TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಬೇಡಿಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನ ಟಾಪ್ ಟಿವಿ ತಯಾರಿಕಾ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಮುಖ ಮಾಡಿವೆ. ಉತ್ತಮವಾದ ಟಿವಿಗಳನ್ನು ಒಂದರ ಹಿಂದೆ ಒಂದರಂತೆ ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ವಿಶ್ವ ಟಿವಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ TCL ಕಂಪನಿಯೂ ನಮ್ಮ ಮಾರುಕಟ್ಟೆಯಲ್ಲಿಯೂ ಸ್ಮಾರ್ಟ್TVಯನ್ನು ಲಾಂಚ್ ಮಾಡಲು ಮುಂದಾಗಿದ್ದು, ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಸಿದ್ದತೆ ನಡೆಸಿದೆ.
TCL ಹೊಸದಾಗಿ ಮಾರುಕಟ್ಟೆಗೆ iಫಾಲ್‌ಕಾನ್ ಎನ್ನುವ ಸರಣಿಯ ಸ್ಮಾರ್ಟ್TVಗಳನ್ನು ಲಾಂಚ್ ಮಾಡಲು ಸಿದ್ಧವಾಗಿದ್ದು, ಮಾರುಕಟ್ಟೆ ಮತ್ತು ಬಳಕೆದಾರನ್ನು ಗಮನದಲ್ಲಿ ಇಟ್ಟುಕೊಂಡು ಈ ಸ್ಮಾರ್ಟ್ TVಗಳನ್ನು ವಿನ್ಯಾಸ ಮಾಡಲಾಗಿದೆ. ಹೋಮ್ ಎಂಟರ್‌ಟೈನ್ ಮೆಂಟ್ ಹೆಚ್ಚಿಸುವ ಸಲುವಾಗಿಯೇ ಐಫಾಲ್‌ಕಾನ್ (iFFALCON) ಸರಣಿಯ ಸ್ಮಾರ್ಟ್TVಯನ್ನು ಲಾಂಚ್ ಮಾಡಲಿದ್ದು, ಈ ಹಿನ್ನಲೆಯಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್Tv ಬಗ್ಗೆ ಸಂಪೂರ್ಣ ಮಾಹಿತಿಯೂ ಈ ಮುಂದಿನಂತೆ ಇದೆ.
4K UHD ಸ್ಮಾರ್ಟ್TV:
TCL ಕಂಪನಿಯೂ ವಿಶ್ವದ 3ನೇ ಅತೀ ದೊಡ್ಡ ಟಿವಿ ಬ್ರಾಂಡ್ ಆಗಿದ್ದು, ಸದ್ಯ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್TVಯನ್ನು ಪರಿಚಯಿಸಲು ತುದಿಗಾಲಿನಲ್ಲಿ ನಿಂತಿದೆ. iFFALCON ಸ್ಮಾರ್ಟ್TV 4K UHD ಗುಣಮಟ್ಟವನ್ನು ಹೊಂದಿರಲಿದ್ದು, ಮನೆಯಲ್ಲಿಯೇ ಸಿನಿಮಾ ಮಂದಿರದ ಅನುಭವವನ್ನು ಈ ಸ್ಮಾರ್ಟ್TV ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ.
ವಿವಿಡ್ ವಿವ್ ಟೆಕ್ನಾಲಜಿ:
iFFALCON ಸ್ಮಾರ್ಟ್TVಯಲ್ಲಿ ಉತ್ತಮ ಪಿಚ್ಚರ್ ಕ್ವಾಲಿಟಿಯನ್ನು ನೀಡುವ ಸಲುವಾಗಿ TCL ಕಂಪನಿಯೂ ವಿವಿಡ್ ವಿವ್ ಟೆಕ್ನಾಜಿಯನ್ನು ಬಳಕೆ ಮಾಡಿಕೊಂಡಿದೆ. ಬೇರೆ ಎಲ್ಲಿಯೂ ಇಷ್ಟು ಉತ್ತಮವಾದ ಪಿಚ್ಚರ್ ಕ್ಯಾಲಿಟಿಯನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ. ಇದು ಉತ್ತಮ ಕಾಂಟರೆಸ್ಟ್, ಉತ್ತಮ ಬಣ್ಣಗಳು ಮತ್ತು ವಿವಿಂಗ್ ಆಂಗಲ್ ಸಹ ಬೆಸ್ಟ್ ಆಗಿರಲಿದೆ.
iFFALCON ಸ್ಮಾರ್ಟ್TV ವಿಶೇಷತೆ:
TCL iFFALCON ಸ್ಮಾರ್ಟ್TV ಒಟ್ಟು ಎರಡು ಮಾದರಿಯಲ್ಲಿ ದೊರೆಯಲಿದೆ. 32 ಇಂಚಿನ LED ಆವೃತ್ತಿ ಮತ್ತು 43 UHD ಆವೃತ್ತಿಯೂ ಲಬ್ಯವಿರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ TVಗ ಕುರಿತು ಇನ್ನಷ್ಟು ಮಾಹಿತಿಯೂ ಶೀಘ್ರವೇ ಲಭ್ಯವಾಗಲಿದೆ.
ಎಂಟರ್‌ಟೈನ್‌ಮೆಂಟ್‌ಗೆ ಕಡಿಮೆ ಇಲ್ಲ:
iFFALCON ಸ್ಮಾರ್ಟ್TVಯಲ್ಲಿ ಬಳಕೆದಾರರಿಗೆ ಎಂಟರ್‌ಟೈನ್ ಮೆಂಟ್‌ನಲ್ಲಿ ಯಾವುದೇ ಕಡಿಮೆಯೂ ಆಗಬಾರದು ಎನ್ನುವ ಕಾರಣಕ್ಕಾಗಿ ಅನೇಕ ಎಂಟರ್‌ಟೈನ್ ಬ್ರಾಂಡ್ ಕಾಸ್ಟರ್ ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನಜ್ನಲಾಗಿದೆ.
ನೆಟ್ ಪ್ಲಿಕ್ಸ್:
iFFALCON ಸ್ಮಾರ್ಟ್TVಯಲ್ಲಿ ಯೂಟ್ಯೂಬ್, ನೆಟ್‌ಪ್ಲಿಕ್ಸ್ ಮತ್ತು ಯೂರೋಸ್ ನೋವ್ ಗಳನ್ನು ನೋಡಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಈ ಸ್ಮಾರ್ಟ್TVಯಲ್ಲಿ ಬೋರ್ ಎನ್ನುವುದೇ ಆಗುವುದಿಲ್ಲ ಎನ್ನಲಾಗಿದೆ. ಹೆಚ್ಚಿನ ಮನರಂಜನೆಯೂ ಇದರಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ 7:
ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವ iFFALCON ಸ್ಮಾರ್ಟ್TVಯಲ್ಲಿ ಆಂಡ್ರಾಯ್ಡ್ 7 ನ್ಯಾಗಾವನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಉತ್ತಮವಾದ ಅನುಭವನ್ನು ಇದು ನೀಡಲಿದೆ.
iFFALCON ಭಾರತೀಯರಿಗಾಗಿ:
iFFALCON ಸ್ಮಾರ್ಟ್TVಯನ್ನು TCL ಭಾರತೀಯರನ್ನು ಗಮನದಲ್ಲಿ ಇಷ್ಟುಕೊಂಡು ನಿರ್ಮಿಸಿದೆ ಎನ್ನಲಾಗಿದೆ. ಉತ್ತಮವಾದ ಆಡಿಯೋ ಮತ್ತು ವಿಷ್ಯೂಯಲ್ ಅನುಭವನ್ನು ನೀಡಲಿರುವ ಈ ಸ್ಮಾರ್ಟ್Tvಗಳು, ಬಳಕೆಯಾಗಿರುವ ತಂತ್ರಜ್ಞಾನವೂ ಬಳಕೆದಾರರ ಸ್ನೇಹಿಯಾಗಿದೆ ಎನ್ನಲಾಗಿದೆ.
ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್:
TCL ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ iFFALCON ಸ್ಮಾರ್ಟ್TVಯೂ ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್ ಎನ್ನಲಾಗಿದ್ದು, ಇಂದು ಲಾಂಚ್ ಆಗುವ ಸ್ಮಾರ್ಟ್TVಗಳು ಶೀಘ್ರವೇ ಖರೀದಿಗೆ ದೊರೆಯಲಿದೆ ಎನ್ನಲಾಗಿದೆ. ಭಾರತದ ಮೂಲೆ ಮೂಲೆಗೆ ತನ್ನ ಟಿವಿಯನ್ನು ತಲುಪಿಸಬೇಕು ಎನ್ನುವ ಕಾರಣಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಆಫರ್ ಸಹ ನೀಡುವ ಸಾಧ್ಯತೆ ಇದೆ.