Subscribe to Gizbot

CES 2018: ಸ್ಯಾಮ್ ಸಂಗ್ ನಿಂದ ವಿವಿಧ ಸ್ಮಾರ್ಟ್ ವಸ್ತುಗಳ ಬಿಡುಗಡೆ

Written By: Lekhaka

ವಿಶ್ವ ಟೆಕ್ ಮಾರುಕಟ್ಟೆಯ ದೈತ್ಯ ಸ್ಯಾಮ್ ಸಂಗ್ CES 2018 ಕಾರ್ಯಕ್ರಮದಲ್ಲಿ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಒಂದರ ಹಿಂದೆ ಒಂದರಂತೆ ಸ್ಮಾರ್ಟ್ ಡಿವೈಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

CES 2018: ಸ್ಯಾಮ್ ಸಂಗ್ ನಿಂದ ವಿವಿಧ ಸ್ಮಾರ್ಟ್ ವಸ್ತುಗಳ ಬಿಡುಗಡೆ

CES 2018 ಕಾರ್ಯಕ್ರಮದಲ್ಲಿ ಸ್ಮಾಮ್ ಸಂಗ್ ಬಿಡುಗಡೆ ಮಾಡಿರುವ ವಿವಿಧ ಎಲೆಕ್ಟ್ರಾನಿಕ ವಸ್ತುಗಳ ಕುರಿತಂತೆ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್ ಸಂಗ್ ದಿ ವಾಲ್:

ಸ್ಯಾಮ್ ಸಂಗ್ ದಿ ವಾಲ್:

ಸ್ಯಾಮ್ ಸಂಗ್ ವಿಶ್ವದ ಮೊದಲ ಮೈಕ್ರೋ LED ಟಿವಿಯನ್ನು ವಾಲ್ ಹೆಸರಿನಲ್ಲಿ ಲಾಂಚ್ ಮಾಡಿದ್ದು, ಇದು 146 ಇಂಚಿ ನಷ್ಟು ದೊಡದ್ದಾಗಿದೆ. ಇದನ್ನು ವಿಭಿನ್ನವಾಗಿ ಸ್ಯಾಮ್ ಸಂಗ್ ನಿರ್ಮಾಣ ಮಾಡಿದ್ದು, ಇದು ಹೊಸ ತಂತ್ರಜ್ಞಾನದಿಂದ ಕೂಡಿದ್ದು, ಇದು ನೀವು ಟಿವಿ ನೋಡುವ ವಿಧಾನವನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಸ್ಯಾಮ್ ಸಂಗ್ Q9S 8K TV:

ಸ್ಯಾಮ್ ಸಂಗ್ Q9S 8K TV:

ಸ್ಯಾಮ್ ಸಂಗ್ 85 ಇಂಚಿನ 8K ಟಿವಿಯನ್ನು ಲಾಂಚ್ ಮಾಡಿದ್ದು, ಮೊದಲ ಬಾರಿಗೆ ಟಿವಿಯಲ್ಲಿ ಕೃತಕ ಬುದ್ದಿ ಮತ್ತೆಯನ್ನು ಅಳವಡಿಸಿದೆ ಎನ್ನಲಾಗಿದೆ. ಇದು ಸ್ಯಾಮ್ ಸಂಗ್ ಬಿಡುಗಡೆ ಮಾಡಿದರುವ ಹೈಯಂಡ್ ಟಿವಿಯಾಗಿದೆ. ಇದು ಉತ್ತಮ ಗುಣಮಟ್ಟದ ಪಿಚ್ಚರ್ ಕ್ಯಾಲಿಟಿಯನ್ನು ನೀಡಲು ಶಕ್ತವಾಗಿದೆ.

ನೋಟ್ ಬುಕ್ 7 ಸ್ಪಿನ್ ಮತ್ತು ನೋಟ್ ಬುಕ್ 9 ಸ್ಪಿನ್:

ನೋಟ್ ಬುಕ್ 7 ಸ್ಪಿನ್ ಮತ್ತು ನೋಟ್ ಬುಕ್ 9 ಸ್ಪಿನ್:

ಸ್ಯಾಮ್ ಸಂಗ್ ಹೊಸದಾಗಿ 360 ಡಿಗ್ರಿ ತಿರುಗಿಸಬಹುದಾದ ನೋಟ್ ಬುಕ್ 7 ಸ್ಪಿನ್ ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ನೋಟ್ ಬುಕ್ 9 ಸ್ಪಿನ್ ಅನ್ನು ಲಾಂಚ್ ಮಾಡಿದೆ. ಇದರೊಂದಿಗೆ ಸ್ಮಾರ್ಟ್ ಪೆನ್ ಅನ್ನು ಸಹ ಸ್ಯಾಮ್ ಸಂಗ್ ನೀಡಲು ಮುಂದಾಗಿದೆ.

CES 2018 : ಅಸುಸ್ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ಲಾಂಚ್

ಸ್ಯಾಮ್ ಸಂಗ್ ಸಾಫ್ಟ್ ವೇರ್:

ಸ್ಯಾಮ್ ಸಂಗ್ ಸಾಫ್ಟ್ ವೇರ್:

ಇದಲ್ಲದೇ ಸ್ಮಾರ್ ಫೋನ್ ಗಳಲ್ಲಿ ಬಳಕೆ ಮಾಡಿಕೊಳ್ಳುವ ಸಲುವಾಗಿ ಬಿಕ್ಸ್ ಬೈ ವಾಯ್ಸ್ ಅಸಿಸ್ಟೆಂಟ್ ಅನ್ನು ನಿರ್ಮಾಣ ಮಾಡಿದೆ. ಇದನ್ನು ತನ್ನ ಸ್ಮಾರ್ಟ್ ಟಿವಿಗಳಲ್ಲಿ ಅಳವಡಿಸಲಿದೆ ಎನ್ನಲಾಗಿದೆ. ಇದು ವಿವಿಧ ಮಾದರಿಯಲ್ಲಿ ಬಳಕೆಯಾಗಲಿದೆ ಎನ್ನಲಾಗಿದೆ. ಇದಲ್ಲದೇ ಮನೆಯಲ್ಲಿರುವ ಸ್ಮಾರ್ಟ್ ಡಿವೈಸ್ ಗಳನ್ನು ಕಂಟ್ರೋಲ್ ಮಾಡಲು ಸಹ ಸಾಫ್ಟ್ ವೇರ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಸ್ಪೀಕರ್ ಗಳು:

ಸ್ಪೀಕರ್ ಗಳು:

ಸ್ಮಾಮ್ ಸಂಗ್ NW700 3.1 ಚಿಕ್ಕದಾದ ಸೌಂಡ್ ಬಾರ್ ಅನ್ನು ಬಿಡುಗಡೆ ಮಾಡಿದ್ದುಮ ಇದು ಡಿಜಿಟಲ್ ಸಿಗ್ನಲ್ ಪ್ರೋಸೆಸರ್ ಅನ್ನು ಸಹ ಒಳಗೊಂಡಿದ್ದು, ಉತ್ತಮವಾದ ಶಬ್ದವನ್ನು ಬಿಡುಗಡೆ ಮಾಡಲಿದೆ. ಇದು ವೈರ್ ಲೈಸ್ ಆಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಉತ್ತಮವಾದ ಸೌಂಡ್ ಕ್ವಾಲಿಟಿಯನ್ನು ಇದು ಹೊಂದಿದೆ ಎನ್ನಲಾಗಿದೆ.

How to save WhatsApp Status other than taking screenshots!! Kannada
ಇತರೆ:

ಇತರೆ:

ಇದಲ್ಲದೇ ಸ್ಯಾಮ್ ಸಂಗ್ ಎಕ್ಸ್ ನೋಸ್ 9810 ಪ್ರೋಸೆಸರ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಇದು ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳಿದೆ ಎನ್ನಲಾಗಿದೆ. ಶೀಘ್ರವೇ ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Samsung held its press conference at CES 2018 just a couple of hours back. The company announced The Wall that is a 146-inch MicroLED TV, an 85-inch 8K TV, Notebook 7 Spin and Notebook 9 Spin, and many others. Here are all the products and services that Samsung announced at the CES 2018 tech show. Take a look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot