ನಿಮ್ಮ ಕೈ ಏನು ಕೆಲಸ ಮಾಡುತ್ತಿದೆ ಎಂದು ತಾನಾಗಿಯೇ ಹೇಳುತ್ತೆ ಸ್ಮಾರ್ಟ್‌ವಾಚ್!

By Gizbot Bureau
|

ಸ್ಮಾರ್ಟ್ ವಾಚ್ ನಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ಕುತೂಹಲಕಾರಿಯಾಗಿರುವ ಕೆಲವು ಸಂಗತಿಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತದೆ. ಹೌದು ನೀವು ನಿಮ್ಮ ಹೆಂಡತಿಗೆ ತರಕಾರಿ ಹೆಚ್ಚಲು ಸಹಾಯ ಮಾಡುತ್ತಿದ್ದೀರಾ? ಪಾತ್ರೆ ತೊಳೆಯಲು ಸಹಕರಿಸುತ್ತಿದ್ದೀರಾ ಅಥವಾ ನಾಯಿಯ ಸೇವೆ ಮಾಡುತ್ತಿದ್ದೀರಾ ಇತ್ಯಾದಿಗಳನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ ಕಾರ್ನೇಜಿ ಮೆಲನ್ ಯುನಿವರ್ಸಿಟಿಯ ಅಧ್ಯಯನಕಾರರು.

ಕೆಲವು ಬದಲಾವಣೆಗಳಿಂದ ಇದು ಸಾಧ್ಯ:

ಕೆಲವು ಬದಲಾವಣೆಗಳಿಂದ ಇದು ಸಾಧ್ಯ:

ಹೌದು ಸ್ಮಾರ್ಟಾ ವಾಚ್ ನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಇದನ್ನು ಸಾಧಿಸಬಹುದಾಗಿದೆ. ಆಗ ಸ್ಮಾರ್ಟ್ ವಾಚ್ ನಲ್ಲಿರುವ ಎಕ್ಸಲೋಮೀಟರ್ ನಿಮ್ಮ ಕೈಗಳ ಚಲನೆಯನ್ನು ಗುರುತಿಸುವ ಸಾಮರ್ತ್ಯವನ್ನು ಹೊಂದುತ್ತದೆ ಮತ್ತು ಇನ್ನೂ ಕೆಲವು ಕೇಸ್ ಗಳಲ್ಲಿ ಬಯೋ-ಎಕೋಸ್ಟಿಕ್ ಸೌಂಡ್ ಮೂಲಕ ಸುಮಾರು 25 ವಿಭಿನ್ನ ಕೈಗಳ ಚಲನೆಯನ್ನು ಗುರುತಿಸಿ ಆ ಮೂಲಕ 95% ನೀವು ಮಾಡುತ್ತಿರುವ ಕೆಲಸವನ್ನು ನಿಗದಿತವಾಗಿ ಹೇಳಲು ಸಾಧ್ಯವಾಗುತ್ತದೆ.

ಅಧ್ಯಯನ ಎಲ್ಲಿ?

ಅಧ್ಯಯನ ಎಲ್ಲಿ?

ಕಾರ್ನಿಯೇಜ್ ನಲ್ಲಿ ಹ್ಯೂಮನ್ ಕಂಪ್ಯೂಟರ್ ಇಂಟರ್ಯಾಕ್ಷನ್ ಇನ್ಸಿಟ್ಯೂಟ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಕ್ರಿಸ್ ಹ್ಯಾರಿಸ್ ಮತ್ತು ಅವರ ತಂಡದವರು ಈ ವಿಶೇಷ ಅಧ್ಯಯನವನ್ನು ಕೈಗೊಂಡಿದ್ದಾರೆ.

ಸದ್ಯದ ಲಭ್ಯತೆ ಮತ್ತು ಭವಿಷ್ಯದ ರೂಪುರೇಷೆ:

ಸದ್ಯದ ಲಭ್ಯತೆ ಮತ್ತು ಭವಿಷ್ಯದ ರೂಪುರೇಷೆ:

ಈಗಿನ ಸ್ಮಾರ್ಟ್ ಫೋನ್ ಗಳು ಬಳಕೆದಾರರು ಡ್ರೈವಿಂಗ್ ಮಾಡುವಾಗ ಟೆಕ್ಸ್ಟ್ ಮೆಸೇಜ್ ಗಳನ್ನು ಬ್ಲಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದಲ್ಲಿ ಈ ಡಿವೈಸ್ ಗಳು ಕೈಗಳ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ ಅವರು ಇತರೆ ಯಾವುದೋ ಪ್ರಮುಖ ಕೆಲಸ ಮಾಡುವಾಗ ತೊಂದರೆ ನೀಡಬಾರದು ಎಂಬುದನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ಹೇಳಲಾಗುತ್ತದೆ.

ಆರೋಗ್ಯದ ಆಪ್ ಗಳ ಅಭಿವೃದ್ಧಿ:

ಆರೋಗ್ಯದ ಆಪ್ ಗಳ ಅಭಿವೃದ್ಧಿ:

ಕೈಗಳ ಚಟುವಟಿಕೆಯನ್ನು ಗುರುತಿಸುವುದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಆಪ್ ಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬಹುದು. ಹಲ್ಲುಜ್ಜುವುದು, ಕೈಗಳನ್ನು ತೊಳೆಯುವುದು ಮತ್ತು ಸಿಗರೇಟ್ ಸೇದುವುದು ಇತ್ಯಾದಿಗಳನ್ನು ಕಂಡುಹಿಡಿಯುವುದನ್ನು ಈ ಆಪ್ ಗಳು ಸಹಕರಿಸಿ ಜನರಿಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಲಿವೆ.

ಹೆಚ್ಚಿನ ಅಧ್ಯಯನಕ್ಕೆ ನೆರವು:

ಹೆಚ್ಚಿನ ಅಧ್ಯಯನಕ್ಕೆ ನೆರವು:

ಈ ಅಧ್ಯಯನಕಾರರು ಹೇಳುವುದು ಕೈಗಳ ಚಟುವಟಿಕೆಯನ್ನು ಗುರುತಿಸುವ ಸ್ಮಾರ್ಟ್ ಡಿವೈಸ್ ಗಳಿಂದಾಗಿ ಅವರು ಹೊಸ ಕೆಲಸವನ್ನು ಯಾವುದಾದರೂ ಕಲಿಯಬೇಕು ಎಂದು ಇಚ್ಛಿಸಿದರೆ ಅವರಿಗೆ ನೆರವು ನೀಡುವುದಕ್ಕೆ ಸಾಧ್ಯವಾಗುತ್ತದೆ ಉದಾಹರಣೆಗೆ ಮ್ಯೂಸಿಕ್ ನ ಯಾವುದಾದರೂ ಸಾಧನವನ್ನು ಬಾರಿಸುವುದನ್ನು ಕಲಿಯಬೇಕು ಎಂದು ಬಯಸುವವರು ಈ ಡಿವೈಸ್ ಗಳಿಂದ ಹೆಚ್ಚು ಅಧ್ಯಯನ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

50 ಮಂದಿಯ ಮೇಲೆ ಪ್ರಯೋಗ:

50 ಮಂದಿಯ ಮೇಲೆ ಪ್ರಯೋಗ:

ಟೈಪಿಂಗ್ ಅಭ್ಯಾಸದಿಂದ ಒತ್ತಡ ಸೃಷ್ಟಿಯಾಗುವುದನ್ನು ತಡೆಯುವುದು, ಪಾರ್ಕಿಸನ್ ಡಿಸೀಸ್ ನಿಂದ ಇರುವವರಿಗೆ ಪರಿಹಾರ ಇತ್ಯಾದಿಗಳಿಗೂ ಕೂಡ ಇದನ್ನು ಬಳಕೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ಅಧ್ಯಯನವನ್ನು ಕೈಗೊಳ್ಳುವುದಕ್ಕಾಗಿ ಹ್ಯಾರಿಸನ್ ಮತ್ತು ಅವರ ತಂಡ ಸುಮಾರು 50 ಮಂದಿಗೆ ವಿಶೇಷವಾಗಿ ಡಿಸೈನ್ ಮಾಡಲಾಗಿದ್ದ ಸ್ಮಾರ್ಟ್ ವಾಚ್ ನ್ನು ಧರಿಸುವಂತೆ ಹೇಳಿದ್ದರು ಮತ್ತು ಸುಮಾರು 1000 ಘಂಟೆಗಳ ಕಾಲ ಅವರ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತೆ ಹೇಳಲಾಗಿತ್ತು. ಅದರಲ್ಲಿ ಸುಮಾರು 80 ಕ್ಕೂ ಹೆಚ್ಚಿನ ಕೈಗಳ ಚಟುವಟಿಕೆಗಳನ್ನು ಈ ರೀತಿಯಾಗಿ ಗುರುತಿಸುವುದಕ್ಕೆ ಸಾಧ್ಯವಾಯಿತು ಮತ್ತು ಅದರಿಂದ ವಿಶೇಷ ಡಾಟಾ ಸೆಟ್ ಕೂಡ ನಿರ್ಮಿಸಲಾಯಿತು.

ಜನರು ಈ ಸ್ಮಾರ್ಟ್ ವಾಚ್ ನ್ನು ತಾವು ಹೆಚ್ಚಾಗಿ ಕೆಲಸ ಮಾಡಲು ಬಳಸುವ ಕೈಗಳಿಗೆ ಧರಿಸಬೇಕಾಗುತ್ತದೆ. ಕೇವಲ ವ್ರಿಸ್ಟ್ ವಾಚ್ ಗಳಂತೆ ಕೇವಲ ಸ್ಟೈಲ್ ಗಾಗಿ ಮಾತ್ರವೇ ಅಲ್ಲ. ಸಿಸ್ಟಮ್ ನ ಅನ್ವೇಷಣೆಗಾಗಿ ನಡೆದ ಚಟುವಟಿಕೆಯಾಗಿದ್ದರಿಂದ ಅವರು ಹೆಚ್ಚು ಕೆಲಸ ಮಾಡುವ ಕೈಗಳಿಗೆ ಧರಿಸುವಂತೆ ಹೇಳಲಾಗಿತ್ತು. ಸ್ಕ್ಟಾಟ್ ಲ್ಯಾಂಡ್ ನ ಗ್ಲಾಸ್ಗೋದಲ್ಲಿ ನಡೆದ ಕಂಪ್ಯೂಟಿಂಗ್ ಮೆಷಿನರಿ ಕಾನ್ಫರೆನ್ಸ್ ನಲ್ಲಿ ಹ್ಯಾರಿಸನ್ ಮತ್ತು ಅವರ ಪಿಹೆಚ್ ಡಿ ವಿದ್ಯಾರ್ಥಿಗಳು ಈ ಪ್ರೊಜೆಕ್ಟ್ ನ್ನು ತೋರ್ಪಡಿಸಿದ್ದರು.

Best Mobiles in India

Read more about:
English summary
Smartwatches may sense if you are washing dishes, chopping vegetables

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X