Just In
- 44 min ago
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- 1 hr ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
Don't Miss
- Finance
Post Office scheme: ಮಾಸಿಕ 9,000 ರೂ ಆದಾಯ ಪಡೆಯುವುದು ಹೇಗೆ?
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮತ್ತು ಇತರೆ ಆಕ್ಸಸರೀಸ್ ಗಳಲ್ಲಿ ಕರೋನಾ ವೈರಸ್ !
ಕರೋನಾ ಹರಡುತ್ತಿರುವ ರೀತಿ ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸಿದೆ. ಇಡೀ ಜಗತ್ತೇ ಭೀತಿಗೊಳಗಾಗುವಂತೆ ಮಾಡಿದೆ. ಕರೋನಾ ವೈರಸ್ ಹರಡದಂತೆ ತಡೆಯುವುದಕ್ಕಾಗಿ ಭಾರತ ಸರ್ಕಾರ ಕೂಡ ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಜನರ ಬೆಂಬಲದ ಅಗತ್ಯತೆ ಬೇಕಾಗಿದೆ.

ಈ ನಿಟ್ಟಿನಲ್ಲಿ ಡಬ್ಲ್ಯೂಹೆಚ್ಓ ಕೂಡ ಜಾಗೃತಿ ಮೂಡಿಸಿದೆ. ಕಂಪೆನಿಗಳು, ಆಫೀಸ್ ಗಳು ಆದಷ್ಟು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಹಳ ಮುಖ್ಯವಾಗಿದೆ. ಅಷ್ಟೇ ಅಲ್ಲ ಮನೆಯಲ್ಲೇ ಇರಿ ಎಲ್ಲೂ ಅನಗತ್ಯವಾಗಿ ತಿರುಗಾಡಬೇಡಿ ಎಂದು ಎಚ್ಚರಿಸಲಾಗಿದೆ. ಈ ಸಂದರ್ಬದಲ್ಲಿ ಮನೆ ಮಾತ್ರವಲ್ಲ, ಮನೆಯಲ್ಲಿ ನೀವು ಬಳಕೆ ಮಾಡುವ ಗೆಡ್ಜೆಟ್ಸ್ ಕೂಡ ಸ್ವಚ್ಛವಾಗಿರುವುದು ಬಹಳ ಮುಖ್ಯ.ಲ್ಯಾಪ್ ಟಾಪ್ ಗಳು, ಮೊಬೈಲ್ ಗಳು ಸೇರಿದಂತೆ ಅತೀ ಹೆಚ್ಚು ನೀವು ಮುಟ್ಟುವ ವಸ್ತುಗಳೆಲ್ಲವೂ ಕೂಡ ಸ್ಯಾನಿಟೈಸ್ ಆಗಿರಬೇಕಾದ ಅನಿವಾರ್ಯತೆಯನ್ನು ಕರೋನ ಸೃಷ್ಟಿಸಿದೆ.
ಹಾಗಾದ್ರೆ ನಿಮ್ಮೆಲ್ಲಾ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಕ್ಲೀನ್ ಮಾಡಿ ವೈರಸ್ ನಿಂದ ದೂರವಿರುವಂತೆ ನೋಡಿಕೊಳ್ಳುವುದು ಹೇಗೆ? ಈ ರೀತಿ ಗೆಡ್ಜೆಟ್ಸ್ ಗಳನ್ನು ಸ್ವಚ್ವವಾಗಿಟ್ಟುಕೊಳ್ಳುವುದು ಕೇವಲ ಸೋಂಕಿನಿಂದ ದೂರವಿರಬೇಕು ಎಂಬುದಷ್ಟೇ ಕಾರಣಕ್ಕಾಗಿ ಅಲ್ಲ ಇದೊಂದು ರೀತಿಯ ವಯಕ್ತಿಕ ಸ್ವಚ್ಛತೆಯ ಭಾಗವೂ ಹೌದು. ಕೇವಲ ಕೊರೊನಾಗಾಗಿ ಮಾತ್ರವೇ ಈ ಕೆಲಸ ಮಾಡುವುದಲ್ಲ. ನಿತ್ಯದ ದಿನಚರಿಯಲ್ಲಿ ನಿಮ್ಮ ಗೆಡ್ಜೆಟ್ಸ್ ಗಳನ್ನು ಕ್ಲೀನ್ ಇಟ್ಟುಕೊಳ್ಳುವ ರೂಢಿ ಪ್ರತಿಯೊಬ್ಬರೂ ಇರುವುದು ಅತ್ಯವಶ್ಯಕ.
ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಪದೇ ಪದೇ ಮುಖವನ್ನು ಮುಟ್ಟಿಕೊಳ್ಳುತ್ತಿರಬೇಡಿ. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಿ ಎಂಬಿತ್ಯಾದಿ ವಿಚಾರಗಳು ಕೊರೋನಾ ವೈರಸ್ ನ ಕಾರಣದಿಂದ ಇದೀಗ ಸದ್ಯ ಕೇಳಿಬರುತ್ತಿರುವ ಮಾತುಗಳೇ ಆಗಿದ್ದರೂ ಕೂಡ ಇದು ಕೇವಲ ಇಂದು,ನಿನ್ನೆಗಾಗಿ ಮಾತ್ರವಲ್ಲ ಬದಲಾಗಿ ನಿಮ್ಮ ಜೀವನದ ಪ್ರತಿ ಕ್ಷಣವೂ ರೂಢಿಯಲ್ಲಿರಬೇಕಾದ ಅಂಶವಾಗಿರುತ್ತದೆ.

ಸೋಂಕು ನಿವಾರಕದಿಂದ ಒರೆಸುವುದು
ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಮತ್ತು ವೈರಸ್ ಗಳಿಂದ ಮುಕ್ತವಾಗಿಟ್ಟುಕೊಳ್ಳುವುದಕ್ಕೆ ಸೋಂಕು ನಿವಾರಕದಿಂದ ಒರೆಸುವುದು ಬಹಳ ಒಳ್ಳೆಯ ಉಪಾಯವಾಗಿದೆ.

ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಸ್ವಚ್ಛಗೊಳಿಸುವುದಕ್ಕೆ ಕ್ಲೋರೋಕ್ಸ್ ವೈಪ್ಸ್ ಗಳನ್ನು ಬಳಕೆ ಮಾಡಬಹುದು ಅಥವಾ 70% ಇರುವ ಐಸೋಪ್ರೋಫೈಲ್ ಆಲ್ಕೋಹಾಲ್ ವೈಪ್ಸ್ ಗಳನ್ನು ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವುದಕ್ಕೆ ಬಳಕೆ ಮಾಡಬಹುದು. ಆಪಲ್ ಸಂಸ್ಥೆ ಈ ವೈಪ್ಸ್ ಗಳನ್ನು ತಮ್ಮ ಸ್ಮಾರ್ಟ್ ಫೋನ್ ಗಳಿಗೆ ಬಳಕೆ ಮಾಡಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ನ ವರದಿಯಲ್ಲಿ ಹೇಳಲಾಗಿದೆ. ಗೂಗಲ್ ಕೂಡ ಈ ವೈಪ್ಸ್ ಗಳನ್ನು ಬಳಕೆ ಮಾಡುವುದಕ್ಕೆ ಅನುಮತಿ ನೀಡಿದ್ದು ಪಿಕ್ಸಲ್ ಡಿವೈಸ್ ಗಳನ್ನು ಸ್ವಚ್ಛಗೊಳಿಸುವುದಕ್ಕೆ ಬಳಕೆ ಮಾಡಬಹುದು. ನಿಮ್ಮ ಇತರೆ ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಸ್ವಚ್ಛಗೊಳಿಸುವಿಕೆಗೂ ಕೂಡ ಈ ವೈಪ್ಸ್ ಗಳು ಉತ್ತಮವಾದದ್ದು ಎಂದು ಹೇಳಲಾಗಿದೆ.

ಆದರೆ ರಬ್ಬಿಂಗ್ ಆಲ್ಕೋಹಾಲ್ ನ್ನು ಸ್ಮಾರ್ಟ್ ಫೋನ್ ಗಳಿಗೆ ಅಥವಾ ಇತರೆ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಗಳಿಗೆ ಬಳಕೆ ಮಾಡಬೇಡಿ. ನಿಮ್ಮ ಮನೆ ಅಥವಾ ಆಫೀಸಿನಲ್ಲಿರುವ ಲ್ಯಾಪ್ ಟಾಪ್ ಗಳು, ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳು ಇತರೆ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಗಳಿಗೆ ಇದನ್ನು ಬಳಕೆ ಮಾಡಬಹುದು.

UV ಸ್ಯಾನಿಟೈಸರ್ ಗಳು
ವೈಪ್ಸ್ ಗಳನ್ನು ಹೊರತು ಪಡಿಸಿ ಯುವಿ ಸ್ಯಾನಿಟೈಸರ್ ಗಳಾದ ಉದಾಹರಣೆಗೆ ಸೋಪ್ ಫೋನ್ ಗೋ ಗಳನ್ನು ಎಲೆಕ್ಟ್ರಾನಿಕ್ ಡಿವೈಸ್ ಗಳ ಸ್ವಚ್ಛತೆಗೆ ಬಳಕೆ ಮಾಡಬಹುದು.ಈ ಟ್ರಿಕ್ಸ್ ಕೇವಲ ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡುತ್ತದೆ ಯಾಕೆಂದರೆ ಇದನ್ನು ಡಿವೈಸ್ ಗಳ ಒಳಗಡೆ ಇಡಬೇಕಾಗುತ್ತದೆ ಮತ್ತು ಯುವಿ ಲೈಟ್ ವೈರಸ್ ಗಳನ್ನು ಕೊಲ್ಲುತ್ತದೆ. ಆದರೆ ನೀವು ನೆನಪಿನಲ್ಲಿರಬೇಕಾಗಿರುವ ಪ್ರಮುಖ ವಿಚಾರವೆಂದರೆ COVID-19 ವೈರಸ್ ನ್ನು ಯುವಿ ಕೊಲ್ಲುತ್ತದೆಯೇ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470