TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗೊರಕೆ ಸೌಂಡ್ ನಿಲ್ಲಿಸುವ ಸ್ಮಾರ್ಟ್ ಗ್ಯಾಜೆಟ್!!
ಇವತ್ತು ನಾವು ತಿಳಿಸೋ ವಿಷಯ ಎಲ್ಲರ ಮೇಲೆ ಪರಿಣಾಮ ಬೀರಿರಬಹುದು. ಅಲ್ಲದೇ ಆ ವಿಷಯದಿಂದ ಶಿಕ್ಷೆಯನ್ನು ಅನುಭವಿಸಿರಬಹುದು. ಈ ವಿಷಯ ವಿಶ್ವವ್ಯಾಪಿ ಸಮಸ್ಯೆ ಎಂದರೂ ಸಹ ತಪ್ಪಾಗಲಾರದು. ಈ ವಿಷಯದಿಂದ ಬಹುಸಂಖ್ಯಾತರು ಬೇಸತ್ತು ಬೇಸರಗೊಂಡು ನಿದ್ರೆಯೇ ಇಲ್ಲದಂತಾಗಿದ್ದಾರೆ. ಅಯ್ಯೋ ಅದೇನಂತಾ ವಿಷಯ? ಅಂತಿರಾ. ನಾವು ಇಷ್ಟೊಂತ್ತು ಹೇಳಿದ್ದು "ಗೊರಕೆ ಸೌಂಡ್" ಬಗ್ಗೆ. ರಾತ್ರಿ ವೇಳೆ ಪಕ್ಕದಲ್ಲಿ ಮಲಗಿರುವವರು ಗೊರಕೆ ಹೊಡೆದ್ರೆ, ಗೊರಕೆ ಹೊಡೆಯುವವರಿಗೆ ಅತಿಯಾದ ನಿದ್ರೆ ಬಂದು ಗೊರಕೆ ಹೊಡೆಯುತ್ತಾರೆ. ಆದ್ರೆ ಅವರ ಗೊರಕೆ ಸೌಂಡ್ ಅವರಿಗೆ ಕೇಳುವುದೇ ಇಲ್ಲಾ. ಪಕ್ಕದಲ್ಲಿ ಮಲಗಿರುವವರಿಗೆ ಮಾತ್ರ ಆಕ್ರೇಸ್ಟ್ರಾ ಇದ್ದಹಾಗೆ. ನಿದ್ದೆ ಟೈಮ್‌ನಲ್ಲಿ ಯಾರಿಗೆ ತಾನೆ ಈ ಗೊರಕೆ ಆಕ್ರೇಸ್ಟ್ರಾ ಸೌಂಡ್ ಸಹಿಸಿಕೊಳ್ಳೋಕೆ ಆಗುತ್ತೇ ಹೇಳಿ. ಖಂಡಿತಾ ಬಹುಸಂಖ್ಯಾತರಿಗೆ ಈ ಗೊರಕೆ ಸೌಂಡ್ ದಿನನಿತ್ಯ ವಿಶ್ವದಾದ್ಯಂತ ತಪ್ಪಿದಲ್ಲ. ತಮ್ಮ ಪಕ್ಕದಲ್ಲಿ ಮಲಗುವ ಗಂಡ, ಹೆಂಡತಿ, ತಮ್ಮ, ತಂಗಿ, ಅಣ್ಣ, ತಮ್ಮ, ಅಜ್ಜಿ, ತಾತ, ಹೀಗೆ ಒಬ್ಬರಿಂದ ಯಾರಾದರೂ ಒಬ್ಬರಿಗೆ ಈ ಗೊರಕೆ ಹೊಡೆಯುವವರ ಸೌಂಡ್ ತಪ್ಪಿದಲ್ಲಾ.
ಅಂದಹಾಗೆ ಇವತ್ತು ಗೊರಕೆ ಬಗ್ಗೆ ಯಾಕ್ ಹೇಳ್ತಿದ್ದೀವಿ ಅಂದ್ರೆ ಈ ಗೊರಕೆ ಸೌಂಡ್ ನಿಯಂತ್ರಿಸಲು ಸ್ಮಾರ್ಟ್ ಗ್ಯಾಜೆಟ್ ಒಂದು ರೆಡಿಯಾಗಿದೆ. ಇದು ಗೊರಕೆ ಹೊಡೆಯುವವರ ಸೌಂಡ್ ಅನ್ನು ಆಟೋಮೆಟಿಕಲಿ ಕ್ಯಾನ್ಸೆಲ್ ಮಾಡುತ್ತಂತೆ ಅದು ಹೇಗೆ ಅಂತ ಈ ಲೇಖನದ ಸ್ಲೈಡರ್ ಓದಿ ತಿಳಿಯಿರಿ. ಕೊನೆಯ ಸ್ಲೈಡರ್‌ನಲ್ಲಿ ವೀಡಿಯೋ ಸಹ ನೋಡಿರಿ.
ಸೈಲೆಂಟ್ ಪಾರ್ಟ್ನರ್
ಅಂದಹಾಗೆ ಗೊರಕೆ ಸೌಂಡ್ ನಿಲ್ಲಿಸಲು ಅಭಿವೃದ್ದಿಗೊಂಡಿರುವ ಸ್ಮಾರ್ಟ್ ಗ್ಯಾಜೆಟ್ ಹೆಸರು "ಸೈಲೆಂಟ್ ಪಾರ್ಟ್ನರ್".
ಮೊದಲ ಪ್ರಚಾರದಲ್ಲೇ $40,000
ಅದ್ಭುತ 'ಸೈಲೆಂಟ್ ಪಾರ್ಟ್ನರ್' ಸ್ಮಾರ್ಟ್ ಗ್ಯಾಜೆಟ್ ತನ್ನ ಮೊದಲ Indiegogo ಪ್ರಚಾರದಲ್ಲೇ ತನ್ನ ಉಪಯುಕ್ತತೆಯಿಂದ $40,000 (26,68,600 ರೂ) ಸಂಪಾದನೆ ಮಾಡಿದೆ.
'ಸೈಲೆಂಟ್ ಪಾರ್ಟ್ನರ್' ಕಾರ್ಯ
'ಸೈಲೆಂಟ್ ಪಾರ್ಟ್ನರ್' ಸ್ಮಾರ್ಟ್ ಗ್ಯಾಜೆಟ್ ಪರಿಣಾಮಕಾರಿಯಾಗಿದ್ದು, ಎಲ್ಲಾ ಬಗೆಯ ಗೊರಕೆ ಸಮಸ್ಯೆ ಮೇಲೆ ಪ್ರಭಾವಬೀರಲಿದೆ. 'ಸೈಲೆಂಟ್ ಪಾರ್ಟ್ನರ್' ಗ್ಯಾಜೆಟ್‌ನಲ್ಲಿನ ಮೈಕ್ರೋ ಸ್ಮಾರ್ಟ್ ಪ್ಯಾಚ್ ಮೂಗಿಗೆ ಅಂಟಿಕೊಳ್ಳುವ ಸಾಮರ್ಥ್ಯಹೊಂದಿದ್ದು, ಗೊರಕೆಯಿಂದ ಉತ್ಪತ್ತಿಯಾಗುವ ಧ್ವನಿಯ ಅಲೆಗಳನ್ನು ನಿಲ್ಲಿಸುತ್ತದೆ.
'ಸೈಲೆಂಟ್ ಪಾರ್ಟ್ನರ್' ಕಾರ್ಯ
'ಸೈಲೆಂಟ್ ಪಾರ್ಟ್ನರ್' ಸ್ಮಾರ್ಟ್ ಗ್ಯಾಜೆಟ್ ಸಣ್ಣ ಧ್ವನಿ ಚಿಕಿತ್ಸಾ ಬ್ಯಾಟರಿ ಹೊಂದಿದ್ದು, ಬ್ಯಾಟರಿ ಒಮ್ಮೆ ಚಾರ್ಜ್ ಆದರೆ ಒಂದು ರಾತ್ರಿ ಉಪಯೋಗಕ್ಕೆ ಬರುತ್ತದೆ. ಇದು ಚಾರ್ಜ್ ಆಗಲು 3 ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದು ಅಭಿವೃದ್ದಿ ಪಡಿಸಿರುವ ಕಂಪನಿ ಹೇಳಿದೆ. ಅಲ್ಲದೇ ದಿನನಿತ್ಯ ಸೈಲೆಂಟ್ ಪಾರ್ಟ್ನರ್ ಅನ್ನು ಚಾರ್ಜ್ ಮಾಡಬೇಕಾಗಿದೆ.
ಉಪಯುಕ್ತ ಸೈಲೆಂಟ್ ಪಾರ್ಟ್ನರ್
ಇದು ಗೊರಕೆಯ ಸೌಂಡ್ ಅಲೆಗಳನ್ನು ನಿಯಂತ್ರಿಸಿ ಅಡಗಿಸುವ ಸಾಮರ್ಥ್ಯ ಹೊಂದಿದ್ದು ಕಾರ್ಯನಿರ್ವಹಿಸುತ್ತದೆ. ಸೈಲೆಂಟ್ ಪಾರ್ಟ್ನರ್ ಅನ್ನು ಸೂಕ್ಷ್ಮ ಚರ್ಮಹೊಂದಿರುವವರಿಗೂ ಸರಿಹೊಂದುವಂತೆ ಹೈಪೋಅಲೆರ್ಜನಿಕ್ ಮೆಡಿಕಲ್ ಗ್ರೇಡ್ ಸಹಿತ ಅಭಿವೃದ್ದಿಗೊಳಿಸಲಾಗಿದೆ.
ನೆಟಾನೆಲ್ ಇಯಾಲ್- ಸಹ ಅಭಿವೃದ್ದಿಕಾರರು
'ಸೈಲೆಂಟ್ ಪಾರ್ಟ್ನರ್' ಸ್ಮಾರ್ಟ್ ಗ್ಯಾಜೆಟ್ ಸಹ ಅಭಿವೃದ್ದಿಗಾರರು, " ಇಂತಹ ಪ್ರಾಡಕ್ಟ್ ಅನ್ನು ಎಲ್ಲಾ ಗೊರಕೆ ಹೊಡೆಯುವವರಿಗೆ ಅಭಿವೃದ್ದಿಗೊಳಿಸುವುದು ಕಷ್ಟಕರ. ಕಾರಣ ಜನರು ಹಲವು ರೀತಿಯ ಕಾರಣಗಳಿಗೆ ಗೊರಕೆಹೊಡೆಯುತ್ತಾರೆ. ಸೈಲೆಂಟ್ ಪಾರ್ಟ್ನರ್ ಗ್ಯಾಜೆಟ್ ವಿಶ್ವವ್ಯಾಪಿಯ ಎಲ್ಲಾ ರೀತಿಯ ಗೊರಕೆಹೊಡೆಯುವವರ ಸೌಂಡ್ ನಿಯಂತ್ರಿಸಬಲ್ಲದು" ಎಂದು ಹೇಳಿದ್ದಾರೆ.
ಸೈಲೆಂಟ್ ಪಾರ್ಟ್ನರ್ ಬೆಲೆ
ಸೈಲೆಂಟ್ ಪಾರ್ಟ್ನರ್ ಪ್ರಸ್ತುತ ಬೆಲೆ $59 (ಸುಮಾರು 3,936 ರೂ). ಇದರ ಡಿಲಿವರಿಯನ್ನು 2016 ರ ನವೆಂಬರ್‌ಗೆ ನಿಗದಿಪಡಿಸಲಾಗಿದೆ.
ನೀವು ಖರೀದಿಸಲು ಆಸಕ್ತರಾದಲ್ಲಿ ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ
ಸೈಲೆಂಟ್ ಪಾರ್ಟ್ನರ್ ಕಾರ್ಯ ನಿರ್ವಹಿಸುವ ಬಗ್ಗೆ ವೀಡಿಯೋ ನೋಡಿರಿ.
ವೀಡಿಯೋ ಕೃಪೆ: Silent Partner
ಗಿಜ್‌ಬಾಟ್
ಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳು
ಪ್ರಪಂಚದ ಹೈಟೆಕ್ ಅತಿವೇಗದ ರೈಲುಗಳು ಯಾವುವು ಗೊತ್ತೇ?
ಆನ್‌ಲೈನ್‌ನಲ್ಲಿ ನಿರ್ವಹಿಸಬಹುದಾದ ಟಾಪ್ 11 ಉಚಿತ ಚಟುವಟಿಕೆಗಳು
ಆಂಡ್ರಾಯ್ಡ್'ನಲ್ಲಿ "ಸ್ಲೋ ಮೋಶನ್ ವೀಡಿಯೋ" ರೆಕಾರ್ಡಿಂಗ್ ಹೇಗೆ?
ಗಿಜ್‌ಬಾಟ್