ಎವರ್‌ಗ್ರೀನ್ ಬ್ರ್ಯಾಂಡ್ 'ಸೋನಿ'ಯ ಈ ಟಾಪ್‌ ಹೆಡ್‌ಫೋನ್‌ಗಳಲ್ಲಿ ನಿಮ್ಮ ಆಯ್ಕೆ.?

|

ಸ್ಮಾರ್ಟ್‌ಪೋನ್‌ ಮೂಲಕ ಮ್ಯೂಸಿಕ್ ಕೇಳಲು ಹೆಡ್‌ಫೋನ್‌ ಅಗತ್ಯ ಇದ್ದು, ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಯಾವುದಾರೊಂದು ಹೆಡ್‌ಫೋನ್‌ ಖರೀದಿಸಲಾಗದು. ಅತ್ಯುತ್ತಮ ಸೌಂಡ್‌ ಕ್ವಾಲಿಟಿ ಕೇಳಲು ಬಳಕೆದಾರರು ಬೆಸ್ಟ್‌ ಹೆಡ್‌ಫೋನ್‌ ಖರೀದಿಸಿಲು ಮುಂದಾಗುತ್ತಾರೆ. ಆನ್‌ಲೈನ್‌ ಜಾಲತಾಣಗಳಲ್ಲಿ ಅನೇಕ ಅಗ್ಗದ ಹೆಡ್‌ಫೋನ್‌ಗಳು ಲಭ್ಯವಿದ್ದರೂ, ಮ್ಯೂಸಿಕ್ ಪ್ರಿಯರ ಮೊದಲ ಆಯ್ಕೆ ಇವತ್ತಿಗೂ ಸೋನಿ ಬ್ರ್ಯಾಂಡ್‌ ಆಗಿದೆ.

ಎವರ್‌ಗ್ರೀನ್ ಬ್ರ್ಯಾಂಡ್ 'ಸೋನಿ'ಯ ಈ ಟಾಪ್‌ ಹೆಡ್‌ಫೋನ್‌ಗಳಲ್ಲಿ ನಿಮ್ಮ ಆಯ್ಕೆ.?

ಹೌದು, ಸೋನಿ ಕಂಪನಿ ಮೊದಲಿನಿಂದಲೂ ತನ್ನ ಆಡಿಯೋ ಉತ್ಪನ್ನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸೌಂಡ್‌ ಕ್ವಾಲಿಟಿ ನೀಡುತ್ತಾ ಅಪಾರ ಗ್ರಾಹಕರನ್ನು ಸೆಳೆದಿದ್ದು, ಅದರ ಮೋಡಿಗೆ ಇವತ್ತಿಗೂ ಮ್ಯೂಸಿಕ್‌ ಪ್ರಿಯರು ಮೂಕವಿಸ್ಮಿತ. ಇದೀಗ ತರಹೇವಾರಿ ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಪೈಪೋಟಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದರೆ ಸೋನಿ ಕಂಪನಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಸಾಗಿದೆ.

ಎವರ್‌ಗ್ರೀನ್ ಬ್ರ್ಯಾಂಡ್ 'ಸೋನಿ'ಯ ಈ ಟಾಪ್‌ ಹೆಡ್‌ಫೋನ್‌ಗಳಲ್ಲಿ ನಿಮ್ಮ ಆಯ್ಕೆ.?

ಎವರ್‌ಗ್ರೀನ್ ಸೋನಿ ಇತ್ತೀಚಿಗೆ ವೈಯರ್‌ಲೆಸ್‌ ಹೆಡ್‌ಫೋನ್‌ಗಳನ್ನು ಪರಿಚಯಿಸಿದ್ದು, ಮ್ಯೂಸಿಕ್‌ ಕೇಳುವಾಗ ಹೊರಗಿನ ಶಬ್ದ ಕೇಳಿಸದಂತಹ ರಚನೆಯನ್ನು ಹೊಂದಿವೆ. ಗ್ರಾಹಕರಿಗೆ ವಿವಿಧ ಶ್ರೇಣಿಯಲ್ಲಿ ಆಯ್ಕೆ ದೊರೆಯಲಿದೆ. ಹಾಗಾದರೇ ಸೋನಿ ಕಂಪನಿಯ ಪ್ರಮುಖ ಹತ್ತು ಹೆಡ್‌ಫೋನ್‌ಗಳು ಯಾವವು ಮತ್ತು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿವೆ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಸೋನಿ WH-1000XM3

ಸೋನಿ WH-1000XM3

ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಇದರ ವೈಯರ್‌ಲೆಸ್‌ ವ್ಯಾಪ್ತಿಯು 30ಮೀಟರ್ ಆಗಿದೆ. ಡೈನಾಮಿಕ್‌ ಮಾದರಿಯ 40mmನ ಡ್ಯುಯಲ್‌ ಡ್ರೈವರ್ಗಳನ್ನು ಹೊಂದಿರುವ ಈ ಹೆಡ್‌ಫೋನಿಗೆ 30 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಒದಗಿಸಲಾಗಿದೆ. 4Hz to 40kHz ತರಂಗಾಂತರದ ಸಾಮರ್ಥ್ಯದಲ್ಲಿರಲಿದ್ದು, ಇದರೊಂದಿಗೆ 3.94 ಅಡಿ ಉದ್ದದ ಕೇಬಲ್‌ ನೀಡಲಾಗಿದೆ. ಸೌಂಡ್‌ ಕ್ವಾಲಿಟಿ ಉತ್ತಮವಾಗಿದೆ.

ಸೋನಿ WH-1000XM2

ಸೋನಿ WH-1000XM2

ಈ ಹೆಡ್‌ಫೋನ್ ಹೊರಗಿನ ಶಬ್ದ ಕೇಳಿಸದ ಅಡಚಣೆ ಮುಕ್ತವಾಗಿದ್ದು, ಬೆಸ್ಟ್ ಎನಿಸಿಕೊಂಡಿದೆ. ಅತೀ ಹಗುರವಾದ ರಚನೆ ಇದ್ದು, ಇದರ ತೂಕ ಕೇವಲ 23ಗ್ರಾಂ ಆಗಿದೆ. ಇದೊಂದು ಉತ್ತಮ ವೈಯರ್‌ ಲೆಸ್‌ ಹೆಡ್‌ಫೋನ್‌ ಆಗಿದ್ದು, ಸುಮಾರು 33 ಅಡಿಯ ವ್ಯಾಪ್ತಿಯಲ್ಲಿ ವೈಯರ್‌ಲೆಸ್‌ ಕನೆಕ್ಟ್‌ ಆಗುವ ಸಾಮರ್ಥ್ಯವಿದೆ. 10 ಗಂಟೆಗಳ ಕಾಲ ನಿರಂತರ ಬಾಳಕೆ ಬರುವ ಬ್ಯಾಟರಿಯನ್ನು ಸಾಮರ್ಥ್ಯವನ್ನು ಹೊಂದಿದೆ.

ಸೋನಿ MDR-1000X

ಸೋನಿ MDR-1000X

4Hz-40,000Hz ತರಂಗಾಂತರದ ವ್ಯಾಪ್ತಿಯನ್ನು ಹೊಂದಿರುವ ಈ ವೈಯರ್‌ ಲೆಸ್‌ ಹೆಡ್‌ಫೋನ್‌ ಡೈನಾಮಿಕ್‌ ಮಾದರಿಯ 40mm ಸಾಮರ್ಥ್ಯದ ಡ್ರೈವರ್‌ಗಳನ್ನು ಒಳಗೊಂಡಿದೆ. 20 ಗಂಟೆಗಳ ಕಾಲ ನಿರಂತರವಾಗಿ ಬ್ಯಾಟರಿ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದ್ದು, ಇದರ ತೂಕವು ಕೇವಲ 275ಗ್ರಾಂ ಆಗಿದೆ. ಕ್ವಿಕ್‌ ಅಟೇನ್ಶನ್ ಮೋಡ್‌ ಮತ್ತು ಆಂಬಿಯಂಟ್ ನಾಯ್ಸ್‍ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ.

ಸೋನಿ MDR-ZX770BT

ಸೋನಿ MDR-ZX770BT

ಡಿಸೈನ್‌ ಮತ್ತು ಬ್ಯಾಟರಿ ಶಕ್ತಿಯಿಂದ ಗ್ರಾಹಕರನ್ನು ಸೆಳೆದಿರುವ ಈ ಹೆಡ್‌ಫೋನ್‌ ವೈಯರ್‌ಲೆಸ್‌ ಮಾದರಿಯದಾಗಿದ್ದು, ಇದರ ವೈಯರ್‌ಲೆಸ್‌ ವ್ಯಾಪ್ತಿಯು 30ಮೀಟರ್ ಆಗಿದೆ. ಡೈನಾಮಿಕ್‌ ಮಾದರಿಯ 40mmನ ಡ್ಯುಯಲ್‌ ಡ್ರೈವರ್ಗಳನ್ನು ಹೊಂದಿರುವ ಈ ಹೆಡ್‌ಫೋನಿಗೆ 20 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಒದಗಿಸಲಾಗಿದೆ. 20Hz-20,000Hz ತರಂಗಾಂತರದ ಸಾಮರ್ಥ್ಯದಲ್ಲಿರಲಿದೆ.

ಸೋನಿ WF-1000X ಏರ್‌ಬಡ್ಸ್‌

ಸೋನಿ WF-1000X ಏರ್‌ಬಡ್ಸ್‌

ಸೋನಿಯ ಈ ವೈಯರ್‌ಲೆಸ್ಸ್ ಏರ್‌ಬಡ್ಸ್‌ ಸುಮಾರು 9ಗಂಟೆಗಳ ಕಾಲ ನಿರಂತರ ಬಾಳುವ ಸಾಮರ್ಥ್ಯವನ್ನು ಹೊಂದಿದೆ. 6mm ಡ್ಯುಯಲ್‌ ಡ್ರೈವರ್‌ಗಳನ್ನು ಒಳಗೊಂಡಿದ್ದು, 20Hz-20,000Hz ತರಂಗಾಂತರದ ವ್ಯಾಪ್ತಿಯನ್ನು ಹೊಂದಿದೆ. ಇದರ ತೂಕವು 6.8 ಗ್ರಾಂ ಆಗಿದೆ. ಆಂಬಿಯೆಂಟ್ ನಾಯ್ಸ್‌ ಮೋಡ್‌ ಆಯ್ಕೆಯು ಇರಲಿದೆ.

ಸೋನಿ WI-1000X

ಸೋನಿ WI-1000X

3Hz-40,000Hz ತರಂಗಾಂತರದ ವ್ಯಾಪ್ತಿಯನ್ನು ಹೊಂದಿರುವ ಈ ವೈಯರ್‌ ಲೆಸ್‌ ಹೆಡ್‌ಫೋನ್‌ ಹೈಬ್ರಿಡ್‌ ಮಾದರಿಯ 40mm ಸಾಮರ್ಥ್ಯದ ಡ್ರೈವರ್‌ಗಳನ್ನು ಒಳಗೊಂಡಿದೆ. 20 ಗಂಟೆಗಳ ಕಾಲ ನಿರಂತರವಾಗಿ ಬ್ಯಾಟರಿ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದ್ದು, ಈ ಆಡಿಯೋ ಸಾಧನದ ತೂಕವು ಕೇವಲ 71 ಗ್ರಾಂ ಆಗಿದೆ. ಆಂಬಿಯಂಟ್ ನಾಯ್ಸ್‍ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ.

ಸೋನಿ MDR-ZX330BT

ಸೋನಿ MDR-ZX330BT

ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಇದರ ವೈಯರ್‌ಲೆಸ್‌ ವ್ಯಾಪ್ತಿಯು 30ಮೀಟರ್ ಆಗಿದೆ. ಡೈನಾಮಿಕ್‌ ಮಾದರಿಯ 30mm ನ ಡ್ಯುಯಲ್‌ ಡ್ರೈವರ್ಗಳನ್ನು ಹೊಂದಿರುವ ಈ ಹೆಡ್‌ಫೋನಿಗೆ 30 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಒದಗಿಸಲಾಗಿದೆ. 20Hz-20,000H ತರಂಗಾಂತರದ ಸಾಮರ್ಥ್ಯದಲ್ಲಿರಲಿದ್ದು, ಇದರೊಂದಿಗೆ 3.94 ಅಡಿ ಉದ್ದದ ಕೇಬಲ್‌ ನೀಡಲಾಗಿದೆ. ಸೌಂಡ್‌ ಕ್ಲಿಯರಿಟಿ ಉತ್ತಮವಾಗಿದೆ.

ಸೋನಿ WF-SP700N ಬಡ್ಸ್‌

ಸೋನಿ WF-SP700N ಬಡ್ಸ್‌

20Hz-20,000Hz ತರಂಗಾಂತರಗಳ ಸಾಮರ್ಥ್ಯವನ್ನು ಹೊಂದಿದ್ದು, 6mm ಡ್ಯುಯಲ್‌ ಡ್ರೈವರ್‌ಗಳನ್ನು ಒದಗಿಸಲಾಗಿದೆ. 3 ಗಂಟೆ ನಿರಂತರ ಬಾಳಿಕೆ ಬರುವ ಶಕ್ತಿಯುತ ಬ್ಯಾಟರಿ ಒದಗಿಸಲಾಗಿದೆ. ಪ್ರತಿ ಬಡ್ಸ್‌ 7.6ಗ್ರಾಂ ತೂಕವನ್ನು ಹೊಂದಿದ್ದು, ಧರಿಸಲು ಹಿತಕರವಾಗಿದೆ. ಈ ಆಡಿಯೋ ಸಾಧನ ಬೆವರು ನಿರೋದಕ ಆಗಿದ್ದು, ಸೌಂಡ್ ಕ್ವಾಲಿಟಿಯೂ ಸಹ ಉತ್ತಮವಾಗಿದೆ.

ಸೋನಿ WI-SP600N

ಸೋನಿ WI-SP600N

20Hz-20,000Hz ತರಂಗಾಂತರಗಳ ಸಾಮರ್ಥ್ಯವನ್ನು ಹೊಂದಿರುವ ಈ ವೈಯರ್‌ಲೆಸ್‌ ಹೆಡ್‌ಫೋನ್ 10ಮೀಟರ್‌ ವ್ಯಾಪ್ತಿಯ ಅಂತರವರೆಗೂ ಕನೆಕ್ಟ್‌ ಆಗಲಿದೆ. ಶಕ್ತಿಯುತ ಬ್ಯಾಟರಿ ನೀಡಲಾಗಿದ್ದು, ಸುಮಾರು 6 ಗಂಟೆಗಳ ಕಾಲ ನಿರಂತರ ಬಾಳಿಕೆ ಬರುವ ಸಾಮರ್ಥ್ಯ ಹೊಂದಿದೆ. 6mm ಡ್ರೈವರ್‌ಗಳನ್ನು ಒಳಗೊಂಡಿದ್ದು, ಇದರ ತೂಕವು 21ಗ್ರಾಂ ಆಗಿದೆ. ಆಂಬಿಯಂಟ್ ಮೋಡ್‌ ಆಯ್ಕೆ ಇದೆ.

ಸೋನಿ MDR-XB950N1

ಸೋನಿ MDR-XB950N1

ಎಕ್ಸ್‌ಟ್ರಾ ಬಾಸ್‌ ಹೊಂದಿರುವ ಹೆಡ್‌ಫೋನ್‌ ಆಗಿದ್ದು, ಬಾಸ್‌ ಇಷ್ಟಪಡುವವರಿಗೆ ಅತ್ಯುತ್ತಮ ಹೆಡ್‌ಫೋನ್ ಇದಾಗಿದೆ. 22ಗಂಟೆಗಳ ಕಾಲ ಬಾಳಿಕೆಯ ಬ್ಯಾಟರಿ ನೀಡಲಾಗಿದ್ದು, 20Hz-20,000Hz ತರಂಗಾಂತರಗಳಲ್ಲಿ ಇರಲಿದೆ. ಹಗುರವಾದ ರಚನೆ ಹೊಂದಿರುವ ಈ ಹೆಡ್‌ಫೋನ್ 290ಗ್ರಾಂ ತೂಕವನ್ನು ಹೊಂದಿದ್ದು, ಧರಿಸಲು ಕಂಫರ್ಟ್‌ ಆಗಿದೆ. ಕೇಬಲ್‌ ಉದ್ದ 1.2ಮೀಟರ್‌ ಇದೆ.

Most Read Articles
Best Mobiles in India

English summary
Sony which has become well known for high quality noise cancelling and wireless over-ear headphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more