Subscribe to Gizbot

ಡ್ರೋನ್‌ನಲ್ಲಿ ಹಾರಲಿದ್ದಾರೆ ಅಮೆರಿಕಾದ ಸೈನಿಕರು: ಗಾಳಿಯಲ್ಲಿ ಬಂದು ಗುಂಡು ಹಾರಿಸಲಿದ್ದಾರೆ

Written By:

ಶೀಘ್ರವೇ ಅಮೆರಿಕಾದ ಸೈನಿಕರು ಡ್ರೋನ್‌ನಲ್ಲಿ ಹಾರಿಬಂದು ಗುಂಡು ಹಾರಿಸಲಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಡ್ರೋನ್ ಗಳ ಬಳಕೆಯೂ ಹೆಚ್ಚಾಗುತ್ತಿದ್ದು, ವಿಡಿಯೋ ಮಾಡಲು, ಫೋಟೋ ಕ್ಲಿಕ್ ಮಾಡಲು, ಪಾರ್ಸಲ್ ಗಳನ್ನು ಡೆಲಿವರಿ ಮಾಡಲು, ರಕ್ಷಣಾ ಕಾರ್ಯಚರಣೆ ಸೇರಿದಂತೆ ಹಲವು ಕಾರ್ಯಗಳಿಗೆ ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಅಮೆರಿಕಾವೂ ತನ್ನ ಸೈನಿಕರಿಗೂ ಡ್ರೋನ್ ಸಹಾಯ ನೀಡಲು ಮುಂದಾಗಿದೆ.

ಗಾಳಿಯಲ್ಲಿ ಬಂದು ಗುಂಡು ಹಾರಿಸಲಿದ್ದಾರೆ ಅಮೆರಿಕಾದ ಸೈನಿಕರು

ಓದಿರಿ: ಬಂದಿದೆ ಇಂಟೆಲ್ ಕಂಪ್ಯೂಟರ್ ಕಾರ್ಡ್: ನಿಮ್ಮ ಜೇಬಿನಲ್ಲಿ ಇರಿಸಬಹುದಾದ ಕಂಪ್ಯೂಟರ್

ಪ್ರೈ ಬೋರ್ಡ್ ಏರ್ ಎನ್ನುವ ಸಂಸ್ಥೆಯೊಂದು ಯುಎಸ್ ಯುದ್ದ ಸೈನಿಕರಿಗೆ ಡ್ರೋಣ್ ಗಳನ್ನು ರೆಡಿ ಮಾಡುತ್ತಿದ್ದು, ಈಗಾಗಲೇ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ಇದಕ್ಕೆ ಹೋವರ್ ಕ್ರಾಫ್ಟ್ ಎಂದು ಹೆಸರಿಟ್ಟಿದ್ದು, ಇದು 150 km/h ವೇಗದಲ್ಲಿ ಸಾಗಲಿದ್ದು, ಭೂಮಿ ಮೇಲಿನಿಂದ ಸುಮಾರು 10,000 ಅಡಿ ಮೇಲೆ ಹಾರಾಟ ನಡೆಸಲಿದೆ ಎನ್ನಲಾಗಿದೆ.

ಈ ಹೋವರ್ ಕ್ರಾಫ್ಟ್ ರೆಡಿ ಮಾಡಲು ಸುಮಾರು ನಾಲ್ಕು ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಲಾಗಿದ್ದು, ಇದನ್ನು ಫ್ರಾನ್ಕಿ ಜಪಾಟ ಎನ್ನುವವನು ನಿರ್ಮಾಣ ಮಾಡಿದ್ದು, ಇದು ಒಬ್ಬ ಸಾಮಾನ್ಯ ತೂಕದ ಸೈನಿಕನ್ನು ಹೊತ್ತು ಸಾಗುವ ಸಾಮಾರ್ಥ್ಯವನ್ನು ಹೊಂದಿದ್ದು, ಐಫಿಲ್ ಟವರ್ ಗಿಂತಲೂ 10 ಪಟ್ಟು ಎತ್ತರದಲ್ಲಿ ಇದು ಹಾರಲಿದೆ.

ಗಾಳಿಯಲ್ಲಿ ಬಂದು ಗುಂಡು ಹಾರಿಸಲಿದ್ದಾರೆ ಅಮೆರಿಕಾದ ಸೈನಿಕರು

ಓದಿರಿ: ಇಂದು ಮತ್ತೆ ರೆಡ್ಮಿ 4 ಸೇಲ್..!! ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ವಿವರ...!

ಈ ಹೋವರ್ ಕ್ರಾಫ್ಟ್ ಎರ್ ಮುಂದಿನ ದಿನದಲ್ಲಿ ಯುದ್ದದ ವಿಧಾನವನ್ನು ಬದಲಾಯಿಸಲಿದ್ದು, ಯುದ್ದ ಭೂಮಿಯಲ್ಲಿ ಹೊಸ ಆವಿಷ್ಕಾರಕ್ಕೆ ಕಾರಣವಾಗಲಿದೆ. ಎದುರಾಳಿ ಸೈನ್ಯವನ್ನು ಮಣಿಸಲು ಇದು ಸಹಾಯ ಮಾಡುವುದಲ್ಲದೇ ಸೈನಿಕರನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ದುರ್ಗಮ ಹಾದಿಯಲ್ಲಿ ಸಾಗಲು ಇದು ಉಪಯೋಗಕ್ಕೆ ಬರಲಿದೆ.

ವಿಡಿಯೋ ನೋಡಿ:

 

Read more about:
English summary
A prototype hovercraft called the Flyboard Air could one day be available to US combat soldiers for military use. The hovercraft is capable of propelling its operator to an upward flight of up to 10,000 feet at a top speed of 150 km/h. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot