ವೈರ್‌ಲೆಸ್ಸ್ ಪವರ್ ಬ್ಯಾಂಕ್: ಚಾರ್ಜ್ ಮಾಡಲು ವೈರ್ ಬೇಕಾಗಿಲ್ಲ..!!

ವೈರ್‌ಲೆಸ್ ಚಾರ್ಜರ್ ಈಗ ಸಾಮಾನ್ಯ ಫೋನ್‌ಗಳಲ್ಲಿ ದೊರೆಯಲಿದೆ. ಅಲ್ಲದೇ ಇದಕ್ಕಾಗಿ ನೀವು ಹೊಸ ಫೋನ್ ಕೊಳ್ಳುವ ಅವಶ್ಯಕತೆ ಇಲ್ಲ.

|

ಸ್ಮಾರ್ಟ್‌ಫೋನ್‌ಕೊಂಡವರಿಗೆ ಬಹುದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಸಾಲುವುದಿಲ್ಲ. ಕಾರಣ ಸ್ಮಾರ್ಟ್‌ಫೋನ್‌ ಎಂದ ಮೇಲೆ ವಿಡಿಯೋ ನೋಡುವುದು, ಆಟ ಆಡುವುದು, ಆಪ್‌ಗಳನ್ನು ಬಳಸುವುದನ್ನು ಮಾಡುತ್ತಿರುತ್ತಾರೆ. ಅಲ್ಲದೇ 4G ಸೇವೆ ಆರಂಭವಾದ ನಂತರ ವೇಗದ ಇಂಟರ್‌ನೆಟ್‌ಗಾಗಿ ಹೆಚ್ಚಿನ ಬ್ಯಾಟರಿ ಖಾಲಿಯಾಗುತ್ತದೆ. ಪದೇ ಪದೇ ಮೊಬೈಲ್‌ ಚಾರ್ಜಿಗೆ ಹಾಕಬೇಕಾಗುತ್ತದೆ. ಇದಕ್ಕಾಗಿ ನಡೆದ ಅವಿಷ್ಕಾರವೇ ವೈರ್‌ಲೆಸ್ ಚಾರ್ಜರ್.

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನುಗಳಲ್ಲಿ ಮಾತ್ರವೇ ಕಾಣಸಿಗುತ್ತಿದ್ದ ಹಾಗೂ ಬೆರಳೆಣಿಕೆ ಫೋನ್‌ಗಳಲ್ಲಿ ಮಾತ್ರವೇ ಲಭ್ಯವಿದ್ಧ ವೈರ್‌ಲೆಸ್ ಚಾರ್ಜರ್ ಈಗ ಸಾಮಾನ್ಯ ಫೋನ್‌ಗಳಲ್ಲಿ ದೊರೆಯಲಿದೆ. ಅಲ್ಲದೇ ಇದಕ್ಕಾಗಿ ನೀವು ಹೊಸ ಫೋನ್ ಕೊಳ್ಳುವ ಅವಶ್ಯಕತೆ ಇಲ್ಲ.

ಪೋರ್ಟಬಲ್ ಚಾರ್ಜರ್:

ಪೋರ್ಟಬಲ್ ಚಾರ್ಜರ್:

ಸದ್ಯ ಮಾರುಕಟ್ಟೆಗೆ ಪೋರ್ಟಬಲ್ ಚಾರ್ಜರ್ ಒಂದು ಬಂದಿದ್ದು, ಇದು ಪವರ್ ಬ್ಯಾಂಕ್ ಮಾದರಿಯಲ್ಲೂ ಕಾರ್ಯ ನಿರ್ವಹಿಸಲಿದ್ದು, ಚಾರ್ಜರ್ ಮಾದರಿಯಲ್ಲಿ ಫೋನ್ ಚಾರ್ಜ್ ಮಾಡಲಿದೆ.

Qi ವೈರ್‌ಲೈಸ್ ಚಾರ್ಜರ್:

Qi ವೈರ್‌ಲೈಸ್ ಚಾರ್ಜರ್:

ಸದ್ಯ ಬಿಡುಗಡೆಗೊಂಡಿರುವ MobilePal QIWI-G2-KL Gen-2 10000 mAh Qi Wireless Power Bank ನಲ್ಲಿ Qi ವೈರ್‌ಲೈಸ್ ಚಾರ್ಜರ್ ಅಳವಡಿಸಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಟಾಪ್‌ ಎಂಡ್ ಫೋನ್ ಚಾರ್ಜರ್‌ಗಳು ಇದೇ ಮಾದರಿಯ ಚಾರ್ಜಿಂಗ್ ಬಳಕೆ ಮಾಡುತ್ತಿವೆ.

10000mAh ಬ್ಯಾಟರಿ:

10000mAh ಬ್ಯಾಟರಿ:

ಈ ಪೋರ್ಟಬಲ್ ಚಾರ್ಜರ್ ನಲ್ಲಿ 10000mAh ಬ್ಯಾಟರಿ ಅಳವಡಿಸಲಾಗಿದ್ದು, ಪವರ್ ಹೊಂದ ಸಂದರ್ಭದಲ್ಲಿಯೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಇದು ಪವರ್ ಬ್ಯಾಂಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಆಂಡ್ರಾಯ್ಡ್, ಆಪಲ್ ಫೋನ್ ಚಾರ್ಜ್ ಮಾಡಿಕೊಳ್ಳಬಹುದು:

ಆಂಡ್ರಾಯ್ಡ್, ಆಪಲ್ ಫೋನ್ ಚಾರ್ಜ್ ಮಾಡಿಕೊಳ್ಳಬಹುದು:

ಈ ಪೋರ್ಟಬಲ್ ಚಾರ್ಜರ್ ನಲ್ಲಿ ಆಂಡ್ರಾಯ್ಡ್ ಮತ್ತು ಆಪಲ್ ಫೋನ್‌ಗಳನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಚಾರ್ಜಿಂಗ್‌ನಲ್ಲಿ ಎರಡು ಆಯ್ಕೆ ನೀಡಲಾಗಿದ್ದು, ಒಂದು ವೇಗವಾಗಿ ಆಗಲಿದೆ ಮತ್ತೊಂದು ನಿಧಾನವಾಗಿ ಚಾರ್ಜ್ ಆಗಲಿದೆ.

ಪವರ್ ಬ್ಯಾಂಕ್ ಮೇಲೆ ಫೋನ್ ಇಟ್ಟರೇ ಸಾಕು:

ಪವರ್ ಬ್ಯಾಂಕ್ ಮೇಲೆ ಫೋನ್ ಇಟ್ಟರೇ ಸಾಕು:

ಈ ಪೋರ್ಟಬಲ್ ಚಾರ್ಜರ್ ನ ಮೇಲೆ ನಿಮ್ಮ ಫೋನ್‌ನ್ನು ಇರಿಸಿದರೆ ಸಾಕು. ಫೋನ್ ತನಾಗಿಯೇ ಚಾರ್ಜ್ ಆಗಲು ಶುರುವಾಗಲಿದೆ. ಇದಕ್ಕಾಗಿ ನೀವು ಯಾವುದ ವೈರ್ ಸಂಪರ್ಕಿಸುವ ಅಗತ್ಯ ವಿಲ್ಲ. ಸದ್ಯ ಈ ಪೋರ್ಟಬಲ್ ಚಾರ್ಜರ್ ಅಮೆರಿಕಾದಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರವೇ ಅಮಜಾನ್ ಭಾರತಕ್ಕೂ ಪರಿಚಯಿಸಲಿದೆ.

Best Mobiles in India

Read more about:
English summary
Qi wireless charger on the go with a large-capacity battery and dual smart 2.1a USB outputs. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X