Subscribe to Gizbot

ವರ್ಷಕ್ಕೆ 1000 GB ಜಿಯೋ ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಕಡಿಮೆ ಅವಧಿಯಲ್ಲಿ ಸೆಳೆದಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಇನ್ನಷ್ಟು ನೂತನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಹೊಸ ಫೋನ್ ಗಳನ್ನು ಕೊಳ್ಳುವವರಿಗೆ ಹೆಚ್ಚಿನ ಡೇಟಾ ಮತ್ತು ಕ್ಯಾಷ್ ಬ್ಯಾಕ್ ವೋಚರ್‌ಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದೆ. ಸದ್ಯ ಇದೇ ಮಾದರಿಯಲ್ಲಿ ಒಂದು TB ಡೇಟಾವನ್ನು ಬಳಕೆದಾರರಿಗೆ ಉಚಿತವಾಗಿ ನೀಡುವ ಆಫರ್ ವೊಂದನ್ನು ಜಿಯೋ ಘೋಷಣೆ ಮಾಡಿದೆ.

ವರ್ಷಕ್ಕೆ 1000 GB ಜಿಯೋ ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

ಓದಿರಿ: ಶಾಕಿಂಗ್ ನ್ಯೂಸ್: ಜಿಯೋ DTH ಸೇವೆ ರದ್ದು..! ಕಾರಣ..!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಈಗಾಗಲೇ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್‌ ಟಾಪ್‌ ಎಂಡ್ ಪೋನ್‌ಗಳಾದ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಕೊಳ್ಳುವವರಿಗೆ ರಿಲಯನ್ಸ್ ಜಿಯೋ ಆಫರ್ ವೊಂದನ್ನು ನೀಡಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಸಾಧ್ಯತೆ ಇದ್ದು, ಇತರೆ ಯಾವುದೇ ಕಂಪನಿಗಳು ಇಟ್ಟು ದೊಡ್ಡ ಮಟ್ಟದ ಡೇಟಾ ಆಫರ್ ಅನ್ನು ಇದುವರೆವಿಗೂ ಘೋಷಣೆ ಮಾಡಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ವರ್ಷಕ್ಕೆ 1 TB ಡೇಟಾ:

ಒಂದು ವರ್ಷಕ್ಕೆ 1 TB ಡೇಟಾ:

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಕೊಳ್ಳುವವರಿಗೆ ರಿಲಯನ್ಸ್ ಜಿಯೋ ಒಂದು ವರ್ಷದ ಅವಧಿಗೆ ಬಳಕೆ ಮಾಡಿಕೊಳ್ಳಲು 1 TB ಡೇಟಾವನ್ನು ನೀಡಲಿದೆ. ಇದಲ್ಲದೇ ಉಚಿತವಾಗಿ ಮಿತಿ ಇಲ್ಲದ ಕರೆ ಮಾಡುವ ಸೇವೆಯನ್ನು ಹಾಗೂ ಉಚಿತವಾಗಿ SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ.

ರೂ.4999;

ರೂ.4999;

ರಿಯಲನ್ಸ್ ಜಿಯೋ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಕೊಳ್ಳುವವರಿಗೆ ನೀಡುತ್ತಿರುವ ಆಫರ್ ಮೌಲ್ಯವೂ ರೂ.15,000 ಗಳಾಗಲಿದ್ದು, ಇದನ್ನು ಕೇವಲ ರೂ.4999ಕ್ಕೆ ನೀಡುತ್ತಿದೆ. ಇದಲ್ಲದೇ ಇನ್ನು ಅನೇಕ ಆಫರ್ ಗಳನ್ನು ಇದರೊಂದಿಗೆ ಜಿಯೋ ತ್ವರೆ ಮಾಡಲಿದೆ.

ಕ್ಯಾಷ್ ಬ್ಯಾಕ್ ಸಹ ಇದೆ:

ಕ್ಯಾಷ್ ಬ್ಯಾಕ್ ಸಹ ಇದೆ:

ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಖರೀದಿಸಿದರೆ ರೂ.6000 ಕ್ಯಾಷ್ ಬ್ಯಾಕ್ ನೀಡುವ ಆಫರ್ ಅನ್ನು ರಿಲಯನ್ಸ್ ನೀಡಿದೆ. ಇದರಿಂದ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

70% ಬೈ ಬ್ಯಾಕ್:

70% ಬೈ ಬ್ಯಾಕ್:

ಇದಲ್ಲದೇ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಜಿಯೋ ನೊಂದಿಗೆ ಖರೀದಿಸಿದರೆ ಶೇ.70%ರಷ್ಟು ಬೈ ಬ್ಯಾಕ್ ಆಫರ್ ಅನ್ನು ಸಹ ನೀಡಲಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ದೊಡ್ಡ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ.

ಬೆಲೆಗಳು:

ಬೆಲೆಗಳು:

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ಯಾಲೆಕ್ಸಿ S9 64GB ಆವೃತ್ತಿಯೂ ರೂ. 57,900ಕ್ಕೆ ಹಾಗೂ 256GB ಆವೃತ್ತಿ ರೂ.64,900ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ 64GB ಆವೃತ್ತಿಯೂ ರೂ.65,900ಕ್ಕೆ ಹಾಗೂ 256GB ಆವೃತ್ತಿಯೂ ರೂ.72,900ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio offers 1TB data for a year to Samsung Galaxy S9, Galaxy S9+. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot