ಗೇಮ್ಸ್‌ ಆಡಲು ನಿಂಟೆಂಡೊ ಸಂಸ್ಥೆ ಪರಿಚಯಿಸಲಿದೆ ಹೊಸ 'ಸ್ವೀಚ್ ಡಿವೈಸ್'.!

|

ಎವರ್‌ಗ್ರೀನ್ ಮಾರಿಯೋ ಪಾತ್ರಧಾರಿಯನ್ನು ಹುಟ್ಟುಹಾಕಿರುವ ಜನಪ್ರಿಯ ನಿಂಟೆಂಡೊ ಗೇಮಿಂಗ್ ಸಂಸ್ಥೆ ಆಟಗಳು ಅಂದರೇ ಗೇಮ್ಸ್ ಪ್ರಿಯರ ಫೇವರೆಟ್. ಕಂಪನಿ ಹಲವು ಹೊಸ ರೋಚಕ ಗೇಮ್ಸ್‌ಗಳನ್ನು ಪರಿಚಯಿಸಿದ್ದು, ಆಟಗಾರರ ಗಮನ ಸೆಳೆದಿದೆ. ಇದೀಗ ಮತ್ತೆ ತನ್ನ ಗೇಮ್ಸ್‌ ಪ್ರಿಯರಿಗೆ ಖುಷಿ ಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ಗೇಮಿಂಗ್ ಆಡಲು ಸ್ವೀಚ್ ಡಿವೈಸ್‌ ಅನ್ನು ಲಾಂಚ್‌ ಮಾಡಲಿದೆ.

ಗೇಮ್ಸ್‌ ಆಡಲು ನಿಂಟೆಂಡೊ ಸಂಸ್ಥೆ ಪರಿಚಯಿಸಲಿದೆ ಹೊಸ 'ಸ್ವೀಚ್ ಡಿವೈಸ್'.!

ಹೌದು, ನಿಂಟೆಂಡೊ ಸಂಸ್ಥೆ ಎರಡು ಗೇಮಿಂಗ್ ಸ್ವೀಚ್ ಡಿವೈಸ್‌ಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಡಿವೈಸ್‌ಗಳು 3DS ಮತ್ತು 2DS ಮಾದರಿಯಲ್ಲಿರಲಿವೆ. ಅದರಲ್ಲಿ ಒಂದು ಸ್ವೀಚ್‌ ಡಿವೈಸ್‌ ಸ್ಪೋರ್ಟ್ಸ್‌ ಮಾದರಿಯಲ್ಲಿರಲಿದ್ದು, 'avid' ಗೇಮರ್ಸ್‌ಗಾಗಿ ಡಿಸೈನ್ ಮಾಡಲಾಗಿದೆ. ಹಾಗೇ ಇನ್ನೊಂದು ಸ್ವೀಚ್‌ ಡಿವೈಸ್‌ ಸಾಮಾನ್ಯ ಗೇಮ್ಸ್‌ಗಳಿಗೆ ಬೆಂಬಲ ನೀಡಲಿದ್ದು, ಶೀಘ್ರದಲ್ಲಿಯೇ ಎಂಟ್ರಿ ಕೊಡಲಿವೆ.

ಗೇಮ್ಸ್‌ ಆಡಲು ನಿಂಟೆಂಡೊ ಸಂಸ್ಥೆ ಪರಿಚಯಿಸಲಿದೆ ಹೊಸ 'ಸ್ವೀಚ್ ಡಿವೈಸ್'.!

ನಿಂಟೆಂಡೊ E3 ಹೆಸರಿನ ಡಿವೈಸ್‌ 2019 ಮಾದರಿಗಳನ್ನು ರಜಾದಿನಗಳಲ್ಲಿ ರಿಲೀಸ್‌ ಮಾಡುವ ಬಗ್ಗೆ ಆಲೋಚಿಸಿದ್ದು, ಈ ಮೂಲಕ ಮಕ್ಕಳನ್ನು ಸೆಳೆಯಲಿದೆ. ಹೊಸ ಸ್ವೀಚ್ ಡಿವೈಸ್‌ಗಳ ಡಿಸ್‌ಪ್ಲೇಯಲ್ಲಿ ಹೆಚ್ಚಿನ ಪ್ರಖರತೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 3DS ಮಾದರಿಯನ್ನು ಹೊಂದಿರುವ ಒಂದು ಡಿವೈಸ್ ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, ಇದರ ಬೆಲೆಯ ಹೆಚ್ಚಿರಲಿದೆ.

ಗೇಮ್ಸ್‌ ಆಡಲು ನಿಂಟೆಂಡೊ ಸಂಸ್ಥೆ ಪರಿಚಯಿಸಲಿದೆ ಹೊಸ 'ಸ್ವೀಚ್ ಡಿವೈಸ್'.!

ನಿಂಟೆಂಡೊ(nintendo) ಸಂಸ್ಥೆಯ ಜನಪ್ರಿಯ ಸ್ವೀಚ್‌ ಗೇಮ್ಸ್‌ ಮಾರಿಯೋ ಗೇಮ್, ಅನಿಮಲ್ ಕ್ರಾಸಿಂಗ್, ಜೆಲ್ಡಾ, ಪೋಕ್ಮನ್ ಸ್ವೋರ್ಡ್ ಮತ್ತು ಶೀಲ್ಡ್, ಮತ್ತು ಮ್ಯಾನ್ಷನ್ 3 ಗೇಮ್ಸ್‌ಗಳನ್ನು ಆಡಬಹುದಾಗಿದ್ದು, ಇವುಗಳೊಂದಿಗೆ ಇನ್ನೂ ಹಲವು ಗೇಮ್ಸ್‌ಗಳನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಸ್ವೀಚ್‌ ಡಿವೈಸ್‌ಗಳನ್ನು ಟೆಲಿವಿಷನ್‌ಗೆ ಕನೆಕ್ಟ್‌ ಮಾಡುವ ಆಯ್ಕೆಯನ್ನು ನೀಡುವ ಬಗ್ಗೆ ಮಾಹಿತಿ ತಿಳಿಸಿಲ್ಲ.

ಸಂಸ್ಥೆಯ ಆಲ್‌ ಟೈಮ್‌ ಫೇವರೆಟ್‌ ಗೇಮ್ಸ್‌ಗಳಾದ ಮೂನ್‌ಲೈಟರ್‌, ಹ್ಯಾಲೋ ನೈಟ್‌, ಮೈನ್‌ಕ್ರಾಫ್ಟ್‌, ಆಕ್ಟೊಪಾತ್‌ ಟ್ರಾವೆಲರ್‌, ರೇಮನ್ ಲೆಜೆಂಡ್, ಮಾರಿಯೊ ಪ್ಲಸ್‌ ರಾಬಿಡ್ಸ್‌, ಸೂಪರ್‌ ಸ್ಮಾಸ್‌ ಬ್ರೂಸ್‌, ಟೆಟ್ರಿಸ್‌99, ಮಾರಿಯೊ ಕಾರ್ಟ್‌, ಸೂಪರ್‌ ಮಾರಿಯೊ ಓಡಿಯಾಸಿಸ್‌, ದಿ ಲೆಜೆಂಡ್‌ ಆಫ್‌ ಜೇಲ್ದಾ ಇನ್ನು ಹೊಸ ಬಗೆಯ ಗೇಮ್ಸ್‌ಗಳನ್ನು ಸ್ವೀಚ್ ಡಿವೈಸ್‌ ಮಾದರಿಯಲ್ಲಿ ಆಡಬಹುದಾಗಿದೆ.

Best Mobiles in India

English summary
New Nintendo Switch Models Releasing This Year - Report.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X