ಸಿಸ್ಕಾದಿಂದ ಸೊಳ್ಳೆ ನಿಯಂತ್ರಣ ಎಲ್‌ಇಡಿ ಬಲ್ಬ್‌ ಬಿಡುಗಡೆ..!

By Gizbot Bureau
|

ಸಿಸ್ಕಾ ಮೊಸ್ಗಾರ್ಡ್ ಒಂದು ವಿಶಿಷ್ಟ ಉತ್ಪನ್ನವಾಗಿದ್ದು, ಸೊಳ್ಳೆಗಳನ್ನು ನಿಯಂತ್ರಿಸುವುದಲ್ಲದೆ 15W ಎಲ್ಇಡಿ ಬಲ್ಬ್‌ ಆಗಿಯೂ ಬಳಕೆದಾರರಿಗೆ ಬೆಳಕನ್ನು ನೀಡುತ್ತದೆ. ಸಿಸ್ಕಾದ ಮೊಸ್ಗಾರ್ಡ್ ಸೊಳ್ಳೆ ನಿವಾರಕ 15W ಎಲ್ಇಡಿ ಬಲ್ಬ್ ಬೆಲೆ 699 ರೂ. ಆಗಿದ್ದು, ಭಾರತದ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ. ಸಿಸ್ಕಾದ ಈ ವಿಶಿಷ್ಟ ಉತ್ಪನ್ನ ಸೊಳ್ಳೆಗಳಿಂದ ಹರಡುವ ರೋಗಗಳಾದ ಡೆಂಘೀ ಮತ್ತು ಮಲೇರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ.

2-ಇನ್ -1 ಮೋಡ್‌

2-ಇನ್ -1 ಮೋಡ್‌

ಸಿಸ್ಕಾ ಮೊಸ್ಗಾರ್ಡ್ 2-ಇನ್ -1 ಮೋಡ್‌ನೊಂದಿಗೆ ಬರುತ್ತಿದ್ದು, ಸೊಳ್ಳೆ ಕಿಲ್ಲರ್ ಮೋಡ್ ಅಥವಾ ಲೈಟಿಂಗ್ ಜೊತೆಗೆ ಸೊಳ್ಳೆ ಕಿಲ್ಲರ್ ಮೋಡ್‌ಗಳನ್ನು ಆಯ್ಕೆ ಮಾಡಬಹುದು. ಬಲ್ಬ್‌ನ ಬೆಳಕು ಸಾಮಾನ್ಯ ಬಲ್ಬ್‌ನಂತೆಯೇ ಇದ್ದು, ಸೊಳ್ಳೆಗಳನ್ನು ಕೊಲ್ಲುವ ಅಂಶವು ನೀಲಿ ಎಲ್ಇಡಿ ಬಲ್ಬ್‌ನಲ್ಲಿದ್ದು, ಸೊಳ್ಳೆಗಳನ್ನು ಕೊಲ್ಲಲು ಆಕರ್ಷಿಸುತ್ತದೆ.

ಸೊಳ್ಳೆ ಕೊಲ್ಲಲು ರಾಸಾಯನಿಕವಿಲ್ಲ

ಸೊಳ್ಳೆ ಕೊಲ್ಲಲು ರಾಸಾಯನಿಕವಿಲ್ಲ

ಬಲ್ಬ್‌ನ್ನು ಒಳಾಂಗಣ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಶಾಲೆ, ಕಾಲೇಜು, ವಾಣಿಜ್ಯ ಸ್ಥಳಗಳಲ್ಲಿ, ಮನೆಯಲ್ಲಿ ಸುಲಭವಾಗಿ ಹಾಕಬಹುದು. ಈ ಬಲ್ಬ್‌ ಹಾನಿಕಾರಕ ನೇರಳಾತೀತ ಅಥವಾ ಅತಿಗೆಂಪು ವಿಕಿರಣಗಳನ್ನು ಹೊರಸೂಸುವುದಿಲ್ಲ. ಮತ್ತೊಂದು ಪ್ರಮುಖ ಅಂಶವೆಂದರೆ, ಸೊಳ್ಳೆಗಳನ್ನು ಕೊಲ್ಲಲು ಯಾವುದೇ ಸಿಂಪಡಣೆ, ರಾಸಾಯನಿಕ ಅಥವಾ ಹೊಗೆ ಬಳಕೆಯು ಇಲ್ಲದಿರುವುದರಿಂದ ಈ ಬಲ್ಬ್‌ ಸುರಕ್ಷಿತವಾಗಿದೆ.

ಬ್ಯಾಕ್ಟಿಗ್ಲೋ

ಬ್ಯಾಕ್ಟಿಗ್ಲೋ

ಸೂಕ್ಷ್ಮಜೀವಿಗಳ ಸೋಂಕನ್ನು ನಾಶಮಾಡುವ ಗುಣಲಕ್ಷಣ ಹೊಂದಿರುವ ಬ್ಯಾಕ್ಟೀರಿಯಾ ವಿರೋಧಿ ಎಲ್ಇಡಿ ಬಲ್ಬ್ 'ಬ್ಯಾಕ್ಟಿಗ್ಲೋ' ಅನ್ನು ಕೂಡ ಸಿಸ್ಕಾ ಬಿಡುಗಡೆ ಮಾಡಿದೆ. ಬ್ಯಾಕ್ಟೀರಿಯಾ ವಿರೋಧಿ ಬಲ್ಬ್‌ನ ಬೆಲೆ 250 ರೂ. ಆಗಿದೆ.

ಗ್ರಾಹಕರಿಗೆ ಅನುಕೂಲ

ಗ್ರಾಹಕರಿಗೆ ಅನುಕೂಲ

ಎಲ್ಇಡಿ ಬೆಳಕಿನ ಪ್ರವರ್ತಕರಲ್ಲಿ ಒಬ್ಬರಾಗಿ, ನಮ್ಮ ಗ್ರಾಹಕರಿಗೆ ಅನುಕೂಲಕರ, ಕೈಗೆಟುಕುವ ಉತ್ಪನ್ನಗಳನ್ನು ನೀಡುವುದು. ಹಾಗೂ ಅವರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪ್ರತಿಬಿಂಬಿಸುವುದು ನಮ್ಮ ಉದ್ದೇಶ. ಸಿಸ್ಕಾ ಬ್ಯಾಕ್ಟಿಗ್ಲೋ ಎಲ್ಇಡಿ ಬಲ್ಬ್ ಈ ಪ್ರತಿಪಾದನೆಗೆ ಉತ್ತಮ ಉದಾಹರಣೆಯಾಗಿದ್ದು, ಸಾಮಾನ್ಯ ಎಲ್ಇಡಿ ಬಲ್ಬ್‌ನ ಪ್ರಯೋಜನಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ ಎಂದು ಐಎಎನ್ಎಸ್ ಸಿಸ್ಕಾ ಗ್ರೂಪ್‌ನ ನಿರ್ದೇಶಕ ರಾಜೇಶ್ ಉತ್ತಮ್‌ಚಂದಾನಿ ಹೇಳಿದ್ದಾರೆ.

ಸುರಕ್ಷತೆಯ ಬಲ್ಬ್‌

ಸುರಕ್ಷತೆಯ ಬಲ್ಬ್‌

ಸಿಸ್ಕಾದ ಹೊಸ ಎಲ್‌ಇಡಿ ಬಲ್ಬ್‌ಗಳು 400 nm ನಿಂದ 420 nm ನ ತರಂಗಾಂತರದಲ್ಲಿ ಬೆಳಕನ್ನು ಹೊರಸೂಸುತ್ತವೆ. ಆದ್ದರಿಂದ, ಈ ಬಲ್ಬ್‌ಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ.

Most Read Articles
Best Mobiles in India

Read more about:
English summary
Syska Mosguard LED Bulbs Will keep The Mosquitoes Away

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X