2016ರಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಗೂಗಲ್ ಉತ್ಪನ್ನಗಳು: ಗೂಗಲ್ ಪಿಕ್ಸೆಲ್, ಡೇಡ್ರೀಮ್ ವಿ.ಆರ್, ಯುಟ್ಯೂಬ್ ಗೊ.

|

2016 ವರುಷ ಮುಗಿದಿದೆ, ಟೆಕ್ ಆಸಕ್ತರಿಗಿದು ಅತ್ಯುತ್ತಮ ವರುಷವಾಗಿತ್ತು. ಈ ವರ್ಷ ಹಲವಾರು ಹೊಸ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬಂದವು. ಸ್ಮಾರ್ಟ್ ಫೋನ್ ಗಳು, ಸ್ಮಾರ್ಟ್ ಹೋಮ್ ಗ್ಯಾಜೆಟ್ಟುಗಳು, ತಂತ್ರಾಂಶಗಳು ಹಾಗೂ ಇನ್ನೂ ಅನೇಕ ನವೀನ ತಂತ್ರಜ್ಞಾನವು ಮಾರುಕಟ್ಟೆಗೆ ಬಂದ ವರ್ಷವಿದು.

2016ರಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಗೂಗಲ್ ಉತ್ಪನ್ನಗಳು

ಈ ವರ್ಷದ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರಲ್ಲಿ ಅಂತರ್ಜಾಲ ದೈತ್ಯ ಗೂಗಲ್ ಕೂಡ ಒಂದು. ಅಮೆರಿಕಾದ ತಂತ್ರಜ್ಞಾನ ಕಂಪನಿಗೆ ಇದು ಅತ್ಯಂತ ಅಮೂಲ್ಯವಾದ ವರುಷವಾಗಿತ್ತು; ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನುಗಳು, ಗೂಗಲ್ ಹೋಮ್, ಡೇಡ್ರೀಮ್ ವಿ.ಆರ್, ಗೂಗಲ್ ಸ್ಟೇಷನ್ ಗಳೆಲ್ಲವೂ ಈ ವರ್ಷ ಬಿಡುಗಡೆಯಾದವು.

ಓದಿರಿ: ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟೂಬ್ ಪ್ಲೇ ಮಾಡುವುದು ಹೇಗೆ..?

ಗೂಗಲ್ ವತಿಯಿಂದ ಈ ವರ್ಷ ಮಾರುಕಟ್ಟೆಗೆ ಬಂದ ಉತ್ಪನ್ನಗಳಿಗೆ ಕೊನೆಯೇ ಇರಲಿಲ್ಲ ಎಂದು ಹೇಳಬಹುದು. ಅವುಗಳಲ್ಲಿ ಕೆಲವು ಜನಪ್ರಿಯವಾದವು, ಕೆಲವು ಬಳಕೆದಾರರನ್ನು ಸೆಳೆಯಲು ವಿಫಲವಾದವು. 2016ರಲ್ಲಿ ಗೂಗಲ್ ನಿಂದ ಬಿಡುಗಡೆಗೊಂಡ, ಈಗಾಗಲೇ ನಮ್ಮ ಬದುಕಿನ ಭಾಗವಾಗಿಬಿಟ್ಟಿರುವ ಕೆಲವು ಉತ್ಪನ್ನಗಳ ಕಡೆಗೆ ಗಮನ ಹರಿಸೋಣ.

ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್.

ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್.

ಗೂಗಲ್ಲಿನ ಬಹುನಿರೀಕ್ಷಿತ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್.ಎಲ್ ಸ್ಮಾರ್ಟ್ ಫೋನುಗಳು ಈ ವರ್ಷ ಬಿಡುಗಡೆಯಾದವು. ಈ ವರ್ಷದ ಅತ್ಯುತ್ತಮ ಸ್ಮಾರ್ಟ್ ಫೋನುಗಳ ಪೈಕಿ ಈ ಫೋನುಗಳೂ ಸ್ಥಾನ ಪಡೆದವು. ಪಿಕ್ಸೆಲ್ ಸ್ಮಾರ್ಟ್ ಫೋನಿನ ಕ್ಯಾಮೆರಾ ಅತ್ಯುತ್ತಮವಾದದ್ದು ಎಂದು ಡಿ.ಎಕ್ಸ್.ಒಮಾರ್ಕ್ ಆರಿಸಿತು. ಸ್ಪರ್ಧೆಯಲ್ಲಿರುವ ಇತರರಿಗೆ ಈ ಸ್ಮಾರ್ಟ್ ಫೋನ್ ನಿದ್ದೆಯಿಲ್ಲದಂತೆ ಮಾಡಿಬಿಟ್ಟಿತು.

ಗೂಗಲ್ ಅಲ್ಲೊ.

ಗೂಗಲ್ ಅಲ್ಲೊ.

ಈ ವರುಷದ ಐ/ಒ ಸಭೆಯಲ್ಲಿ ಗೂಗಲ್ ತನ್ನ ಮೆಸೇಜಿಂಗ್ ಆ್ಯಪ್ ಆದ ಗೂಗಲ್ ಅಲ್ಲೋ ಅನ್ನು ಪರಿಚಯಿಸಿತು. ಇದರಲ್ಲಿ ಸ್ವಂತದ್ದಾದ ಗೂಗಲ್ ಅಸಿಸ್ಟೆಂಟ್ ಇದೆ, ಇದರಿಂದಾಗಿ ಬಳಕೆದಾರರು ಧ್ವನಿ ಆದೇಶದ ಮೂಲಕ ಎಲ್ಲಾ ಕೆಲಸಗಳನ್ನೂ ಮಾಡಬಹುದು, ಗೂಗಲ್ ನೌನಲ್ಲಿ ಮಾಡಿದಂತೆ. ಗೂಗಲ್ ಅಸಿಸ್ಟೆಂಟ್ ಈಗ ನಮ್ಮ ಜೀವನದ ಭಾಗವೇ ಆಗಿಬಿಟ್ಟಿದೆ, ಇದರಿಂದಾಗಿ ನಾವು ಮೆಸೇಜ್ ಕಳುಹಿಸಬಹುದು, ಕರೆ ಮಾಡಬಹುದು, ಟಿಕೇಟುಗಳನ್ನು ಬುಕ್ ಮಾಡಬಹುದು, ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು.

ಇದರಲ್ಲಿ ಸ್ಮಾರ್ಟ್ ರಿಪ್ಲೈ, ಚಿತ್ರ ಗುರುತಿಸುವಿಕೆ, ಡೂಡ್ಲಿಂಗ್, ಹೊಸ ಇಮೋಜಿಗಳು ಲಭ್ಯವಿದೆ, ಇದು ವರುಷದ ಅತ್ಯುತ್ತಮ ತಂತ್ರಾಂಶಗಳಲ್ಲಿ ಒಂದು.

ಗೂಗಲ್ ಜಿಬೋರ್ಡ್.

ಗೂಗಲ್ ಜಿಬೋರ್ಡ್.

ಐ.ಒ.ಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಜಿಬೋರ್ಡ್ ಹೆಸರಿನ ಕೀಬೋರ್ಡ್ ತಂತ್ರಾಂಶವನ್ನು ಬಿಡುಗಡೆಗೊಳಿಸಿತು. ಇದು ನೋಡುವುದಕ್ಕೆ ಗೂಗಲ್ ಕೀಬೋರ್ಡ್ ರೀತಿಯಲ್ಲಿಯೇ ಇದೆ, ವೇಗವಾಗಿದೆ, ದಕ್ಷವಾಗಿದೆ. ಇದರಲ್ಲಿ ಗ್ಲೈಡ್ ಟೈಪಿಂಗ್, ವಾಯ್ಸ್ ಟೈಪಿಂಗ್ ಮತ್ತು ಗೂಗಲ್ ಸರ್ಚ್ ಕೂಡ ಇದೆ. ಇಮೋಜಿಯನ್ನು ಹುಡುಕುವ ಆಯ್ಕೆಯೂ ಇದರಲ್ಲಿದೆ, ಇಮೋಜಿಗಳನ್ನು ವೇಗವಾಗಿ ಹುಡುಕಲಿದು ಸಹಾಯಕ. ಜೊತೆಗೆ ಜಿ.ಐ.ಎಫ್ ಸರ್ಚ್ ಮತ್ತು ಅನೇಕ ಭಾಷೆಗಳ ಟೈಪಿಂಗ್ ಕೂಡ ಇದರಲ್ಲಿ ಲಭ್ಯವಿದೆ.

ಗ್ಲೈಡ್ ಮತ್ತು ವಾಯ್ಸ್ ಟೈಪಿಂಗ್ ಇದರಲ್ಲಿನ ಪ್ರಮುಖ ಆಕರ್ಷಣೆ. ಅಕ್ಷರದಿಂದ ಅಕ್ಷರಕ್ಕೆ ಗ್ಲೈಡ್ ಮಾಡುತ್ತ ವೇಗವಾಗಿ ಟೈಪಿಸಬಹುದು ಮತ್ತು ಧ್ವನಿಯ ಮೂಲಕವೇ ಮೆಸೇಜುಗಳನ್ನು ಕಳುಹಿಸಬಹುದು.

ಗೂಗಲ್ ಡೇಡ್ರೀಮ್ ವಿ.ಆರ್.

ಗೂಗಲ್ ಡೇಡ್ರೀಮ್ ವಿ.ಆರ್.

ತಂತ್ರಜ್ಞಾನದಲ್ಲಿನ ಮುಂದಿನ ಹಂತವೆಂದರೆ ವರ್ಚ್ಯುಯಲ್ ರಿಯಾಲಿಟಿ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್ ಫೋನುಗಳ ಜೊತೆಯಲ್ಲೇ ಡೇಡ್ರೀಮ್ ವಿ.ಆರ್ ಅನ್ನು ಕೂಡ ಬಿಡುಗಡೆಗೊಳಿಸಿದೆ. ಈಗಂತೂ ಪ್ರತಿಯೊಬ್ಬ ಉತ್ಪಾದಕರೂ ತಮ್ಮದೇ ಆದ ವಿ.ಆರ್ ಹೆಡ್ ಸೆಟ್ ಗಳನ್ನು ತಯಾರಿಸುತ್ತಿದ್ದಾರೆ. ಇವುಗಳಲ್ಲೆಲ್ಲ ಗೂಗಲ್ಲಿನ ಡೇಡ್ರೀಮ್ ವಿ.ಆರ್ ಅತ್ಯುತ್ತಮವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೂಟ್ಯೂಬ್ ಗೊ.

ಯೂಟ್ಯೂಬ್ ಗೊ.

ಗೂಗಲ್ ತನ್ನ ಯೂಟ್ಯೂಬ್ ಗೊ ತಂತ್ರಾಂಶವನ್ನು ಘೋಷಿಸಿದೆ, ಇದು ಕಡಿಮೆ ವೇಗದ ಅಂತರ್ಜಾಲ ಸಂಪರ್ಕವಿದ್ದಾಗಲೂ ಕಾರ್ಯನಿರ್ವಹಿಸುತ್ತದೆ. ಅಂತರ್ಜಾಲ ಸೀಮಿತವಾಗಿದ್ದಾಗಲೂ ಬಳಕೆದಾರರು ಯಾವುದೇ ಅಡೆತಡೆಯಿಲ್ಲದೆ ವೀಡಿಯೋಗಳನ್ನು ವೀಕ್ಷಿಸಬಹುದು. ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ನಂತರ ಆಫ್ ಲೈನಿನಲ್ಲಿ ನೋಡುವ ಅವಕಾಶವೂ ಇದರಲ್ಲಿದೆ.

ಗೂಗಲ್ ಸ್ಟೇಷನ್ಸ್.

ಗೂಗಲ್ ಸ್ಟೇಷನ್ಸ್.

ರಾಯ್ ಟೆಲ್ ಜೊತೆ ಕೈಜೋಡಿಸಿರುವ ಗೂಗಲ್ 400 ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ಒದಗಿಸುತ್ತಿದೆ, ಇದಕ್ಕಿಟ್ಟ ಹೆಸರು ಗೂಗಲ್ ಸ್ಟೇಷನ್ಸ್. ಸದ್ಯಕ್ಕೆ ಗೂಗಲ್ ದೇಶದ ನೂರು ಜನಸಂದಣಿಯ ನಿಲ್ದಾಣಗಳಲ್ಲಿ ಇದನ್ನು ಅಳವಡಿಸಿದೆ, ಬಳಕೆದಾರರು ವೇಗದ ಅಂತರ್ಜಾಲವನ್ನಿಲ್ಲಿ ಪಡೆಯಬಹುದಾಗಿದೆ.

ಗೂಗಲ್ ವೈಫೈ.

ಗೂಗಲ್ ವೈಫೈ.

ಗೂಗಲ್ ವೈಫೈ ರೂಟರ್ ಗಳನ್ನೂ ಬಿಡುಗಡೆಗೊಳಿಸಿದೆ. ಇದರಲ್ಲಿ ಮೆಶ್ ವ್ಯವಸ್ಥೆಯ ವಿನ್ಯಾಸವಿದೆ, ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ರೂಟರ್ ಗೆ ಸಂಪರ್ಕಿಸಬಹುದು, ಬಳಕೆದಾರರಿಗೆ ನಿರಂತರವಾಗಿ ವೇಗದ ಅಂತರ್ಜಾಲ ಲಭ್ಯವಾಗುತ್ತದೆ. ಈ ರೂಟರ್ ಅನ್ನು ಅಳವಡಿಸುವುದು ಬಳಸುವುದು ಯಾವುದೇ ಸ್ಮಾರ್ಟ್ ಫೋನಿಗೆ ಸಂಪರ್ಕಿಸುವುದು ತುಂಬಾ ಸುಲಭದ ಕೆಲಸ. ದೂರದ ಸ್ಥಳದಿಂದಲೂ ಇದರ ಕಾರ್ಯವೈಖರಿಯನ್ನು ನಿಯಂತ್ರಿಸುವ ಸೌಕರ್ಯವೂ ಇದೆ.

ಗೂಗಲ್ ಡುಯೊ.

ಗೂಗಲ್ ಡುಯೊ.

ಅಲ್ಲೊ ಎಂಬ ಚಾಟಿಂಗ್ ತಂತ್ರಾಂಶದ ಜೊತೆಗೆ ಗೂಗಲ್ ಡುಯೋ ತಂತ್ರಾಂಶವನ್ನೂ ಬಿಡುಗಡೆಗೊಳಿಸಿದೆ. ಇದು ಸ್ಕೈಪ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಡುಯೋ ಐ.ಒ.ಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಇದನ್ನು ಉಪಯೋಗಿಸಿಕೊಂಡು ಬಳಕೆದಾರರು ತಮ್ಮ ನೆಚ್ಚಿನವರೊಡನೆ ವೀಡಿಯೋ ಕರೆಗಳನ್ನು ಮಾಡಬಹುದು.

ಗೂಗಲ್ ಹೋಮ್.

ಗೂಗಲ್ ಹೋಮ್.

ಹಲವು ಹೊಸ ರೀತಿಯ ಗ್ಯಾಜೆಟ್ಟುಗಳ ಜೊತೆಗೆ ಗೂಗಲ್ ಹೋಮ್ ಅನ್ನು ಕೂಡ ಬಿಡುಗಡೆಗೊಳಿಸಲಾಯಿತು. ಗೂಗಲ್ ಅಸಿಸ್ಟೆಂಟ್ ಆಧಾರಿತ ಧ್ವನಿಯಿಂದ ನಿಯಂತ್ರಿಸಬಹುದಾದ ತಂತ್ರಾಂಶವಿದು. ಇದು ಗೂಗಲ್ ನೌ ಮತ್ತು ಆ್ಯಪಲ್ ನ ಸಿರಿಯಂತೆ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಮನೆಯ ನಿಯಂತ್ರಣ ಸುಲಭ. ಟಿವಿ ಆನ್ ಮಾಡುವುದಿರಬಹುದು, ಯಾವುದಾದರೂ ಉಪಕರಣವನ್ನು ಆಫ್ ಮಾಡುವುದಿರಬಹುದು - ಇವೆಲ್ಲವೂ ಗೂಗಲ್ ಹೋಮ್ ಮೂಲಕ ಸಾಧ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are the best products Google launched in 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X