Subscribe to Gizbot

ಈ ಸ್ಮಾರ್ಟ್‌TV ವಿಶೇಷತೆ ಕೇಳಿದ್ರೆ ಸಾಕು, ಈ ಕ್ಷಣವೇ ಬುಕ್ ಮಾಡಲು ಕ್ಯೂ ನಿಲ್ತೀರ..!

Written By:

ಭಾರತೀಯ ಮಾರುಕಟ್ಟೆಯೂ ಹೆಚ್ಚು ವಿಸ್ತಾರವಾಗುತ್ತಿರುವುದನ್ನು ಮನಗಂಡಿರುವ ವಿಶ್ದವ ಟಾಪ್ ಟೆಕ್‌ ಕಂಪನಿಗಳು ಭಾರತಕ್ಕೆ ಕಾಲಿಟ್ಟಿವೆ. ಇದೇ ಮಾದರಿಯಲ್ಲಿ ಸುಮಾರು ವರ್ಷಗಳಿಂದ ನಮ್ಮ ಮಾರುಕಟ್ಟೆಯಲ್ಲಿ TVಯನ್ನು ಮಾರಾಟ ಮಾಡುತ್ತಿರುವ TCL ಮೊದಲ ಬಾರಿಗೆ ಸ್ಮಾರ್ಟ್‌ TVಯನ್ನು ಲಾಂಚ್ ಮಾಡಿದೆ. iFFALCON ಸ್ಮಾರ್ಟ್‌ TV ಸರಣಿಯನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ವಿವಿಧ ಆಯ್ಕೆಯನ್ನು ನೀಡಿದೆ. ಅಲ್ಲದೇ ಸುಲಭವಾಗಿ ಒಂದೇ ವೇದಿಕೆಯಲ್ಲಿ ಪ್ರತಿಯೊಬ್ಬರಿಗೂ ದೊರೆಯುವ ಸಲುವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುತ್ತಿದೆ.

ಈ ಸ್ಮಾರ್ಟ್‌TV ವಿಶೇಷತೆ ಕೇಳಿದ್ರೆ ಸಾಕು, ಈ ಕ್ಷಣವೇ ಬುಕ್ ಮಾಡಲು ಕ್ಯೂ ನಿಲ್ತೀರ.

ಭಾರತೀಯ ಬಳಕೆದಾರರನ್ನು ತೃಪ್ತಿ ಪಡಿಸುವಸಲುವಾಗಿಯೇ TCL ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ iFFALCON ಸರಣಿಯಲ್ಲಿ ಮೂರು ಸ್ಮಾರ್ಟ್‌TVಗಳನ್ನು ಲಾಂಚ್ ಮಾಡಿದೆ. iFFALCON 32F2, iFFALCON 40F2 ಮತ್ತು iFFALCON 55K2A ಸ್ಮಾರ್ಟ್‌TVಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿವೆ, ಇದರಲ್ಲಿ iFFALCON 55K2A ಸ್ಮಾರ್ಟ್‌TV ಟಾಪ್ ಎಂಡ್ ಆವೃತ್ತಿಯಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲಿದೆ ಎನ್ನಲಾಗಿದೆ. ದೊಡ್ಡದಾದ ಸ್ಕ್ರಿನ್ ಬಳಕೆದಾರರಿಗೆ ಸಿನಿಮಾ ಮಂದಿರದ ಅನುಭವವನ್ನು ಒದಗಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಟೆಕ್ನಾಲಜಿ:

ಹೊಸ ಟೆಕ್ನಾಲಜಿ:

TCL ಕಂಪನಿಯೂ ನೂತನವಾಗಿ ಲಾಂಚ್ ಮಾಡಿರುವ iFFALCON ಸ್ಮಾರ್ಟ್‌ TV ಸರಣಿಯಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಇದಕ್ಕಾಗಿ TCL ಕಂಪನಿಯೂ CSOT ಮಾನ್ಯೂಫ್ಯಾಷರ್ ಟೆಕ್ನಾಲಜಿ ಪ್ರೋಸೆಸರ್ ಅನ್ನು ಒಳಗೊಂಡಿದೆ. ಇದು ಉತ್ತಮ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ನೋಡುಗರಿಗೆ ರಿಯಲ್ ಕ್ವಾಲಿಟಿ ಅನುಭವನ್ನು ನೀಡಲಿದೆ.

iFFALCON 55K2A ಸ್ಮಾರ್ಟ್‌TV:

iFFALCON 55K2A ಸ್ಮಾರ್ಟ್‌TV:

iFFALCON 55K2A ಟಾಪ್ ಎಂಡ್ ಸ್ಮಾರ್ಟ್‌TVಯಾಗಿದ್ದು, ಇದರಲ್ಲಿ UHD ಪಿಚ್ಚರ್ ಕ್ಯಾಲಿಟಿಯನ್ನು ಹೊಂದಿರಲಿದ್ದು, 4K UHD ಗುಣಮಟ್ಟವನ್ನು ಬಳಕೆದಾರರಿಗೆ ನೀಡಲಿದೆ. HDR ಟೆಕ್ನಾಲಜಿಯೂ ಇದರಲ್ಲಿದೆ. ಇದರಲ್ಲಿ ಟಿವಿ ವಿವಿಂಗ್ ಆಯ್ಕೆಯೂ ಉತ್ತಮವಾಗಿದೆ.

ಮೈಕ್ರೊ ಡಿಮಿಂಗ್ ಟೆಕ್ನಾಲಜಿ:

ಮೈಕ್ರೊ ಡಿಮಿಂಗ್ ಟೆಕ್ನಾಲಜಿ:

iFFALCON 55K2A ಸ್ಮಾರ್ಟ್‌TVಯಲ್ಲಿ ಹೊಸಮಾದರಿಯಲ್ಲಿ ಮೈಕ್ರೋ ಡಿಮಿಂಗ್ ಟೆಕ್ನಾಲಜಿಯನ್ನು ಕಾಣಬಹದಾಗಿದೆ. ಇದಕ್ಕಾಗಿ LED HD ಬ್ಯಾಕ್‌ಲೈಟ್ ಅನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ಉತ್ತಮ TV ನೋಡುವ ಅನುಭವನ್ನು ನೀಡಲಿದೆ ಎನ್ನಲಾಗಿದೆ.

ಉತ್ತಮ ಆಡಿಯೋ:

ಉತ್ತಮ ಆಡಿಯೋ:

iFFALCON 55K2A ಸ್ಮಾರ್ಟ್‌TV ಉತ್ತಮ ಆಡಿಯೋ ಸೇವೆಯನ್ನು ನೀಡಲಿದ್ದು, ಇದಕ್ಕಾಗಿ ಡಾಲ್ಬಿ 5.1 ಸರೋಂಡಿಂಗ್ ಜೊತೆಗ DTS ಪ್ರೋಸೆಸಿಂಗ್ ಟೆಕ್ನಾಲಜಿಯನ್ನು ನೀಡಲಾಗಿದೆ. ಅಲ್ಲದೇ ಸ್ಮಾರ್ಟ್‌ ವಾಲ್ಯೂಮ್ ಫೀಚರ್ ಅನ್ನು ಅಳವಡಿಸಲಾಗಿದೆ. ಗಾಳಿ ಜಾಸ್ತಿ ಬಿಸಿದರೆ ಹೆಚ್ಚು ಶಬ್ದ ಮಾಡಲಿದೆ ಅಲ್ಲದೇ ಜಾಸ್ತಿ ಅನ್ನಸಿದರೆ ಅದೇ ಕಡಿಮೆ ಮಾಡಲಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಆಂಡ್ರಾಯ್ಡ್ ಸ್ಮಾರ್ಟ್‌ TV:

ಆಂಡ್ರಾಯ್ಡ್ ಸ್ಮಾರ್ಟ್‌ TV:

iFFALCON 55K2A ಸ್ಮಾರ್ಟ್‌TV ಇದು ಹೊಸ ಮಾದರಿಯ ಸ್ಮಾರ್ಟ್‌TVಯಾಗಿದ್ದು, ಆಂಡ್ರಾಯ್ಡ್ 7 ನ್ಯಾಗಾವನ್ನು ಇದರಲ್ಲಿ ಕಾಣಬಹುದಾಗಿದೆ. ಬಿಲ್ಟ್ ಇನ್ ಕ್ರೋಮ್ ಕಾಸ್ಟ್ ಅನ್ನು ಅಳವಡಿಸಲಾಗಿದೆ. ಗೂಗಲ್ ಆಕೌಂಟ್ ಅನ್ನು ಇದರಲ್ಲಿ ಆಡ್ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಸೇವೆಯನ್ನು ಸಂಪೂರ್ಣ ವಾಗಿ ಪಡೆದುಕೊಳ್ಳಬಹುದಾಗಿದೆ.

ಪವರ್ಫುಲ್ ಹಾರ್ಡ್‌ವೇರ್:

ಪವರ್ಫುಲ್ ಹಾರ್ಡ್‌ವೇರ್:

iFFALCON 55K2A ಸ್ಮಾರ್ಟ್‌TV ಕ್ವಾಡ್ ಕೋರ್ CPU ಮತ್ತು ಡ್ಯುಯಲ್ ಕೋರ್ GPUವನ್ನು ನೀಡಲಾಗಿದೆ. ಅಲ್ಲದೇ 2.56GB RAM ಮತ್ತು 16GB ಇಂಟರ್ನ್ ಮೆಮೊರಿಯನ್ನು ನೀಡಲಾಗಿದೆ, ಇದರಿಂದಾಗಿ ನೀವು ಸ್ಮಾರ್ಟ್‌ಫೋನ್ ಬಳಸಿದ ಮಾದರಿಯಲ್ಲಿ ಟಿವಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಡ್ಯುಯಲ್ ಬ್ಯಾಂಡ್ wi-fi ಅನ್ನು ಕಾಣಬಹುದಾಗಿದೆ. ಅಲ್ಲದೇ ಜಾಸ್ತಿ ಹಿಟ್ ಕೂಡ ಆಗುವುದಿಲ್ಲ ಎನ್ನಲಾಗಿದೆ.

ಹೆಚ್ಚು ಮನರಂಜನೆ:

ಹೆಚ್ಚು ಮನರಂಜನೆ:

iFFALCON ಸ್ಮಾರ್ಟ್‌TVಯಲ್ಲಿ ಬಳಕೆದಾರರಿಗೆ ಎಂಟರ್‌ಟೈನ್ ಮೆಂಟ್‌ನಲ್ಲಿ ಯಾವುದೇ ಕಡಿಮೆಯೂ ಆಗಬಾರದು ಎನ್ನುವ ಕಾರಣಕ್ಕಾಗಿ ಅನೇಕ ಎಂಟರ್‌ಟೈನ್ ಬ್ರಾಂಡ್ ಕಾಸ್ಟರ್ ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನಜ್ನಲಾಗಿದೆ. ಜಿಯೋ ಡಿಜಿಟಲ್, ಯೂಟ್ಯೂಬ್, ನೆಟ್‌ಪ್ಲಿಕ್ಸ್ ಮತ್ತು ಯೂರೋಸ್ ನೋವ್, ಗೂಗಲ್ ಪ್ಲೇ, ಸೇರಿದಂತೆ ಸಾಕಷ್ಟು ಸೇವೆಗಳನ್ನು ಪಡೆಯಬಹುದಾಗಿದೆ. ಸ್ಮಾರ್ಟ್‌TVಯಲ್ಲಿ ಬೋರ್ ಆಗದರಿರುವದಕ್ಕೇ ಗೇಮ್‌ಗಳು ಸೇರಿದಂತೆ ಸಾಕಷ್ಟು ಆಪ್ ಗಳನ್ನು ಹಾಕಿಕೊಳ್ಳಬಹುದಾಗಿದೆ.

ಬೆಲೆ ಮತ್ತು ಆಫರ್:

ಬೆಲೆ ಮತ್ತು ಆಫರ್:

ಫ್ಲಿಪ್‌ಕಾರ್ಟಿನಲ್ಲಿ ಮಾರಾಟವಾಗಲಿರುವ iFFALCON ಸ್ಮಾರ್ಟ್‌ಫೋನ್ ಮೇ.7 ರಿಂದ ಮಾರಾಟವಾಗಲಿದೆ ಎನ್ನಲಾಗಿದೆ. iFFALCON 55K2A ಸ್ಮಾರ್ಟ್‌TV ರೂ.45,999ಕ್ಕೆ ಮಾರಾಟವಾಗಲಿದೆ. ಇದೇ ಮಾಧರಿಯಲ್ಲಿ iFFALCON 32F2 ಮತ್ತು iFFALCON 40F2 ಸ್ಮಾರ್ಟ್‌TVಗಳು ಕ್ರಮವಾಗಿ ರೂ.19,999 ಮತ್ತು ರೂ. 13,499ಕ್ಕೆ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
TCL iFFALCON Smart TVs deliver class leading multimedia performance in affordable price-point. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot