ್ರಿಯರ ಗಮನ ಸೆಳೆದಿದೆ. ಈ ಒಂದು ಸಾಧನವನ್ನು ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಬಳೆಸುವ ಉದ್ದೇಶಕ್ಕಾಗಿ ತಯಾರಿಸಲಾಗಿದೆ ಎಂದು ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ 'ಮರಿನಾ ಗೋಮೆಜ್ ಡಿ ತೇಜಡಾ ಅವರು ತಿಳಿಸಿದ್ದಾರೆ.

ಭಾಷಾಂತರ ಇಯರ್‌ಬಡ್ಸ್‌!

ಭಾಷಾಂತರ ಇಯರ್‌ಬಡ್ಸ್‌!

ಇನ್ಮುಂದೆ ನೀವು ಯಾವುದೇ ಭಾಷೆ ಬೇಕಾದರೂ ಅರ್ಥಮಾಡಿಕೊಳ್ಳಬಹುದು! ಶಾಕ್ ಆಯ್ತಾ ಹೌದು, ಏಕೆಂದರೇ ನೆದರ್ಲ್ಯಾಂಡ್ ಮೂಲದ ಸ್ಟಾರ್ಟ್‌ಅಪ್ ಟೆಕ್ ಕಂಪನಿ ಟ್ರಾವಿಸ್ ಭಾಷಾಂತರ ಮಾಡುವ ಇಯರ್ ಬಡ್ಸ್‌ಗಳನ್ನು ಪರಿಚಯಿಸಿದೆ. ನಿಮಗೆ ತಿಳಿಯುವ ಮತ್ತು ಅರ್ಥಮಾಡಿಕೊಳ್ಳಬೇಕಿರುವ ಎರಡು ಭಾಷೆಗಳನ್ನು ಸೆಟ್ಟ್ ಮಾಡಿದರೇ ಸಾಕು, ಮಾತನಾಡುವ ತಡಮಾಡದೇ ನೇರವಾಗಿ ಭಾಷಾಂತರ ಮಾಡುತ್ತಾ ಹೋಗುತ್ತದೆ.

Best Mobiles in India

English summary
here are eye-catching devices on display at the Mobile World Congress trade fair which opened Monday in Barcelona.to know morevisit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X